Search
  • Follow NativePlanet
Share
» »ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ಯಾವುದೇ ಒಂದು ತಾಯಿ, ತಂದೆಗೆ ತಮ್ಮ ಮಕ್ಕಳು ವಿದ್ಯಾವಂತ ಎಂದು ಹೇಳಲು ಹೆಮ್ಮೆಯಾಗುತ್ತದೆ. ಎಲ್ಲರ ಮುಂದೆ ತಮ್ಮ ಮಗ ಅತ್ಯಂತ ಚಾಣಾಕ್ಷ, ತೀಕ್ಷ್ಣ ಬುದ್ದಿಯುಳ್ಳವನು ಎಂದು ಹೇಳುವಾಗ ಏನೊ ಒಂದು ಬಗೆಯ ಸಂತೋಷ. ಅದೇ ತಮ್ಮ ಮಗ ಏನು ಓದುವುದಿಲ್ಲ ಎಂದು ತಂದೆ, ತಾಯಿಗಳು ವ್ಯಥೆ ಪಡುವುದುಂಟು.

ವಿದ್ಯೆ ಒಲಿದು ಬರಬೇಕು ಎಂದರೆ ಮುಖ್ಯವಾಗಿ ಆ ವಿದ್ಯಾ ದೇವತೆ ಸರಸ್ವತಿಯ ಆರ್ಶಿವಾದ ಇರಲೇಬೇಕು. ಕೆಲವು ಮಕ್ಕಳು ಪುಸ್ತಕದ ಮೇಲೆ ನಿಗಾ ವಹಿಸುವುದೇ ಇಲ್ಲ. ಅವರಿಗೆ ಎಷ್ಟು ಓದಿದರೂ ವಿದ್ಯೆ ಮಾತ್ರ ಅಂಟುವುದಿಲ್ಲ. ಅಂಥಹವರಿಗೆ ಈ ಲೇಖನದ ಮೂಲಕ ತಿಳಿಸಲಾಗುವ ದೇವಾಲಯಕ್ಕೆ ಮಕ್ಕಳ ಸಮೇತ ಒಮ್ಮೆ ಭೇಟಿ ಕೊಡಿ. ಈ ಸರಸ್ವತಿ ದೇವಾಲಯದಲ್ಲಿ ಹುಣ್ಣಿಮೆಯ ರಾತ್ರಿಗಳಲ್ಲಿ ಮಕ್ಕಳನ್ನು "ಓಂ" ಎಂಬ ಪದವನ್ನು ನಾಲಿಗೆಯ ಮೇಲೆ ಬರೆಯಲಾಗುತ್ತದೆ. ಹೀಗೆ ಬರೆದುಕೊಂಡ ಮಕ್ಕಳು ಏನೆನಾಗುತ್ತಾರೆ ಗೊತ್ತ?

ಪ್ರಸ್ತುತ ಲೇಖನದಲ್ಲಿ ವಿದ್ಯೆಯನ್ನು ನೀಡುವ ಆ ಮಾಹಿಮಾನ್ವಿತ ದೇವಾಲಯಕ್ಕೆ ಒಮ್ಮೆ ದರ್ಶನ ಮಾಡಿ ಬರೋಣ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ವಿದ್ಯೆಯನ್ನು ವರವಾಗಿ ನೀಡುವ ಆ ದೇವಾಲಯ ಇರುವುದು ತಮಿಳುನಾಡು ರಾಜ್ಯದ ತಿರುವರೂರ್ ಜಿಲ್ಲೆಯ ಕೂತನೂರ್‍ನಲ್ಲಿ. ಇಲ್ಲಿ ವಿದ್ಯಾ ಮಾತೆ ಸರಸ್ವತಿ ತಾಯಿ ನೆಲೆಸಿದ್ದಾಳೆ. ಆಶ್ಚರ್ಯ ಏನಪ್ಪ ಎಂದರೆ ತಮಿಳು ನಾಡಿನಲ್ಲಿ ಸರಸ್ವತಿ ದೇವಾಲಯ ಇರುವುದು ಇದೊಂದೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಈ ದೇವಾಲಯ ಅತ್ಯಂತ ಮಾಹಿಮಾನ್ವಿತವಾದ ದೇವಾಲಯವಾಗಿದೆ. ಈ ದೇವಾಲಯ ಒಂದು ಪುರಾತನವಾದ ದೇವಾಲಯವಾಗಿದ್ದು, ಸುಮಾರು 500 ಅಥವಾ 1000 ವರ್ಷಗಳ ಇತಿಹಾಸ ಹೊಂದಿದೆ ಎಂದು ಹೇಳುತ್ತಾರೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಈ ಪುರಾತನವಾದ ದೇವಾಲಯವನ್ನು ನಿರ್ಮಾಣ ಮಾಡಿದವರು ಚೋಳರು. ಈ ದೇವಾಲಯವು ಅತ್ಯಂತ ಸುಂದರವಾಗಿದ್ದು, ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ದಸರಾ ಹಬ್ಬದಂದು ವಿಜೃಂಬಣೆಯಿಂದ ಉತ್ಸವಗಳನ್ನು ಇಲ್ಲಿ ಆಚರಿಸಲಾಗುತ್ತದೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಸರಸ್ವತಿ ದೇವಿಗೆ ಮೀಸಲಾದ ದೇವಾಲಯಗಳು ಭಾರತದಲ್ಲಿ ಅಪರೂಪವಾಗಿ ಕಂಡು ಬರುತ್ತದೆ. ಇತರ ದೇವಾಲಯಗಳಲ್ಲಿ ಬೇರೆ ದೇವತೆಗಳ ಜೊತೆ ಸಹಭಾಗಿತ್ವ ಹೊಂದಿರಬಹುದು. ಆದರೆ ಸರಸ್ವತಿ ದೇವಾಲಯ ಎಂಬುದು ಕಡಿಮೆ ಇವೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಒಂದು ಪುರಾಣ ಕಥೆ ಕೂಡ ಇದೆ. ಅದೆನೆಂದರೆ ಬ್ರಹ್ಮನೊಂದಿಗೆ ಅಹಂ ಘರ್ಷಣೆಯನ್ನು ಹೊಂದಿದ್ದ ಸರಸ್ವತಿ ದೇವಿಯು ಭೂಮಿಗೆ ಬಂದು ಇಳಿಯುತ್ತಾಳೆ. ತದನಂತರ ಬ್ರಹ್ಮ ಮತ್ತು ಸರಸ್ವತಿ ಇಬ್ಬರು ಮಹಾ ಶಿವನನ್ನು ಆರಾಧಿಸಿ ವಿಮೋಚನೆಗೆ ಒಳಗಾಗುತ್ತಾರೆ. ತದನಂತರ ಸರಸ್ವತಿ ದೇವಿಯು ವಿದ್ಯಾ ಮಾತೆಯಾಗಿ ನೆಲೆಸಿದಳು.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಇತಿಹಾಸದ ಪ್ರಕಾರ ಬೇರೆಯೇ ಕಥೆ ಇದೆ. ಅದು ಕೂತನೂರ್ ಎಂಬ ಹೆಸರು 2 ನೇ ರಾಜಾ ಚೋಳ ಒಟ್ಟಕ್ಕೂಥಾನ್ ಎಂಬ ಗ್ರಾಮಕ್ಕೆ ನೀಡುತ್ತಾರೆ. ಇಲ್ಲಿ ಸರಸ್ವತಿ ದೇವಾಲಯವನ್ನು ನಿರ್ಮಾಣ ಮಾಡುತ್ತಾರೆ. ಇದೊಂದು ತಮಿಳು ನಾಡಿನ ಏಕೈಕ ಸರಸ್ವತಿ ದೇವಾಲಯವಾಗಿದೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಹಾಗಾಗಿಯೇ ಈ ದೇವಾಲಯ ಅತ್ಯಂತ ಪ್ರಮುಖ್ಯತೆಯನ್ನು ಪಡೆದಿದೆ. ಇಲ್ಲಿ ತಂದೆ, ತಾಯಿಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷವಾದ ಪ್ರಾರ್ಥನೆ ಮಾಡುತ್ತಾರೆ. ಇದರಿಂದಾಗಿ ಮಕ್ಕಳಿಗೆ ವಿದ್ಯೆಯ ಮೇಲೆ ಆಸ್ತಕಿ ಹೆಚ್ಚಾಗುತ್ತದೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಇಲ್ಲಿನ ಸರಸ್ವತಿ ದೇವಿಯು ಪದ್ಮಾಸಾನದಲ್ಲಿ ಬಿಳಿ ಕಮಲದ ಮೇಲೆ ಕುಳಿತು, ಎಡಗೈಯಲ್ಲಿ ಒಂದು ಪುಸ್ತಕವನ್ನು ಹಿಡಿದು, ಬಲಗೈಯಲ್ಲಿರುವ ವೀಣೆ, ಕರುಣೆಯನ್ನು ಹೊಂದಿರುವ ಕಣ್ಣುಗಳು ಮತ್ತು ಜ್ಞಾನವನ್ನು ಬಹಿರಂಗ ಪಡಿಸುವ ಮೂರನೇ ಕಣ್ಣನ್ನು ಹೊಂದಿ ದರ್ಶನ ಭಾಗ್ಯ ನೀಡುತ್ತಿದ್ದಾಳೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಕೂತನೂರ್ ತಮಿಳುನಾಡಿನ ದೇವಾಲಯದ ಹೃದಯಭಾಗದಲ್ಲಿದ್ದು, ಪೊತೊಟ್ಟಮ್ ಬಳಿ ಇರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಗ್ರಾಮದ ಸರಸ್ವತಿ ದೇವಾಲಯಕ್ಕೆ ಮತ್ತು ವಿಶೇಷವಾಗಿ ಪ್ರಸಿದ್ಧ ತಮಿಳು ಕವಿ ಒಟ್ಟಕೂಥರ್ ಪಂಡಿತ. ಅವರಿಂದಲೂ ಕೂಡ ಹೆಸರುವಾಸಿಯಾಗಿದೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಹುಣ್ಣಿಮೆಯ ರಾತ್ರಿಗಳಲ್ಲಿ ಮಕ್ಕಳನ್ನು ಇಲ್ಲಿ "ಓಂ" ಎಂಬ ಪದವನ್ನು ನಾಲಿಗೆಯ ಮೇಲೆ ಬರೆಯಲಾಗುತ್ತದೆ. ಓಂ ಎಂಬ ಪದವನ್ನು ಜೇನು ತುಪ್ಪದಿಂದ ಬರೆಯಲಾಗುತ್ತದೆ. ಹೀಗೆ ಬರೆದುಕೊಂಡ ಮಕ್ಕಳು ಸೂಕ್ಷ್ಮ ಭಾಷಣಕಾರರು, ಕವಿಗಳು ಮತ್ತು ಸಂಗೀತಕಾರರು ಆಗುತ್ತಾರೆ ಎಂದು ನಂಬಲಾಗಿದೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ದೇವಾಲಯವು ಬೆಳಗ್ಗೆ 9:30 ರಿಂದ ರಾತ್ರಿ 8:30 ರವರೆಗೆ ತೆರೆದಿರಲಾಗುತ್ತದೆ. ಈ ದೇವಾಲಯದಲ್ಲಿ ವಲಂಪುರಿ ವಿನಾಯಕರ್, ಬ್ರಹ್ಮ, ನಾಗರಾಜ, ಮುರುಗ, ಸ್ವಾನ್ ಮತ್ತು ನರ್ತಾನ್ ವಿನಾಯಕರ್ (ಸ್ವಯಂ ಭೂ) ದೇವತಾ ಮೂರ್ತಿಗಳಿವೆ.

ಸರಸ್ವತಿ ದೇವಾಲಯ

ಸರಸ್ವತಿ ದೇವಾಲಯ

ಪೂಯೊತ್ತೊಟ್ಟಂ ನಾಗಪಟ್ಟಣ ಜಿಲ್ಲೆಯ ತಿರುವರೂರಿಗೆ ಹೋಗುವ ದಾರಿಯಲ್ಲಿ ಮೈಲಾಡುತುರೈ ನಗರದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಕೇವಲ 5 ನಿಮಿಷಗಳ ಕಾಲು ನಡಿಗೆಯಿಂದ ತಲುಪಬಹುದಾಗಿದೆ. ತಿರುವರೂರಿನಿಂದ ಮೈಲಾಡುತುರೈ ಪ್ರಯಾಣಿಕರು ರಸ್ತೆಯ ಮೂಲಕ ತೆರಳುವವರು ಕೇವಲ 25 ಕಿ.ಮೀ ದೂರದಲ್ಲಿ ಪ್ರಯಾಣಿಸಬೇಕು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more