Search
  • Follow NativePlanet
Share
» »ವೆಂಕಟೇಶ್ವರ ಸ್ವಾಮಿಯು ಮನೆ ಅಳಿಯನಾಗಿದ್ದ ಸ್ಥಳ ಯಾವುದು ಗೊತ್ತ?

ವೆಂಕಟೇಶ್ವರ ಸ್ವಾಮಿಯು ಮನೆ ಅಳಿಯನಾಗಿದ್ದ ಸ್ಥಳ ಯಾವುದು ಗೊತ್ತ?

By Sowmyabhai

ಭಾರತ ದೇಶವು ದೇವಾಲಯಗಳ ನಿಲಯ. ಇಲ್ಲಿ ಒಂದೊಂದು ದೇವಾಲಯಲಕ್ಕೆ ಒಂದೊಂದು ಪ್ರತ್ಯೇಕತೆ ಇರುತ್ತದೆ. ಮುಖ್ಯವಾಗಿ ತಮಿಳುನಾಡಿನಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ಇಲ್ಲ ಎಂದೇ ಹೇಳಬಹುದು. ಅದರಲ್ಲೂ ಕುಂಭಕೋಣಂನಲ್ಲಿ ಪ್ರತಿ ಬೀದಿಯಲ್ಲಿಯೂ ಒಂದೊಂದು ಸುಂದರವಾದ ದೇವಾಲುಗಳನ್ನು ಕಾಣಬಹುದು. ಪ್ರತಿ ದೇವಾಲಯವು ಕೂಡ ಪುರಾಣದಲ್ಲಿನ ಯಾವುದೋ ಒಂದು ಘಟ್ಟದ ಸಂಬಂಧವನ್ನು ಹೊಂದಿರುತ್ತದೆ. ಆ ಕಥೆಗಳನ್ನು ಕೇಳುವುದಕ್ಕೆ ಹಾಗು ಓದುವುದಕ್ಕೆ ಅತ್ಯಂತ ಆಸಕ್ತಿಕರವಾಗಿರುತ್ತದೆ.

ತೀರ್ಥಯಾತ್ರೆಗಳನ್ನು ಮಾಡುವವರು. ಆಯಾ ದೇವಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಪ್ರತ್ಯೇಕತೆ ಹಾಗು ಸ್ಥಳ ಪುರಾಣವನ್ನು ತಪ್ಪದೇ ತಿಳಿದುಕೊಂಡು ಬರುತ್ತಿರುತ್ತಾರೆ. ಈಗಂತೂ ತಂತ್ರಜ್ಞಾನದ ಯುಗ ಇಂಟರ್ ನೆಟ್‍ನಿಂದಲೇ ಕೂತಲ್ಲಿಯೇ ಪ್ರಪಂಚದ ಯಾವ ಮೂಲೆಯಲ್ಲಿ ಏನು ನಡೆಯುತ್ತಿದೆ ಎಂಬವ ಮಾಹಿತಿಯನ್ನು ಪಡೆಯುತ್ತಾರೆ.

ಪ್ರಸ್ತುತ ಈ ಲೇಖನದಲ್ಲಿ ಶ್ರೀನಿವಾಸನು ಮನೆ ಆಳಿಯವಾಗಿದ್ದ ಪ್ರದೇಶ ಹಾಗು ಅಲ್ಲಿನ ಸ್ಥಳ ಪುರಾಣ ಮತ್ತು ದೇವಾಲಯದ ಪ್ರಾಧಾನ್ಯತೆಯ ಬಗ್ಗೆ ತಿಳಿಯಿರಿ. ಈ ಮಹಿಮಾನ್ವಿತವಾದ ದೇವಾಲಯವು ತಮಿಳುನಾಡಿನಲ್ಲಿನ ಪ್ರಮುಖ ಧಾರ್ಮಿಕ ಪಟ್ಟಣವಾಗಿ ಪ್ರಖ್ಯಾತಿ ಹೊಂದಿರುವ ಕುಂಭಕೋಣಂನಲ್ಲಿದೆ.

1.ಸಾರಂಗಪಾಣಿ ದೇವಾಲಯ

1.ಸಾರಂಗಪಾಣಿ ದೇವಾಲಯ

PC: YOUTUBE

ಆಳ್ವಾರರಿಗೆ ಸಂಬಂಧಿಸಿದ 108 ವೈಷ್ಣವ ದೇವಾಲಯಗಳಲ್ಲಿ ದೊಡ್ಡ ಪುಣ್ಯಕ್ಷೇತ್ರವಾಗಿ ಇಂದಿಗೂ ಕಂಗೊಳಿಸುತ್ತಿದೆ. ಅವುಗಳಲ್ಲಿ ಮೊದಲನೆಯದು ಶ್ರೀರಂಗದಲ್ಲಿನ ಶ್ರೀರಂಗನಾಥ ಸ್ವಾಮಿ ದೇವಾಲಯ. ಇದನ್ನು 12 ಮಂದಿ ಆಳ್ವರರಲ್ಲಿ 11 ಮಂದಿ ಸಂದರ್ಶಿಸಿದರು. 2 ನೇಯದು 9 ಮಂದಿ ಆಳ್ವಾರರು ಸಂದರ್ಶಿಸಿದ ತಿರುಮಲ. 3 ನೇಯದು ಸಾರಂಗಪಾಣಿ ದೇವಾಲಯ. ಈ ದೇವಾಲಯವನ್ನು 9 ಮಂದಿ ಆಳ್ವಾರರು ಸಂದರ್ಶಿಸಿದ್ದಾರೆ ಎನ್ನಲಾಗಿದೆ.

2.ಭೃಗು ಮಹರ್ಷಿ

2.ಭೃಗು ಮಹರ್ಷಿ

PC:YOUTUBE

ಭೃಗು ಮಹರ್ಷಿ ಒಮ್ಮೆ ತ್ರಿಮೂರ್ತಿಗಳ ಸಂದರ್ಶನಕ್ಕೆ ಮುಂಚಿತವಾಗಿ ಮೊದಲು ಸತ್ಯಲೋಕಕ್ಕೆ ತೆರಳಿ ಭಂಗನಾಗುತ್ತಾನೆ. ಇದರಿಂದಾಗಿ ಬ್ರಹ್ಮನಿಗೆ ದೇವಾಲಯಗಳು ಇರಬಾರದು ಎಂದು ಶಪಿಸುತ್ತಾನೆ. ಇನ್ನು ಕೈಲಾಸಕ್ಕೆ ತೆರಳಿ ಅಲ್ಲಿ ಕೂಡ ಭಂಗನಾಗುತ್ತಾನೆ. ಇದರಿಂದಾಗಿ ಶಿವನಿಗೆ ಕೇವಲ ಲಿಂಗ ರೂಪದಲ್ಲಿ ಮಾತ್ರವೇ ಪೂಜೆಗಳನ್ನು ನಡೆಯಬೇಕು ಎಂದು ಶಾಪವನ್ನು ನೀಡುತ್ತಾನೆ.

3.ವಿಷ್ಣುವಿನ ವೃಕ್ಷಸ್ಥಳ

3.ವಿಷ್ಣುವಿನ ವೃಕ್ಷಸ್ಥಳ

PC:YOUTUBE

ಕೊನೆಯದಾಗಿ ಭೃಗು ಮಹರ್ಷಿಯು ವೈಕುಂಠಕ್ಕೆ ತೆರಳಿ ಅಲ್ಲಿಯೂ ಕೂಡ ಅವಮಾನವನ್ನು ಅನುಭವಿಸುತ್ತಾನೆ. ಇದರಿಂದಾಗಿ ಕೋಪಗೊಂಡ ವಿಷ್ಣುವಿನ ವೃಕ್ಷಸ್ಥಳಕ್ಕೆ ಒದೆಯುತ್ತಾನೆ. ಈ ಘಟನೆಯಿಂದಾಗಿ ಮಹಾಲಕ್ಷ್ಮೀ ದೇವಿಯು ತೀವ್ರವಾಗಿ ಕೋಪಗೊಂಡು ಹೊರಟು ಹೋಗುತ್ತಾಳೆ. ತಾನು ನೆಲೆಸಿರುವ ವೃಕ್ಷಸ್ಥಳವನ್ನು ಒದ್ದು, ಆ ಪ್ರದೇಶವನ್ನು ಅಪವಿತ್ರ ಮಾಡಿದನು ಎಂದು ಆ ಮಹರ್ಷಿಯ ಮೇಲೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ.

4.ಕಾಳಿನಲ್ಲಿರುವ ಕಣ್ಣು

4.ಕಾಳಿನಲ್ಲಿರುವ ಕಣ್ಣು

PC: YOUTUBE

ವಿಷ್ಣುವು ಆ ಭೃಗು ಮಹರ್ಷಿಯನ್ನು ಸ್ವಾಗತಿಸಿ ಕಾಲನ್ನು ಒತ್ತುವ ನೆಪದಿಂದ ಆತನ ಕಾಲಿನಲ್ಲಿದ್ದ ಕಣ್ಣನ್ನು ನಾಶಗೊಳಿಸುತ್ತಾನೆ. ಇದರಿಂದಾಗಿ ಆ ಮಹರ್ಷಿಯ ಆಗ್ರಹವು ಕಡಿಮೆಯಾಗಿ ಮಾಡಿದ ತಪ್ಪಿಗೆ ತೀವ್ರವಾಗಿ ನೊಂದುಕೊಳ್ಳುತ್ತಾನೆ. ಲಕ್ಷ್ಮೀದೇವಿ ತನ್ನ ಮಗಳಾಗಿ ಜನಿಸಬೇಕು ಹಾಗು ಆಕೆಗೆ ಸೇವೆಯನ್ನು ಮಾಡಿ ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ ಎಂದು ಬೇಡಿಕೊಳ್ಳುತ್ತಾನೆ.

5.ಹೇಮ ಋಷಿಯಾಗಿ ಜನಿಸುತ್ತಾನೆ

5.ಹೇಮ ಋಷಿಯಾಗಿ ಜನಿಸುತ್ತಾನೆ

PC: YOUTUBE

ಇದಕ್ಕೆ ಲಕ್ಷ್ಮೀದೇವಿ ಕೂಡ ಅಂಗೀಕರ ಮಾಡುತ್ತಾಳೆ. ಹೀಗಾಗಿ ಆ ಭೃಗು ಮಹರ್ಷಿ ಭೂಲೋಕದಲ್ಲಿ ಹೇಮ ಋಷಿಯಾಗಿ ಜನಿಸಿದನು. ಆತನು ಕುಂಭಕೋಣಂ ಸಮೀಪದ ಒಂದು ಸ್ಥಳದಲ್ಲಿ ತಪಸ್ಸು ಮಾಡುತ್ತಾ ಇದ್ದನು. ಈ ಕ್ರಮದಲ್ಲಿಯೇ ಲಕ್ಷ್ಮೀದೇವಿಯು ತಾವರೆಯ ಹೂವಿನ ಮಧ್ಯದಿಂದ ಉದ್ಭವಿಸುತ್ತಾಳೆ.

6.ಕೋಮಲಾಂಬಾಳ್

6.ಕೋಮಲಾಂಬಾಳ್

PC: YOUTUBE

ಇದರಿಂದಾಗಿ ಹೇಮಋಷಿ ರೂಪದಲ್ಲಿ ಭೃಗು ಮಹರ್ಷಿ ಆಕೆಯನ್ನು ಸ್ವೀಕರ ಮಾಡಿ ಕೋಮಲಾಂಬಾಳ್ ಎಂದು ಹೆಸರು ಇಡುತ್ತಾನೆ. ತಂದೆಯಾಗಿ ಎಲ್ಲಾ ಸೇವೆಗಳನ್ನು ಮಾಡುತ್ತಾನೆ. ಇನ್ನು ಯುಕ್ತವಯಸ್ಸು ಬಂದ ಮೇಲೆ ಆಕೆಗೆ ವರನನ್ನು ಹುಡುಕುವುದನ್ನು ಪ್ರಾರಂಭಿಸುತ್ತಾನೆ.

7.ಶ್ರೀನಿವಾಸ

7.ಶ್ರೀನಿವಾಸ

PC: YOUTUBE

ಇದು ಹೀಗೆ ಇದ್ದರೆ ಲಕ್ಷ್ಮೀ ದೇವಿಯನ್ನು ಹುಡುಕುತ್ತಾ ಬಂದ ಶ್ರೀನಿವಾಸನಿಗೆ ಪ್ರಸ್ತುತ ಸಾರಂಗಪಾಣಿ ದೇವಾಲಯವಿರುವ ಸ್ಥಳ ಕೋಮಲಾಂಬಾಳ್ ಕಾಣಿಸುತ್ತಾಳೆ. ಆಕೆಯು ಲಕ್ಷ್ಮೀದೇವಿ ಎಂದು ಗುರುತಿಸಿ ಶ್ರೀನಿವಾಸನು ಆಕೆಯನ್ನು ಪಡೆಯುವ ಉದ್ದೇಶದಿಂದ ಮರದ ಪೊದೆಯಲ್ಲಿ ಕೆಲವು ಸಮಯ ಅಡಗಿಕೊಳ್ಳುತ್ತಾನೆ.

8.ಪಾತಾಳ ಶ್ರೀನಿವಾಸ

8.ಪಾತಾಳ ಶ್ರೀನಿವಾಸ

PC: YOUTUBE

ಹಾಗೆ ಅಡಗಿಸಿಕೊಂಡ ಶ್ರೀನಿವಾಸನನ್ನು ಪ್ರಸ್ತುತ ಪಾತಾಳ ಶ್ರೀನಿವಾಸ ಎಂಬ ಹೆಸರಿನಿಂದ ಕರೆಯುತ್ತಾರೆ. ಅಲ್ಲಿರುವುದೇ ಸಾರಂಗಪಾಣಿ ದೇವಾಲಯ. ಇನ್ನು ಇಲ್ಲಿನ ದೇವಿಯು ಕಮಲದಲ್ಲಿ ಹುಟ್ಟಿದಳಾದ್ದರಿಂದ ಲಕ್ಷ್ಮೀದೇವಿಯ ಹುಟ್ಟಿದ ಸ್ಥಳ. ಶ್ರೀನಿವಾಸನನ್ನು ಭಕ್ತರು ದೇವಾಲಯದಿಂದ ಸ್ವಲ್ಪ ಕೆಳಗೆ ಹೋಗಿ ನೋಡಬೇಕು.

9.ವಿವಾಹ

9.ವಿವಾಹ

PC: YOUTUBE

ವೈಕುಂಠದಿಂದ ವಿಷ್ಣುವು ಇಲ್ಲಿಗೆ ಬಂದು ದೇವಿಯನ್ನು ವಿವಾಹವನ್ನು ಮಾಡಿಕೊಂಡನು. ತದನಂತರ ಸ್ವಾಮಿಯು ಇಲ್ಲಿಯೇ ಉಳಿದುಬಿಟ್ಟರಂತೆ. ಅಂದರೆ ಮನೆ ಆಳಿಯನಾದ ಎಂಬ ಅರ್ಥ. ಹಾಗಾಗಿಯೇ ಇಲ್ಲಿ ದೇವಿಯದೇ ಮೇಲುಗೈ. ಮೊದಲ ಪೂಜೆ ಆಕೆಗೆ ಮಾಡುತ್ತಾರೆ. ಇನ್ನು ಮನೆ ಆಳಿಯನಿಗೆ ತಮಿಳಿನಲ್ಲಿ ವಿಟ್ಟೋಡು ಮಹಿಳ್ತೈ ಎಂದು ಕರೆಯುತ್ತಾರೆ. ಹಾಗಾಗಿಯೇ ಸಾರಂಗಪಾಣಿಯನ್ನು ತಮಿಳು ಭಕ್ತರು ವಿಟ್ಟೊಡು ಮಹಿಳ್ತೈ ಎಂದು ಕರೆಯುತ್ತಾರೆ.

10.ಶಯನ ಭಂಗಿ

10.ಶಯನ ಭಂಗಿ

PC: YOUTUBE

ಇಲ್ಲಿ ಸ್ವಾಮಿಯು ಶಯನ ಸ್ಥಿತಿಕ್ಕಿಂತ ಸ್ವಲ್ಪ ಮೇಲೆ ಎದ್ದ ಸ್ಥಿತಿಯಲ್ಲಿ ದರ್ಶನವನ್ನು ನೀಡುತ್ತಾನೆ. ಇದನ್ನು ಉದ್ದಾನ ಶಯನ ಭಂಗಿಮ ಎಂದು ಕರೆಯುತ್ತಾರೆ. ಇಂತಹ ಸ್ಥಿತಿಯಲ್ಲಿ ವಿಷ್ಣುವಿನ ವಿಗ್ರಹ ಇರುವುದು ಪ್ರಪಂಚದಲ್ಲಿ ಇದೊಂದೇ ಇರಬಹುದು.

11.ಮೊದಲು ದೇವಿಯನ್ನು ದರ್ಶಿಸಿಕೊಳ್ಳಬೇಕು

11.ಮೊದಲು ದೇವಿಯನ್ನು ದರ್ಶಿಸಿಕೊಳ್ಳಬೇಕು

PC: YOUTUBE

ರಾಜಗೋಪುರವು 11 ಅಂತಸ್ತನ್ನು ಹಾಗು 150 ಅಡಿ ಎತ್ತರದಲ್ಲಿದೆ. ಇನ್ನು 4 ಗೋಪುರಗಳು ಕೂಡ ಸಾರಂಗಪಾಣಿ ದೇವಾಲಯಕ್ಕೆ ಇದೆ. ಅದೇ ವಿಧವಾಗಿ ಹೇಮಋಷಿ ದೇವಾಲಯದಲ್ಲಿ ವಿಗ್ರಹವಿದೆ. ಇಲ್ಲಿ ದೇವಿಗೆ ಪ್ರತ್ಯೇಕವಾದ ದೇವಾಲಯ ಕೂಡ ಇದೆ. ಮೊದಲು ದೇವಿಯನ್ನು ದರ್ಶಿಸಿದ ನಂತರ ಸ್ವಾಮಿಗೆ ಪೂಜಿಸಬೇಕು ಎಂಬುದೇ ನಿಯಮ.

12.ವೈಷ್ಣವ ದೇವಾಲಯ

12.ವೈಷ್ಣವ ದೇವಾಲಯ

PC: YOUTUBE

ಸಾಧಾರಣವಾಗಿ ವೈಕುಂಠ ಏಕಾದಶಿ ದಿನದಂದು ಅಷ್ಟು ವೈಷ್ಣವಾಲಯದಲ್ಲಿ ಸ್ವರ್ಗದ್ವಾರವನ್ನು ತೆರೆಯುತ್ತಾರೆ. ಆದರೆ ಈ ಸಾರಂಗಪಾಣಿ ದೇವಾಲಯದಲ್ಲಿ ಅಂತಹ ಯಾವುದೇ ಏರ್ಪಾಟು ಯಾವುದು ಇರುವುದಿಲ್ಲ. ಸ್ವಾಮಿಯವರು ಸಾಕ್ಷಾತ್ತು ವೈಕುಂಠದಿಂದ ಭೂಮಿಯ ಮೇಲೆ ಬಂದಿದ್ದರಿಂದ ಇಲ್ಲಿ ಯಾವುದೇ ಏರ್ಪಾಟು ಮಾಡುವುದಿಲ್ಲ. ಆದರೆ ಇಲ್ಲಿರುವ ಯಾವುದೇ 2 ದ್ವಾರದಲ್ಲಿ ಹೋದರು ಕೂಡ ಸ್ವಾಮಿಯು ಕರುಣಿಸುತ್ತಾನೆ ಎಂಬುದು ಸ್ಥಳೀಯ ಪೂಜಾರಿಗಳ ನಂಬಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X