Search
  • Follow NativePlanet
Share
» » ದೆಹಲಿಯಿಂದ ಟೋಕಿಯೋಗೆ ಬರೀ 30 ನಿಮಿಷದಲ್ಲಿ ತಲುಪ್ತೀರಾ

ದೆಹಲಿಯಿಂದ ಟೋಕಿಯೋಗೆ ಬರೀ 30 ನಿಮಿಷದಲ್ಲಿ ತಲುಪ್ತೀರಾ

ಇನ್ನು ನೀವೂ ರಾಕೆಟ್‌ನಲ್ಲಿ ಪ್ರಯಾಣಿಸಬಹುದು...ನವದೆಹಲಿಯಿಂದ ಟೋಕಿಯೋಗೆ ಕೇವಲ 30 ನಿಮಿಷದಲ್ಲಿ ತಲುಪ್ತೀರಾ. ನಮ್ಮಲ್ಲಿ ಬಹುತೇಕರಿಗೆ ಆಕಾಶದಲ್ಲಿ ಹಾರ ಬೇಕೆಂಬ ಆಸೆ ಇರುತ್ತದೆ. ಆದರೆ ಅದು ಕನಸಾಗೋದು ಕೇವಲ ವಿಮಾನಯಾನದಿಂದಷ್ಟೇ. ಆದರೆ ಆ ಭಾಗ್ಯವೂ ಎಲ್ಲರಿಗೆ ದೊರಕೋದಿಲ್ಲ. ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ವಿಮಾನದಲ್ಲಿ ಪ್ರಯಾಣಿಸೋದು ಕನಸೇ ಸರಿ. ಇನ್ನು ರಾಕೆಟ್‌ನಲ್ಲಿ ಹಾರೋದು ಉಂಟಾ? ಆದರೆ ನಿಮ್ಮ ಈ ಕನಸನ್ನು ನನಸಾಗಿಸಲು ಹೊರಡಿಸಿದೆ ಸ್ಪೇಸ್ ಎಕ್ಸ್ ಎನ್ನುವ ಕಂಪನಿ.

ಇದನ್ನೂ ಓದಿ: ಪರಶುರಾಮ ಕೊಡಲಿಯಿಂದ ಬಂಡೆಯನ್ನು ಕಡಿದು ನಿರ್ಮಿಸಿದ ದೇವಾಲಯ ಇದು

ರಾಕೆಟ್‌ನಲ್ಲಿ ಹಾರಬಹುದು

ರಾಕೆಟ್‌ನಲ್ಲಿ ಹಾರಬಹುದು

Pc: youtube

ಸ್ಪೇಸ್ ಎಕ್ಸ್ ಕಂಪನಿಯು ಸಾಮಾನ್ಯ ಜನರಿಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕ್ರಮಿಸಲು ರಾಕೆಟ್ ವ್ಯವಸ್ಥೆಯನ್ನು ಮಾಡಿದೆ. ಇದರಲ್ಲಿ ಏಕಾನಮಿ ಕ್ಲಾಸ್ ವಿಮಾನ ಪ್ರಯಾಣಕ್ಕೆ ನೀಡುವಷ್ಟೇ ಟಿಕೇಟ್ ದರದಲ್ಲೇ ರಾಕೇಟ್ ಪ್ರಯಾಣ ಸಾಧ್ಯವಾಗುತ್ತದಂತೆ. ಎಷ್ಟೇ ದೂರದ ದೇಶಗಳಿಗೂ ಕೇವಲ 30 ನಿಮಿಷದಲ್ಲಿ ತಲುಪಲು ಈ ರಾಕೆಟ್‌ನಿಂದ ಸಾಧ್ಯ.

ನವದೆಹಲಿಯಿಂದ ಟೋಕಿಯೋಗೆ 30 ನಿಮಿಷದಲ್ಲಿ ತಲುಪಬಹುದು

ನವದೆಹಲಿಯಿಂದ ಟೋಕಿಯೋಗೆ 30 ನಿಮಿಷದಲ್ಲಿ ತಲುಪಬಹುದು

Pc: youtube

ಇನ್ನುಮುಂದೆ ನೀವು ನವದೆಹಲಿಯಿಂದ ಟೋಕಿಯೋಗೆ 30 ನಿಮಿಷದಲ್ಲಿ ತಲುಪಬಹುದು. ಹಾಗೂ ನ್ಯೂಯಾರ್ಕ ನಿಂದ ಶಾಂಘೈಗೆ 39 ನಿಮಿಷದಲ್ಲಿ ತಲುಪಬಹುದು. ಅರೇ ವಿಮಾನದಲ್ಲಿ ಹೋದರೂ ನವದೆಹಲಿಯಿಂದ ಟೋಕಿಯೋಗೆ 30 ನಿಮಿಷದಲ್ಲಿ ತಲುಪಲು ಸಾಧ್ಯವಿಲ್ಲ ಅಂತಾ ಯೋಚಿಸ್ತಾ ಇದ್ದೀರಾ?

ಸ್ಪೇಸ್ ಎಕ್ಸ್ ಕಂಪನಿ

ಸ್ಪೇಸ್ ಎಕ್ಸ್ ಕಂಪನಿ

Pc: youtube

ನಾವೀಗ ಮಾತಾಡ್ತಿರೋದು ವಿಮಾನದ ಬಗ್ಗೆ ಅಲ್ಲ. ಬದಲಾಗಿ ರಾಕೆಟ್ ಬಗ್ಗೆ. ಸ್ಪೇಸ್ ಎಕ್ಸ್ ಎನ್ನುವ ಕಂಪನಿಯನ್ನು ನಡೆಸುತ್ತಿರುವ ಬಿಲಿಯನೇರ್ ಎಲಾನ್ ಮಸ್ಕ್ ಎನ್ನುವವರು ಭೂಮಿಯ ನಿವಾಸಿಗಳಿಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಲು ರಾಕೆಟ್ ವ್ಯವಸ್ಥೆ ಮಾಡಲಿದ್ದಾರೆ ಎಂದು ಘೋಷಿಸಿದ್ದಾರೆ. ಬಿಎಫ್‍ಆರ್ ಎಂದು ಕರೆಯಲಾಗುವ ಈ ರಾಕೆಟ್ ಗಂಟೆಗೆ 27000 ಮೈಲುಗಳಷ್ಟು ಕ್ರಮಿಸುತ್ತದೆ. ಈ ರಾಕೆಟ್ ಒಂದು ಗಂಟೆಯೊಳಗೆ ಯಾವುದೇ ಪ್ರದೇಶವನ್ನು ತಲುಪಬಹುದಾಗಿದೆ.

ಏಕಾನಮಿ ಕ್ಲಾಸ್ ವಿಮಾನದ ದರ

ಏಕಾನಮಿ ಕ್ಲಾಸ್ ವಿಮಾನದ ದರ

Pc: youtube

ಇನ್ನೂ ರಾಕೆಟ್ ಅಂದ್ರೆ ಅದರ ಬೆಲೆ ವಿಮಾನಕ್ಕಿಂತ ಜಾಸ್ತಿ ಇರಬಹುದು ಎಂದು ನೀವು ಯೋಚಿಸಿದ್ದರೆ ನಿಮ್ಮ ಊಹೆ ಖಂಡಿತಾ ತಪ್ಪು. ಈ ರಾಕೆಟ್ ಟಿಕೇಟ್ ಬೆಲೆ ನೀವು ಸಾಮಾನ್ಯವಾಗಿ ಏಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸುವಾಗ ಎಷ್ಟು ಟಿಕೇಟ್ ದರ ತೆತ್ತುತ್ತೀರೋ ಅಷ್ಟೇ ಹಣ ಈ ರಾಕೆಟ್‌ಗೂ ಆಗುತ್ತದೆ.

850 ಜನರನ್ನು ಹೊತ್ತೊಯ್ಯುತ್ತದೆ

850 ಜನರನ್ನು ಹೊತ್ತೊಯ್ಯುತ್ತದೆ

Pc: youtube

ಇದನ್ನು ಮಾಸ್ಕ್ ತನ್ನ ಇನ್ಸ್‍ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ. ಈ ಬಿಎಫ್ ಆರ್ ರಾಕೆಟ್ ಒಮ್ಮೆಗೆ 850 ಜನರನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ. ಇದೆಲ್ಲಾ ಕೇಳಿದ ನಂತರ ನಿಮಗೂ ರಾಕೆಟ್ ಯಾತ್ರೆ ಮಾಡಬೇಕೆಂಬ ಆಸೆ ಇದ್ದರೆ ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಬೇಕಷ್ಟೇ. ಅಲ್ಲಿವರೆಗೆ ಬಿಎಫ್‍ಆರ್ ಬಿಡುಗಡೆ ಮಾಡಿರುವ ಅನಿಮೇಶನ್ ವಿಡಿಯೋವನ್ನು ನೋಡಿ ಖುಷಿಪಡಬೇಕಷ್ಟೆ.

Read more about: india travel new delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X