Search
  • Follow NativePlanet
Share
» »2018ರಲ್ಲಿ -ಭಾರತದ -ಕೆಲವು ಪ್ರದೇಶಗಳ -ಭೇಟಿ

2018ರಲ್ಲಿ -ಭಾರತದ -ಕೆಲವು ಪ್ರದೇಶಗಳ -ಭೇಟಿ

By Manjula Balaraj Tantry

ಪ್ರತಿ ಹೊಸ ವರ್ಷದ ಮುಂಚಿನ ದಿನವೂ ಈ ದಿನಗಳಲ್ಲಿ ಅದೇ ರೀತಿಯಾಗಿದೆಯೆ? ಅದೇ ಜನರೊಂದಿಗೆ ವಿವಿಧ ಕೂಟಗಳಿಗೆ ಹಾಜರಾಗುವ ಮೂಲಕವೇ ನೀವು ಹೊಸ ವರ್ಷವನ್ನು ಆಚರಿಸಬೇಕೆಂದು ಯಾರು ಹೇಳುತ್ತಾರೆ? ವರ್ಷವೂ ಒಂದೇ ರೀತಿಯ ಅನುಭವದಿಂದ ತಪ್ಪಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಆದರೂ ಹೊಸ ವರ್ಷದ ಹಿಂದಿನ ದಿನಗಳಲ್ಲಿ ಎಲ್ಲವನ್ನೂ ತಪ್ಪಿಸಿಕೊಂಡು ಯಾವುದಾದರೂ ಗೊತ್ತಿಲ್ಲದ ಸ್ಥಳಗಳಿಗೆ ಹೋಗುವುದು ಒಂದು ಸಾಹಸವೇ ಸರಿ.

ಭಾರತವು ಅಕ್ಷರಶಃ ಒಂದು ವಿಶಾಲವಾದ ದೇಶವಾಗಿದೆ. ಇಲ್ಲಿಯ ಸಂಸ್ಕೃತಿ, ಭೌಗೋಳಿಕ ಗಡಿಗಳು, ಪಾಕಪದ್ದತಿಗಳು ಇವೆಲ್ಲವೂ ಭಾರತವನ್ನು ಶ್ರೀಮಂತಗೊಳಿಸುವಲ್ಲಿ ಸಹಕಾರಿಯಾಗಿದೆ. ಭಾರತದ ವಿವಿಧ ನಗರಗಳ ಮೋಡಿ ಮಾಡುವ ಈ ಪ್ರತಿಯೊಂದೂ ಅಂಶಗಳೂ ಕೂಡಾ ಪರಿಚಯವಿಲ್ಲದ ಈ ಜಾಗಗಳಿಗೆ ಭೇಟಿಕೊಡುವ ಸೆಳೆತವನ್ನು ಹೆಚ್ಚಿಸುತ್ತದೆ. ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ವಿಶ್ರಾಂತಿಗಾಗಿ ಇಲ್ಲಿಯ ಕೆಲವು ಸುಂದರವಾದ ಪ್ರದೇಶಗಳಿಗೆ ಭೇಟಿಕೊಡಿ.

ಜೈಪುರ

ಜೈಪುರ

PC: Unknown

ಜೈಪುರವನ್ನು ಪಕ್ಕಾ ಗುಲಾಬಿ ನಗರವೆಂದು ಕರೆಯಲ್ಪಡುತ್ತದೆ. ಇಲ್ಲಿಯ ಪರಂಪರೆಯ ಅನುಭವವನ್ನು ಪಡೆಯಬೇಕಿಂದಿದ್ದಲ್ಲಿ ಹೊಸ ವರ್ಷದ ಆಚರಣೆಯ ಸಂಧರ್ಭದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ನಗರಗಳಲ್ಲಿ ಕಂಡುಬರುವ ಅನೇಕ ಪಾರಂಪರಿಕವಾದ ಸ್ಥಳಗಳಲ್ಲಿ ನಿಮ್ಮ ವಾಸ್ತವ್ಯಕ್ಕೆ ಅಣಿ ಮಾಡಿಕೊಳ್ಳಿ

ಈ ಹೆರಿಟೇಜ್ ಗಳಲ್ಲಿ ರಚಿಸಲ್ಪಟ್ಟ ಹಸಿರು ಹುಲ್ಲುಹಾಸುಗಳ ಸುತ್ತಲೂ ಹಾಗೂ ರಾತ್ರಿಯ ಆಕಾಶದ ಸುತ್ತಲೂ ನಡೆಯುವ ಸುಡುಮದ್ದುಗಳ ಅನುಭವವನ್ನು ಪಡೆಯದೇ ಇರುವಿರಾ? ಹೊಸ ವರ್ಷವನ್ನು ಆಚರಿಸಲು ಇದೊಂದು ಪರಿಪೂರ್ಣವಾದ ಮಾರ್ಗವಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

PC: Senorhorst Jahnsen

ಹೊಸವರ್ಷವನ್ನು ಸ್ವಾಗತಿಸಲು ಈ ದ್ವೀಪಗಳು ತಮ್ಮದೇ ಆದ ಹಬ್ಬವನ್ನು ಆಚರಿಸುತ್ತವೆ ಈ ಹಬ್ಬವನ್ನು ಧಮಾಕ ಎಂದು ಕರೆಯಲಾಗುತ್ತದೆ. ಹಿಂಭಾಗದಲ್ಲಿಯ ನೀರಿನ ದೃಶ್ಯದಿಂದ ಇದು ತನ್ನ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇಲ್ಲಿ ವಯಸ್ಸಿನ ತಾರತಮ್ಯವಿರುವುದಿಲ್ಲ ನೀವು 18 ವಯಸ್ಸಿನವರಾಗಿರಿ ಅಥವಾ 80ರ ವಯಸ್ಸಿನವರಾಗಿರಿ ಅಂಡಮಾನಿನ ಹೊಸವರ್ಷದ ಸಂಭ್ರಮಾಚರಣೆಯು ತನ್ನ ಪ್ರವಾಸಿಗರನ್ನು ನಿರಾಶೆಗೊಳಿಸುವುದಿಲ್ಲ. ನೀವು ಇಲ್ಲಿರುವಾಗ ಇಲ್ಲಿಯ ಆನೆಗಳು ಈಜುವುದನ್ನು ಮತ್ತು ಮ್ಯಾಂಗ್ರೋವ್ ನ ಪೊದೆಗಳಲ್ಲಿ ಅಡಗಿರುವ ಮೊಸಳೆಗಳನ್ನು ನೋಡಲು ಮರೆಯದಿರಿ. ಮತ್ತು

ಲೇಹ್

ಲೇಹ್

PC: Mufaddal Abdul Hussain

ಲಡಾಖಿ ಯರ ಹೊಸವರ್ಷವಾದ ಲೋಸರ್ ಅನ್ನು ಡಿಸೆಂಬರ್ ತಿಂಗಳ ಮಧ್ಯ ದಲ್ಲಿ ಆಚರಿಸುತ್ತಾರೆ ಆದುದುರಿಂದ ಇಲ್ಲಿಗೆ ಈ ಸಮಯದಲ್ಲಿ ಭೇಟಿಕೊಡುವುದು ಸೂಕ್ತ. ಇಲ್ಲಿ ಅನೇಕ ಬೌದ್ಧರು ವಿವಿಧ ಬೌದ್ಧ ದೇವತೆಗಳಿಗೆ ತಮ್ಮ ಪ್ರಾರ್ಥನೆಗಳನ್ನು ನೀಡುವ ಉತ್ಸಾಹವನ್ನು ವೀಕ್ಷಿಸಬಹುದು.

ಇದಲ್ಲದೆ ಸುತ್ತ ಮುತ್ತಲಿನ ಮುದನೀಡುವಂತಹ ಬಣ್ಣ ಗಳನ್ನು ನೋಡಬಹುದು ಮತ್ತು ಭವ್ಯ ಪರ್ವತಗಳ ದೃಶ್ಯಗಳು ಮತ್ತು ಲೇಹ್ ನ ಸುಂದರ ಸರೋವರಗಳ ನಡುವೆ ನಿಮ್ಮ ಹೊಸ ವರ್ಷವನ್ನು ಸ್ವಾಗತಿಸಿ.

ಶಿಲ್ಲಾಂಗ್

ಶಿಲ್ಲಾಂಗ್

PC: Robbie Shade

ಇದನ್ನು ಪ್ರೀತಿಯಿಂದ ಭಾರತದ ಕಲ್ಲಿನ ರಾಜಧಾನಿಯೆಂದು ಕರೆಯಲಾಗುತ್ತದೆ. ಇಲ್ಲಿರುವಾಗ ನೀವು ಆಯ್ಕೆ ಮಾಡಬಹುದಾದ ಅನೇಕ ಘಟನೆಗಳಿವೆ. ಅವುಗಳಲ್ಲಿ ನಗರದ ಹೊರವಲಯಕ್ಕೆ ಪ್ರಯಾಣಿಸುವುದು ಮತ್ತು ಅಲ್ಲಿಯ ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಟೆಂಟ್ ಹಾಕಿ ತಂಗುವುದು ಅತ್ಯುತ್ತಮ ಮೋಜಿನ ಚಟುವಟಿಕೆಗಳಲ್ಲೊಂದಾಗಿದೆ.

ನೀವು ಇಲ್ಲಿಯ ಪವಿತ್ರ ಅರಣ್ಯದ ಸುತ್ತಲೂ ಭೇಟಿ ನೀಡಬಹುದು ಮತ್ತು ಉತ್ಸವಗಳನ್ನು ನಿಮಗೆ ಬೇಕಾಗುವ ಹಾಗೆ ಸ್ವಂತ ರೀತಿಯಲ್ಲಿ ಆಚರಿಸಬಹುದು.

ಕಸೋಲ್

ಕಸೋಲ್

PC: Viraj87

ಕಸೋಲ್ ಹಿಮಾಚಲ ಪ್ರದೇಶದ ಮತ್ತೊಂದು ಅದ್ಭುತವಾದ ಪ್ರದೇಶವಾಗಿದೆ. ನದಿಗಳು ಮತ್ತು ಪರ್ವತಗಳು ಇಲ್ಲಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.ಇಲ್ಲಿಯ ವಾತಾವರಣದಲ್ಲಿ ಸಂತೋಷಕೂಟವನ್ನು ನಡೆಸಲು ಸೂಕ್ತವಾದ ಸ್ಥಳವಾಗಿದೆ.

ಅಲ್ಲಿ ಚಳಿಗಾಲದ ಚಳಿಯನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ, ಇವೆಲ್ಲವು ಸುಂದರವಾದ ನೈಸರ್ಗಿಕ ಪರಿಸರದಿಂದಾಗಿ. ವಿಶ್ರಾಂತಿ ಪಡೆಯಲು ಮತ್ತು ಪಾರ್ಟಿಗಳನ್ನು ಮಾಡಲು ಇಂತಹ ಸುಂದರವಾದ ಸ್ಥಳಗಳ ಅನ್ವೇಷಣೆ ಮಾಡಬಹುದಾಗಿದೆ.

ಮನಾಲಿ

ಮನಾಲಿ

PC: Unknown

ಮನಾಲಿ ಹೊಸವರ್ಷವನ್ನು ಆಚರಿಸಲು ಒಂದು ಸೂಕ್ತವಾದ ಸ್ಥಳವಾಗಿದೆ. ನೀವು ಕ್ಯಾಂಪ್ ಪೈರ್ ನ ಅಭಿಮಾನಿಗಳಾಗಿದ್ದಲ್ಲಿ, ಇದು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಈ ಸ್ಥಳದ ಹಿಮ ಮತ್ತು ಧನಾತ್ಮಕ ವಿಗ್ ಗಳು ಹೊಸ ವರ್ಷದೊಳಗೆ ನಿಮ್ಮ ಮುಖದ ಮೇಲೆ ವಿಶಾಲವಾದ ನಗು ಮೂಡಿಸುತ್ತದೆ.

ಹಳೆಯ ಮನಾಲಿ ಬೀದಿಗಳಲ್ಲಿ ನಡೆದಾಡುವಾಗ ಬಿಸಿ ಚಾಕೊಲೇಟ್ ಒಂದು ಕಪ್ ಅನ್ನು ಹಿಡಿದುಕೊಳ್ಳಿ ಇದು ಈ ಸ್ಥಳದ ಉಷ್ಣತೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ.

ಪಾಂಡಿಚೇರಿ

ಪಾಂಡಿಚೇರಿ

PC: Rohith D'Souza

ಕಡಲತೀರಗಳ ಪ್ಯಾಂಥೆಯೋನ್ ಜೊತೆಗೆ, ಪಾಂಡಿಚೇರಿ ಅಥವಾ ಪಾಂಡಿ ಎಂಬುದು ಒಂದು ಸ್ನೇಹಿತರು, ಕುಟುಂಬ ಅಥವಾ ಇಬ್ಬರೂ ಒಟ್ಟಾಗಿ ಆನಂದಿಸಬಹುದಾದ ಸ್ಥಳವಾಗಿದೆ.

ಇಲ್ಲಿಯ ಬಾಯಿನೀರೂರಿಸುವ ಆಹಾರಗಳಲ್ಲದೆ, ಈ ಪ್ರದೇಶವು ಫ್ರೆಂಚ್ ಮತ್ತು ತಮಿಳು ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಮತ್ತು ಹೊಸ ವರ್ಷದ ಹಿಂದಿನ ದಿನಕ್ಕೆ ಒಂದು ಮೆರುಗನ್ನು ತರುತ್ತದೆ. ಮತ್ತು ಇಲ್ಲಿ ವರ್ಷಾಚರಣೆಯನ್ನು ದೊಡ್ಡ ರೀತಿಯಲ್ಲಿ ಆಚರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X