Search
  • Follow NativePlanet
Share
» »ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!

ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!

ಪ್ರೀತಿಯ ವಿಷಯ ಬಂದಾಗ ಪ್ರೇಮಿಗಳು ಹಲವಾರು ದೇವಾಲಯಗಳನ್ನು ಸುತ್ತಿ, ತನ್ನ ಪ್ರೇಮಿಯ ಜೊತೆಯೇ ವಿವಾಹವನ್ನು ಕರುಣಿಸಿ ಎಂದು ಕೇಳಿಕೊಳ್ಳುವುದು ಸಹಜವಾದುದು. ಪ್ರೇಮಿಗಳಿಗೆ ಒಂದು ಮಟ್ಟಕ್ಕೆ ತಲುಪಿದಾಗ ಧಾರ್ಮಿಕತೆ ಆವರಿಸುತ್ತದೆ. ಆದರೆ ಇಲ್ಲೊಂದು ದ

ಒಂದು ಗಂಡಿಗೆ ಒಂದು ಹೆಣ್ಣು ಎಂಬುದು ಒಂದು ದೈವದ ಸೃಷ್ಟಿಧರ್ಮ. ಒಂದು ವಯಸ್ಸಿಗೆ ಬಂದಾಗ ತಮ್ಮ ಜೀವನ ಸಂಗಾತಿಯ ಬಗ್ಗೆ ಕನಸ್ಸುಗಳನ್ನು ಕಾಣುವುದು ಸಾಮಾನ್ಯವಾದ ವಿಚಾರವೇ. ಹೀಗಾಗಿ ತಾವು ಪ್ರೀತಿಸದವರು ದೂರವಾದರೆ ಅದರ ಕಷ್ಟ ಅನುಭವಿಸಿದವರಿಗೆ ಗೊತ್ತಾಗುತ್ತದೆ. ಯಾವುದೇ ಅಡೆ-ತಡೆಗಳು ಬಂದರೂ ಕೂಡ ಇಷ್ಟಪಟ್ಟ ಸಂಗಾತಿಯೊಂದಿಗೆ ಜೀವನ ಪೂರ್ತಿ ಇರಬೇಕು ಎಂದುಕೊಳ್ಳುತ್ತಾರೆ.

ಪ್ರೀತಿಯ ವಿಷಯ ಬಂದಾಗ ಪ್ರೇಮಿಗಳು ಹಲವಾರು ದೇವಾಲಯಗಳನ್ನು ಸುತ್ತಿ, ತನ್ನ ಪ್ರೇಮಿಯ ಜೊತೆಯೇ ವಿವಾಹವನ್ನು ಕರುಣಿಸಿ ಎಂದು ಕೇಳಿಕೊಳ್ಳುವುದು ಸಹಜವಾದುದು. ಪ್ರೇಮಿಗಳಿಗೆ ಒಂದು ಮಟ್ಟಕ್ಕೆ ತಲುಪಿದಾಗ ಧಾರ್ಮಿಕತೆ ಆವರಿಸುತ್ತದೆ. ಆದರೆ ಇಲ್ಲೊಂದು ದೇವಾಲಯವಿದೆ. ಆ ದೇವಾಲಯದಲ್ಲಿನ ಸ್ವಾಮಿಯು ನಾವು ಬಯಸಿದವರನ್ನೇ ವಿವಾಹ ಭಾಗ್ಯವನ್ನು ಕರುಣಿಸುತ್ತಾನಂತೆ. ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯದ ಮಹತ್ವವೇನು? ಎಂಬುದರ ಬಗ್ಗೆ ಸಂಕೀಪ್ತವಾಗಿ ಲೇಖನದಲ್ಲಿ ತಿಳಿಯೋಣ.

ದೇವಾಲಯದ ಹೆಸರು?

ದೇವಾಲಯದ ಹೆಸರು?

ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವು ಜೀವಸಂಗಾತಿಯನ್ನು ಕರುಣಿಸುವ ಶಕ್ತಿಯುತ ದೇವಾಲಯ ಎಂದೇ ಪ್ರಸಿದ್ಧವಾಗಿದೆ.


Rsmn

ಭಕ್ತಿ, ಶ್ರದ್ಧೆ

ಭಕ್ತಿ, ಶ್ರದ್ಧೆ

ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಜೀವನಸಂಗಾತಿಯನ್ನು ಪಡೆಯಲು ಮುಖ್ಯವಾಗಿ ಮಾಡಬೇಕಾದುದು ಶಿವನನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆರಾಧಿಸುವುದು. ಹೀಗೆ ಪ್ರಾರ್ಥನೆ ಮಾಡಿದವರು ಮಾತ್ರ ತಮ್ಮ ಇಷ್ಟಾರ್ಥಗಳು ನೇರವೇರುತ್ತದೆ ಎಂದು ಅಲ್ಲಿನ ಭಕ್ತರ ನಂಬಿಕೆಯಗಿದೆ.


Sridharp

ಉದಾಹರಣೆಗಳು

ಉದಾಹರಣೆಗಳು

ಈ ದೇವಾಲಯದ ವಿಶೇಷವೆನೆಂದರೆ ಇಲ್ಲಿನ ಮಾಹಿಮಾನ್ವಿತವಾದ ಶಿವನು ತಾವು ಬಯಸಿದ ಜೀವನ ಸಂಗಾತಿಯನ್ನು ನೀಡುವುದು. ಹೀಗೆ ಸ್ವಾಮಿಯಿಂದ ತಮ್ಮ ಬಾಳಸಂಗಾತಿಯನ್ನು ಪಡೆದ ಅದೆಷ್ಟು ಉದಾಹರಣೆಗಳು ಇಲ್ಲಿವೆ. ತಾವು ಅಂದುಕೊಂಡಿರುವುದು ಆಗುತ್ತದೆ ಎಂಬ ವಿಶ್ವಾಸದಿಂದ ನೂರಾರು ಭಕ್ತರು ಈ ಸ್ವಾಮಿಯನ್ನು ಆರಾಧಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

Rsmn

ಕಾರಣವೇನು?

ಕಾರಣವೇನು?

ಇಷ್ಟಕ್ಕೂ ಈ ದೇವಾಲಯವು ಜೀವನ ಸಂಗಾತಿಯನ್ನೇ ಕರುಣಿಸಲು ಕಾರಣವಾದರೂ ಏನು? ಇದರ ಹಿಂದಿರುವ ಮರ್ಮವಾದರೂ ಏನು? ಎಂಬೆಲ್ಲಾ ಪ್ರೆಶ್ನೆಗೆ ಉತ್ತರ ಇಲ್ಲಿದೆ. ಜೀವನ ಸಂಗಾತಿಯನ್ನು ಕರುಣಿಸುವ ಕ್ಷೇತ್ರದ ಮಹಿಮೆಗೆ ಒಂದು ಸುಂದರವಾದ ಕಾರಣ ಕೂಡ ಇದೆ. ಅದೆನೂ ಎಂಬುದನ್ನು ತಿಳಿಯೋಣ.

ಶಿವಪಾರ್ವತಿ

ಶಿವಪಾರ್ವತಿ

ಪಾರ್ವತಿಯು ಬೆಳೆದು ದೊಡ್ಡವಳಾಗುತ್ತಾಳೆ. ಒಂದು ದಿನ ಶಿವನನ್ನು ಕಾಣುತ್ತಾಳೆ. ಆತನೇ ತನ್ನ ಪತಿಯೆಂದು ಭಾವಿಸಿ ಪ್ರತಿ ಕ್ಷಣವು ಮಹಾಶಿವನ ಬಗ್ಗೆ ಯೋಚಿಸುತ್ತಿರುತ್ತಾಳೆ. ಪಾರ್ವತಿಯು ಶಿವನ ಪ್ರೀತಿಯಲ್ಲಿಯೇ ತನ್ಮಯಳಾಗಿ ಆತನನ್ನೇ ವರಿಸಬೇಕು ಎಂದು ನಿರ್ಧರಿಸುತ್ತಾಳೆ.

ತಪಸ್ಸು

ತಪಸ್ಸು

ಶಿವನನ್ನು ವರಿಸುವುದು ಅಷ್ಟು ಸುಲಭದ ಮಾತು ಆಗಿರಲಿಲ್ಲ. ಹಾಗಾಗಿ ತನ್ನ ಶಿವನನ್ನು ವರಿಸಲೇಬೇಕು ಎಂದು ಘೋರವದ ತಪಸ್ಸು ಆಚರಿಸುತ್ತಾಳೆ. ಆ ಪಾರ್ವತಿ ದೇವಿ ತಪಸ್ಸು ಮಾಡಿದ ಸ್ಥಳವೇ ಈಗಿರುವ ದೇವಾಲಯವಾಗಿದೆ. ಆ ತಾಯಿ ತಪಸ್ಸಿನ ಫಲವೇ ಆ ಸ್ಥಳ ಇಂದು ಪ್ರಸಿದ್ಧಿ ಪಡೆದಿದೆ. ಕ್ರಮೇಣ...

ದೃಢ ಸಂಕಲ್ಪ

ದೃಢ ಸಂಕಲ್ಪ

ಕ್ರಮೇಣವಾಗಿ ತಪಸ್ಸಿನ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಾಳೆ. ಒಂದೇ ಕಾಲಿನಲ್ಲಿ ನಿಂತು ತಪಸ್ಸನ್ನು ಆಚರಿಸುತ್ತಾಳೆ. ಶಿವನನ್ನು ಪಡೆದೆ ತಿರುತ್ತೇನೆಂಬ ಇಚ್ಛೆ ಅವಳಲ್ಲಿ ಪ್ರಬಲವಾಗಿರುತ್ತದೆ. ಇದನ್ನು ಕಂಡ ಶಿವನು ಪ್ರಸನ್ನನಾಗುತ್ತಾನೆ.

ಅಗ್ನಿ ರೂಪದಲ್ಲಿ ದರ್ಶನ

ಅಗ್ನಿ ರೂಪದಲ್ಲಿ ದರ್ಶನ

ಪ್ರಸನ್ನನಾಗಿದ್ದರೂ ಕೂಡ ಪ್ರತ್ಯಕ್ಷನಾಗುವುದಿಲ್ಲ. ಪಾರ್ವತಿ ದೇವಿ ಮಾತ್ರ ಅಲುಗಾಡದಂತೆ ಹಾಗೆಯೇ ಇರುತ್ತಾಳೆ. ಕೊನೆಗೆ ಶಿವನು ತೇಜೋಮಯವಾದ ಅಗ್ನಿಯ ರೂಪದಲ್ಲಿ ದರ್ಶನ ನೀಡುತ್ತಾನೆ. ಶಿವನ ಆ ರೂಪವನ್ನು ಕಂಡ ಪಾರ್ವತಿ ಕೊಂಚವು ಕೂಡ ಹೆದರದೆ ಆ ಅಗ್ನಿಯನ್ನೇ ತಬ್ಬಿಕೊಂಡು ಭಾವುಕಳಾಗುತ್ತಾಳೆ.

ವಿವಾಹ

ವಿವಾಹ

ಪಾರ್ವತಿಯ ಪ್ರೇಮಕ್ಕೆ ಮಣಿದ ಮಹಾಶಿವನು ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷಗೊಂಡು ಪಾರ್ವತಿ ದೇವಿಯನ್ನು ವಿವಾಹ ಮಾಡಿಕೊಳ್ಳುತ್ತಾನೆ. ಈ ರೀತಿಯಾಗಿ ಆದಿ ಶಕ್ತಿಯಾದ ಪಾರ್ವತಿ ದೇವಿಯು ತಾನು ಇಷ್ಟಪಟ್ಟಿದ್ದ ಶಿವನನ್ನೇ ಪತಿಯಾಗಿ ಪಡೆದುಕೊಳ್ಳುತ್ತಾಳೆ. ಹಾಗಾಗಿಯೇ ಈ ದೇವಾಲಯಕ್ಕೆ ಭೇಟಿ ನೀಡಿ ಶ್ರದ್ಧೆ, ಭಕ್ತಿಯಿಂದ ಶಿವನನ್ನು ಆರಾಧಿಸಿದವರಿಗೆ ತಮ್ಮ ಇಷ್ಟ ಬಾಳಸಂಗಾತಿಯನ್ನು ನೀಡುತ್ತಾನೆ.

ಯಾವ ರೀತಿ ಇದೆ ಶಿವಲಿಂಗ

ಯಾವ ರೀತಿ ಇದೆ ಶಿವಲಿಂಗ

ಇಲ್ಲಿನ ಶಿವಲಿಂಗವು ಕಥೆಗೆ ಪೂರಕವಾಗಿರುವಂತೆಯೇ ಕಂಡು ಬರುತ್ತದೆ. ಅಂದರೆ ಇಲ್ಲಿರುವ ಶಿವಲಿಂಗನನ್ನು ಪಾರ್ವತಿ ದೇವಿಯು ಗಟ್ಟಿಯಾಗಿ ತಬ್ಬಿಕೊಂಡಿರುವಂತೆ ಕಾಣುತ್ತದೆ. ಹಾಗಾಗಿಯೇ ಈ ದೇವಾಲಯವು ಸಾಕಷ್ಟು ಮಹತ್ವವನ್ನು ಪಡೆದಿದೆ ಎಂದೇ ಹೇಳಬಹುದಾಗಿದೆ.

ಎಲ್ಲಿದೆ ಈ ಮಾಹಿಮಾನ್ವಿತವಾದ ದೇವಾಲಯ

ಎಲ್ಲಿದೆ ಈ ಮಾಹಿಮಾನ್ವಿತವಾದ ದೇವಾಲಯ

ಅಷ್ಟಕ್ಕೂ ಈ ದೇವಾಲಯವಿರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ? ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಿಂದ ಸುಮಾರು 7 ಕಿ. ಮೀ ದೂರದಲ್ಲಿರುವ ತಿರುಶಕ್ತಿಮಟ್ಟಂ ಎಂಬ ಹಳ್ಳಿಯಲ್ಲಿ. ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯವಾಗಿದೆ.

ಹೇಗೆ ತಲುಪುವುದು?

ಹೇಗೆ ತಲುಪುವುದು?

ಈ ದೇವಾಲಯಕ್ಕೆ ಸಮೀಪದವಾದ ರೈಲ್ವೆ ನಿಲ್ದಾಣವೆಂದರೆ ಅದು ತಮಿಳು ನಾಡು ರಾಜ್ಯದ ಕುಂಭಕೋಣಂ ರೈಲ್ವೆ ನಿಲ್ದಾಣವಾಗಿದೆ.

ಈ ದೇವಾಲಯಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಂಜಾವೂರ್ ವಿಮನ ನಿಲ್ದಾಣವೇ ಆಗಿದೆ.

ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X