Search
  • Follow NativePlanet
Share
» »ಹೋಟೆಲ್‌ನಲ್ಲಿ ಮುಂಚಿತವಾಗಿ ರೂಮ್ ಬುಕ್ ಮಾಡೋ ಮೊದಲು ಇದನ್ನು ಓದಿ

ಹೋಟೆಲ್‌ನಲ್ಲಿ ಮುಂಚಿತವಾಗಿ ರೂಮ್ ಬುಕ್ ಮಾಡೋ ಮೊದಲು ಇದನ್ನು ಓದಿ

By Manjula Balaraj Tantry

ಹೆಚ್ಚಿನವರು ಎಲ್ಲಿಗಾದರೂ ಪ್ರವಾಸ ಹೋಗುವಾಗ ಮುಂಚಿತವಾಗಿಯೇ ಉಳಿಯಲು ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿರುತ್ತಾರೆ. ಆದರೆ ಕೊನೇ ಗಳಿಗೆಯಲ್ಲಿ ಪ್ರವಾಸ ರದ್ದಾದ ಕಾರಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ರೂಮ್ ಬುಕಿಂಗ್ ಕ್ಯಾನ್ಸಲ್ ಮಾಡುತ್ತಾರೆ. ಪ್ರವಾಸ ವಲಯದಲ್ಲಿಯ ಹೊಸ ಸುದ್ದಿಯ ಪ್ರಕಾರ, ಹೆಚ್ಚಿನ-ಗುಣಮಟ್ಟದ ಹೋಟೆಲ್ ಗಳ ಗುಂಪುಗಳು ಕಡೇ ಗಳಿಗೆಯ ಕಾಯ್ದಿರಿಸುವಿಕೆಯ ರದ್ದುಗಳಿಂದಾಗುವ ನಷ್ಟಗಳನ್ನು ಭರಿಸಿಕೊಳ್ಳಲು ಇಚ್ಚಿಸುವುದಿಲ್ಲ.

1. ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ರೆ ಫೈನ್

1. ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ರೆ ಫೈನ್

Melovedacars

ಯಾವುದೇ ಕೊನೆಯ-ಗಳಿಗೆಯಲ್ಲಿ ಮಾಹಿತಿಗಳನ್ನು ತೃತೀಯ ಜಾಲತಾಣಗಳಿಗೆ ಮತ್ತಷ್ಟು ಸೇರಿಸಲು ಸಾಧ್ಯವಿಲ್ಲವಾದ ಕಾರಣ ಅದರ ಪ್ರಕಾರ ಕೊಠಡಿಗಳ ರದ್ದು ಮಾಡಿದ ಸಂಧರ್ಭಗಳಲ್ಲಿ ಅವರು ಕೆಲವು ಶುಲ್ಕವನ್ನು ವಿಧಿಸಲು ನಿರ್ಧರಿಸಿದ್ದಾರೆ.

2. ಕೊನೆಗೆ ದೊಡ್ಡ ಮೊತ್ತ ಪಾವತಿಸಬೇಕೆಂದೇನಿಲ್ಲ

2. ಕೊನೆಗೆ ದೊಡ್ಡ ಮೊತ್ತ ಪಾವತಿಸಬೇಕೆಂದೇನಿಲ್ಲ

Kristoferb

ಪ್ರವಾಸಿಗರು ತಮ್ಮ ಕೊಠಡಿಗಳನ್ನು ಮುಂಗಡವಾಗಿಯೇ ಕಾಯ್ದಿರಿಸುವುದರಿಂದ ಭಾರೀ ಬಿಲ್ ಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು ಅಥವಾ ಕೊಠಡಿಯ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡದೇ ಗಮ್ಯಸ್ಥಾನವನ್ನು ತಲುಪುದರಿಂದ ಆಗುವ ಅನಾನುಕೂಲದಿಂದ ತಪ್ಪಿಸಿಕೊಳ್ಳಬಹುದಾಗಿದೆ.

3. ಏಜೆನ್ಸಿ ಆನ್ಲೈನ್

3. ಏಜೆನ್ಸಿ ಆನ್ಲೈನ್

ZaraHotels

ಹೆಚ್ಚಿನ ಕೊಠಡಿ ಬುಕಿಂಗ್ ಮೂರನೇ-ವ್ಯಕ್ತಿಗಳ ವೆಬ್ಸೈಟ್ ಗಳ ಮೂಲಕ ನಡೆಯುತ್ತದೆ, ಅಥವಾ ಪ್ರವಾಸಿ ಏಜೆನ್ಸಿಯಿಂದ ಆನ್ಲೈನ್ ಮೂಲಕ ಅಥವಾ ಮೊಬೈಲ್ ಆಪ್ ಕೂಡಾ ಕೊನೆ ಗಳಿಗೆಯಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ವ್ಯವಹಾರವನ್ನು ಮಾಡಬಹುದಾಗಿದೆ.

4. ಪೂರ್ಣ ಮರುಪಾವತಿ ಇದೆಯೇ ಪರೀಕ್ಷಿಸಿ

4. ಪೂರ್ಣ ಮರುಪಾವತಿ ಇದೆಯೇ ಪರೀಕ್ಷಿಸಿ

Fredericknoronha

ಹೀಗೆ ಕೆಲವು ತಿಂಗಳುಗಳ ನಂತರ ಅವರು ಮತ್ತೊಮ್ಮೆ ಇಂಟರ್ ನೆಟ್ ನಲ್ಲಿ ತಮ್ಮ ತಂಗುವಿಕೆಗಾಗಿ ಕಡಿಮೆ ವೆಚ್ಚದ ಕೊಠಡಿಯನ್ನು ಹೋಟೆಲ್ ಗಳಲ್ಲಿ ಕಾಯ್ದಿರಿಸಲು ನೋಡುತ್ತಾರೆ ಮತ್ತು ಕಡಿಮೆ ವೆಚ್ಚದ ಕೊಠಡಿ ಸಿಕ್ಕಿದ ಪಕ್ಷದಲ್ಲಿ ಮೊದಲು ಕಾಯ್ದಿರಿಸಿದ ಹೋಟೆಲ್ ನ ಕೊಠಡಿಯನ್ನು ಬಿಡಲಾಗುತ್ತದೆ. ಪೂರ್ಣ ಮರುಪಾವತಿ ಸುರಕ್ಷಿತವಾಗಿ ಮತ್ತು ಅಪೇಕ್ಷಿತ ಹೋಟೆಲ್ ಗಳಲ್ಲಿ ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಯುವ ಪ್ರವಾಸಿಗರಿಂದ ಬಳಸಲ್ಪಡುವ ಈ ಬುದ್ದಿವಂತಿಕೆಯ ತಂತ್ರವನ್ನು ಗಮನಿಸಿ. ಹೊಟೇಲುಗಳು ತಮ್ಮ ಕಾಯ್ದಿರಿಸುವಿಕೆಯ ನೀತಿಯಲ್ಲಿ ಲೋಪ ದೋಷಗಳನ್ನು ಸರಿಪಡಿಸಲು ಮತ್ತು ತಮ್ಮ ಕ್ಷೀಣಿಸುತ್ತಿರುವ ಆದಾಯವನ್ನು ರಕ್ಷಿಸಲು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತದೆ.

5. ದೃಢೀಕರಿಸದ ಗ್ರಾಹಕರ ಬುಕಿಂಗ್‌ಗೆ ತಡೆ

5. ದೃಢೀಕರಿಸದ ಗ್ರಾಹಕರ ಬುಕಿಂಗ್‌ಗೆ ತಡೆ

Chris Light

ಈ ನೀತಿಯು ಗ್ರಾಹಕರನ್ನು ದೃಢೀಕರಿಸದ ಬುಕಿಂಗ್ ಮಾಡುವುದನ್ನು ತಡೆಯುತ್ತದೆ, ಆದರೆ ಈ ನೀತಿಯು ಕೆಲವು ಅನಿರೀಕ್ಷಿತವಾಗಿ ರದ್ದು ಮಾಡಬೇಕಾದ ಗ್ರಾಹಕರಿಗೆ ನೋವುಂಟು ಮಾಡುತ್ತದೆ. ಕಾರ್ಪೋರೇಟ್ ಪ್ರಯಾಣಿಕರೂ ಕೂಡಾ ಈ ರದ್ದುಗೊಳಿಸುವ ನೀತಿಗೆ ಬದ್ದರಾಗಿರಬೇಕೆಂಬುದು ಒಂದು ಕಟುವಾದ ಸತ್ಯವಾಗಿದೆ.

6. ನೀತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ

6. ನೀತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ

ವ್ಯವಹಾರ (ಬಿಸಿನೆಸ್ ) ಪ್ರವಾಸವು ಕೆಲವೊಮ್ಮೆ ರದ್ದಾಗಬಹುದು ಅಥವಾ ಮರು ಸಮೀಕ್ಷಿತ ಮೀಟಿಂಗ್ ಗಳು, ರದ್ದುಗೊಳಿಸುವುದು, ಅಥವಾ ವಿಮಾನ ತಡವಾಗಿ ಬರುವುದು ಇತ್ಯಾದಿಗಳ ಸಂದರ್ಭಗಳಲ್ಲೂ ಕೂಡಾ ಹೋಟೇಲುಗಳಲ್ಲಿ ರದ್ದತಿಯ ನೀತಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.ನಿಜವಾಗಿಯೂ ದೊಡ್ಡ ಕಾರ್ಪೊರೇಟ್ ಆಟಗಾರರು ನಷ್ಟ ಉಂಟುಮಾಡುವ ಸಾಧ್ಯತೆಯನ್ನು ತಪ್ಪಿಸಲು ಕೆಲವು ಮಟ್ಟದ ಅನುಕೂಲಕರವಾದ ಒಪ್ಪಂದವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಸಣ್ಣ ಉದ್ಯಮಗಳು ಮತ್ತು ವೈಯಕ್ತಿಕ ಪ್ರಯಾಣಿಕರು ತಮ್ಮ ಪ್ರಯಾಣ ಯೋಜನೆಗಳನ್ನು ಸರಿಹೊಂದಿಸಲು ಈ ಹೊಸ ನೀತಿಯನ್ನು ಅನುಸರಿಸದೇ ಬೇರೆ ದಾರಿಯಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X