Search
  • Follow NativePlanet
Share
» » ಮಾಗಡಿಯಲ್ಲಿರುವ ಕಂಬದ ನರಸಿಂಹನ ದರ್ಶನ ಪಡೆದಿದ್ದೀರಾ ?

ಮಾಗಡಿಯಲ್ಲಿರುವ ಕಂಬದ ನರಸಿಂಹನ ದರ್ಶನ ಪಡೆದಿದ್ದೀರಾ ?

ನಮ್ಮ ಕರ್ನಾಟಕದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಎಲ್ಲೆ ಯಾವುದೇ ಸಣ್ಣ ಗುಡಿಗಳಿದ್ದರೂ ಭಕ್ತರು ಅಲ್ಲಿಗೆ ಹೋಗುತ್ತಾರೆ. ದೇವರ ಮೇಲೆ ಭಕ್ತರ ನಂಬಿಕೆ ಅಪಾರ. ನಾವಿಂದು ಒಂದು ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ, ಇಲ್ಲಿ ಭಕ್ತಿಯಿಂದ ಪೂಜಿಸಿದ್ರೆ ಇಷ್ಟಾರ್ಥ ನೆರವೇರುತ್ತದಂತೆ. ಅಂಥಹ ಒಂದು ದೇವಾಲಯದ ಬೆಂಗಳೂರಿನಲ್ಲಿದೆ. ಅದುವೇ ಲಕ್ಷ್ಮೀ ರಂಗನಾಥ ದೇವಾಲಯ.

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

PC: Dineshkannambadi

ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಾಲಯ ಬೆಂಗಳೂರಿನ ರಾಮನಗರ ತಾಲೂಕಿನಲ್ಲಿರುವ ಮಾಗಡಿಯಲ್ಲಿದೆ. ಮಾಗಡಿ ಬಸ್ ನಿಲ್ದಾಣದಿಂದ 2 ಕಿ.ಮೀ ಮತ್ತು ಬೆಂಗಳೂರು ಸಿಟಿ ಜಂಕ್ಷನ್‌ನಿಂದ 44.5 ಕಿ.ಮೀ. ದೂರದಲ್ಲಿದೆ. ಮಾಗಡಿಯಲ್ಲಿರುವ ರಂಗನಾಥ ಸ್ವಾಮಿ ದೇವಾಲಯವು ಪುರಾತನ ದೇವಾಲಯವಾಗಿದೆ. ಬೆಂಗಳೂರಿನ ಸುತ್ತಲೂ ಭೇಟಿ ನೀಡಲು ಇದು ಒಂದು ಜನಪ್ರಿಯ ಯಾತ್ರಾ ಸ್ಥಳವಾಗಿದೆ.

ಜ.26, 27ರ ರಜೆಯಲ್ಲಿ ಬಾದಾಮಿಯ ಬನಶಂಕರಿ ಅಮ್ಮನ ಉತ್ಸವಕ್ಕೆ ತೆರಳಿ

ದುರ್ವಾಸ ಮುನಿ ನಿರ್ಮಿಸಿದ ದೇವಾಲಯ

ದುರ್ವಾಸ ಮುನಿ ನಿರ್ಮಿಸಿದ ದೇವಾಲಯ

PC: Dineshkannambadi

ಈ ದೇವಾಲಯವನ್ನು ದ್ವಾಪರಯುಗದ ಅಂತ್ಯದಲ್ಲಿ ದುರ್ವಾಸ ಮುನಿಗಳು ನಿರ್ಮಿಸಿದ್ದು ಎನ್ನಲಾಗುತ್ತದೆ. ಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿದ್ದರಂತೆ. ಹಾಗಾಗಿ ಅಲ್ಲಿ ದುರ್ವಾಸ ಮುನಿಯ ತಪೋ ಮಂಟಪವನ್ನು ಕಾಣಬಹುದು. ಇಲ್ಲಿ ಕಂಬದ ನರಸಿಂಹ ಸ್ವಾಮಿಯನ್ನೂ ಕಾಣಬಹುದು. ಪ್ರತಿದಿನ ಬೆಳಗ್ಗೆ ಪಂಚಾಮೃತ ಅಭೀಷೇಕ ನಡೆಯುತ್ತದೆ. ಪೂರ್ವಾಭಿಮುಖವಾಗಿರುವ ಈ ದೇವರ ಗುಡಿಯು ಸ್ವಲ್ಪ ಬಲಭಾಗಕ್ಕೆ ತಿರುಗಿದೆಯಂತೆ.

 ತಿರುಮಲೆ ಬೆಟ್ಟದ ಮೇಲಿರುವ ದೇವಾಲಯ

ತಿರುಮಲೆ ಬೆಟ್ಟದ ಮೇಲಿರುವ ದೇವಾಲಯ

ರಂಗನಾಥಸ್ವಾಮಿ ದೇವಾಲಯವು ತಿರುಮಲೆ ಎಂಬ ಬೆಟ್ಟದ ಮೇಲೆ ನೆಲೆಗೊಂಡಿದೆ. ಎತ್ತರವಾದ ರಾಜಗೋಪುರವಿದೆ . ರಂಗನಾಥ ದೇವಸ್ಥಾನದ ಗರ್ಭಗುಡಿ 12 ನೇ ಶತಮಾನದ ಆರಂಭದಲ್ಲಿ ಚೋಳ ಅರಸರಿಂದ ನಿರ್ಮಿಸಲ್ಪಟ್ಟಿತು. ನಂತರ ದೇವಾಲಯವು ನವೀಕರಣ ಮಾಡಲಾಯಿತು. ಸುಂದರವಾದ ಗೋಪುರಗಳನ್ನು 16 ನೇ ಶತಮಾನದಲ್ಲಿ ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯರು ನಿರ್ಮಿಸಿದರು ಮತ್ತು ನಂತರ ಮೈಸೂರು ರಾಜ ಜಯಚಾಮರಾಜ ಒಡೆಯರ್ ಅವರಿಂದ ನವೀಕರಿಸಲ್ಪಟ್ಟಿತ್ತು.

ಹಂಪಿಯ ಸೂಳೆ ಬಜಾರ್‌ನಲ್ಲಿ ಸುತ್ತಾಡಿದ್ದೀರಾ?

ನಿಂತಿರುವ ಭಂಗಿಯಲ್ಲಿರುವ ರಂಗನಾಥ

ನಿಂತಿರುವ ಭಂಗಿಯಲ್ಲಿರುವ ರಂಗನಾಥ

ರಂಗನಾಥ ದೇವಸ್ಥಾನಕ್ಕೆ ಅರ್ಪಿತವಾದ ದೇವಾಲಯದ ಮೂರ್ತಿಯು ನಾರಾಯಣ ನಿಂತಿರುವ ಭಂಗಿಯದ್ದಾಗಿದೆ. ವಿಜಯನಗರ ಶೈಲಿಯಲ್ಲಿರುವ ಈ ಮೂರ್ತಿಯು ಸುಮಾರು 4 ಅಡಿ ಎತ್ತರದಲ್ಲಿದ್ದು ಶಂಖ, ಚಕ್ರ, ಗಧ ಮತ್ತು ಅಭಯ ಹಸ್ತವನ್ನು ಹೊಂದಿದೆ.

 ದ್ರಾವಿಡ ಶೈಲಿಯಲ್ಲಿರುವ ದೇವಾಲಯ

ದ್ರಾವಿಡ ಶೈಲಿಯಲ್ಲಿರುವ ದೇವಾಲಯ

ದೇವಾಲಯದ ಗೋಪುರ ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಒಳಗೆ ಸುಂದರ ಕಂಬಗಳು ಇವೆ. ಸಾಮಾನ್ಯವಾಗಿ ರಂಗನಾಥದ ವಿಗ್ರಹವು ಮಲಗಿರುವ ಅಥವಾ ವಿಶ್ರಾಂತಿ ಪಡೆಯುತ್ತಿರುವ ಸ್ಥಿತಿಯಲ್ಲಿರುತ್ತದೆ. ಆದರೆ ಇಲ್ಲಿ ವಿಗ್ರಹವು ನಿಂತಿರುವ ಸ್ಥಿತಿಯಲ್ಲಿದೆ. ಮೂಲತಃ ಇದನ್ನು ವೆಂಕಟೇಶ್ವರನ ವಿಗ್ರಹ ಎಂದು ಹೇಳಲಾಗುತ್ತದೆ.

ಮಹಾರಾಷ್ಟ್ರದ ತಾರ್ಕಾರ್ಲಿ ಬೀಚ್‌ನಲ್ಲಿ ಕಾಲಕಳೆಯಲೇ ಬೇಕು

ವೆಂಕಟೇಶ್ವರರನ್ನು ರಂಗನಾಥ ಎಂದು ಕರೆಯಲಾಯಿತು

ವೆಂಕಟೇಶ್ವರರನ್ನು ರಂಗನಾಥ ಎಂದು ಕರೆಯಲಾಯಿತು

PC: youtube

ಟಿಪ್ಪು ಸುಲ್ತಾನ್ ಕಾಲದಲ್ಲಿ, ಅನೇಕ ಹಿಂದೂ ದೇವಾಲಯಗಳು ನಾಶವಾದವು. ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ರಂಗನಾಥ ಸ್ವಾಮಿಯ ಭಕ್ತನಾಗಿದ್ದನ್ನು ಎನ್ನಲಾಗುತ್ತದೆ. ಈ ದೇವಾಲಯವನ್ನು ಉಳಿಸಲು, ಅವರು ವೆಂಕಟೇಶ್ವರರನ್ನು ರಂಗನಾಥ ಎಂದು ಕರೆದರು. ಮತ್ತೊಂದು ಆಸಕ್ತಿದಾಯಕ ವಿಗ್ರಹವೆಂದರೆ ಬೆಳೆಯೋ ರಂಗ ಅಂದರೆ ಬೆಳೆಯುತ್ತಿರುವ ರಂಗ. ಈ ವಿಗ್ರಹವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಇರುತ್ತದೆ. ಇದು ರಂಗನಾಥನ ಒಂದು ಸಣ್ಣ ವಿಗ್ರಹವಾಗಿದ್ದು ಮಲಗಿರುವ ಸ್ಥಿತಿಯಲ್ಲಿದೆ.

ಇತರ ದೇವರ ಗುಡಿಗಳು

ಇತರ ದೇವರ ಗುಡಿಗಳು

ಇಲ್ಲಿ ರಾಮ, ಸೀತಾ, ಆಂಜನೇಯ, ಗಣೇಶ, ವೇಣುಗೋಪಾಲ ಕೃಷ್ಣರಿಗೆ ಮತ್ತು ನವಗ್ರಹಗಳಿಗೆ ಮೀಸಲಾದ ಇತರ ದೇವಾಲಯಗಳಿವೆ. ಮುಖ್ಯ ದೇವಾಲಯದ ಹಿಂದೆ ಪುಟ್ಟ ರಂಗನಾಥನಿಗೆ ಅರ್ಪಿಸಲಾದ ಸಣ್ಣ ದೇವಾಲಯವಿದೆ. ಈ ದೇವಸ್ಥಾನದ ಸಮೀಪದಲ್ಲಿ ಲಕ್ಷ್ಮೀ ದೇವಿಯ ದೇವಸ್ಥಾನವಿದೆ. ಇಲ್ಲೊಂದು ಗರುಡ ಸ್ತಂಭ ಇದೆ. ಇದು 1524 ಕ್ರಿ.ಶ.ದಲ್ಲಿ ಚಕ್ರವರ್ತಿ ಕೃಷ್ಣ ದೇವರಾಜನು ನೀಡಿದ ಅರ್ಪಣೆಗಳನ್ನು ತಿಳಿಸುತ್ತದೆ.

ಶಿವನು ಬ್ರಹ್ಮನ ತಲೆ ತುಂಡರಿಸಿದ ಸ್ಥಳದಲ್ಲಿರುವ ದೇವಾಲಯದ ಬಗ್ಗೆ ಗೊತ್ತಾ?

ದೇವಸ್ಥಾನದಲ್ಲೊಂದು ಪವಿತ್ರ ಕೊಳ

ದೇವಸ್ಥಾನದಲ್ಲೊಂದು ಪವಿತ್ರ ಕೊಳ

ಇಲ್ಲೊಂದು ಪವಿತ್ರ ಕೊಳವಿದೆ. ಇದು ದೇವಾಲಯದ ಬಲಭಾಗದಲ್ಲಿದೆ ಮತ್ತು ಅನೇಕ ಆಚರಣೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಬೆಟ್ಟದ ಮೇಲಿರುವ ಈ ಕೊಳದಲ್ಲಿ ನೀರು ಸದಾಕಾಲ ಇರುತ್ತದೆ. ಲಕ್ಷ್ಮೀಶ ಕವಿಯು ತನ್ನ ಜೈಮಿನಿ ಭಾರತ ಕೃತಿಯನ್ನು ಈ ದೇವಸ್ಥಾನದಲ್ಲಿ ಕುಳಿತು ಪೂರ್ತಿ ಮಾಡಿದರೆಂದು ಹೇಳಲಾಗುತ್ತದೆ.

ರಥಸಪ್ತಮಿಯಂದು ಜಾತ್ರೆ

ರಥಸಪ್ತಮಿಯಂದು ಜಾತ್ರೆ

ಪ್ರತಿವರ್ಷ ರಥಸಪ್ತಮಿಯಂದು ಈ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ . ರಂಗನಾಥಸ್ವಾಮಿಯ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ವಿವಾಹ, ಉದ್ಯೋಗ, ಸಂತಾನ ಹೀಗೆ ಅನೇಕ ಹರಕೆಗಳನ್ನು ಹೊತ್ತು ಬರುವವರ ಬೇಡಿಕೆ ಈಡೇರುತ್ತದಂತೆ. ಇಲ್ಲಿಗೆ ಬರುವ ಭಕ್ತರನ್ನು ರಂಗನಾಥ ಸ್ವಾಮಿ ಯಾವಾಗಲೂ ಹರಸುತ್ತಾರಂತೆ.

ಭೇಟಿಯ ಸಮಯ

ಭೇಟಿಯ ಸಮಯ

ತಿರುವಲದಲ್ಲಿ ವೆಂಕಟೇಶ್ವರನ ದರ್ಶನ ಪಡೆದಷ್ಟೇ ಪುಣ್ಯ ಈ ದೇವಸ್ಥಾನದಲ್ಲಿ ರಂಗನಾಥನನ್ನು ದರ್ಶೀಸಿದರೆ ಬರುತ್ತದೆ ಎನ್ನುತ್ತಾರೆ ಭಕ್ತರು. ಈ ದೇವಾಲಯವು ಪ್ರತಿದಿನ ಬೆಳಗ್ಗೆ 6.30 ರಿಂದ 11.00 ರ ವರೆಗೆ ಹಾಗೂ ಸಂಜೆ 5.30ರಿಂದ 7.30 ರವರೆಗೆ ಭಕ್ತರಿಗಾಗಿ ತೆರೆದಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾಣ ನಿಲ್ದಾಣ.. ಇದು ಸುಮಾರು 80 ಕಿ.ಮೀ ದೂರದಲ್ಲಿದೆ. ಸಮೀಪದ ರೈಲು ನಿಲ್ದಾಣವೆಂದರೆ ಯಶವಂತಪುರ ರೈಲು ನಿಲ್ದಾಣ. ಇದು 50 ಕಿ.ಮೀ ದೂರದಲ್ಲಿದೆ. ಇನ್ನು ಬಸ್‌ ಮೂಲಕ ಅಥವಾ ವಾಹನದ ಮೂಲಕ ಇಲ್ಲಿಗೆ ಹೋಗಬೇಕಾದರೆ ಬೆಂಗಳೂರು ಸಿಟಿಯಿಂದ ಸುಮಾರು 2 ಗಂಟೆಗಳ ಕಾಲ ಹಿಡಿಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more