• Follow NativePlanet
Share
» »ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

Written By:

ನಮ್ಮ ಭಾರತ ದೇಶದಲ್ಲಿನ ಪ್ರಸಿದ್ಧವಾದ ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿದೆ. ಆ ಪಟ್ಟಿಯಲ್ಲಿ ಒಂದು ಕ್ಷೇತ್ರವು ಅತ್ಯಂತ ಮಹಿಮಾನ್ವಿತವಾದುದು ಎಂದೇ ಹೇಳಬಹುದು. ಏಕೆಂದರೆ ಆ ಕ್ಷೇತ್ರವು ಮಹಾಪ್ರಳಯದ ಪ್ರಸಂಗದೊಂದಿಗೆ ನಂಟನ್ನು ಹೊಂದಿದೆ. ಹಾಗಾಗಿಯೇ ಇದೊಂದು ಸಾರ ಕ್ಷೇತ್ರವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ನೆಲೆಸಿರುವ ಸಾರನಾಥನ್ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದಾನೆ. ಹಾಗಾದರೆ ಮಹಾಪ್ರಳಯದ ನಂತರವು ಇದ್ದ ಈ ಕ್ಷೇತ್ರ ಇರುವುದು ತಮಿಳುನಾಡು ರಾಜ್ಯದ ತಿರುಚೆರೈ. ಇಲ್ಲಿ ಶ್ರೀ ಮಹಾವಿಷ್ಣುವು ನೆಲೆಸಿದ್ದಾನೆ.

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಈ ಸುಂದರವಾದ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಶ್ರೀ ಮಹಾವಿಷ್ಣುವನ್ನು ಸಾರನಾಥನ್ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿರುವ ಅದ್ಭುತವಾದ ದೇವಾಲಯ ಇದಾಗಿದೆ. ಸಾರನಾಥನಿಗೆ ಸತಿಯಾಗಿ ಸಾರನಾಯಕಿಯ ರೂಪದಲ್ಲಿ ಲಕ್ಷ್ಮೀಯು ಸಹ ಇಲ್ಲಿ ನೆಲೆಸಿದ್ದಾಳೆ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತೆ, ವಿಷ್ಣುವಿಗೆ ಸಂಬಂಧಿಸಿದಂತೆ 108 ದೇವಾಲಯಗಳಿವೆ. 6 ರಿಂದ 9 ನೇ ಶತಮಾನದಲ್ಲಿ ತಮಿಳಿನ ಪ್ರಸಿದ್ಧವಾದ ಸಂತರಾದ ಅಳ್ವಾರ್ ಸಂತರು ದೇಶ ಪರ್ಯಾಟನೆ ಮಾಡಿ ವಿಷ್ಣುವನ್ನು ಕೊಂಡಾಡುತ್ತಾ ಶ್ರೀ ಮಹಾ ವಿಷ್ಣುವಿನ 108 ದೇವಾಲಯಗಳನ್ನು ಪಟ್ಟಿ ಮಾಡಿದ್ದಾರೆ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಆ 108 ದೇವಾಲಗಳ ಪಟ್ಟಿಯನ್ನು "ದಿವ್ಯ ದೇಸಂ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದಿವ್ಯ ದೇಸಂ ಮೂಲತಃ ಶ್ರೀ ಮಹಾ ವಿಷ್ಣುವು ನೆಲೆಸಿರುವ ಅತ್ಯಂತ ಮಹಿಮಾನ್ವಿತವಾದ ಕ್ಷೇತ್ರವೇ ಆಗಿದೆ. ಆ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ಸಾರನಾಥನ್ ಕ್ಷೇತ್ರವು ಒಂದು. ಇಲ್ಲಿರುವ ವಿಷ್ಣುವಿನ ದೇವಾಲಯವನ್ನು ಸಾರನಾಥನ್ ದೇವಾಲಯ ಎಂದೇ ಕರೆಯಲಾಗುತ್ತದೆ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಈ ದೇವಾಲಯವು ಅತ್ಯಂತ ಪುರಾತನವಾದುದು, ಅಷ್ಟೇ ಅಲ್ಲ ಶ್ರೀಮಂತ ಇತಿಹಾಸವನ್ನು ಕೂಡ ಹೊಂದಿದೆ. ಮಧ್ಯ ಕಾಲದಲ್ಲಿ ಆಳ್ವಿಕೆ ಮಾಡಿದ ಚೋಳರಿಂದ ವಿಜಯನಗರ ಅರಸರ ತನಕವೂ ಹಾಗು ಮದುರೈ ನಾಯಕರವೆವಿಗೂ ಈ ದೇವಾಲಯವನ್ನು ನಿರ್ವಹಣೆ ಮಾಡಿದ್ದಾರೆ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಈ ಕ್ಷೇತ್ರದಲ್ಲಿ ಮಾರ್ಖಂಡೇಯ, ಕಾವೇರಿ ದೇವಿ ಹಾಗು ಇಂದ್ರರಿಗೆ ಶ್ರೀ ಮಹಾವಿಷ್ಣುವು ಸಾರನಾಥನ ರೂಪದಲ್ಲಿ ದರ್ಶನವನ್ನು ನೀಡಿದ್ದ ಎಂದು ಪ್ರತೀತಿ ಇದೆ. ಹಾಗಾಗಿಯೇ ಇದು ತಮಿಳುನಾಡಿನಲ್ಲಿ ಕಂಡು ಬರುವ ಪ್ರಸಿದ್ಧವಾದ ವೈಷ್ಣವ ಕ್ಷೇತ್ರಗಳ ಪೈಕಿ ಇದು ಕೂಡ ಒಂದಾಗಿದೆ ಎಂದು ನಂಬಲಾಗಿದೆ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಸಾರನಾಥನಾಗಿ ನೆಲೆಸಿರುವ ಶ್ರೀ ಮಹಾವಿಷ್ಣುವನ್ನು ವೈಷ್ಣವ ಸಂಪ್ರದಾಯದಂತೆ ಇಲ್ಲಿ ದಿನನಿತ್ಯ 6 ಬಾರಿ ವಿಶೇಷವಾದ ಪೂಜೆಗಳನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲ ವರ್ಷದಲ್ಲಿ ಮೂರು ಬಾರಿ ಅದ್ಧೂರಿಯಾಗಿ ಉತ್ಸವಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಅದರಲ್ಲಿ ತಮಿಳು ಮಾಸವಾದ ಚಿತ್ತಿರೈನಲ್ಲಿ ನಡೆಸಲಾಗುವ ಉತ್ಸವ ಅತ್ಯಂತ ಪ್ರಮುಖವಾದುದು.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಆ ಸಮಯದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಈ ಸ್ವಾಮಿಯ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭೇಟಿ ನೀಡುತ್ತಾರೆ. ಈ ದೇವಾಲಯಕ್ಕೆ ಒಂದು ದಂಡ ಕಥೆಯು ಕೂಡ ಇದೆ. ಒಮ್ಮೆ ಹೊಸ ಯುಗವನ್ನು ನಿರ್ಮಾಣ ಮಾಡುವ ಪ್ರಸಂಗ ಎದುರಾಗುತ್ತದೆ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಆಗ ಬ್ರಹ್ಮನು ಜೀವ ಸೃಷ್ಟಿಗೆ ಬೇಕಾದ ಮೂಲ ವಸ್ತುಗಳನ್ನು ಹಾಗು ವೇದಶಾಸ್ತ್ರಾದಿಗಳನ್ನು ಉಳಿಸಿಕೊಳ್ಳುವ ಬಗ್ಗೆ ಗೊಂದಲಕ್ಕೀಡಾಗಿ ಶ್ರೀ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾನೆ. ಅದಕ್ಕೆ ಮಹಾ ವಿಷ್ಣುವು ಮಣ್ಣಿನ ಮಡಕೆಯೊಂದನ್ನು ಮಾಡಿ ಅದರಲ್ಲಿ ಬೇಕಾದ ಅವಶ್ಯಕ ವಸ್ತುಗಳನ್ನು ಇರಿಸಲು ಹೇಳುತ್ತಾನೆ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಅದರಂತೆ ಬ್ರಹ್ಮ ಮಡಕೆಯೊಂದನ್ನು ತಯಾರು ಮಾಡುತ್ತಾನೆ. ಆ ಮಡಕೆ ಮಾಡಲು ಬಳಸಿದ ಮಣ್ಣು ಈ ಕ್ಷೇತ್ರದ್ದೇ ಎಂಬ ನಂಬಿಕೆಯಾಗಿದೆ. ಹಾಗಾಗಿ ಮಹಾಪ್ರಳಯದ ಸಂದರ್ಭದಲ್ಲೂ ಈ ಕ್ಷೇತ್ರ ಹರಿಯ ಅನುಗ್ರಹದಿಂದ ಹಾಗೆ ಇತ್ತು ಎನ್ನುತ್ತಿದೆ ಸ್ಥಳ ಪುರಾಣ.

PC:Ssriram mt

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಕ್ಷೇತ್ರದ ಹೊರವಲಯದಲ್ಲಿರುವ ತಿರುಚೆರೈ ಎಂಬ ಗ್ರಾಮದಲ್ಲಿ ಈ ಸಾರನಾಥನ ಮಹಿಮಾನ್ವಿತವಾದ ದೇವಾಲಯವಿದೆ. ಸಾಕಷ್ಟು ಭಕ್ತರನ್ನು ಈ ಸುಂದರವಾದ ದೇವಾಲಯವು ಆಕರ್ಷಿಸುತ್ತದೆ. ಸಾಮಾನ್ಯವಾಗಿ ಕುಂಭಕೋಣಂಗೆ ಭೇಟಿ ನೀಡುವವರು ಈ ಕ್ಷೇತ್ರವನ್ನು ತಪ್ಪದೇ ಭೇಟಿ ನೀಡುತ್ತಾರೆ.

PC:Ssriram mt

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ