ನಿಜಾಮಾಬಾದ್‌ನಿಂದ 35 ಕಿ.ಮೀ ದೂರದಲ್ಲಿರುವ , ಅದಿಲಾಬಾದ್‌ನಿಂದ 158 ಕಿ.ಮೀ ದೂರದಲ್ಲಿ ಹಾಗೂ ಹೈದರಾಬಾದ್‌ನಿಂದ 215 ಕಿ.ಮೀ ದೂರದಲ್ಲಿದೆ. ಇದು ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ತೆಲಂಗಾಣದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

ಸರಸ್ವತಿ ದೇವಸ್ಥಾನ
ಬಸಾರ್ ಅಥವಾ ಬಸಾರ ಗೋದಾವರಿ ನದಿಯ ದಡದಲ್ಲಿದೆ. ಇದು ಪ್ರಸಿದ್ಧ ಸರಸ್ವತಿ ದೇವಸ್ಥಾನದ ಕಾರಣದಿಂದಾಗಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಬಸಾರ ದೇವಸ್ಥಾನವು ಜ್ಞಾನ ಮತ್ತು ಕಲಿಕೆಯ ಹಿಂದೂ ದೇವತೆಯಾದ ಸರಸ್ವತಿಯ ದೇವಸ್ಥಾನವಾಗಿದೆ.

ಅಕ್ಷರ ಅಬ್ಯಾಸ
ಅಕ್ಷರ ಅಬ್ಯಾಸಕ್ಕಾಗಿ ಮಕ್ಕಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಇದು ಭಾರತದಲ್ಲಿ ಸರಸ್ವತಿ ದೇವಿಯ ಎರಡು ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಇನ್ನೊಂದು ಸರಸ್ವತಿ ಮಂದಿರವು ಕಾಶ್ಮೀರದಲ್ಲಿದೆ.

ಪುರಾಣ
ಪುರಾಣದ ಪ್ರಕಾರ, ವ್ಯಾಸ ಮಹರ್ಷಿ, ಅವರ ಶಿಷ್ಯರು ಮತ್ತು ಋಷಿ ವಿಶ್ವಾಮಿತ್ರ ಕುರುಕ್ಷೇತ್ರ ಯುದ್ಧದ ನಂತರ ತಂಪಾದ ಮತ್ತು ಪ್ರಶಾಂತ ವಾತಾವರಣದಲ್ಲಿ ನೆಲೆಗೊಳ್ಳಲು ನಿರ್ಧರಿಸಿದರು. ಶಾಂತಿಯುತ ವಾಸಸ್ಥಾನಕ್ಕಾಗಿ ಅನ್ವೇಷಣೆಯಲ್ಲಿ ಅವರು ದಾಂಡಕ ಅರಣ್ಯಕ್ಕೆ ಬಂದು ಪ್ರದೇಶದ ಪ್ರಶಾಂತತೆಗೆ ಸಂತೋಷಪಟ್ಟರು, ಈ ಸ್ಥಳವನ್ನು ಆಯ್ಕೆ ಮಾಡಿದರು.

ರಾಷ್ಟ್ರಕೂಟರ ಕಾಲದ ದೇವಾಲಯ
ರಾಷ್ಟ್ರಕೂಟರು ಮಂಜೀರಾ ಮತ್ತು ಗೋದಾವರಿ ನದಿಗಳ ಪವಿತ್ರ ಸಂಗಮದ ಬಳಿ ನಿರ್ಮಿಸಿದ ಮೂರು ದೇವಾಲಯಗಳಲ್ಲಿ ಇದೂ ಒಂದಾಗಿದೆ. ಬಿಜಿಯಲುಡು ಎಂಬ ಹೆಸರಿನ ಕರ್ನಾಟಕ ರಾಜನು ಬಸಾರ್ ನಲ್ಲಿ ಈ ಪ್ರಾಚೀನ ದೇವಾಲಯವನ್ನು ನಿರ್ಮಿಸಿದನು.

ಇತರ ಆಕರ್ಷಣೆಗಳು
PC: Sundar1
ಶ್ರೀ ಮಹಾಕಾಳಿ ದೇವಸ್ಥಾನ, ಶ್ರೀ ದತ್ತಾತ್ರೇಯ ದೇವಸ್ಥಾನ, ಶ್ರೀ ವ್ಯಾಸ ಮಹಾರ್ಷಿ ಗುಹೆ, ಶ್ರೀ ವೇದಾವತಿ ಶಿಲಾ (ಶ್ರೀ ವೇದಾವತಿ ಕಲ್ಲು), ಗೋದಾವರಿ ನದಿ ಮತ್ತು ಗೋದಾವರಿ ನದಿ ದಂಡೆಯಲ್ಲಿರುವ ಶಿವನ ದೇವಾಲಯಗಳು ಬಸಾರದ ಇತರ ಆಕರ್ಷಣೆಗಳಾಗಿವೆ.

ಸೂಕ್ತ ಸಮಯ
ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಬಸಾರಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ವಸತಿಗೃಹವು ಹಲವಾರು ದೇವಾಲಯದ ಅತಿಥಿ ಗೃಹಗಳು ಮತ್ತು ಖಾಸಗಿ ವಸತಿ ಸೌಕರ್ಯಗಳೂ ಲಭ್ಯವಿದೆ.

ದರ್ಶನ ಸಮಯ
PC: Bhaskaranaidu
ದೇವಸ್ಥಾನದ ಸಮಯ: ಬೆಳಗ್ಗೆ 4 ರಿಂದ ಮದ್ಯಾಹ್ನ 12: 30 ಮತ್ತು ಮದ್ಯಾಹ್ನ 2 ರಿಂದ ರಾತ್ರಿ 8:30 ರವರೆಗೆ ದೇವರ ದರ್ಶನ ಪಡೆಯಬಹುದು. ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತುತ್ತದೆ ಎನ್ನಲಾಗುತ್ತದೆ. ಹಾಗಾಗಿ ಸಾಕಷ್ಟು ಮಂದಿ ತಮ್ಮ ಮಕ್ಕಳಿಗೆ ಇಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ.


Click it and Unblock the Notifications
















