Search
  • Follow NativePlanet
Share
» »ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಪ್ರವಾಸ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದು. ಟ್ರೆಕ್ಕಿಂಗ್ ಪ್ರೇಮಿಗಳಿಗೆ, ನವಜೋಡಿಗಳಿಗೆ, ಕುಟುಂಬ ಸಭ್ಯರಿಗೆ, ಮಕ್ಕಳಿಗೆ ಅವರದೇ ಅದ ವಿಶೇಷವಾದ ತಾಣಗಳು ನಮ್ಮ ದೇಶದಲ್ಲಿ ಹಲವಾರು ಇವೆ. ವಿವಾಹವಾದ ನಂತರ ನವ ಜೋಡಿಗಳು ಒಂದು ಒಳ್ಳೆ

ಪ್ರವಾಸ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದು. ಟ್ರೆಕ್ಕಿಂಗ್ ಪ್ರೇಮಿಗಳಿಗೆ, ನವಜೋಡಿಗಳಿಗೆ, ಕುಟುಂಬ ಸಭ್ಯರಿಗೆ, ಮಕ್ಕಳಿಗೆ ಅವರದೇ ಅದ ವಿಶೇಷವಾದ ತಾಣಗಳು ನಮ್ಮ ದೇಶದಲ್ಲಿ ಹಲವಾರು ಇವೆ. ವಿವಾಹವಾದ ನಂತರ ನವ ಜೋಡಿಗಳು ಒಂದು ಒಳ್ಳೆಯ ಪರಿಸರದಲ್ಲಿ ಜೀವನವನ್ನು ಪ್ರಾರಂಭಿಸಬೇಕು ಎಂದು ಅಂದುಕೊಳ್ಳುವುದು ಸಹಜ. ಅಲ್ಲಿ ಏಕಾಂಗಿಯಾಗಿ ತನ್ನ ಸಂಗಾತಿಯ ಜೊತೆಗೆ ಇರಬೇಕು ಎಂದು ಅನ್ನಿಸದೇ ಇರದು. ಹೀಗಿರುವಾಗ ಅಂತಹ ಸುಂದರವಾದ ತಾಣಗಳು ನಮ್ಮ ಬೆಂಗಳೂರಿನ ಸಮೀಪದಲ್ಲಿ ಎಲ್ಲಿವೆ? ಆ ಅದ್ಭುತವಾದ ತಾಣಗಳು ಯಾವುವು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿದುಕೊಳ್ಳಿ.

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಗೋಕರ್ಣ, ಕರ್ನಾಟಕ
ಗೋಕರ್ಣವು ಅತೀ ಹೆಚ್ಚು ಪ್ರವಾಸಿಗರನ್ನು ಹೊಂದಿರುವ ಸುಂದರವಾದ ತಾಣವಾಗಿದೆ. ವರ್ಷದಾದ್ಯಂತ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸುಂದರವಾದ ಬೀಚ್‍ಗಳು, ಪುಣ್ಯಕ್ಷೇತ್ರಗಳಿವೆ. ಈ ಸುಂದರವಾದ ಸ್ಥಳವು ಕೂಡ ಒಂದು ರೋಮ್ಯಾಂಟಿಕ್ ಪ್ರದೇಶವಾಗಿದ್ದು, ಇಲ್ಲಿ ನವ ಜೋಡಿಗಳು ಹೆಚ್ಚಾಗಿ ಇಲ್ಲಿನ ಬೀಚ್‍ಗಳಲ್ಲಿ ಅಡ್ಡಾಡಲು ಭೇಟಿ ನೀಡುತ್ತಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಭೇಟಿ ನೀಡಲು ಸುಮಾರು 8 ಗಂಟೆ 30 ನಿಮಿಷಗಳು ತೆಗೆದುಕೊಳ್ಳುತ್ತದೆ. ಇದು ಸುಮಾರು 484. ಕಿ.ಮೀ ದೂರದಲ್ಲಿದೆ.

PC: Robert Helvie

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಕೂರ್ಗ್, ಕರ್ನಾಟಕ
ಕೂರ್ಗ್ ಕರ್ನಾಟಕದ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಇಲ್ಲಿನ ವಾತಾವರಣವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಇಲ್ಲಿನ ದಪ್ಪ ದಪ್ಪದಾದ ಮೋಡಗಳು, ಮಂಜಿನಿಂದ ಕೂಡಿರುವ ಪರಿಸರದ ಸೊಬಗು ಆಹಾ.... ನವ ದಂಪತಿಗಳಿಗೆ ರೋಮಾಂಚನವಾಗದೇ ಇರದು. ಹಚ್ಚ ಹಸಿರಿನ ಪ್ರಾಕೃತಿಕ ಸೌಂದರ್ಯವು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸದೇ ಇರದು. ಇದೊಂದು ರೋಮ್ಯಾಂಟಿಕ್ ತಾಣವಾಗಿದ್ದು, ಬೆಂಗಳುರಿನಿಂದ ಕೂರ್ಗ ಅಥವಾ ಕೊಡಗಿಗೆ ಸುಮಾರು 243 ಕಿ.ಮೀ ದೂರದಲ್ಲಿದೆ. ಸುಮಾರು 5 ಗಂಟೆ 30 ನಿಮಿಷಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

PC: Bopannap

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಕಬಿನಿ
ಇದೊಂದು ಸುಂದರವಾದ ತಾಣವಾಗಿದ್ದು, ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಮುಖ್ಯವಾಗಿ ಅಭಯಾರಣ್ಯಗಳು, ಕಬಿನಿ ನದಿ, ಹಚ್ಚ ಹಸಿರಿನಿಂದ ತುಂಬಿ ತುಳುಕಾಡುತ್ತಿರುವ ಸುಂದರವಾದ ದೃಶ್ಯಗಳನ್ನು ಇಲ್ಲಿ ಸ್ವಾಧಿಸಬಹುದು. ಪ್ರಣಯವನ್ನು ಹೆಚ್ಚಿಸುವ ಸಲುವಾಗಿ ಒಮ್ಮೆ ಕಬಿನಿಗೆ ಭೇಟಿ ನೀಡಿ ಬನ್ನಿ. ಬೆಂಗಳೂರಿನಿಂದ ಕಬಿನಿಗೆ ಸುಮಾರು 216 ಕಿ. ಮೀ ದೂರದಲ್ಲಿದೆ.

PC:Vinoth Chandar

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಪಾಂಡಿಚೇರಿ
ಪಾಂಡಿಚೇರಿಯು ದೇಶದ ಸುಂದರವಾದ ಕೇಂದ್ರಾಡಳಿತ ಪ್ರದೇಶವಾಗಿದ್ದು, ಈ ಅದ್ಭುತವಾದ ಪ್ರದೇಶಕ್ಕೆ ಅನೇಕ ಪ್ರದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ನವ ದಂಪತಿಗಳು ಸಂತೋಷವಾಗಿ ಕಾಲ ಕಳೆಯಲು ಇದೊಂದು ಅತ್ಯುತ್ತಮವಾದ ಸ್ಥಳವಾಗಿದೆ. ಇಲ್ಲಿ ನವದಂತಿಗಳಿಗೇ ಎಂದು ಅನೇಕ ತಾಣಗಳು ಇವೆ. ಬೆಂಗಳೂರಿನಿಂದ ಪಾಂಡಿಚೇರಿಗೆ ಸುಮಾರು 316 ಕಿ.ಮೀ ದೂರದಲ್ಲಿದೆ.

PC:Karthik Easvur

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಮರವಂತೆ
ಸುತ್ತಲೂ ಹುಲ್ಲುಗಾವಲು ಮತ್ತು ಸುಂದರವಾದ ಬೀಚ್‍ಗಳಿಂದ ಈ ತಾಣವು ಕಂಗೊಳಿಸುತ್ತಿದೆ. ಇಲ್ಲಿ ರಸ್ತೆ ಪ್ರವಾಸ ಕೂಡ ಮಾಡಬಹುದಾಗಿದೆ. ಬೆಂಗಳೂರಿಗರು ಈ ಮರವಂತೆ ತಾಣಕ್ಕೆ ಅಷ್ಟಾಗಿ ಭೇಟಿ ನೀಡುವುದಿಲ್ಲ. ಆದರೆ ಈ ತಾಣವು ನವ ದಂಪತಿಗಳಿಗೆ ಹೇಳಿ ಮಾಡಿಸಿದ ಹಾಗೆ ಇರುತ್ತದೆ. ತಂಪಾದ ಗಾಳಿ, ಹಚ್ಚ ಹಸಿರಿನ ತಾಣವು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬೆಂಗಳೂರಿನಿಂದ ಮರವಂತೆಗೆ ಸುಮಾರು 435 ಕಿ.ಮೀ ದೂರದಲ್ಲಿದೆ. ಸುಮಾರು 9 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಕೂನೂರು
ತಮಿಳುನಾಡಿನ ಸುಂದರವಾದ ಪ್ರವಾಸಿ ತಾಣಗಳಲ್ಲಿ ಈ ಕೂನೂರು ಕೂಡ ಒಂದಾಗಿದೆ, ಇಲ್ಲಿ ಸುಂದರವಾದ ಗಿರಿಧಾಮಗಳಲ್ಲಿ ಒಂದಾದ ಕೂನೂರು ನೀಲಗಿರಿ ಮತ್ತು ಕ್ಯಾಥರೀನ್ ಫಾಲ್ಸ್ ಅತ್ಯಂತ ಆಕರ್ಷಕವಾದ ದೃಶ್ಯವಾಗಿದೆ. ಇಲ್ಲಿನ ದೃಶ್ಯವು ನವ ಜೋಡಿಗಳಿಗೆ ಒಂದು ಅದ್ಭುತವಾದ ಅನುಭವವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಇದು ಅತ್ಯಂತ ರೋಮ್ಯಾಂಟಿಕ್ ಪ್ರದೇಶ ಕೂಡ ಆಗಿದೆ. ಈ ಸುಂದರವಾದ ತಾಣಕ್ಕೆ ಭೇಟಿ ನೀಡಲು ಬೆಂಗಳೂರಿನಿಂದ ಸುಮಾರು 399 ಕಿ.ಮೀ ದೂರದಲ್ಲಿದೆ.

PC: Janjri

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಊಟಿ
ನವ ಜೋಡಿಗಳಿಗೆ ಏಕಾಂತಕ್ಕೆ ಹೇಳಿ ಮಾಡಿಸಿದ ಸ್ಥಳವೆಂದರೆ ಅದು ಊಟಿ. ಇಲ್ಲಿಗೆ ಸಾವಿರಾರು ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಹಸಿನಿಂದ ಕೂಡಿದ ಬೆಟ್ಟಗಳನ್ನು ದಟ್ಟವಾದ ಕಾಡುಗಳು ಮತ್ತು ಸುಂದರವಾದ ಸರೋವರಗಳ ಮಧ್ಯೆ ಇರುವ ಊಟಿ ಅತ್ಯಾಕರ್ಷಕವಾದ ನೋಟವನ್ನು ಬೀರುತ್ತದೆ. ಬೆಂಗಳೂರಿನಿಂದ ಅತ್ಯಂತ ಜನಪ್ರಿಯವಾದ ಹಾಗು ರೋಮ್ಯಾಂಟಿಕ್ ಪ್ರದೇಶವೆಂದರೆ ಅದು ಊಟಿಯಾಗಿದೆ. ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುವವರೆ ನವದಂಪತಿಗಳು. ನೈಸರ್ಗಿಕ ಪರಿಸರದ ಎಲ್ಲಾ ಸೌಂದರ್ಯವನ್ನು ಸಹ ಇಲ್ಲಿ ಪರಿಪೂರ್ಣವಾಗಿ ಸ್ವಾಧಿಸಬಹುದು. ಬೆಂಗಳೂರಿನಿಂದ ಈ ಅದ್ಭುತವಾದ ತಾಣಕ್ಕೆ ಭೇಟಿ ನೀಡಲು ಸುಮಾರು 308 ಕಿ. ಮೀ ದೂರದಲ್ಲಿದೆ. ಸುಲಭವಾಗಿ ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ.

PC: Adam Jones Adam63

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X