Search
  • Follow NativePlanet
Share
» »ಭಾರತೀಯ ಜೋಡಿಗಳು ದಕ್ಷಿಣ ಭಾರತದ ಪ್ರವಾಸವನ್ನೇ ಹೆಚ್ಚು ಇಷ್ಟ ಪಡೋದು ಯಾಕೆ?

ಭಾರತೀಯ ಜೋಡಿಗಳು ದಕ್ಷಿಣ ಭಾರತದ ಪ್ರವಾಸವನ್ನೇ ಹೆಚ್ಚು ಇಷ್ಟ ಪಡೋದು ಯಾಕೆ?

By Manjula Balaraj Tantry

ಉತ್ತರ ಭಾರತವು ಹಿಮಾಲಯ, ಶಿಮ್ಲಾ, ಮನಾಲಿಯಂತಹ ಮತ್ತು ದೇಶದ ಅತ್ಯಂತ ಉತ್ತಮವಾದ ಪ್ರಣಯ ಯೋಗ್ಯ ಸ್ಥಳಗಳನ್ನು ಹೊಂದಿದೆ. ಅದಕ್ಕೆ ಸರಿಯಾಗಿ ದಕ್ಷಿಣ ಭಾಗ ಕೂಡಾ ಯಾವುದೇ ವಿಷಯದಲ್ಲಿಯೂ ಕಡಿಮೆ ಇಲ್ಲ.ವಾಸ್ತವವಾಗಿ ದಕ್ಷಿಣ ಭಾಗವು ದೇಶದ ಎಲ್ಲಾ ಸಾರಗಳ ಸಂಗ್ರಹವನ್ನು ಬೀಚ್ ಗಳು, ಬೆಟ್ಟಗಳು, ನದೀ ತೀರಗಳು ಇತ್ಯಾದಿಗಳ ರೂಪದಲ್ಲಿ ನೀಡುತ್ತದೆ.

ದಕ್ಷಿಣ ಭಾರತವು ಏನೆಲ್ಲಾ ಒದಗಿಸುತ್ತದೆ ಎಂಬುದನ್ನು ಕೆಲವೇ ಕೆಲವು ವಿಷಯಗಳ ಮೂಲಕ ನ್ಯಾಯವಾಗಿ ಈ ಪಟ್ಟಿಯಲ್ಲಿ ವಿವರಿಸಲು ಸ್ವಲ್ಪ ಕಷ್ಟಕರ ಆದರೂ ಕೂಡಾ ನಾವು ನಮಗೆ ಸಾಧ್ಯವಾಗುವಷ್ಟು ಕೆಲವು ಉತ್ತಮವಾದ ಸ್ಥಳಗಳ ಉದಾಹರಣೆಗಳನ್ನು ನೀಡುವ ಪ್ರಯತ್ನ ಮಾಡಿದ್ದೇವೆ ಇಲ್ಲಿಯ ಹಿನ್ನೆಲೆ ಮತ್ತು ಸಂಪ್ರದಾಯಗಳ ಬಗ್ಗೆ ನೀವು ಏನು ಹೇಳ ಬಯಸುವಿರಿ ಎಂಬುದನ್ನು ಇಲ್ಲಿಗೆ ಭೇಟಿ ಕೊಟ್ಟು ನಿಮ್ಮ ರಜಾದಿನಗಳನ್ನು ಇಲ್ಲಿ ಸ್ವಲ್ಪ ದಿನ ಕಳೆದ ನಂತರ ನೀವೇ ನಿರ್ಧಾರ ಮಾಡಿ. ದಕ್ಷಿಣ ಭಾರತದ ಭೂದೃಶ್ಯಗಳು ವಾಸ್ತವವಾಗಿ ಜೋಡಿಗಳಿಗೇ ಎಂಬಂತೆ ವಿನ್ಯಾಸವಾಗಿದೆ ಎನ್ನಬಹುದು. ನಾವು ಅದರ ಶಾಂತಿಯುಕ್ತ ಮತ್ತು ಪ್ರಶಾಂತತೆ ಮತ್ತು ಶಾಂತಿಯುತ ವಾಸಸ್ಥಳಿಗಾಗಿ ನಾವು ಎಷ್ಟು ಧನ್ಯವಾದ ಅರ್ಪಿಸಿದರೂ ಸಾಲದು ಇಲ್ಲಿ ಒಂದು ಜೋಡಿಯು ಬಯಸುವ ಎಲ್ಲಾ ವಿಷಯವೂ ಇದೆ.

ಗಿರಿಧಾಮಗಳು

ಗಿರಿಧಾಮಗಳು

ಉತ್ತರಭಾರತದಲ್ಲಿ ಬೆಟ್ಟಗಳು ಮತ್ತು ಪರ್ವತಗಳಿಗೆ ಯಾವುದೇ ಕೊರತೆ ಇಲ್ಲದಿದ್ದರೂ ಕೂಡಾ ದಕ್ಷಿಣ ಭಾರತದ ಗಿರಿಧಾಮಗಳು ತಮ್ಮದೇ ಆದ ಒಂದು ವಿಭಿನ್ನ ಸಾರವಿರುವ ಅಂಶಗಳನ್ನು ಒಳಗೊಂಡಿವೆ. ಇಲ್ಲಿ ಭತ್ತದೆ ಗದ್ದೆಗಳು ಮತ್ತು ಉದ್ದನೆಯ ವಿಸ್ತಾರವಾದ ಪ್ರದೇಶಗಳಲ್ಲಿ ಹರಡಿಕೊಂಡಿರುವ ಟೀ ತೋಟಗಳು ಉತ್ತರಭಾರತದಲ್ಲಿ ಕಾಣ ಸಿಗುವುದಿಲ್ಲ. ಊಟಿ, ಕೂನೂರು, ಮತ್ತು ಮುನ್ನಾರ್ ನಂತಹ ಸ್ಥಳಗಳು ಮಧು ಚಂದ್ರಕ್ಕೆ ಸೂಕ್ತವಾಗುವಂತಹ ಅತ್ಯುತ್ತಮವಾದ ಪ್ರಣಯ ತಾಣಗಳಾಗಿವೆ.

ಇದೇ ಕಾರಣಕ್ಕೆ ಭಾರತವು ಇತರ ದೇಶಗಳಿಗಿಂತ ಭಿನ್ನವಾಗಿರುವುದು

ಮುನ್ನಾರ್ ನ ಚಹಾ ತೋಟ

ಮುನ್ನಾರ್ ನ ಚಹಾ ತೋಟ

ನಿಮ್ಮ ಸಂಗಾತಿಯೊಂದಿಗೆ ನೀಲಗಿರಿ ಬೆಟ್ಟದ ಸೌಂದರ್ಯವು ನಿಮ್ಮನ್ನು ಅಚ್ಚರಿಗೊಳಿಸದೇ ಇರಲು ಸಾಧ್ಯವೇ ಇಲ್ಲ. ಮುನ್ನಾರ್ ನ ಚಹಾ ತೋಟಗಳಲ್ಲಿಯ ಪ್ರಣಯ ಮತ್ತು ಕೊಡೈಕೆನಾಲ್ ನ ಕಣಿವೆಯು ನಿಮ್ಮ ಪ್ರೀತಿಯನ್ನು ಮರು ವ್ಯಾಖ್ಯಾನಿಸಲು ಸೂಕ್ತವಾದ ಸ್ಥಳವಾಗಿದೆ.

ಈ ಬೆಟ್ಟಗಳು ಜೋಡಿಗಳಿಗಾಗಿಯೇ ಹುಟ್ಟಿದೆಯೋ ಎಂಬಂತಿದೆ. ಇದರ ಭೂಪ್ರದೇಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಇಲ್ಲಿ ಕಣಿವೆಗಳು ಮತ್ತು ಸೊಂಪಾದ ಪರಿಸರವೇ ಕಾಣ ಸಿಗುತ್ತದೆ. ನಿಮ್ಮ ಸಂಗಾತಿಯೊಡಗೂಡಿ ಈ ಸುಂದರ ಭೂದೃಶ್ಯಗಳನ್ನು ವೀಕ್ಷಿಸುವುದರ ಜೊತೆಗೆ ಈ ಭೂಪ್ರದೇಶಗಳನ್ನು ಮಳೆಯು ತೊಳೆಯುವ ಸುಂದರ ದೃಶ್ಯಗಳಿಗಿಂತ ಹೆಚ್ಚಿನ ಸೌಂದರ್ಯತೆಯನ್ನು ಅನುಭವಿಸುವುದಕ್ಕಿಂತ ಹೆಚ್ಚಿನದು ಬೇರೆ ಇದೆಯೇ ?

ಪರಿಪೂರ್ಣವಾದ ದಕ್ಷಿಣ ಭಾರತೀಯ ಬೆಟ್ಟಗಳು ಪರಿಪೂರ್ಣವಾದ ವಸತಿ ಸೌಕರ್ಯಗಳನ್ನು ನೀಡುತ್ತವೆ. ಈ ಬೆಟ್ಟಗಳ ಮೂಲಕ ಪ್ರಯಾಣಿಸಲು ನೀವು ನಿರ್ಧರಿಸಿದರೆ ನೀವು ಯಾವಾಗಲೂ ಕಾಲೋಚಿತ ರಿಯಾಯಿತಿಗಳನ್ನು ಪಡೆಯಬಹುದು. ಈ ಬೆಟ್ಟಗಳಿಗೆ ಭೇಟಿ ನೀಡುವುದು ಸೂಕ್ತವೆನ್ನುವುದಕ್ಕೆ ಇನ್ನೊಂದು ಕಾರಣವೆಂದರೆ ಈ ಬೆಟ್ಟಗಳು ಶಾಂತಿ ಮತ್ತು ಪ್ರಶಾಂತತೆಯ ವಾತಾವರಣವನ್ನು ಅಲ್ಲಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಒದಗಿಸಿಕೊಡುತ್ತದೆ. ನಗರಗಳಲ್ಲಿ ವಾಸಿಸುವ ಹಾಗೂ ನಗರದ ದಿನನಿತ್ಯದ ಸದ್ದು ಗದ್ದಲದಿಂದ ಕೂಡಿದ ವಾತಾವರಣದಿಂದ ಬೇಸತ್ತ ಜೋಡಿಗಳಿಗೆ ಇದಕ್ಕಿಂತ ಹೆಚ್ಚಿನದೇನನ್ನೂ ಬಯಸರು. ವಾರಾಂತ್ಯದಲ್ಲಿ ಅಥವಾ ಒಂದು ವಾರ ರಜೆ ಹಾಕಿ ಈ ಬೆಟ್ಟಗಳ ವಾಸಸ್ಥಾನಕ್ಕೆ ಭೇಟಿ ಕೊಡುವುದು ಒಂದು ಸೂಕ್ತವಾದ ಯೋಜನೆಯಾಗಿದ್ದು ಇದರಿಂದಾಗಿ ನಿಮ್ಮ ಹೊಸತನವನ್ನು ಹೊಂದುವ ಶಪಥವನ್ನು ಪೂರೈಸಿಕೊಳ್ಳಿ.

ಕರಾವಳಿ ಪ್ರದೇಶಗಳು

ಕರಾವಳಿ ಪ್ರದೇಶಗಳು

ಉತ್ತರ ಭಾರತವು ಬೆಟ್ಟಗಳು ಮತ್ತು ಪರ್ವತಗಳು ಮತ್ತು ಹಿಮಾಲಯಗಲಿಗೆ ನೆಲೆಯಾಗಬಹುದು ಮತ್ತು ಅವು ಎಂದಿಗೂ ಕಡಲ ತೀರಗಳನ್ನು ಬಗ್ಗೆ ತಿಳಿಯಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ಕಡಲತೀರಗಳು ಕಾಣ ಸಿಗುವುದಿಲ್ಲ. ಕಡಲ ತಿರದಲ್ಲಿ ಕುಳಿತು ಪ್ರಣಯಭರಿತ ಸಮಯವನ್ನು ಕಳೆಯುವುದಕ್ಕಿಂತ ಹೆಚ್ಚಿನದು ಬೇರೆ ಇರಲು ಸಾಧ್ಯವಿಲ್ಲ.ಅದಕ್ಕಾಗಿಯೇ ಅದು ಜನಪ್ರಿಯ ಸಂಸ್ಕೃತಿ ಮತ್ತು ಸಿನೆಮಾಗಳಲ್ಲಿ ಅತಿಯಾಗಿ ಬಳಸಲ್ಪಟ್ಟಿದೆ. ಇಂದು ಕೆಲವು ಮದುವೆ ಸಮಾರಂಭಗಳೂ ಕೂಡಾ ಕಡಲು ತೀರ ಪ್ರದೇಶಗಳಲ್ಲಿ ಏರ್ಪಡಿಸಲಾಗುವುದು ಏಕೆಂದರೆ ಇದು ಒಂದು ತರಹದ ಪ್ರಣಯ ಭರಿತ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನುವ ಕಾರಣಕ್ಕಾಗಿ .

ಮುತ್ತಿನ ನಗರದಲ್ಲಿನ ಪ್ರಮುಖ ಪ್ರವಾಸಿ ತಾಣಗಳಿವು

ವಿಶಾಲವಾದ ಕಡಲ ತೀರ

ವಿಶಾಲವಾದ ಕಡಲ ತೀರ

ದಕ್ಷಿಣ ಭಾರತವು ವಿಶಾಲವಾದ ಕಡಲತೀರ ದೇಶಗಳನ್ನು ಹೊಂದಿದ್ದು ಇವು ಶುದ್ದ ಮತ್ತು ದೋಷರಹಿತವಾದುದಾಗಿದೆ. ನಿಮಗೆ ಇಲ್ಲಿ ಸಣ್ಣ ಮೀನುಗಾರಿಕಾ ಹಳ್ಳಿಯ ಜೊತೆಗೆ ಯಾವಾಗ ದ್ವೀಪಗಳು ಅನ್ವೇಷಣೆಗೆ ಸಿಗುತ್ತವೆ ಎಂಬುದು ಗೊತ್ತಾಗುವುದಿಲ್ಲ.ವರ್ಕಳಾ ದಲ್ಲಿರುವ ಬೀಚುಗಳು, ಗೋಕರ್ಣ ಮತ್ತು ಕೇರಳದಲ್ಲಿರುವ ಬೀಚುಗಳು ವಿರಳ ಜನಸಂಖ್ಯೆಯಿಂದ ಕೂಡಿರುತ್ತವೆ ಮತ್ತು ಇನ್ನೂ ಸಾಕಷ್ಟು ವಾಣಿಜ್ಯೀಕರಣಗೊಂಡಿಲ್ಲ. ಏಕಾಂತವಾದ ಮತ್ತು ಕಾಟೇಜುಗಳನ್ನು ತನ್ನಲ್ಲಿ ಹೊಂದಿರುವ ಬೀಚುಗಳಿಗಿಂತ ಹೆಚ್ಚಿನದು ಜೋಡಿಗಳಿಗೆ ಇನ್ನೇನು ಬೇಕು? ಅನೇಕ ಇಂತಹ ಕಡಲತೀರಗಳನ್ನು ಹೊಂದಿರುವ ದಕ್ಷಿಣ ಭಾರತವು ಜೋಡಿಗಳಿಗೆ ಒಂದು ಪರಿಪೂರ್ಣವಾದ ಸ್ಥಳವಾಗಿದೆ. ಇಲ್ಲಿಯ ಫ್ರೆಂಚ್ ಭಾಗದ ಕಡಲತೀರದಲ್ಲಿ ಭೇಟಿ ನೀಡಿ ನೃತ್ಯದ ಮೂಲಕ ನಿಮ್ಮ ಸಂಗಾತಿಯನ್ನು ಅಚ್ಚರಿಗೊಳಿಸಿ. ಸ್ವತ: ಪಾಂಡಿಚೇರಿ ಅಥವಾ ವರ್ಕಳಾ ಬೀಚ್ ನ ಬಂಡೆಯ ಮೇಲ್ಬಾಗದಿಂದ ಸಮುದ್ರವನ್ನು ನೋಡಿ. ಪ್ರೀತಿಯು ಇಲ್ಲಿ ಬೀಸುವ ಗಾಳಿಯಲ್ಲಿಯೇ ಇದೆ.

ಹೌಸ್ ಬೋಟುಗಳು

ಹೌಸ್ ಬೋಟುಗಳು

ನಿಮ್ಮ ಮನ ಸೂರೆಗೊಳಿಸುವಂತಹ ದಕ್ಷಿಣಭಾರತದಲ್ಲಿರುವ ಇನ್ನೊಂದು ಆಯ್ಕೆಯೆಂದರೆ ಅದು ಹೌಸ್ ಬೋಟುಗಳು. ಇಂತಹ ಒಂದು ಶಾಂತತೆ, ಪ್ರಶಾಂತತೆ ಮತ್ತು ಸುಂದರವಾದ ಮನೆಗಳನ್ನು ಜಗತ್ತಿನಲ್ಲಿ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಇದೊಂದು ಪ್ರಣಯಕ್ಕೆ ಸೂಕ್ತವಾದ ಆಯ್ಕೆಯಾಗಿದೆ ! ನೀವು ಪತಿ ಅಥವಾ ಪತ್ನಿಗೆ ಅಚ್ಚರಿಗೊಳಿಸಲು ನೋಡುತ್ತಿದ್ದಲ್ಲಿ ಖಂಡಿತವಾಗಿಯೂ ಆಂಧ್ರಪ್ರದೇಶ ಮತ್ತು ಕೇರಳ ಬಿಟ್ಟು ಇನ್ನೆಲ್ಲೂ ನೋಡದಿರಿ ಈ ಎರಡು ರಾಜ್ಯಗಳು ಸುಂದರವಾದ ಹೌಸ್ ಬೋಟುಗಳನ್ನು ಹೊಂದಿವೆ.

ಹಿನ್ನೀರಿನ ಭಾಗ

ಹಿನ್ನೀರಿನ ಭಾಗ

ಕೇರಳವು ಸ್ವಲ್ಪ ಮಟ್ಟಿಗೆ ವಾಣಿಜ್ಯೀಕರಣಗೊಂಡಿದ್ದರೂ ಆಂಧ್ರಪ್ರದೇಶ ಇನ್ನೂ ಕಡಿಮೆ ಪ್ರಚಾರಕ್ಕೆ ಬಂದಿರುವ ಸ್ಥಳವಾಗಿದೆ. ಗೋದಾವರಿ ಪ್ರದೇಶವು ಪ್ರಶಾಂತತೆಯಿಂದ ಕೂಡಿದೆ ಮತ್ತು ದೃಶ್ಯ ಸೌಂದರ್ಯ ಮತ್ತು ಇಲ್ಲಿಯ ಹೌಸ್ ಬೋಟುಗಳು ಇಂತಹ ಒಂದು ಸೂಕ್ತವಾದ ಸ್ಥಳಗಳ ವೀಕ್ಷಣೆಯನ್ನು ಒದಗಿಸುತ್ತದೆ. ಈ ಹೌಸ್ ಬೋಟುಗಳಲ್ಲಿಯ ಉತ್ತಮವಾದ ಅಂಶವೇನೆಂದರೆ ನೀವು ಇಲ್ಲಿ 2-3 ದಿನಗಳ ಕಾಲ ಉಳಿಯ ಬಹುದು ಮತ್ತು ಲಾಂಜ್ಗೆ ಬಾಡಿಗೆ ಪಡೆಯಬಹುದಾಗಿದೆ. ನೀವು ಇದರ ಒಳಗಡೆಯೇ ಆಹಾರವನ್ನೂ ಕೂಡಾ ಪಡೆಯಬಹುದಾಗಿದೆ. ಈ ಬೋಟುಗಳು ಹಿನ್ನೀರಿನ ಭಾಗದಲ್ಲಿ ಹಾದು ಹೋಗುತ್ತವೆ ಇದರಿಂದಾಗಿ ನಿಮ್ಮ ದಿನವು ಆರಾಮವಾಗಿ ಹೋಗುತ್ತದೆ. ಇದು ನಿಮಗೆ ಪರಸ್ಪರರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಲು ಬೇಕಾದಷ್ಟು ಸಮಯವನ್ನು ನೀಡುತ್ತದೆ. ಇದಕ್ಕಿಂತ ಹೆಚ್ಚಿನ ಉಡುಗೊರೆ ಜೀವನದಲ್ಲಿ ಇನ್ನೇನು ಇರಲು ಸಾಧ್ಯ!

ತೆಂಗಿನಕಾಯಿಗಳು

ತೆಂಗಿನಕಾಯಿಗಳು

ಒಂದು ತೆಂಗಿನಕಾಯಿನಲ್ಲಿ ಎರಡು ಸ್ಟ್ರಾಗಳಲ್ಲಿ ಅದರ ನೀರನ್ನು ಹೀರುವುದಕ್ಕಿಂತ ಹೆಚ್ಚು ರೊಮ್ಯಾಂಟಿಕ್ ಯಾವುದು? ಇಲ್ಲಿ ಸುತ್ತುವರಿದಿರುವ ತೆಂಗಿನ ಮರಗಳ ಎದುರು ನೀವು ಸಣ್ಣವರಾಗಿ ಕಾಣುವಿರಿ . ಇವು ನಿಮ್ಮ ಸುತ್ತ ಮುತ್ತಲಿನ ಪ್ರದೇಶ ಮತ್ತು ಹಿನ್ನೆಲೆಗೆ ಸುಂದರವಾದ ಒಂದು ಮೆರುಗನ್ನು ನೀಡುತ್ತವೆ. ನೀವು ಇಲ್ಲಿ ಗಂಟೆಗಟ್ಟಲೆ ಛಾಯಾಗ್ರಹಣ ಮಾಡಿಕೊಂಡು ಕಾಲ ಕಳೆಯಬಹುದು ಮತ್ತು ಸೆಲ್ಫಿ ತೆಗೆದುಕೊಳ್ಳಲು ಸೂಕ್ತ ಆಯಾಮ ಇಲ್ಲಿ ಸಿಗುತ್ತದೆ. ನಂಬಿ ಇಲ್ಲಿ ತೆಗೆದ ಪ್ರತೀ ಸೆಲ್ಫಿಗಳು ಕೂಡಾ ಅತ್ಯುತ್ತಮವಾದುದಾಗಿರುತ್ತದೆ ಎಂಬುದು ತಮಾಷೆಗೆ ಹೇಳುವುದೆಂದು ಕೊಂಡಿರಾ? ಇಲ್ಲಿ ನೀವು ಮತ್ತು ನಿಮ್ಮ ಸಂಗಾತಿ ತೆಂಗಿನ ಮರಗಳ ಹಿನ್ನೆಲೆ ಬಿಟ್ಟರೆ ಬೇರೆ ಯಾರೂ ಇರುವುದಿಲ್ಲ.

ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ?

ದೇವಾಲಯಗಳು

ದೇವಾಲಯಗಳು

ನೀವು ಧಾರ್ಮಿಕತೆಯ ಒಲವು ಇಲ್ಲದವರಾಗಿದ್ದರೂ ಕೂಡಾ ಇಲ್ಲಿಯ ಶೋಧನೆಯ ಸಲುವಾಗಿ ದೇವಾಲಯಗಳಿಗೆ ಭೇಟಿ ಕೊಡಿ. ಈ ದೇವಾಲಯಗಳು ಸುಂದರವಾಗಿ ನಿರ್ಮಿತವಾದುದಾಗಿದೆ. ದಕ್ಷಿಣ ಭಾರತದ ದೇವಾಲಯಗಳ ಪ್ರತೀ ಅಂಶಗಳೂ ಒಂದೊಂದು ಕಥೆಗಳನ್ನು ಸಾರುತ್ತವೆ. ಅದ್ಬುತವಾದ ಹಂಪೆಯ ತುಣುಕುಗಳು ಮತ್ತು ವಿಶ್ವದ ಅಂತ್ಯದಂತಿರುವ ಕನ್ಯಾಕುಮಾರಿಗೆ ಭೇಟಿ ನೀಡುವಾಗ ಪ್ರವಾಸದುದ್ದಕ್ಕೂ ಮಾತಾಡುವುದು ಬೇಕಾದಷ್ಟಿರುತ್ತದೆ. ಮತ್ತು ಗಂಭೀರವಾಗಿ, ನೀವು ಈ ದೇವಾಲಯಗಳ ಜಗತ್ತನ್ನು ಅನ್ವೇಷಣೆ ಮಾಡಲು ಬಯಸುವಿರಿ ಎಂದಾದಲ್ಲಿ, ನಿಮ್ಮ ಸಂಗಾತಿಗಳೊಂದಿಗೆ ಅದರ ಹಿಂದಿನ ಕಥೆಗಳನ್ನು ಹೊರಹಾಕಿ ಮತ್ತು ನಂತರ ಅವುಗಳನ್ನು ನೆನಪಿಸಿಕೊಳ್ಳಿ

ಇಂಗ್ಲೀಷ್‌ನಲ್ಲಿ ಓದಲು: Why Indian Couples Need To Visit South India More

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more