• Follow NativePlanet
Share
» »60 ಪತ್ನಿಯರನ್ನು ಅಮಾನುಷವಾಗಿ ಕೊಂದ ಪತಿ: ಇಲ್ಲಿದೆ ಅವರ 60 ಸಮಾಧಿಗಳು

60 ಪತ್ನಿಯರನ್ನು ಅಮಾನುಷವಾಗಿ ಕೊಂದ ಪತಿ: ಇಲ್ಲಿದೆ ಅವರ 60 ಸಮಾಧಿಗಳು

Written By:


ಇತಿಹಾಸವೆಂದರೆಯೇ ಅತ್ಯಂತ ಕುತೂಹಲದಿಂದ ಕೂಡಿರುತ್ತದೆ. ಯಾವುದೇ ಒಬ್ಬ ರಾಜನ ಬಗ್ಗೆ ತಿಳಿಯಲು ಅವನ ಯುದ್ಧ, ಬಿರುದುಗಳು, ಕಟ್ಟಡಗಳು, ಪರಾಕ್ರಮ, ವಾಸ್ತು ಶಿಲ್ಪವನ್ನು ನೋಡಲು ಹಾಗೂ ರಾಜನ ವೀರ ಚರಿತ್ರೆಗಳನ್ನು ಕೇಳಲು ಅತ್ಯಂತ ಸುಂದರವಾಗಿರುತ್ತದೆ.

ಕೆಲವು ರಾಜರು ಈ ಎಲ್ಲಾ ಮಹತ್ವವಾದ ಕಾರ್ಯದಿಂದ ಉತ್ತುಂಗದ ಶಿಖರದಲ್ಲಿದ್ದರೆ ಇನ್ನೂ ಕೆಲವು ರಾಜರು ತಮ್ಮ ಅಮಾನುಷವಾದ ಚಟುವಟಿಕೆಗಳಿಂದ ಹೀನವಾದ ರಾಜರಾಗಿರುತ್ತದೆ. ಕೇವಲ ರಾಜರ ಒಳ್ಳೆಯದನ್ನೇ ಅಲ್ಲದೇ ಅವರ ಕ್ರೂರತ್ವ, ಹಿಂಸೆ, ಕೌರ್ಯ, ಮೃಗಿತ್ವ ಮನೋಭಾವಗಳು ಹೊಂದಿರುವ ಅದೆಷ್ಟೊ ರಾಜರು ನಮ್ಮ ಭಾರತ ದೇಶದಲ್ಲಿದ್ದಾರೆ. ಅದರಲ್ಲಿ ಅಜಫ್ ಖಾನ್ ತನ್ನ 60 ಪತ್ನಿಯರನ್ನು ಅಮಾನುಷವಾಗಿ ಕೊಲೆ ಮಾಡಿಸುತ್ತಾನೆ. ಅದೆಲ್ಲೂ ಇಲ್ಲ ನಮ್ಮ ಕರ್ನಾಟಕದ ಬಿಜಾಪುರದಲ್ಲಿ ಸಾಟ್ ಕಬ್ಬದಲ್ಲಿ.

ಪ್ರಸ್ತುತ ಲೇಖನದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿನ ಬಿಜಾಪುರದ ಸಾತ್ ಕಬರ್ ಪ್ರದೇಶದ ಅಮಾನುಷವಾದ ಘಟನೆಯ ಬಗ್ಗೆ ತಿಳಿಯೋಣ.

ಅಜಫ್ ಖಾನ್

ಅಜಫ್ ಖಾನ್

1659 ರಲ್ಲಿ ಕರ್ನಾಟಕದಲ್ಲಿನ ಬಿಜಾಪುರ ನಗರ. ಇಲ್ಲಿ ಮೊದಲು ಅದಿಲ್ ಷಾಹಿಗಳ ಆಳ್ವಿಕೆ ನಡೆಸುತ್ತಿತ್ತು. ಈ ಅದಿಲ್ ಷಾಹಿಗಳಿಗೆ ಯಾರು ಕೂಡ ಎದುರು ಇಲ್ಲದೇ ಏಕಚಕ್ರಾಧಿ ಪಥ್ಯವಾಗಿ ಆಳ್ವಿಕೆ ನಡೆಸುತ್ತಿದ್ದರು.

ಛತ್ರಪತಿ ಶಿವಾಜಿ

ಛತ್ರಪತಿ ಶಿವಾಜಿ

ಅತ್ಯಂತ ಪ್ರರಾಕ್ರಮ ಶಾಲಿಯಾದ ಛತ್ರಪತಿ ಶಿವಾಜಿಯು ಬಂದನು. ಪ್ರಜೆಗಳಾಗಲೀ, ರಾಜರೇ ಆಗಲೀ ಶಿವಾಜಿಯ ಹೆಸರು ಹೇಳುವುದ್ದಲ್ಲ ಬದಲಾಗಿ ಕೇಳಿದರೆ ಸಾಕು ಹೆದರುತ್ತಿದ್ದರಂತೆ.

ಮುಸ್ಲಿಂ ರಾಜರು

ಮುಸ್ಲಿಂ ರಾಜರು

ಹೇಗಾದರೂ ಮಾಡಿ ಶಿವಾಜಿಯನ್ನು ಮಟ್ಟ ಹಾಕಲೇಬೇಕು ಎಂದು ಮುಸ್ಲಿಂ ಚಕ್ರವರ್ತಿಗಳು ಚಿಂತಿಸುತ್ತಿದ್ದರು.

ಅಜಫ್ ಖಾನ್

ಅಜಫ್ ಖಾನ್

ಅತ್ಯಂತ ಕ್ರೂರತನಕ್ಕೆ ಹೆಸರುವಾಸಿಯಾದ ಅಜಫ್ ಖಾನ್‍ನನ್ನು ಶಿವಾಜಿಯ ಮೇಲೆ ಯುದ್ಧಕ್ಕೆ ಕಳುಹಿಸಿದರು.

 ಪತ್ನಿಯರು

ಪತ್ನಿಯರು

ಆದರೆ ಆ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದು ಶಿವಾಜಿಯು ಅಲ್ಲ, ಸೈನಿಕರು ಕೂಡ ಅಲ್ಲ ಬದಲಾಗಿ ಅಜಫ್ ಖಾನ್‍ನ 60 ಅಮಾಯಾಕ ಪತ್ನಿಯರು.

ವಿಷಾದಕರವಾದ ಸಂಗತಿ

ವಿಷಾದಕರವಾದ ಸಂಗತಿ

ಆ ಅಮಾಯಕ ರಾಣಿಯರನ್ನು ಕ್ರೂರವಾಗಿ ಹತ್ಯೆ ಮಾಡಿದ್ದ ಹಿಂದಿನ ಕಥೆ ಕೇಳಿದರೆ ಯಾರಿಗೂ ಕೂಡ ಕಣ್ಣೀರು ಬರದೇ ಇರದು.

ಕಿರಾತಕ

ಕಿರಾತಕ

ಅಜಫ್ ಖಾನ್ ತಾನು ಅಂದುಕೊಂಡಿರುವ ಕೆಲಸವನ್ನು ಮಾಡಲು ಏನಾದರೂ ಮಾಡಬಲ್ಲ ಕಿರಾತಕನಾಗಿದ್ದನು. ಇವನಿಗೆ ಹೆಚ್ಚಾಗಿ ಜಾತಕದ ಹುಚ್ಚು. ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುತ್ತಿದ್ದನಂತೆ.

ಜ್ಯೋತ್ಯಿಷ್ಯ

ಜ್ಯೋತ್ಯಿಷ್ಯ

ಶಿವಾಜಿಯ ಮೇಲೆ ಯುದ್ಧ ಮಾಡುವ ಮುಂಚೆ ಅಜಫ್ ಖಾನ್ ಒಬ್ಬ ಜ್ಯೋತ್ಯಿಷ್ಯನ ಬಳಿ ಹೋಗಿ ಈ ಯುದ್ಧದಲ್ಲಿ ಗೆಲುವು ಯಾರಿಗೆ ಎಂದು ಕೇಳಿದನಂತೆ.

ಉತ್ತರ

ಉತ್ತರ

ಜ್ಯೋತ್ಯಿಷ್ಯಗಾರ ಹೇಳಿದ ಆ ವಿಷಯವನ್ನು ಕೇಳಿ ಅಜಫ್ ಖಾನ್ ಒಮ್ಮೆ ಧಿಗ್ಭ್ರಾಂತಿಗೆ ಒಳಗಾದನಂತೆ, ಆ ಭವಿಷ್ಯ ಏನೆಂದರೆ ಶಿವಾಜಿಯೊಂದಿಗೆ ಅಜಫ್ ಖಾನ್ ಯುದ್ಧ ಮಾಡಿದರೆ ಅಜಫ್ ಖಾನ್ ಮರಣವಾಗುವುದು ಖಚಿತ ಎಂದು ತಿಳಿಸಿದನಂತೆ.

ಯುದ್ಧ

ಯುದ್ಧ

ಈ ಗೊಂದಲದ ನಡುವೆ ಏನು ಮಾಡಬೇಕೂ ಎಂದು ತಿಳಿಯದ ಅಜಫ್ ಖಾನ್ ಶಿವಾಜಿಯ ಮೇಲೆ ಯುದ್ಧಕ್ಕೆ ತೆರಳುವ ಮುಂಚೆ...

ಮರಣ

ಮರಣ

ಭವಿಷ್ಯವನ್ನು ನಂಬಿದ ಅಜಫ್ ಖಾನ್ ತಾನು ಮರಣಿಸಿದ ನಂತರ ತನ್ನ ಪತ್ನಿಯರನ್ನು ಯಾರೂ ಕೂಡ ಮರು ವಿವಾಹವಾಗಬಾರದು ಎಂದು ತನ್ನ 60 ಪತ್ನಿಯರನ್ನು ಊರಿನ ಬಾವಿಯ ಸಮೀಪದಲ್ಲಿ ಎಲ್ಲರನ್ನು ಕರೆದನಂತೆ.

ಪತ್ನಿಯರು

ಪತ್ನಿಯರು

ಅಜಫ್ ಖಾನ್‍ನ ಕುತಂತ್ರದ ಕುರಿತು ತಿಳಿಯದ 60 ಪತ್ನಿಯರು ಆ ಪ್ರದೇಶಕ್ಕೆ ಸೇರಿಕೊಂಡರು. ಪತ್ನಿಯರೆಲ್ಲಾ ಆ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಖಚಿತ ಪಡಿಸಿಕೊಂಡ ಅಜಫ್ ಖಾನ್ ತನ್ನ ಸೈನಿಕರೊಂದಿಗೆ ಆ ಪ್ರದೇಶಕ್ಕೆ ಹೋಗುತ್ತಾನೆ.

ಸೈನಿಕರು

ಸೈನಿಕರು

ಅಜಫ್ ಖಾನ್ ತನ್ನ ಸೈನಿಕರಿಗೆ ತನ್ನ ಎಲ್ಲಾ ಪತ್ನಿಯರನ್ನು ಕೊಲ್ಲಲು ಅಜ್ಞೆಯನ್ನು ಹೊರಡಿಸುತ್ತಾನೆ. ಆ ಬಾವಿಯಲ್ಲಿ ಕೆಲವರನ್ನು ತಳ್ಳಿಸುತ್ತಾನೆ.

ತಪ್ಪಿಸಿ ಕೊಂಡು

ತಪ್ಪಿಸಿ ಕೊಂಡು

60 ಪತ್ನಿಯರಲ್ಲಿ ಇಬ್ಬರು ಪತ್ನಿಯರು ತಪ್ಪಿಸಿಕೊಂಡು ಹೋಗುವಾಗ ಅಜಫ್ ಖಾನ್ ತನ್ನ ಸೈನಿಕರಿಗೆ ಕಳುಹಿಸಿ ಹುಡುಕಿ ಹುಡುಕಿ ಕ್ರೂರವಾಗಿ ಕೊಲೆ ಮಾಡಿಸಿದನಂತೆ.

ಮರಣ ಪರೀಕ್ಷೆ

ಮರಣ ಪರೀಕ್ಷೆ

ಅಜಫ್ ಖಾನ್ ತನ್ನ 60 ಪತ್ನಿಯರು ಮರಣಿಸಿದರು ಎಂದು ಪರೀಕ್ಷಿಸಿ ಅವರ ಶವಗಳನ್ನು ಬಾವಿಯಿಂದ ತೆಗೆಸಿದನು. ಆದೇ ಪ್ರದೇಶದಲ್ಲಿ 60 ಸಮಾಧಿಗಳನ್ನು ಕಟ್ಟಿಸಿದನು.

ಸಮಾಧಿ

ಸಮಾಧಿ

ಅದೇ ಅಲ್ಲದೇ ಅವರ ಸಮಾಧಿಯ ಪಕ್ಕದಲ್ಲಿಯೇ ಅವನಿಗೂ ಕೂಡ ಒಂದು ಸಮಾಧಿಯನ್ನು ನಿರ್ಮಿಸಿಕೊಂಡನು.

ಶಿವಾಜಿ

ಶಿವಾಜಿ

ನಂತರ ಶಿವಾಜಿಯ ಮೇಲೆ ಯುದ್ಧಕ್ಕೆ ಹೊರಟನು. ಜ್ಯೋತ್ಯಿಷ್ಯಗಾರನು ಹೇಳಿದ ಹಾಗೆಯೇ 1659ರಲ್ಲಿ ನಂವೆಂಬರ್ 10 ರಂದು ಶಿವಾಜಿಯ ಕೈಯಲ್ಲಿ ಅಜಫ್ ಖಾನ್ ಮರಣಿಸಿದನು ಎಂದು ಚರಿತ್ರಕಾರರು ಹೇಳುತ್ತಾರೆ.

ಸಾಟ್ ಕಬರ್

ಸಾಟ್ ಕಬರ್

ಈ ಸಮಾಧಿಗಳಿರುವ ಪ್ರದೇಶವನ್ನು ಸಾಟ್ ಕಬರ್ ಎಂದು ಕರೆಯುತ್ತಾರೆ. ಈ ಸಮಾಧಿಯನ್ನು ಕಂಡರೆ ಆ ಅಮಾಯಕ ಮಹಿಳೆಯರನ್ನು ಕೊಂದ ಅಜಫ್ ಖಾನ್ ಕ್ರೂರತ್ವದ ನಿರ್ಧನವಾಗಿ ಉಳಿದುಬಿಟ್ಟಿದೆ.

ಪ್ರವಾಸಿಗರು

ಪ್ರವಾಸಿಗರು

ಈ ಸಾಟ್ ಕಬರ್ ಒಂದು ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಅಜಫ್ ಖಾನ್‍ನ ಪತ್ನಿಯರ ಮರಣವನ್ನು ನೆನೆಪಿಸಿಕೊಂಡು ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಾರೆ.

ಸಮೀಪದ ಪ್ರವಾಸಿತಾಣಗಳು

ಸಮೀಪದ ಪ್ರವಾಸಿತಾಣಗಳು

ಗೋಲ್ ಗುಂಬಸ್, ಇಬ್ರಾಹಿಂ ರ್ವಜಾ ಟುಂಬ್, ಅಲಮಟ್ಟಿ ಡ್ಯಾಂ, ಜುಮ್ಮ ಮಸೀದಿ, ಬರಹ ಕಾಮನ್, ಶಿವಗಿರಿ ದೇವಾಲಯ, ಮಲ್ಕಿ ಐ ಮದೀನ, ವಸ್ತು ಸಂಗ್ರಾಹಾಲಯ ಇನ್ನೂ ಹಲವಾರು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ