Search
  • Follow NativePlanet
Share
» »ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನ ಸಮೀಪದಲ್ಲಿ ಅನೇಕ ದೇವಾಲಯಗಳು ಇವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ಬೆಂಗಳೂರಿನಲ್ಲಿರುವ ಅನೇಕ ಪ್ರವಾಸಿ ತಾಣಗಳಿಗೆ ರಾಜ್ಯದಿಂದಲೇ ಅಲ್ಲದೇ ಭಾರತದಾದ್ಯಂತ ಹಾಗು ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ. ಆ ಸಾಲಿನ

ಬೆಂಗಳೂರಿನ ಸಮೀಪದಲ್ಲಿ ಅನೇಕ ದೇವಾಲಯಗಳು ಇವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ಬೆಂಗಳೂರಿನಲ್ಲಿರುವ ಅನೇಕ ಪ್ರವಾಸಿ ತಾಣಗಳಿಗೆ ರಾಜ್ಯದಿಂದಲೇ ಅಲ್ಲದೇ ಭಾರತದಾದ್ಯಂತ ಹಾಗು ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ. ಆ ಸಾಲಿನಲ್ಲಿ ದೇವಾಲಯಗಳು ಕೂಡ ಒಂದು. ಬೆಂಗಳೂರಿನಲ್ಲಿ ಅತಿ ಸಮೀಪದಲ್ಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದೀರಾ? ಈ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?. ಇದೊಂದು ಪ್ರಾಚೀನವಾದ ದೇವಾಲಯವಾಗಿದ್ದು, 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಗುರುತಿಸಲಾಗಿದೆ. ಈ ದೇವಾಲಯವು ಅತ್ಯಂತ ಸುಂದರವಾಗಿದ್ದು, ಸ್ವಾಮಿಯ ದರ್ಶನ ಭಾಗ್ಯ ಪಡೆಯಲು ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಹಾಗಾದರೆ ಈ ದೇವಾಲಯದ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಈ ಲೇಖನದ ಮೂಲಕ ಪಡೆಯಿರಿ.

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಮಾಗಡಿ ಬಸ್ ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿ ಮತ್ತು ಬೆಂಗಳೂರು ಸಿಟಿ ಜಂಕ್ಷನ್‍ನಿಂದ ಸುಮಾರು 44 ಕಿ.ಮೀ ದೂರದಲ್ಲಿದೆ ಶ್ರೀ ರಂಗನಾಥ ಸ್ವಾಮಿ ದೇವಾಲಯ. ಮಾಗಡಿಯಲ್ಲಿರುವ ಈ ದೇವಾಲಯವು ಅತ್ಯಂತ ಪುರಾತನವಾದುದು ಹಾಗು ರಕ್ಷಿತವಾದ ಸ್ಮಾರಕವಾಗಿದೆ. ಬೆಂಗಳೂರಿಗರಿಗೆ ಇದೊಂದು ಜನಪ್ರಿಯ ಯಾತ್ರಾ ಸ್ಥಳವೆಂದೇ ಹೇಳಬಹುದು.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಈ ಸುಂದರವಾದ ದೇವಾಲಯವು ತಿರುಮೇಲ್ ಎಂಬ ಬೆಟ್ಟದ ಮೇಲೆ ನೆಲೆಗೊಂಡಿದೆ. ತನ್ನ ರಾಜಗೋಪುರ, ವಿಶಾಲವಾದ ಪ್ರಾಂಗಣದಿಂದ ಈ ದೇವಾಲಯವು ಪ್ರಸಿದ್ಧಿಯಾಗಿದೆ. ರಂಗನಾಥಸ್ವಾಮಿ ದೇವಾಲಯವನ್ನು 12 ನೇ ಶತಮಾನದ ಆರಂಭದಲ್ಲಿ ಚೋಳ ಅರಸರಿಂದ ನಿರ್ಮಾಸಲ್ಪಟ್ಟಿತ್ತು. ಹಾಗೆಯೇ ದೇವಾಲಯದ ನವೀಕರಣ ಮತ್ತು ವಿಸ್ತರಣೆಗೆ ಒಳಗಾಯಿತು.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ರಂಗನಾಥ ಸ್ವಾಮಿ ದೇವಾಲಯದ ಗೋಪುರವನ್ನು 16 ನೇ ಶತಮಾನದಲ್ಲಿ ವಿಜಯನಗರ ಚಕ್ರವರ್ತಿಯಾದ ಕೃಷ್ಣ ದೇವರಾಯರವರು ನಿರ್ಮಾಣ ಮಾಡಿದರು. ನಂತರದ ದಿನಗಳಲ್ಲಿ ಮೈಸೂರು ರಾಜ ಜಯಚಾಮರಾಜ ಒಡೆಯರ್ ಅವರಿಂದ ನವೀಕರಿಸಲಾಯಿತು. ಚೋಳರು ನಿರ್ಮಾಣ ಮಾಡಿದ ಮತ್ತು ನಂತರ ನವೀಕರಿಸಿದ ಗರ್ಭಗುಡಿಯಲ್ಲಿರುವ ರಚನೆಗಳು ಇವೆ ಆಗಿದೆ.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಇಲ್ಲಿನ ರಂಗನಾಥ ಸ್ವಾಮಿಯು ನಿಂತಿರುವ ಚಿತ್ರಣದಲ್ಲಿದ್ದು, ವಿಜಯನಗರ ಶೈಲಿಯಲ್ಲಿ ಸುಮಾರು 3 ಅಡಿ ಎತ್ತರದಲ್ಲಿ ವಿಗ್ರಹವಿದೆ. ಈ ವಿಗ್ರಹವು ಶಂಕ, ಚಕ್ರ, ಗದ ಮತ್ತು ಅಭಯ ಎಂಬ ನಾಲ್ಕು ಕೈಗಳನ್ನು ಹೊಂದಿದೆ. ಈ ಮುಖ್ಯವಾದ ದೇವತೆಯನ್ನು ಮಾಂಡವ್ಯ ಎಂಬ ಋಷಿಯಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ದೇವಾಲಯದ ಗೋಪುರವು ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಒಳ ಭಾಗದಲ್ಲಿ ಸುಂದರವಾದ ಸ್ತಂಭಗಳಿವೆ. ರಂಗನಾಥ ಸ್ವಾಮಿಯು ನಿಂತಿರುವ ಭಂಗಿಯಲ್ಲಿರುವುದರಿಂದ ಇದನ್ನು ಮೂಲತಃ ವೆಂಕಟೇಶ್ವರ ಸ್ವಾಮಿ ವಿಗ್ರಹ ಎಂದು ಕೂಡ ಹೇಳಲಾಗುತ್ತದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಅನೇಕ ಹಿಂದೂ ದೇವಾಲಯಗಳು ನಾಶವಾದವು.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಟಿಪ್ಪುವು ಶ್ರೀರಂಗ ಪಟ್ಟಣದಲ್ಲಿ ತನ್ನ ದೇವರಾದ ರಂಗನಾಥ ಸ್ವಾಮಿಯನ್ನು ಆರಾಧಿಸುತ್ತಿದ್ದನು. ಹಾಗಾಗಿಯೇ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಶ್ರೀ ರಂಗನಾಥ ಸ್ವಾಮಿ ಎಂದು ಕರೆದರು. ಇದೊಂದು ಮಹಿಮಾನ್ವಿತವಾದ ದೇವಾಲಯ ಕೂಡ ಆಗಿದೆ. ಅದೆನೆಂದರೆ ಇದೊಂದು ಬೆಳೆಯುತ್ತಿರುವ ವಿಗ್ರಹ ಕೂಡ ಆಗಿದೆ.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಇಲ್ಲಿ ಕೇವಲ ರಂಗನಾಥ ಸ್ವಾಮಿ ವಿಗ್ರಹವೇ ಅಲ್ಲದೇ, ರಾಮ, ಸೀತೆ, ಆಂಜನೇಯ ಮತ್ತು ವೇಣುಗೋಪಾಲ ಮೀಸಲಾದ ಇತರ ದೇವಾಲಯಗಳು ಇದೆ. ಮುಖ್ಯ ದೇವಾಲಯದ ಹಿಂದೆ ಪುಟ್ಟ ರಂಗನಾಥಕ್ಕೆ ಅರ್ಪಿಸಲಾದ ಸಣ್ಣ ದೇವಾಲಯ ಕೂಡ ಇದೆ. ಆ ಮಂದಿರದ ಸಮೀಪದಲ್ಲಿಯೇ ಒಂದು ಲಕ್ಷ್ಮೀ ದೇವಿಯ ದೇವಾಲಯ ಕೂಡ ಇದೆ.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಕ್ರಿ.ಶ 1524 ರಲ್ಲಿ ಚಕ್ರವರ್ತಿ ಕೃಷ್ಣ ದೇವರಾಯ ನೀಡಿದ ಗರುಡ ಸ್ತಂಭವನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಪವಿತ್ರವಾದ ಬಾವಿ ಅಥವಾ ಕಲ್ಯಾಣಿ ದೇವಾಲಯದ ಬಲಭಾಗದಲ್ಲಿದೆ. ಅಷ್ಟೇ ಅಲ್ಲ ದೇವಾಲಯದ ಒಳ ಭಾಗದಲ್ಲಿರುವ ಸ್ತಂಭಗಳು ಗ್ರಾನೈಟ್ ಸ್ತಂಭದಿಂದ ಕೆತ್ತಲಾಗಿದೆ.

PC:YouTube

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಇಲ್ಲಿ ಶ್ರೀ ರಂಗನಾಥ ಸ್ವಾಮಿಯ ವಿಗ್ರಹಗಳ ಜೊತೆ ಜೊತೆಗೆ ಪತ್ನಿಯರಾದ ಶ್ರೀ ಭೂದೇವಿ ಮತ್ತು ನೀಲಾ ದೇವಿಗಳನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯಕ್ಕೆ ರಥೋತ್ಸವ ಪ್ರತಿ ವರ್ಷ ಚೈತ್ರ ಶುದ್ಧ ಪೌಣರ್ಮಿಯಂದು ಆಚರಿಸಲಾಗುತ್ತದೆ. ಇಲ್ಲಿಗೆ ಸಾವಿರಾರು ಜನರು ಉತ್ಸವವನ್ನು ನೋಡಲು ಭೇಟಿ ನೀಡುತ್ತಿರುತ್ತಾರೆ. ವೈಕುಂಠ ಏಕಾದಶಿಯಂದು ಸಾವಿರಾರು ಮಂದಿ ಭಕ್ತರನ್ನು ಈ ದೇವಾಲಯವು ಆಕರ್ಷಿಸುತ್ತದೆ.

PC:YouTube

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X