Search
  • Follow NativePlanet
Share
» »ರಸ್ತೆಮಾರ್ಗ-ಬೆಂಗಳೂರಿನಿಂದ-ಕೊಡಗು-ಸ್ಕಾಟ್ ಲ್ಯಾಂಡ್-ಭಾರತ

ರಸ್ತೆಮಾರ್ಗ-ಬೆಂಗಳೂರಿನಿಂದ-ಕೊಡಗು-ಸ್ಕಾಟ್ ಲ್ಯಾಂಡ್-ಭಾರತ

ಬೆಂಗಳೂರಿನಿಂದ ಕೊಡಗುಗೆ ರಸ್ತೆಮಾರ್ಗ, ಪ್ರವಾಸಿಗರಿಗೆ ಸ್ವರ್ಗವಾಗಿರುವ ಕೊಡಗು, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್.

By Manjula Balaraj Tantry

ದೈನಂದಿನ ಬ್ಯೂಸಿ ಚಟುವಟಿಕೆಯಿಂದ ಹೊರಬರಲು ಹಾತೊರೆಯುತ್ತಿದ್ದೀರಾ? ನೀವು 'ಪ್ರಯಾಣಕ್ಕೆ ಕಾಡು' ಅಥವಾ ಅರ್ನೆಸ್ಟ್ ಚೆ ಅವರ ಮೋಟಾರ್ ಸೈಕಲ್ ಡೈರೀಸ್ ಎಂಬ ಸೀನ್ ಪೆನ್ ನಾಟಕದಿಂದ ಆಳವಾಗಿ ಹೀರಿಕೊಳ್ಳಲ್ಪಟ್ಟ ಪ್ರಯಾಣದ ವಿಲಕ್ಷಣ ವ್ಯಕ್ತಿಯಾಗಿದ್ದೀರಾ?

ಹಾಗಿದ್ದಲ್ಲಿ, ಕೊಡಗು ಇದಕ್ಕೆ ಪರಿಹಾರ. ಬೆಂಗಳೂರಿನಿಂದ ಕೊಡಗುಗೆ ರೋಡ್ ಟ್ರಿಪ್ ಹೋಗಲು ನಿಮಗೆ ಮನಸ್ಸಿದೆಯೇ? ಬೆಂಗಳೂರಿಗರಿಗೆ ಕೊಡಗು ಹತ್ತಿರದ ಪ್ರದೇಶ. ವಾರಾಂತ್ಯದ ಪ್ರವಾಸ, ಅದರಲ್ಲೂ ಪ್ರಮುಖವಾಗಿ ರಸ್ತೆ ಮೂಲಕ ಪ್ರವಾಸ ಆಯ್ಕೆಮಾಡಿಕೊಂಡರೆ, ಪ್ರವಾಸಕ್ಕೆ ಹೆಚ್ಚಿನ ಮುದ ಬರುತ್ತದೆ.

ದೂರದಲ್ಲಿದ್ದರೂ ಸಹ ಕೊಡಗು ಬೆಂಗಳೂರಿಗರಿಗೆ ಸನಿಹವೇ ಆಗಿರುತ್ತದೆ. ಕೊಡಗನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಹೇಳಲಾಗುತ್ತದೆ. ಹಾಗಿದ್ದಲ್ಲಿ ಈ ಸಾಮ್ಯತೆ ಏನಿದೆ, ಯಾಕೆ ಈ ಪ್ರವಾಸ ಮೊದಲ ಆಯ್ಕೆಯಾಗ ಬೇಕು ಎನ್ನುವುದನ್ನು ನೋಡೋಣ. ಕೂರ್ಗ್ ಅಥವಾ ಕೊಡಗು ಎಂಬುದು ನೈಋತ್ಯ ಕರ್ನಾಟಕದ ಪಶ್ಚಿಮ ಘಟ್ಟಗಳಾದ್ಯಂತ ವಿಸ್ತರಿಸಿರುವ ಆಡಳಿತಾತ್ಮಕ ಜಿಲ್ಲೆಯಾಗಿದೆ.

ಈ ಸ್ಥಳವು ಕಾಫಿ, ಜನರು ಮತ್ತು ಭೌಗೋಳಿಕತೆಗೆ ಹೆಸರುವಾಸಿಯಾಗಿದೆ. ಸನ್ಯಾಸಿಗಳಿಂದ ಸಸ್ಯ ಮತ್ತು ಪ್ರಾಣಿಗಳ ತನಕ, ಕೊಡಗು ಪ್ರಯಾಣಿಕರಿಗೆ ಪ್ರೇಮಿಯಂತಿರುತ್ತದೆ. ಕೊಡಗು ಅನೇಕ ಬೆಂಗಳೂರಿಗೆ ಅಚ್ಚುಮೆಚ್ಚಿನ ಅಡಗುತಾಣವಾಗಿದೆ. ವಾರಾಂತ್ಯದ ಸವಾರಿ ನೀವು ಕೊಡಗು ಪ್ರವಾಸದಿಂದ ಹಿಂದಿರುಗಿ ಬಂದ ನಂತರ, ಪ್ರವಾಸಿಗರ ಶಕ್ತಿ ಮರು ಕ್ರೋಢೀಕೃತವಾಗುವುದು ಗ್ಯಾರಂಟಿ.

ಬೆಂಗಳೂರಿ

ಕೊಗು ರಸ್ತೆ NH-48 ರಲ್ಲಿ ಹಾಸನ ಮೂಲಕ ಬೆಂಗಳೂರಿನಿಂದ ಮಡಿಕೇರಿಗೆ ಬೆಂಗಳೂರಿನ ಕೂಡಗು ರಸ್ತೆ ದೇಶದಲ್ಲಿ ಬೈಕರ್ಗಳಿಗೆ ಅತ್ಯಂತ ಮೆಚ್ಚಿನ ಹೆದ್ದಾರಿಗಳಲ್ಲಿ ಒಂದಾಗಿದೆ. ಬೈಕ್ ನಲ್ಲಿ ಪ್ರಯಾಣಿಸಿದರೆ ಅದು ಪ್ರೀತಿಯ ಮತ್ತು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.

ಬೈಕ್ ರೈಡ್ ವೇಳೆ ದೃಶ್ಯಾವಳಿಗಳನ್ನು ಯಾವುದೇ ಅಡಚಣೆಯಿಲ್ಲದೇ ನೋಡಬಹುದಾಗಿದೆ. ಇದನ್ನು ನೋಡುವುದೇ ಒಂದು ಹಬ್ಬ, ಘೋರ-ಬೂದು ಬಣ್ಣದ ಮಂಜು ಕೂಡಗು ಪ್ರವೇಶದ್ವಾರದಲ್ಲಿ ಪ್ರವಾಸಿಗರನ್ನು ಸ್ವಾಗತಿಸುವುದರಿಂದ ಸೂರ್ಯಾಸ್ತದ ಮೊದಲು ಮಡಿಕೇರಿಯನ್ನು ತಲುಪುವುದು ಉತ್ತಮ.

PC : Vinayaraj

ಮಂಡಲ್ಪಟ್ಟಿ ಬೆಟ್ಟ

ಯಾವ ಯಾವ ಪ್ರದೇಶಗಳನ್ನು ನೋಡಬಹುದು

ಪ್ರವಾಸಿಗರು ಸಾಹಸ ಅನ್ವೇಷಕರಾಗಿದ್ದರೆ, ಮಂಡಲ್ಪಟ್ಟಿ ಬೆಟ್ಟಕ್ಕೆ ಮುಂಜಾನೆಯ ಒಂದು ಸವಾರಿ, ಪ್ರವಾಸಿಗರನ್ನು ಪುನರ್ಯೌವನಕ್ಕೆ ದೂಡುತ್ತದೆ. ಮಡಿಕೇರಿ ಪಟ್ಟಣದಿಂದ ಮೂವತ್ತು ಕಿ.ಮೀ ದೂರದಲ್ಲಿರುವ ಮಂಡಲ್ಪಟ್ಟಿ ಬೆಟ್ಟ ಸದಾ ಮೋಡ, ಶೀತ, ಗಾಳಿಮಯವಾಗಿರುತ್ತದೆ, ಜೊತೆಗೆ ಮಳೆಯೂ ಬರುತ್ತಿರುತ್ತದೆ.

ಮಂಡಲ್ಪಟ್ಟಿ ಬೆಟ್ಟ ಹತ್ತಲು ಕಾರು/ಜೀಪುಗಳನ್ನು ಬಾಡಿಗೆಯ ಮೂಲಕ ಪಡೆಯಬಹುದಾಗಿದೆ. ಆದರೂ, ಪ್ರವಾಸ ಅನ್ವೇಷಣೆಯಿಂದ ಕೂಡಿರಬೇಕು ಎಂದಾದರೆ ಬೈಕ್ ನಲ್ಲಿ ಹೋಗುವುದೇ ಉತ್ತಮ. ರಸ್ತೆ ಪ್ರಯಾಣದ ವೇಳೆ ಮೋಡದಿಂದ ತುಂಬಿರುವ ರಸ್ತೆಗಳು, ರಸ್ತೆ ಉದ್ದಗಲಕ್ಕೂ ಹಸಿರುಮಯ ಪ್ರದೇಶ ಪ್ರವಾಸವನ್ನು ಮುದವಾಗಿರಿಸುತ್ತದೆ. ಸಣ್ಣ ಟ್ರೆಕ್ಕಿಂಗ್ ಮುಗಿಸಿದ ನಂತರ ಪ್ರವಾಸಿಗರಿಗೆ ಇದು ಮಂತ್ರಮುಗ್ದವಾಗುವಂತೆ ಮಾಡುತ್ತದೆ. ಹಾಗಾಗಿ ಕೊಡಗನ್ನು ಭಾರತದ ಸ್ಕಾಟ್ ಲ್ಯಾಂಡ್ ಎಂದು ಕರೆದರೆ ಅತಿಶಯೋಕ್ತಿಯಲ್ಲ ಎಂದನಿಸುತ್ತದೆ.

PC : Philanthropist 1

ಬೈಲಕುಪ್ಪೆಯಲ್ಲಿರುವ ಮಠಗಳು

ಬೈಲಕುಪ್ಪೆಯಲ್ಲಿರುವ ಮಠಗಳು

ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ ವಸಾಹತುವು ಟಿಬೆಟ್ ಹೊರಭಾಗದಲ್ಲಿರುವ ಪ್ರಪಂಚದ ಎರಡನೇ ಅತೀ ದೊಡ್ಡ ಪ್ರದೇಶವಾಗಿದೆ. ಬೈಲಕುಪ್ಪೆಯ ವಿವಿಧ ಮಠಗಳಲ್ಲಿ, ನಮಡ್ರೋಲಿಂಗ್ ಮಠ ಅಥವಾ ಗೋಲ್ಡನ್ ದೇವಸ್ಥಾನವು ಅತಿ ದೊಡ್ಡ ಮತ್ತು ಅತ್ಯಂತ ಪ್ರಸಿದ್ಧವಾದದ್ದು. 40 ಅಡಿ ಎತ್ತರದ ಗೋಲ್ಡನ್ ಬುದ್ಧ ಪ್ರತಿಮೆಗಳು ಇಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ. ನೀವು ಇಲ್ಲಿ ಬೌದ್ಧ ಮತ್ತು ಟಿಬೆಟಿಯನ್ / ಲಾಮಾ ಸಂಸ್ಕೃತಿಯ ಪ್ರವಾಸವನ್ನು ಮಾಡಬಹುದು.

ಅಬ್ಬೆ, ಇರುಪ್ಪು ಮತ್ತು ಇತರ ಜಲಪಾತಗಳು ಮಡಿಕೇರಿ ಬಳಿಯಿದೆ, ಅಬ್ಬೆ 70 ಅಡಿ ಎತ್ತರದ ಮಂಡಲ್ಪಟ್ಟಿ - ಮಡಿಕೇರಿ ಮಾರ್ಗದಲ್ಲಿ ಸಿಗುವ ಜಲಪಾತವಾಗಿದೆ. ಕೊಡಗಿನಲ್ಲಿ ಇರುಪ್ಪು ಮತ್ತೊಂದು ಪ್ರಸಿದ್ಧ ಜಲಪಾತವಾಗಿದೆ. ಪ್ರಸಿದ್ಧ ಶಿವ ದೇವಸ್ಥಾನವಾದ ರಾಮೇಶ್ವರ ದೇವಾಲಯ ಇರುವುದರಿಂದ ಇದು ತೀರ್ಥಯಾತ್ರಾ ಸ್ಥಳವಾಗಿದೆ. ಮಲ್ಲೇಳಿ ಜಲಪಾತವು ಕೊಡಗಿನ ಅತ್ಯಂತ ದೊಡ್ಡ ಮತ್ತು ಅತಿ ಎತ್ತರದ ಜಲಪಾತವಾಗಿದೆ ಮತ್ತು ಚೆಲವರ ಜಲಪಾತಗಳು ಕೂಡಗಿನಲ್ಲಿರುವ ಇತರ ಪ್ರಸಿದ್ಧ ಜಲಪಾತಗಳಾಗಿವೆ.

ರಾಜನ ಸೀಟು ಕೂಡಗಿನಲ್ಲಿ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ತಾಣವಾಗಿದೆ. ರಾಜನ ಸೀಟೆಯು ಋತುಮಾನದ ಹೂವುಗಳು ಮತ್ತು ಕೃತಕ ಕಾರಂಜಿಗಳು, ಕೂಡಗು ರಾಜರು ತಮ್ಮ ರಾಣಿಯರೊಂದಿಗೆ ಸೂರ್ಯನನ್ನು ನೋಡಿ ವಿಶ್ರಾಂತಿ ಪಡೆಯುತ್ತಿದ್ದ ಜಾಗವಾಗಿದೆ. ಸೂರ್ಯಾಸ್ತದ ವೇಳೆ ಆಕಾಶದಲ್ಲಿ ಸಿಂಪಡಿಸಿದಂತಿರುವ ಗುಲಾಬಿ ಮತ್ತು ಕಿತ್ತಳೆ ಬಣ್ಣಗಳ ರಚನೆ ವೀಕ್ಷಿಸಲು ಎರಡು ಕಣ್ಣು ಸಾಲದು, ಇಂತಹ ನಯನಮನೋಹರ ಸೂರ್ಯಾಸ್ತದ ಕನಸನ್ನು ಯಾಕೆ ಕಾಣಬಾರದು?

PC : Manjunath B K

ಕಾವೇರಿ ನಿಸರ್ಗಧಾಮ

ಕಾವೇರಿ ನಿಸರ್ಗಧಾಮ: ಕಾವೇರಿ ನಿಸರ್ಗಧಾಮವು ಕಾವೇರಿ ನದಿಯಿಂದ ನಿರ್ಮಿಸಲ್ಪಟ್ಟ ದ್ವೀಪವಾಗಿದ್ದು, ದಪ್ಪ ಬಿದಿರಿನ ತೋಪುಗಳು, ತೇಗದ ಮರಗಳು ಮತ್ತು ಶ್ರೀಗಂಧದ ಮರಗಳಿಂದ ಕೂಡಿದೆ. ತೂಗೊಯ್ಯಾಲೆ (ಹ್ಯಾಂಗಿಂಗ್ ಹಗ್ಗ) ಸೇತುವೆಯಿಂದ ಇದನ್ನು ಪ್ರವೇಶಿಸಬಹುದು.

ಇಲ್ಲಿರುವ ಮಕ್ಕಳ ಆಟದ ಮೈದಾನ ಜಿಂಕೆ ಮತ್ತು ಮೊಲದ ಉದ್ಯಾನವನ್ನು ಒಳಗೊಂಡಿದೆ. ಎಲಿಫೆಂಟ್ ಸವಾರಿ ಮತ್ತು ಬೋಟಿಂಗ್ ಕೂಡಾ ಇಲ್ಲಿ ಪ್ರಸಿದ್ಧವಾಗಿದೆ. ಅತಿಥಿ ಮನೆ ಮತ್ತು ಮರದ ಮೇಲಿನ ಬಿದಿರು ಕುಟೀರಗಳು ಇಲ್ಲಿ ಲಭ್ಯವಿದ್ದು ಮುಂಚಿತವಾಗಿ ಬುಕ್ ಮಾಡಿದರೆ ಇಲಾಖೆ ಇದರ ವ್ಯವಸ್ಥೆಯನ್ನು ಮಾಡುತ್ತದೆ.

ದುಬಾರೆ ಎಲಿಫೆಂಟ್ ಕ್ಯಾಂಪ್: ದುಬಾರೆ ಆನೆ ಶಿಬಿರವು ಕೊಡಗಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ದುಬಾರೆನಲ್ಲಿ ಚಾರಣ, ಆನೆ ಸವಾರಿ, ಮೀನುಗಾರಿಕೆ ಮತ್ತು ನದಿ ರಾಫ್ಟಿಂಗ್ಗೆ ಅವಕಾಶಗಳಿವೆ. ಗಂಡಾನೆಗಳು ಸ್ನಾನ ಮಾಡುವ ದೃಶ್ಯವನ್ನು ಕಣ್ಣಾರೆ ನೋಡಿ ಆನಂದಿಸುವಂತಿದ್ದರೆ, ಹಾಗಿದ್ದಲ್ಲಿ ಇದೇ ನಿಮಗೊಂದು ಅವಕಾಶ.

PC : raju venkat

 ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ಇತರ ಪ್ರಮುಖ ಸ್ಥಳಗಳು ಕೊಡಗಿನಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಇದು ಹುಲಿಗಳ ಮೀಸಲು ಪ್ರದೇಶವಾಗಿದೆ. ಈ ಉದ್ಯಾನವು ಸಸ್ಯ ಮತ್ತು ಪ್ರಾಣಿ, ಕಣಿವೆ ಮತ್ತು ಬೆಟ್ಟಗಳಿಂದ ಸಮೃದ್ಧವಾಗಿದೆ. ಉದ್ಯಾನವನ ಡ್ರೈವ್ ಮಾಡಿಕೊಂಡು ನೋಡಲು ಉತ್ತಮವಾಗಿದೆ. ಬ್ರಹ್ಮಗಿರಿ ಬೆಟ್ಟವು ಕೂಡಗಿನಲ್ಲಿರುವ ಮತ್ತೊಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಇದು ನಯನ ಮನೋಹರವಾಗಿದ್ದು ಮತ್ತು ಇದು ಶ್ರೀಮಂತ ವನ್ಯಜೀವಿಗಳಿಗೆ ಅಡಗಿದ ಸ್ಥಳವಾಗಿದೆ.

ಇಲ್ಲಿರುವ ದೇವಾಲಯವು ಪ್ರವಾಸಿಗರನ್ನು ಮಾತ್ರ ಆಕರ್ಷಿಸದೇ, ಭಕ್ತಾದಿಗಳೂ ಕೊಡಗಿನ ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಪ್ರಸಿದ್ಧ ಓಂಕಾರೇಶ್ವರ ಮತ್ತು ಭಾಗಮಂಡಲ ದೇವಸ್ಥಾನಗಳು ಕೂಡಗಿನ ಪ್ರಮುಖ ದೇವಾಲಯಗಳಾಗಿವೆ.

ಕೊಡಗು ಮಳೆಗಾಲಕ್ಕೆ ಹೆಸರುವಾಸಿಯಾಗಿರುವುದರಿಂದ, ನೀರಿನ ರಾಫ್ಟಿಂಗ್ ಮತ್ತು ಇತರ ನೀರಿನ ಕ್ರೀಡೆಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಹಾಗಾದರೆ ಇನ್ಯಾಕೆ ತಡ? ನಿಮ್ಮ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ, ಕೊಡಗಿನತ್ತ ಹೊರಡಿ. ಇದು ಖಂಡಿತವಾಗಿಯೂ ಭಾರತದ ಸ್ಕಾಟ್ ಲ್ಯಾಂಡ್ ಎನ್ನುವುದಕ್ಕೆ ಹತ್ತು ಹಲವಾರು ಕಾರಣಗಳಿವೆ. ನೀವು ಮಾಂಸಾಹಾರಿಯಾಗಿದ್ದರೆ, ಹಂದಿಮಾಂಸದ ತಿನುಸುಗಳನ್ನು ತಿನ್ನಲು ಮರೆಯದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X