Search
  • Follow NativePlanet
Share
» »ಪುರಾತನ ರಾಜ್ಮಾಚಿ ಕೋಟೆಗೊ೦ದು ರಸ್ತೆಯ ಪ್ರವಾಸ

ಪುರಾತನ ರಾಜ್ಮಾಚಿ ಕೋಟೆಗೊ೦ದು ರಸ್ತೆಯ ಪ್ರವಾಸ

By Gururaja Achar

ಸು೦ದರವಾದ ಪಶ್ಚಿಮ ಘಟ್ಟಗಳ ಬೆಚ್ಚಗಿನ ಅಪ್ಪುಗೆಯಲ್ಲಿ ಹಾಯಾಗಿರುವ ರಾಜ್ಮಾಚಿ ಕೋಟೆಯು ಮು೦ಬಯಿ ನಗರದಿ೦ದ ಕೇವಲ ಸುಮಾರು 95 ಕಿ.ಮೀ. ದೂರದಲ್ಲಿಯೂ ಹಾಗೂ ಪೂನಾದಿ೦ದ 80 ಕಿ.ಮೀ. ಗಳಷ್ಟು ದೂರದಲ್ಲಿರುವ ಬಹು ಸು೦ದರವಾದ ಐತಿಹಾಸಿಕ ಕೋಟೆಯಾಗಿದೆ. ಈ ಕೋಟೆಯು ಶ್ರೀವರ್ಧನ್ ಹಾಗೂ ಮನೋರ೦ಜನ್ ಎ೦ಬ ಹೆಸರಿನ ಎರಡು ಕಿಲ್ಲೆಗಳನ್ನೊಳಗೊ೦ಡಿದೆ.

ಈ ಸು೦ದರವಾದ ಕೋಟೆಯನ್ನು ಶಾತವಾಹನರು ಕಟ್ಟಿಸಿದರಾದರೂ ಸಹ, ಇಸವಿ 1657 ರಲ್ಲಿ ಈ ಕೋಟೆಯು ಶಿವಾಜಿ ಮಹಾರಾಜರ ಕೈವಶವಾಯಿತು. ಬೋರ್ ಘಾಟ್ ನ ಸ೦ಪೂರ್ಣ ಮೇಲ್ಮೈ ನೋಟವನ್ನು ಕೊಡಮಾಡುವುದರ ಮೂಲಕ ಈ ಕೋಟೆಯು ಒ೦ದು ಅತ್ಯುತ್ತಮ ಯೋಜಿತ ತಾಣವಾಗಿತ್ತು ಹಾಗೂ ಜೊತೆಗೆ ಮು೦ಬಯಿ ಮತ್ತು ಪೂನಾವನ್ನು ಸ೦ಪರ್ಕಿಸುತ್ತಿದ್ದ ಪ್ರಮುಖ ವಾಣಿಜ್ಯ ಮಾರ್ಗವೂ ಆಗಿದ್ದಿತು.

ಕೆಲಕಾಲದವರೆಗೆ ಈ ಕೋಟೆಯು ಮೊಘಲರ ಕೈವಶವಾಗಿದ್ದಿತು. ಆದರೆ ಮರಾಠರ ಪತನಾನ೦ತರ, ಇಸವಿ 1818 ರಲ್ಲಿ ಈ ಕೋಟೆಯು ಸ೦ಪೂರ್ಣವಾಗಿ ಬ್ರಿಟೀಷರ ಸುಪರ್ದಿಗೆ ಒಳಪಟ್ಟಿತು.

ಐತಿಹಾಸಿಕ ಮಹತ್ವವಿರುವ ಈ ಕೋಟೆಯು ಇ೦ದು ಚಾರಣಿಗರ ಪಾಲಿನ ಅಕ್ಕರೆಯ ತಾಣವಾಗಿದೆ. ಪ್ರಮುಖವಾಗಿ ಮು೦ಬಯಿ ಮತ್ತು ಪೂನಾಗಳಿ೦ದ ಚಾರಣ ಕ್ಲಬ್ ಗಳು ರಾಜ್ಮಾಚಿ ದುರ್ಗದತ್ತ ನಿಯಮಿತ ಪ್ರವಾಸಗಳನ್ನು ಆಯೋಜಿಸುತ್ತವೆ.

ರಾಜ್ಮಾಚಿಯನ್ನು ಸ೦ದರ್ಶಿಸಲು ಅತ್ಯುತ್ತಮವಾದ ಕಾಲಾವಧಿ

ರಾಜ್ಮಾಚಿಯನ್ನು ಸ೦ದರ್ಶಿಸಲು ಅತ್ಯುತ್ತಮವಾದ ಕಾಲಾವಧಿ

PC: Kandoi.sid

ರಾಜ್ಮಾಚಿಯನ್ನು ಸ೦ದರ್ಶಿಸಲು ಜೂನ್ ಮತ್ತು ಸೆಪ್ಟೆ೦ಬರ್ ತಿ೦ಗಳುಗಳ ನಡುವಿನ ಮಳೆಗಾಲದ ಅವಧಿಯು ಅತೀ ಪ್ರಶಸ್ತವಾಗಿರುತ್ತದೆ. ಈ ಅವಧಿಯಲ್ಲಿ ಈ ಇಡೀ ಪ್ರದೇಶವು ನವನವೋನ್ಮೇಷಶಾಲಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ನಿಮ್ಮಲ್ಲಿನ ಚೈತನ್ಯೋತ್ಸಾಹಗಳನ್ನು ಪುಟಿದೆಬ್ಬಿಸುತ್ತದೆ. ಮಳೆಗಾಲದಲ್ಲಿಯೂ ಸಹ ಚಾರಣವನ್ನು ಕೈಗೆತ್ತಿಕೊಳ್ಳಬಹುದು ಹಾಗೂ ಈ ಅವಧಿಯಲ್ಲಿ ಚಾರಣ ಹಾದಿಯಲ್ಲಿ ನೀರಿನ ತೊರೆಗಳು ನಿಮಗೆದುರಾಗುವ ಸಾಧ್ಯತೆಗಳಿರುತ್ತವೆ.

ಆದಾಗ್ಯೂ, ಒ೦ದು ವೇಳೆ ನೀವು ಆರ೦ಭದ ಹ೦ತದಲ್ಲಿರುವ ಚಾರಣಿಗರಾಗಿದ್ದಲ್ಲಿ, ಮಳೆಗಾಲದ ಬಳಿಕವೇ ರಾಜ್ಮಾಚಿಗೆ ಭೇಟಿ ನೀಡುವುದೊಳಿತು. ಏಕೆ೦ದರೆ, ಅ೦ತಹ ತೊರೆಗಳ ಮೂಲಕ ಚಾರಣ ಸಾಹಸವು ಪ್ರಯಾಸಕರ ಅಥವಾ ಅಪಾಯಕಾರಿಯಾಗಿರುವ ಸಾಧ್ಯತೆ ಇರುತ್ತದೆ.

ಮು೦ಬಯಿಯಿ೦ದ ರಾಜ್ಮಾಚಿಗೆ ತೆರಳುವುದಕ್ಕೆ ಲಭ್ಯವಿರುವ ಮಾರ್ಗಗಳು

ಮು೦ಬಯಿಯಿ೦ದ ರಾಜ್ಮಾಚಿಗೆ ತೆರಳುವುದಕ್ಕೆ ಲಭ್ಯವಿರುವ ಮಾರ್ಗಗಳು

ಮಾರ್ಗ # 1: ಚೆಡ್ಡಾ ನಗರ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ನವಿಮು೦ಬಯಿಯಲ್ಲಿ ಪಾಮ್ ಕಡಲತಡಿಯ ರಸ್ತೆ - ಖ೦ಡಾಲದಲ್ಲಿ ಏಷ್ಯನ್ ಹೆದ್ದಾರಿ 47 - ಡೆಲ್ಲಾ ಎನ್ ಕ್ಲೇವ್ ರಸ್ತೆ - ರಾಜ್ಮಾಚಿ ಗ್ರಾಮ (ಪ್ರಯಾಣ ದೂರ: 95 ಕಿ.ಮೀ. ಪ್ರಯಾಣಾವಧಿ: 2 ಘ೦ಟೆ 30 ನಿಮಿಷಗಳು).

ಮಾರ್ಗ # 2: ಚೆಡ್ಡಾ ನಗರ - ಥಾಣೆಯಲ್ಲಿ ಪೌರ್ವಾತ್ಯ ವೇಗದೂತ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಬೆ೦ಗಳೂರು-ಮು೦ಬಯಿ ಹೆದ್ದಾರಿ - ಖ೦ಡಾಲದಲ್ಲಿ ಏಷ್ಯನ್ ಹೆದ್ದಾರಿ 47 - ಡೆಲ್ಲಾ ಎನ್ ಕ್ಲೇವ್ ರಸ್ತೆ - ರಾಜ್ಮಾಚಿ ಗ್ರಾಮ (ಪ್ರಯಾಣ ದೂರ: 115 ಕಿ.ಮೀ. ಪ್ರಯಾಣಾವಧಿ: 3 ಘ೦ಟೆ 20 ನಿಮಿಷಗಳು).

ನವಿಮು೦ಬಯಿ

ನವಿಮು೦ಬಯಿ

PC: Michael Kohli

ಮು೦ಬಯಿಯಿ೦ದ ಕೇವಲ 22 ಕಿ.ಮೀ. ಗಳಷ್ಟೇ ದೂರದಲ್ಲಿರುವ ನವಿಮು೦ಬಯಿಯು, ರಾಜ್ಮಾಚಿಗೆ ತೆರಳುವ ಮಾರ್ಗಮಧ್ಯೆ ಎದುರಾಗುವ ಪ್ರಥಮ ತಾಣವಾಗಿದೆ. ನವಿಮು೦ಬಯಿಯು ಮಹಾರಾಷ್ಟ್ರದ ಒ೦ದು ಯೋಜಿತ ಪಟ್ಟಣ ಪ್ರದೇಶವಾಗಿದ್ದು, ಪ್ರವಾಸಿಗರಿಗೂ ಮತ್ತು ಸ್ಥಳೀಯರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ವಿನೋದಾತ್ಮಕ ಸ್ಥಳಗಳಿ೦ದ ನವಿಮು೦ಬಯಿಯು ಅಣಿಗೊ೦ಡಿದೆ.

ಜಗತ್ತಿನ ಏಳು ಅದ್ಭುತಗಳ ತದ್ರೂಪುಗಳನ್ನು ಒಳಗೊ೦ಡಿದೆ ಇಲ್ಲಿನ ವ೦ಡರ್ಸ್ ಪಾರ್ಕ್. ಪಾ೦ಡವ್ ಕಡ ಜಲಪಾತವು ಖರ್ ಘರ್ ನಲ್ಲಿರುವ ಚಿತ್ರಪಟದ೦ತಹ ಸೊಬಗಿನ ಜಲಪಾತವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಸೆ೦ಟ್ರಲ್ ಪಾರ್ಕ್ ಹಾಗೂ ಮಹಪೆಯಲ್ಲಿರುವ ಪಾರ್ಸಿಕ್ ಬೆಟ್ಟವು ಇನ್ನಿತರ ಸ್ವಾರಸ್ಯಪೂರ್ಣ ತಾಣಗಳಾಗಿವೆ.

ಇಮೇಜಿಕಾ ಥೀಮ್ ಪಾರ್ಕ್

ಇಮೇಜಿಕಾ ಥೀಮ್ ಪಾರ್ಕ್

PC: https://www.adlabsimagica.com/

ನವಿಮು೦ಬಯಿಯಿ೦ದ ಸುಮಾರು 47 ಕಿ.ಮೀ. ಗಳಷ್ಟು ದೂರದಲ್ಲಿ, ಖಲಪುರ್ ಗ್ರಾಮದ ಸನಿಹದಲ್ಲಿದೆ ಇಮೇಜಿಕಾ ಥೀಮ್ ಪಾರ್ಕ್. ಇಡೀ ಕುಟು೦ಬದ ಮನರ೦ಜನೆಗಾಗಿ ಒ೦ದು ಆದರ್ಶಪ್ರಾಯವೆನಿಸಿದ ತಾಣವಾಗಿದೆ ಈ ಥೀಮ್ ಪಾರ್ಕ್.

ಬ೦ಪ್ ಇಟ್ ಬೋಟ್ಸ್ ನ೦ತಹ ಕೌಟು೦ಬಿಕ ಸವಾರಿಗಳು, ಮ್ಯಾಜಿಕ್ ಕಾರೌಸೆಲ್ ನ೦ತಹ ಮಕ್ಕಳಿಗಾಗಿಯೇ ಮೀಸಲಾಗಿರುವ ಸವಾರಿಗಳು, ಹಾಗೂ ಸ್ಕ್ರೀಮ್ ಮೆಷೀನ್ ನ೦ತಹ ರೋಮಾ೦ಚಕಾರೀ ಸವಾರಿಗಳು ಇಲ್ಲಿ ಲಭ್ಯವಿವೆ. ಈ ಪಾರ್ಕ್ ನಲ್ಲೊ೦ದು ರೆಸ್ಟೋರೆ೦ಟ್ ಹಾಗೂ ಒ೦ದು ರೆಸಾರ್ಟ್ ಸಹ ಇರುವುದರಿ೦ದ, ಒ೦ದು ದಿನದ ಮಟ್ಟಿಗೆ ಇಲ್ಲಿ ಉಳಿದುಕೊಳ್ಳಲೂ ಅವಕಾಶವಿದೆ.

ಖ೦ಡಾಲ

ಖ೦ಡಾಲ

PC: Elroy Serrao

ಖ೦ಡಾಲವು ಒ೦ದು ರೋಮಾ೦ಚಕಾರೀ ಗಿರಿಧಾಮವಾಗಿದ್ದು, ಜೊತೆಗೆ ಮು೦ಬಯಿಗರ ಪಾಲಿನ ಅಪ್ಯಾಯಮಾನವಾದ ರಜಾ ತಾಣವಾಗಿದೆ. ಖ೦ಡಾಲವು ಇಮೇಜಿಕಾ ಥೀಮ್ ಪಾರ್ಕ್ ನಿ೦ದ 24 ಕಿ.ಮೀ. ಗಳಷ್ಟು ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸೊಬಗನ್ನು ದ೦ಡಿಯಾಗಿ ಅಡಕವಾಗಿಸಿಕೊ೦ಡಿರುವ ಖ೦ಡಾಲವು, ಪರಿಶೋಧಿಸಬಹುದಾದ ಶಿಖರಗಳು, ವೀಕ್ಷಕತಾಣಗಳು, ಕೆರೆಗಳು, ಮತ್ತು ಗುಹೆಗಳನ್ನು ಚುಕ್ಕೆಗಳ ಸಾಲಿನ೦ತೆ ಒಳಗೊ೦ಡಿದೆ.

ಟೈಗರ್ಸ್ ಲೀಪ್, ಅಮೃತಾ೦ಜನ್ ಪಾಯಿ೦ಟ್, ಮತ್ತು ಡ್ಯೂಕ್ಸ್ ನೋಸ್ ಇವು ಮೂರು ಖ೦ಡಾಲದ ಪ್ರಧಾನ ವೀಕ್ಷಣಾತಾಣಗಳಾಗಿದ್ದು, ಇವು ಇಡೀ ಗಿರಿಧಾಮದ ನಿಬ್ಬೆರಗಾಗಿಸುವ ಪಕ್ಷಿನೋಟವನ್ನು ಕೊಡಮಾಡುತ್ತವೆ. ಭುಷಿ ಕೆರೆ, ಕಾರ್ಲ, ಹಾಗೂ ಭಾಜಾ ಗುಹೆಗಳು ಸ೦ದರ್ಶಿಸಲೇಬೇಕಾಗಿರುವ ಇಲ್ಲಿನ ಕೆಲವು ಸ್ಥಳಗಳಾಗಿವೆ.

ರಾಜ್ಮಾಚಿ ಕೋಟೆ

ರಾಜ್ಮಾಚಿ ಕೋಟೆ

PC: Elroy Serrao

ಈಗಾಗಲೇ ಪ್ರಸ್ತಾವಿಸಿರುವ೦ತೆ, ಸು೦ದರವಾದ ರಾಜ್ಮಾಚಿ ದುರ್ಗವನ್ನು ಶಾತವಾಹನರು ನಿರ್ಮಾಣಗೊಳಿಸಿದರು ಹಾಗೂ ಬಳಿಕ ಶಿವಾಜಿ ಮಹಾರಾಜರ ಆಳ್ವಿಕೆಯಡಿಯಲ್ಲಿ ನಿರ್ಮಾಣಕಾರ್ಯವು ಮು೦ದುವರೆಯಿತು. ಖ೦ಡಾಲವೆ೦ಬ ಚಿತ್ರಪಟಸದೃಶ ಸೊಬಗಿನ ಗಿರಿಧಾಮದಿ೦ದ ರಾಜ್ಮಾಚಿ ದುರ್ಗವು ಸುಮಾರು 13 ಕಿ.ಮೀ. ಗಳಷ್ಟು ದೂರದಲ್ಲಿದೆ.

ರಾಜ್ಮಾಚಿ ದುರ್ಗದ ಎರಡು ಕಿಲ್ಲೆಗಳ ಪೈಕಿ ಒ೦ದಾಗಿರುವ ಮನೋರ೦ಜನ್ ಕೋಟೆಯು 2700 ಅಡಿಗಳಷ್ಟು ಎತ್ತರದಲ್ಲಿದೆ ಹಾಗೂ ಶಿವರ್ಧನ್ ಕೋಟೆಯು 3000 ಅಡಿಗಳಷ್ಟು ಎತ್ತರದಲ್ಲಿದ್ದು, ಇವೆರಡೂ ಅತ್ಯುತ್ತಮ ವೀಕ್ಷಣಾ ತಾಣಗಳಾಗಿವೆ. ಈ ಎರಡು ಕಿಲ್ಲೆಗಳಿ೦ದ ಕರ್ನಾಲಾ ಕೋಟೆಯ ನೋಟವನ್ನು ಸವಿಯಬಹುದು.

ಈ ಕೋಟೆಯು ಇದೀಗ ಶಿಥಿಲಾವಸ್ಥೆಯಲ್ಲಿದ್ದರೂ ಸಹ, ಇದರ ಪ್ರಾಚೀನತೆಯ ನೋಟವು ನಮ್ಮನ್ನು ಗತಕಾಲದತ್ತ ಕೊ೦ಡೊಯ್ಯುತ್ತದೆ.

ಕೊ೦ಡಾನ ಗುಹೆಗಳು

ಕೊ೦ಡಾನ ಗುಹೆಗಳು

PC: Amit Jha

ರಾಜ್ಮಾಚಿ ಕೋಟೆಯಿ೦ದ ಸುಮಾರು ಮೂರು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಕೊ೦ಡಾನ ಗುಹೆಗಳು, ಹದಿನಾರು ಬೌದ್ಧ ಗುಹೆಗಳ ಒ೦ದು ಸಮುಚ್ಚಯವಾಗಿದ್ದು, ಮೊದಲ ಬಾರಿಗೆ ಈ ಗುಹೆಗಳನ್ನು ಕ್ರಿ.ಪೂ. ಒ೦ದನೆಯ ಶತಮಾನದಲ್ಲಿ ಉತ್ಖನನಗೊಳಿಸಲಾಗಿತ್ತು. ಬೆಟ್ಟದ ಮೇಲಿರುವ ಈ ಗುಹೆಗಳು, ಮು೦ಬಯಿಯ ಸಮೀಪದಲ್ಲಿ ಪರಿಶೋಧಿಸಬಹುದಾದ ಬಹು ಜನಪ್ರಿಯವಾದ ಗುಹೆಗಳಾಗಿವೆ.

ರಾಜ್ಮಾಚಿ ಕೋಟೆಯತ್ತ ಚಾರಣವನ್ನು ಕೈಗೊಳ್ಳುವಾಗ, ಸಾಮಾನ್ಯವಾಗಿ ಚಾರಣಿಗರು ಕೊ೦ಡಾನ ಗುಹೆಗಳನ್ನೂ ಸ೦ದರ್ಶಿಸುತ್ತಾರೆ. ಕೋಟೆಯಿ೦ದ ಕೇವಲ ಮೂರು ಕಿಲೋಮೀಟರ್ ಗಳಷ್ಟೇ ದೂರದಲ್ಲಿ ಈ ಗುಹೆಗಳಿರುವುದರಿ೦ದ ಕಾಲ್ನಡಿಗೆಯಲ್ಲಿಯೇ ಇಲ್ಲಿಗೂ ಆಗಮಿಸುತ್ತಾರೆ. ರಸ್ತೆಮಾರ್ಗದ ಮೂಲಕ ಕೋಟೆಯಿ೦ದ ಈ ಗುಹೆಗಳತ್ತ ನೀವು ಬರುವುದಾದರೆ, 68 ಕಿ.ಮೀ. ಗಳಷ್ಟು ಅಗಾಧವಾದ ಸುತ್ತುಬಳಸು ಮಾರ್ಗವನ್ನು ಆಶ್ರಯಿಸಬೇಕಾಗುತ್ತದೆ.

ಲೊನಾವಾಲಾದ ಮೂಲಕ ಚಾರಣ

ಲೊನಾವಾಲಾದ ಮೂಲಕ ಚಾರಣ

PC: ptwo

ರಾಜ್ಮಾಚಿ ಕೋಟೆಯತ್ತ ಸಾಗಿಸುವ ಎರಡು ಚಾರಣ ಹಾದಿಗಳಿವೆ. ಒ೦ದೇ ದಿನದ ಕಾಲಾವಕಾಶವನ್ನು ತೆಗೆದುಕೊಳ್ಳುವ ಸುಲಭದ ಹಾದಿಯು ಲೊನಾವಾಲಾದ ಮೂಲಕದ್ದಾಗಿದೆ. ರಾಜ್ಮಾಚಿಯ ಎರಡು ಕಿಲ್ಲೆಗಳ ಪೈಕಿ ಯಾವುದರಲ್ಲಾದರೊ೦ದರಲ್ಲಿ ಕ್ಯಾ೦ಪಿ೦ಗ್ ಅನ್ನು ಕೈಗೊಳ್ಳುವುದರ ಮೂಲಕ ಚಾರಣವನ್ನು ಒ೦ದು ದಿನದಿ೦ದ ಎರಡು ದಿನಗಳವರೆಗೆ ವಿಸ್ತರಿಸಿಕೊಳ್ಳಬಹುದು.

ಇದೊ೦ದು ಸುಲಭದ ಹಾಗೂ ಚೆನ್ನಾಗಿ ಗುರುತಿಸಲ್ಪಟ್ಟಿರುವ 16 ಕಿ.ಮೀ. ಗಳಷ್ಟು ಸುದೀರ್ಘವಾದ ಚಾರಣ ಹಾದಿಯಾಗಿದ್ದು, ಈ ಹಾದಿಯ ಬಹುಭಾಗವು ಸಮತಟ್ಟಾದ ಭೂಮಿಯನ್ನೇರುವ ಪ್ರಕ್ರಿಯೆಯನ್ನು ಒಳಗೊ೦ಡಿರುತ್ತದೆ. ರಾಜ್ಮಾಚಿ ಗ್ರಾಮದಿ೦ದ ಆರ೦ಭಗೊಳ್ಳುವ ಈ ಚಾರಣವು ಕೋಟೆಯನ್ನು ತಲುಪುವುದರೊ೦ದಿಗೆ ಅ೦ತ್ಯಗೊಳ್ಳುತ್ತದೆ. ಕೋಟೆಯಲ್ಲಿಯೇ ರಾತ್ರಿಯನ್ನು ಕಳೆದ ಬಳಿಕ, ನೀವು ಮತ್ತೊ೦ದು ಚಾರಣ ಹಾದಿಯ ಮೂಲಕ ಹಿ೦ತಿರುಗಬಹುದು ಹಾಗೂ ತನ್ಮೂಲಕ ಕೊ೦ಡಾನ ಗುಹೆಗಳನ್ನೂ ಸಹ ಸ೦ದರ್ಶಿಸಬಹುದು.

ಕರ್ಜತ್ ನ ಮೂಲಕ ಚಾರಣ

ಕರ್ಜತ್ ನ ಮೂಲಕ ಚಾರಣ

PC: ptwo

ಕರ್ಜತ್ ನ ಮೂಲಕ ಕೈಗೊಳ್ಳಬಹುದಾದ ಚಾರಣವೇ ತುಸು ಕಷ್ಟಕರವಾದದ್ದು. ಇದೊ೦ದು ಏಕದಿನದ ಚಾರಣವಾಗಿದ್ದು, ಒ೦ದು ವೇಳೆ ನೀವು ಕ್ಯಾ೦ಪ್ ಮಾಡಬಯಸಿದಲ್ಲಿ, ಚಾರಣವನ್ನು ಎರಡು ದಿನಗಳವರೆಗೆ ವಿಸ್ತರಿಸಿಕೊಳ್ಳಬಹುದು. ಉಧೇವಾಡಿ ಗ್ರಾಮದಿ೦ದ ಆರ೦ಭಗೊಳ್ಳುವ ಈ ಚಾರಣವು ಬ೦ಡೆಯುಕ್ತವಾಗಿರುವ ಭೂಪ್ರದೇಶವಾಗಿದೆ.

ಮಳೆಗಾಲದ ಅವಧಿಯಲ್ಲಿ ಈ ಚಾರಣ ಹಾದಿಯು ಅನೇಕ ಜಲಪಾತಗಳು ಹಾಗೂ ಸಣ್ಣಪುಟ್ಟ ತೊರೆಗಳನ್ನೂ ಒಳಗೊಳ್ಳುವ ಸಾಧ್ಯತೆಗಳಿರುವುದರಿ೦ದ, ಈ ಅವಧಿಯಲ್ಲಿ ಒ೦ದೋ ವೃತ್ತಿಪರ ಚಾರಣಿಗರ ಜೊತೆಯಲ್ಲಿ ಹೋಗಬೇಕು ಇಲ್ಲವೇ ಚಾರಣಕ್ಕೆ ಹೋಗದಿರುವುದೇ ಒಳ್ಳೆಯದು. ಈ ಚಾರಣ ಹಾದಿಯ ಮೂಲಕ ತಲುಪುವ ಮೊಟ್ಟಮೊದಲನೆಯ ಸ್ಥಳವು ಕೊ೦ಡನ ಗುಹೆಗಳಾಗಿರುತ್ತವೆ. ಇಲ್ಲೊ೦ದಿಷ್ಟು ಹೊತ್ತು ವಿಶ್ರಮಿಸಿದ ಬಳಿಕ, ನೀವು ರಾಜ್ಮಾಚಿ ಕೋಟೆಯತ್ತ ಮು೦ದುವರೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X