Search
  • Follow NativePlanet
Share
» »ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

Written By:

ರಾಮನ ಭಂಟ ಹನುಮಂತನನ್ನು ಭಾರತದಾದ್ಯಂತ ಪೂಜಿಸಲಾಗುತ್ತದೆ. ನಾವು ಸಾಮಾನ್ಯವಾಗಿ ದಿನನಿತ್ಯ ಹನುಮಂತನ ದೇವಾಲಯಗಳನ್ನು ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲಿನ ಹನುಮಂತನ ವಿಗ್ರಹವನ್ನು ಕಂಡರೆ ನೀವು ಆಶ್ಚರ್ಯವಾಗುವುದಂತು ಖಂಡಿತ.

ಗುಜರಾತ್‍ನಲ್ಲಿನ ಸರಂಗ್ ಪೂರ್ ಜಿಲ್ಲೆಯಲ್ಲಿನ ಆಂಜನೇಯನ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಆದರೆ ಈ ದೇವಾಲಯಕ್ಕೆ ಒಂದು ಪ್ರತ್ಯೇಕತೆ ಇದೆ. ಅದೆನೆಂದರೆ ಇಲ್ಲಿರುವ ಹನುಮಂತನ ವಿಗ್ರಹ ಮಾತ್ರ ಅತ್ಯಂತ ವಿಶೇಷವಾಗಿದೆ. ಭಕ್ತರು ಹನುಮಂತನ ಬಾಯಿಯಲ್ಲಿ ಹಾಕಿದ ತೆಂಗಿನಕಾಯಿಯನ್ನು ಒಡೆದು ಆರ್ಶಿವಾದ ನೀಡುತ್ತಾನೆ.

ಹಾಗಾದರೆ ಈ ಆಶ್ಚರ್ಯಕರವಾದ ದೇವಾಲಯದ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯೊಣ ಬನ್ನಿ...

ಸರಂಗ್ ಪೂರ್ ಜಿಲ್ಲೆ

ಸರಂಗ್ ಪೂರ್ ಜಿಲ್ಲೆ

ಶ್ರೀ ಹನುಮನ ಮಂದಿರವು ಗುಜರಾತಿನ ಸರಂಗ್ ಪುರ್‍ನಲ್ಲಿದೆ. ಇದೊಂದು ಹಿಂದೂ ದೇವಾಲಯವಾಗಿದ್ದು, ಈ ದೇವಾಲಯವನ್ನು ಹನುಮಂತನಿಗೆ ಅರ್ಪಿಸಲಾಗಿದೆ. ಸ್ವಾಮಿ ನಾರಾಯಣ ಸಂಪ್ರದಾಯದಲ್ಲಿ ಈ ದೇವಾಲಯವು ಅತ್ಯಂತ ಪ್ರಮುಖವಾದುದು.

ಸ್ಥಾಪನೆ

ಸ್ಥಾಪನೆ

ಇಲ್ಲಿನ ಮಾಹಿಮಾನ್ವಿತವಾದ ಹನುಮಾನನ ವಿಗ್ರಹವನ್ನು ಸದ್ಗುರು ಗೋಪಾಲಸ್ವಾಮಿಯು ಸ್ಥಾಪಿಸಿದರು. ಕೆಲವು ದಂತ ಕಥೆಯ ಪ್ರಕಾರ ಸದ್ಗುರು ಗೋಪಾಲಸ್ವಾಮಿ ಅವರು ಹನುಮಾನ್ ವಿಗ್ರಹವನ್ನು ಸ್ಥಾಪಿಸಿದಾಗ ಅದನ್ನು ರಾಡ್‍ನಿಂದ ಮೂರ್ತಿಗೆ ಸ್ಪರ್ಶಿಸಿದರು. ಆಗ ಆ ಮೂರ್ತಿಯು ಜೀವಂತವಾಗಿ ಬಂದು ಸ್ಥಳಾಂತರಗೊಂಡಿತು ಎಂದು ಹೇಳುತ್ತಾರೆ. ಇದು ದೇವಾಲಯದ ಗರ್ಭಗುಡಿಯ ದೇವತಾ ಮೂರ್ತಿಯಾಗಿದೆ.

ಮೂರ್ತಿ

ಮೂರ್ತಿ

ಈ ದೇವಾಲಯದಲ್ಲಿ ಹನುಮಾನನ ಮೂರ್ತಿಯು ಒಂದು ದಪ್ಪದಾದ ವ್ಯಕ್ತಿಯಾಗಿದ್ದು, ಅವನ ಕಾಲ ಕೆಳಗೆ ಒಂದು ಸ್ತ್ರೀ ರಾಕ್ಷಸಿಯನ್ನು ಹಿಸುಕುತ್ತಿರುವ ಚಿತ್ರವನ್ನು ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ವಾನರ ಸೈನ್ಯದಿಂದ ಹಣ್ಣುಗಳನ್ನು ಹೊಂದಿರುವ ಶಿಲ್ಪಕಲೆ ಕೂಡ ಇಲ್ಲಿ ಕಾಣಬಹುದಾಗಿದೆ.

ಮಾಹಿಮಾನ್ವಿತನು

ಮಾಹಿಮಾನ್ವಿತನು

ಇಲ್ಲಿನ ಹನುಮಂತನು ಮಾಹಿಮಾನ್ವಿತನು ಎಂದು ಹೇಳಲಾಗುತ್ತಿದೆ. ಇಲ್ಲಿ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಮುಖ್ಯವಾಗಿ ದುಷ್ಟಶಕ್ತಿಯಿಂದ ಬಳಲುತ್ತಿರುವವರು, ಮಾನಸಿಕ ಅಸ್ವಸ್ಥತೆಗೆ ಒಳಗಾದವರು ಶನಿವಾರದ ದಿನದಂದು ಇಲ್ಲಿಗೆ ಭೇಟಿ ನೀಡುತ್ತಾರೆ.

ಹನುಮಂತನ ವಿಗ್ರಹ

ಹನುಮಂತನ ವಿಗ್ರಹ

ಇಲ್ಲಿನ ಹನುಮಂತನ ವಿಗ್ರಹವು ಅತ್ಯಂತ ಆಶ್ಚರ್ಯಕರವಗಿದ್ದು, ಭಕ್ತರು ಹನುಮಂತನ ಬಾಯಿಯಲ್ಲಿ ಹಾಕಿದ ತೆಂಗಿನಕಾಯಿಯನ್ನು ಒಡೆದು ಆರ್ಶಿವಾದ ಮಾಡುತ್ತಾನೆ ಎಂತೆ. ಈ ವಿಚಿತ್ರವನ್ನು ಕಾಣಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಹನುಮಂತನ ವಿಗ್ರಹವು ದೇವಾಲಯದ ಪ್ರಾಂಗಣದಲ್ಲಿದೆ.

ಆಕರ್ಷಣೆ

ಆಕರ್ಷಣೆ

ದೇವಾಲಯದಲ್ಲಿರುವ ಈ ವಿಗ್ರಹವು ಭಕ್ತರಿಗೆ ವಿಶೇಷವಾಗಿ ಆಕರ್ಷಿಸುತ್ತದೆ. ಇದರಲ್ಲಿ ಏನು ರಹಸ್ಯ ಅಡಗಿದೆ ಎಂಬ ಸಂದೇಹ ಸಾಮಾನ್ಯವಾಗಿ ಎಲ್ಲರಿಗೂ ಆಗುವಂತಹುದು. ಹಿಂದೂ ದೇವಾಲಯದಲ್ಲಿ ತೆಂಗಿನಕಾಯಿಯನ್ನು ಒಡೆಯುವುದು ಸಾಂಪ್ರದಾಯವಾಗಿ ಭಾವಿಸುತ್ತಾರೆ. ಇದರಿಂದ ಒಳ್ಳೆಯ ಘಟನೆಗಳು ಸಂಭವಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಪರಿಶುಭ್ರತೆ

ಪರಿಶುಭ್ರತೆ

ಏಕೆಂದರೆ ಇದರಿಂದಾಗಿ ಒಳ್ಳೆಯದಾಗುತ್ತದೆ ಎಂಬ ಭಾವನೆ ನಮ್ಮ ಪ್ರಜೆಗಳದ್ದು. ದೇವಾಲಯ ಪರಿಸರವನ್ನು ಪರಿಶುಭ್ರತೆಯಾಗಿ ಇಡುವ ಸಲುವಾಗಿ ಹಲವಾರು ಮಂದಿ ಕಾರ್ಮಿಕರು ಇಲ್ಲಿ ಇದ್ದಾರೆ. ಇಂತಹ ಹಲವಾರು ಪ್ರಯೋಗಕ್ಕೆ ಸರಂಗ್ ಪೂರ್ ಕಮೀಟಿ ದೇವಾಲಯವನ್ನು ಮತ್ತಷ್ಟು ಪರಿಶುಭ್ರತೆಯಾಗಿ ಇಡಲು ಒಂದು ಉಪಾಯ ಕಂಡು ಹಿಡಿಯಿತು.

ಬಾಯಿಯಲ್ಲಿ ತೆಂಗಿನ ಕಾಯಿ

ಬಾಯಿಯಲ್ಲಿ ತೆಂಗಿನ ಕಾಯಿ

ಅದೇನೆಂದರೆ ತೆಂಗಿನಕಾಯಿಯನ್ನು ಒಡೆಯುವ ಸಾಧನ (ಯಂತ್ರ) ವನ್ನು ಈ ದೇವಾಲಯದಲ್ಲಿ ಸ್ಥಾಪನೆ ಮಾಡುವುದು. ದೇವಾಲಯದ ಪ್ರಾಂಗಣದಲ್ಲಿ ವಿಗ್ರಹದಲ್ಲಿ ಆ ಯಂತ್ರವನ್ನು ಏರ್ಪಟು ಮಾಡಿದ್ದಾರೆ. ಹಾಗಾಗಿ ಭಕ್ತರು ಕೊಬ್ಬರಿ ಕಾಯಿಯನ್ನು ಹನುಮಂತನ ಬಾಯಿಗೆ ಹಾಕಿದರೆ ಆ ಯಂತ್ರ 2 ಭಾಗ ಮಾಡುತ್ತದೆ.

ಭಕ್ತರು

ಭಕ್ತರು

ಈ ವಿಶೇಷವಾದ ಯಂತ್ರವನ್ನು ತಾವು ಕೂಡ ಒಮ್ಮೆ ಪ್ರಯೋಗ ಮಾಡಲು ಹಾಗು ಕಾಣಲು ಈ ದೇವಾಲಯಕ್ಕೆ ವಿಶೇಷ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಪ್ರವೇಶ ಸಮಯ

ಪ್ರವೇಶ ಸಮಯ

ಈ ದೇವಾಲಯಕ್ಕೆ ಭಕ್ತರು ಬೆಳಗ್ಗೆ 5:30 ರಿಂದ ರಾತ್ರಿ 11 ಗಂಟೆಯವರೆಗೆ ಭಕ್ತರಿಗೆ ಹನುಮಂತ ದರ್ಶನವನ್ನು ನೀಡುತ್ತಾರೆ. ಈ ದೇವಾಲಯದಲ್ಲಿ ಸುಮಾರು 5,000 ಜನರಿಗೆ ಅನ್ನದಾನವನ್ನು ಈ ದೇವಾಲಯವು ಒದಗಿಸುತ್ತಿದ್ದೆ.

ಸಮೀಪದ ಪ್ರಸಿದ್ಧವಾದ ದೇವಾಲಯಗಳು

ಸಮೀಪದ ಪ್ರಸಿದ್ಧವಾದ ದೇವಾಲಯಗಳು

ಇಲ್ಲಿನ ಸಮೀಪದ ಪ್ರಸಿದ್ಧವಾದ ದೇವಾಲಯಗಳು ಎಂದರೆ ಅದು ಶಿವ ಶಕ್ತಿ ದೇವಾಲಯ, ಶ್ರೀ ಜಗನ್ನಾತ ದೇವಾಲಯ, ಭಧ್ರಕಾಳಿ ದೇವಾಲಯ, ಆಯ್ಯೋಧ್ಯಪುರಂ ಜೈನ್ ದೇವಾಲಯ ಮತ್ತು ಶ್ರೀ ಭೀಮನಾಥ ದೇವಾಲಯವಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ: ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಅಹಮದಾಬಾದ್ ಸರ್ದಾರ್ ವಲ್ಲಬಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಅಹಮದಾಬಾದ್‍ನಿಂದ ಹನುಮಾನ್ ದೇವಾಲಯಕ್ಕೆ ಅಂತರ ಸುಮಾರು 159 ಕಿ.ಮೀ ದೂರದಲ್ಲಿದೆ.

ರೈಲ್ವೆ ಮಾರ್ಗದ ಮೂಲಕ: ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಬೊಟಾದ್ ರೈಲ್ವೆ ನಿಲ್ದಾಣವಾಗಿದೆ. ಇದು ಸುಮಾರು 73 ಕಿ.ಮೀ ಮತ್ತು 168 ಮೀ ದೂರದಲ್ಲಿದೆ. ಪ್ರಯಾಣ ಸುಮಾರು 1 ಗಂಟೆ 45 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more