Search
  • Follow NativePlanet
Share
» »ಉತ್ತರಾಭಾದ್ರ ನಕ್ಷತ್ರಕ್ಕೂ ಇಲ್ಲಿಗೂ ಏನ್ ಸಂಬಂಧ ? ಇಲ್ಲಿನ ನೈವೇದ್ಯ ಸೇವಿಸಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ !

ಉತ್ತರಾಭಾದ್ರ ನಕ್ಷತ್ರಕ್ಕೂ ಇಲ್ಲಿಗೂ ಏನ್ ಸಂಬಂಧ ? ಇಲ್ಲಿನ ನೈವೇದ್ಯ ಸೇವಿಸಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತಂತೆ !

ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ಭಾಷಣ ಕೌಶಲ್ಯ ಮತ್ತು ಶಿಕ್ಷಣದಲ್ಲಿ ಉತ್ತಮರಾಗಿರುತ್ತಾರೆ. ಅವರು ಉಡುಪುಗಳು ಮತ್ತು ಆಭರಣಗಳನ್ನು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಬಹುಬೇಗನೆ ಕೋಪಗೊಳ್ಳುವವರಾಗಿರುತ್ತಾರೆ. ಇವರು ನೋಡಲು ಆಕರ್ಷಕರಾಗಿರುತ್ತಾರೆ. ಉತ್ತರಭಾದ್ರ ನಕ್ಷತ್ರದವರು ಈ ದೇವಾಲಕ್ಕೆ ಭೇಟಿ ನೀಡಿದ್ರೆ ಅವರ ಬೇಡಿಕೆ ಈಡೇರುತ್ತದಂತೆ.

ಯಾವುದೀ ದೇವಾಲಯ?

ಯಾವುದೀ ದೇವಾಲಯ?

ಈ ಮಹೀಮಾನ್ವಿತ ದೇವಸ್ಥಾನವೇ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿರುವ ತೀಯತ್ತೂರು ಸಹಸ್ರ ಲಕ್ಷ್ಮೀಶ್ವರ ದೇವಸ್ಥಾನ. ಈ ದೇವಾಲಯವು ಅಲ್ಲಿ ನೀಡಲಾಗುವ ನೈವೇದ್ಯಕ್ಕೆ ಪ್ರಸಿದ್ಧಿಯಾಗಿದೆ.

ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ಉತ್ತರಾಭಾದ್ರ ನಕ್ಷತ್ರ

ಉತ್ತರಾಭಾದ್ರ ನಕ್ಷತ್ರ

ಉತ್ತರಾಭಾದ್ರ ನಕ್ಷತ್ರದವರು ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕೋರಿ ಪ್ರಾರ್ಥಿಸುತ್ತಾರೆ. ಭಕ್ತರು ಋಣಭಾರದ ಹೊರೆ ಮತ್ತು ಸಂತಾನ ಭಾಗ್ಯ ಮತ್ತು ಸಮೃದ್ಧಿ ಹೊಂದಲು ದೇವರನ್ನು ಬೇಡುತ್ತಾರೆ.

ಸಿಹಿ ನೈವೇದ್ಯ

ಸಿಹಿ ನೈವೇದ್ಯ

ಜನರು ವಿಶೇಷ ಅಬಿಷೇಕ, ಅರ್ಚನಾ ಮತ್ತು ಹೋಮಗಳನ್ನು ನಿರ್ವಹಿಸುತ್ತಾರೆ ಮತ್ತು ಗೋಡಂಬಿ, ದ್ರಾಕ್ಷಿಗಳು, ಜೇನು ಮತ್ತು ಬಾದಾಮ್‌ಗಳೊಂದಿಗೆ ಸಿಹಿ ನೈವೇದ್ಯವನ್ನು ತಯಾರಿಸಿ ದೇವಿಗೆ ಅರ್ಪಿಸುತ್ತಾರೆ. ಈ ನೈವೇದ್ಯ ಸೇವಿಸಿದ್ರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದಂತೆ.

ಈಗ ಬರೀ 10 ರೂ. ಯಲ್ಲಿ ರೈಲಿನಲ್ಲಿ ಓಡಾಡಬಹದು, ಎಲ್ಲಿಗೆಲ್ಲಾ ಗೊತ್ತಾ? ml

ಇತರ ದೇವರುಗಳು

ಇತರ ದೇವರುಗಳು

ಇಲ್ಲಿ ತಾಯಿ ಪೆರಿಯನಾಯಕಿ ದಕ್ಷಿಣಕ್ಕೆ ಮುಖ ಮಾಡಿದ್ದಾಳೆ. ಇಲ್ಲಿ ವಿನಾಯಕ, ನಂದಿ, ದಕ್ಷಿಣಮೂರ್ತೀ, ಲಿಂಗೋದ್ಭವ, ಬ್ರಹ್ಮ, ಮುರುಗನ್, ನವಗ್ರಹಗಳು ಒಂಬತ್ತು ಗ್ರಹಗಳು, ಚಂದಿಕೇಶ್ವರ, ಭೈರವ, ವಂಚ ಗಣಪತಿ . ಮುಂತಾದ ದೇವರ ಗುಡಿಗಳಿವೆ. ಮಹಾ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

 ಲಕ್ಷ್ಮೀಶ್ವರನ ಪೂಜೆ

ಲಕ್ಷ್ಮೀಶ್ವರನ ಪೂಜೆ

ಉತ್ತರಾಭಾದ್ರ ನಕ್ಷತ್ರಕ್ಕೆ ಈ ದೇವಾಲಯವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಋಷಿಗಳಾದ ಅಗೀರ್ ಬುಧನ್, ಅಂಗೀರಾಸ, ಅಗ್ನಿ ಪುರಂಧಕ ಮತ್ತು ಶಿಲ್ಪಿ ವಿಶ್ವಕರ್ಮ ಇದೇ ನಕ್ಷತ್ರದಲ್ಲಿ ಹುಟ್ಟಿದ್ದಾರೆ. ಇವರೆಲ್ಲರೂ ಪ್ರತಿತಿಂಗಳು ಉತ್ತರಾಭಾದ್ರ ನಕ್ಷತ್ರದಂದು ತಮ್ಮ ಅದೃಶ್ಯ ರೂಪದಲ್ಲಿ ಇಲ್ಲಿಗೆ ಬಂದು ಲಕ್ಷ್ಮೀಶ್ವರನ ಪೂಜೆ ಮಾಡುತ್ತಾರೆ ಎನ್ನುವುದು ನಂಬಿಕೆ.

ದಿನಕ್ಕೆ ಮೂರು ಬಾರಿ ಬಣ್ಣಬದಲಾಯಿಸುವ ಶಿವಲಿಂಗ ಎಲ್ಲಿದೆ ಗೊತ್ತಾ?

ದರ್ಶನದ ಸಮಯ

ದರ್ಶನದ ಸಮಯ

ಈ ದೇವಾಲಯವು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ದರ್ಶನಕ್ಕೆ ತೆರೆದಿರುತ್ತದೆ.

ಭೇಟಿ ನೀಡಿದರೆ ಒಳ್ಳೆಯದು

ಭೇಟಿ ನೀಡಿದರೆ ಒಳ್ಳೆಯದು

ಆದ್ದರಿಂದ ಉತ್ತರಾಭಾದ್ರ ನಕ್ಷತ್ರದವರು ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸಲಹೆ ನೀಡುತ್ತಾರೆ, ತುಪ್ಪ, ಬಾದಾಮ್, ದ್ರಾಕ್ಷಿಗಳು ಮತ್ತು ಜೇನುತುಪ್ಪದಿಂದ ಮಾಡಿದ ನೈವೇದ್ಯವನ್ನು ಅರ್ಪಿಸಿ ಹೋಮಾ ನಡೆಸುತ್ತಾರೆ.

ವಿಜಯವಾಡದಲ್ಲಿರುವ ಭವಾನಿ ದ್ವೀಪದಲ್ಲಿ ವಾರಾಂತ್ಯ ಕಳೆದಿದ್ದೀರಾ?

ಅಗ್ನಿಯನ್ನು ಪೂಜಿಸಲಾಗುತ್ತದೆ

ಅಗ್ನಿಯನ್ನು ಪೂಜಿಸಲಾಗುತ್ತದೆ

ಅಗ್ನಿ ದೇವರು ಮತ್ತು ಸೂರ್ಯನನ್ನು ಆಯಾನ್ ಎಂದು ಕರೆಯಲಾಗುತ್ತಿದ್ದು, ಇಲ್ಲಿ ಪೂಜಿಸಲಾಗುತ್ತದೆ. ಈ ಸ್ಥಳಕ್ಕೆ ಥೀಯಥೂರ್ ಎಂದು ಹೆಸರಿಸಲಾಗಿದೆ. ತಮಿಳು ಭಾಷೆಯಲ್ಲಿ ಥೀ ಎಂದರೆ ಬೆಂಕಿ ಎಂದರ್ಥ. ಅಗ್ನಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಬೆಂಕಿಗೆ ಸಂಬಂಧಿಸಿದ ರೋಗಗಳಿಂದ ಬಳಲುತ್ತಿರುವವರು ಇಲ್ಲಿ ಪೂಜೆ ನಡೆಸುತ್ತಾರೆ.

1000 ಕಮಲದ ಹೂವುಗಳು

1000 ಕಮಲದ ಹೂವುಗಳು

ವಿಷ್ಣುವು ಪ್ರತಿ ದಿನ 1000 ಕಮಲದ ಹೂವುಗಳಲ್ಲಿ ಶಿವನ ಪೂಜೆ ಮಾಡುತ್ತಿದ್ದ . ಈ ಸಂಖ್ಯೆಯು ಕಡಿಮೆಯಾದಾಗ ಭಗವಾನ್ ವಿಷ್ಣುವು ಕೊರತೆಯನ್ನು ಸರಿಮಾಡಲು ತನ್ನ ಕಣ್ಣುಗಳಲ್ಲಿ ಒಂದನ್ನು ಭಗವಾನ್ ಶಿವನಿಗೆ ಅರ್ಪಿಸಲು ಮುಂದಾದನು. ಆಗ ಶಿವನು ತಡೆದು ದರ್ಶನವಿತ್ತನು.

ಅಂಬೋಲಿ ಜಲಪಾತ ; ಇಲ್ಲಿನ ನೀರಿನ ಸದ್ದು ಕೇಳಿದ್ರೆ ಬೆರಗಾಗ್ತೀರಾ !

ಸಹಸ್ರ ಲಕ್ಷ್ಮೀಶ್ವರಾರ್

ಸಹಸ್ರ ಲಕ್ಷ್ಮೀಶ್ವರಾರ್

ವಿಷ್ಣುವಿನ ಪೂಜೆಗೆ ಶ್ರೀ ಮಹಾಲಕ್ಷ್ಮೀಯೂ ಕೈಜೋಡಿಸುತ್ತಾಳೆ. ವಿಷ್ಣುವಿನ ಮನದ ಬಯಕೆಯನ್ನು ಅರಿಯುತ್ತಾಳೆ. ಶಿವನು ದರ್ಶನ ನೀಡಿದಾಗ ಮಹಾಲಕ್ಷ್ಮೀ ಶಿವನನಿಗೆ 1000 ಹೂವುಗಳಿಂದ ಪೂಜಿಸುತ್ತಾ ಇದ್ದ ಕಾರಣ ಸಹಸ್ರ ಲಕ್ಷ್ಮೀಶ್ವರ ಎಂಬ ಹೆಸರು ಬಂದಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಈ ದೇವಾಲಯವು ತಿರುಪ್ಪುನಾವಾಸಲದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಮಿಮಿಸಾಲದಿಂದ 11 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದಲ್ಲಿರುವ ರೈಲು ನಿಲ್ದಾಣವೆಂದರೆ ಅರಂತಂಗಿ ರೈಲು ನಿಲ್ದಾಣ. ಸಮೀಪದ ವಿಮಾನ ನಿಲ್ದಾಣವೆಂದರೆ ಮದುರೈ ವಿಮಾನ ನಿಲ್ದಾಣ ಇದು ಸುಮಾರು 131 ಕಿ.ಮಿ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more