Search
  • Follow NativePlanet
Share
» »ರಾಮೋಜಿ ಚಿತ್ರನಗರಿ ಹೇಗಿದೆ ಗೊತ್ತೆ?

ರಾಮೋಜಿ ಚಿತ್ರನಗರಿ ಹೇಗಿದೆ ಗೊತ್ತೆ?

By Vijay

ಮೊದ ಮೊದಲು ಅಂದರೆ 70 ಹಾಗೂ 80 ರ ದಶಕಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಆಯಾ ಸನ್ನಿವೇಶಗಳಿಗೆ ತಕ್ಕಂತೆ ಹಲವಾರಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಉದ್ಯಾನಗಳು, ಐತಿಹಾಸಿಕ ಕೋಟೆಗಳು, ರಾಜಸಭೆಗಳು ಹೀಗೆ ಹಲವಾರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ತಾತ್ಕಾಲಿಕ್ ಸೆಟ್ಟುಗಳನ್ನು ನಿರ್ಮಿಸಿ ಚಿತ್ರೀಕರಿಸಲಾಗುತ್ತಿತ್ತು.

ಇಂದಿಗೂ ಈ ರೀತಿಯ ಸೆಟ್ಟುಗಳನ್ನು ನಿರ್ಮಿಸಲಾಗುತ್ತದೆ. ಆದಾಗ್ಯೂ ಆ ಸಮಯದಲ್ಲಿ ಬಹಳಷ್ಟು ನಿರ್ಮಾಪಕ, ನಿರ್ದೇಶಕರುಗಳಿಗೆ ತಮ್ಮ ಆಯ್ಕೆಗೆ ತಕ್ಕಂತೆ ಸ್ಥಳಗಳು ದೊರೆಯುತ್ತಿದ್ದುದು ಕಷ್ಟಕರವಾಗಿತ್ತು, ಆದಾಗ್ಯೂ ಅಂತಹ ಸ್ಥಳಗಳೊಮ್ಮೆ ದೊರೆತರೆ ಅಲ್ಲಿಗೆ ತೆರಳಿಯೆ ಚಿತ್ರೀಕರಣ ಮಾಡಬೇಕಾಗುತ್ತಿತ್ತು. ಇದರಿಂದ ಬಂಡವಾಳ ಹೆಚ್ಚಾಗುತ್ತಿತ್ತು ಎಂಬುದು ನಿರ್ಮಾಪಕರ ನೋವಾಗಿತ್ತು.

ಇಂತಹ ಒಂದು ಪರಿಸ್ಥಿತಿಯನ್ನು ಸರಳೀರಣಗೊಳಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಸದಾ ಆಕರ್ಷಕ ಸೆಟ್ಟುಗಳಿಂದ ರಾರಾಜಿಸುವ ತಾಣಗಳೆ ಚಿತ್ರನಗರ ಅಥವಾ ಚಿತ್ರನಗರಿಗಳು. ಮುಂಬೈನಂತಹ ನಗರದಲ್ಲಿ ಚಿತ್ರನಗರಿ ಮೊದಲಿನಿಂದಲೂ ಇತ್ತಾದರೂ ದಕ್ಷಿಣಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೆ ನಗರಗಳಿರಲಿಲ್ಲ.

ಹೀಗಾಗಿ ದಕ್ಷಿಣದಲ್ಲೂ ಚಿತ್ರ ನಿರ್ಮಾಣಗಾರರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ನಿರ್ಮಿಸಲಾದ ಅದ್ಭುತ ಚಿತ್ರನಗರಿಯೆ ರಾಮೋಜಿ ಫಿಲ್ಮ್ ಸಿಟಿ ಅಥವಾ ರಾಮೋಜಿ ಚಿತ್ರನಗರಿ. ಇದು ಇಂದು ಭಾರತದ ಅತ್ಯಂತ ವಿಶಾಲ ಹಾಗೂ ಅದ್ಭುತವಾಗಿ ವ್ಯವಸ್ಥೆಗಳುಳ್ಳ ಆಕರ್ಷಕ ಚಿತ್ರನಗರಿಯಾಗಿ ಕೇವಲ ಚಿತ್ರ ನಿರ್ಮಾಣಗಾರರಿಗೆ ಮಾತ್ರವಲ್ಲದೆ ಪ್ರವಾಸಿಗರನ್ನೂ ಸಹ ಚುಂಬಕದಂತೆ ಆಕರ್ಷಿಸುತ್ತದೆ.

ಹೈದರಾಬಾದ್

ಹೈದರಾಬಾದ್

ರಾಮೋಜಿ ಚಿತ್ರನಗರಿಯು ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರಕೇಂದ್ರದಿಂದ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ ಒಂಭತ್ತರ ಮೇಲೆ ಸ್ಥಿತವಿದೆ. ದಿನನಿತ್ಯ ಪ್ರವಾಸೋದ್ಯಮ ಇಲಾಖೆಯಿಂದ ಸಾಕಷ್ಟು ಬಸ್ಸುಗಳು ಹೈದರಾಬಾದ್ ನಿಂದ ರಾಮೋಜಿಗೆ ತೆರಳಲು ದೊರೆಯುತ್ತಿರುತ್ತವೆ.

ಚಿತ್ರಕೃಪೆ: Cephas 405

ಮುಂಗಡ ಬುಕ್ ಮಾಡಿ

ಮುಂಗಡ ಬುಕ್ ಮಾಡಿ

ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಹಲವು ವೈವಿಧ್ಯಮಯ ಪ್ರವಾಸಿ ಪ್ಯಾಕೆಜುಗಳು ಅಥವಾ ಕೊಡುಗೆಗಳು ನಿತ್ಯವು ಪ್ರವಾಸಿಗರಿಗೆ ಲಭ್ಯವಿದ್ದು ತಮಗನುಕೂಲವೆನಿಸಿದ ಪ್ಯಾಕೆಜುಗಳನ್ನು ಮುಂಚಿತವಾಗಿಯೆ ಬುಕ್ ಮಾಡಿ ರಾಮೋಜಿ ಚಿತ್ರ ನಗರಿಗೆ ಭೇಟಿ ನೀಡಿ ಆನಂದಿಸಬಹುದು.

ಚಿತ್ರಕೃಪೆ: Pratish Khedekar

ಮಂಚೂಣಿಯಲ್ಲಿದೆ!

ಮಂಚೂಣಿಯಲ್ಲಿದೆ!

1991 ರಲ್ಲಿ ನಿರ್ಮಿತವಾದ ರಾಮೋಜಿ ಚಿತ್ರನಗರಿಯು ಭಾರತದ ಅತ್ಯದ್ಭುತ ಚಿತ್ರನಗರಗಳ ಪೈಕಿ ಮಂಚೂಣಿಯಲ್ಲಿರುವ ಆಕರ್ಷಣೆಯಾಗಿದ್ದು ತನ್ನ ವೈಭವ ಹಾಗೂ ವಿಶಾಲತೆಯಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ. ಅಲ್ಲದೆ ಹೈದರಾಬಾದ್ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಇದು ಒಂದಾಗಿದೆ.

ಚಿತ್ರಕೃಪೆ: Vinayaraj

ಗಿನೆಸ್ ಬುಕ್ ದಾಖಲೆ!

ಗಿನೆಸ್ ಬುಕ್ ದಾಖಲೆ!

ವೈಭವ ಹಾಗೂ ವಿಶಾಲತೆಗೆ ಹೆಸರುವಾಸಿಯಾದ ಈ ಅದ್ಭುತ ಚಿತ್ರನಗರಿ ಪ್ರಪಂಚದಲ್ಲೆ ಕಾಣಬಹುದಾದ ಅತ್ಯದ್ಭುತ ಚಿತ್ರನಗರಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವುದಲ್ಲದೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ ನಲ್ಲಿ ತನ್ನ ಹೆಸರನ್ನೂ ಸಹ ದಾಖಲಿಸಿರುವುದು ಇದರ ವಿಶಿಷ್ಟತೆಗೆ ಮತ್ತೊಂದು ಉದಾಹರಣೆಯಾಗಿದೆ.

ಚಿತ್ರಕೃಪೆ: Vinayaraj

ಪ್ರತಿನಿತ್ಯ

ಪ್ರತಿನಿತ್ಯ

ಸಾಮಾನ್ಯವಾದ ದಿನಗಳಲ್ಲೆ ಪ್ರತಿನಿತ್ಯ ಈ ಚಿತ್ರನಗರಿಗೆ ಭೇಟಿ ನೀಡುವವರ ಸಂಖ್ಯೆ ಸಾವಿರ ದಾಟುತ್ತದೆ. ಇನ್ನೂ ರಜೆಗಳು, ಹಬ್ಬದ ದಿನಗಳಲ್ಲಂತೂ ಈ ಚಿತ್ರನಗರಿಗೆ ಭೇಟಿ ನೀಡುವವರ ಸಂಖ್ಯೆಯಂತೂ ಪ್ರತಿ ದಿನದ ಸರಾಸರಿಗಿಂತ ಎರಡು ಪಟ್ಟು ಜಾಸ್ತಿಯೆ ಆಗಿರುತ್ತದೆ.

ಚಿತ್ರಕೃಪೆ: Vinayaraj

2,500 ಎಕರೆಗಳಷ್ಟು!

2,500 ಎಕರೆಗಳಷ್ಟು!

ಒಟ್ಟಾರೆಯಾಗಿ 2,500 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಚಾಚಿರುವ ಈ ಅದ್ಭುತ ನಗರಿಯು ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಹುತೇಕ ಸೌಲಭಯಗಳನ್ನು ಒಂದೆ ಕಡೆಯಲ್ಲೆ ಒದಗಿಸುವ ವ್ಯವಸ್ಥೆಯಿರುವ ಸ್ಥಳವಾಗಿದ್ದು ಇಲ್ಲಿ ಪೂರ್ವ ನಿರ್ಮಾಣ ಹಾಗೂ ನಿರ್ಮಾಣಾನಂತರದ ಕೆಲಸಗಳಿಗೆ ಬೇಕಾಗುವ ಸೌಲಭ್ಯಗಳನ್ನೂ ಒಳಗೊಂಡಿದೆ.

ಚಿತ್ರಕೃಪೆ: Vinayaraj

ಮನಮೋಹಕ ರಚನೆಗಳು!

ಮನಮೋಹಕ ರಚನೆಗಳು!

ಇಲ್ಲಿನ ವಾಸ್ತುಶೈಲಿ, ಹಲವಾರು ವಿಧವಿಧವಾದ ಕಟ್ಟಡಗಳು, ಇತರೆ ರಚನೆಗಳು, ಉದ್ಯಾನಗಳು ಹಾಗೂ ಅರಮನೆಗಳನ್ನು ಕಂಡಾಗ ಯಾರಿಗಾದರೂ ಸರಿ ಒಂದು ಕ್ಷಣ ರೋಮಾಂಚನ ಉಂಟಾಗದೆ ಇರಲಾರದು. ಕೇವಲ ಚಿತ್ರಗಳೇಕೆ ಧಾರಾವಾಹಿಗಳೂ ಸಹ ಪ್ರತಿನಿತ್ಯ ಇಲ್ಲಿ ಚಿತ್ರೀಕರಿಸುತ್ತಿರುತ್ತವೆ.

ಚಿತ್ರಕೃಪೆ: Ankit Kadam

ನಿರ್ಮಾಪಕರ ನೆಚ್ಚಿನ

ನಿರ್ಮಾಪಕರ ನೆಚ್ಚಿನ

ಹೀಗಾಗಿ ಕೇವಲ ದಕ್ಷಿಣ ಭಾರತ ಮಾತ್ರವಲ್ಲ ಹಿಂದಿ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೂ ಸಹ ರಾಮೋಜಿ ಬಲು ನೆಚ್ಚಿನ ಚಿತ್ರನಗರಿಯಾಗಿದೆ. ನಿರ್ದೇಶಕರು ತಮ್ಮ ಬೇಡಿಕೆಗಳಿಗೆ ತಕ್ಕಂತೆ ಇಲ್ಲಿ ಸೆಟ್ಟುಗಳನ್ನು ಹಾಕಿಕೊಳ್ಳಲೂ ಸಹ ಅವಕಾಶವಿದ್ದು ಇದೊಂದು ಉತ್ತಮ ಚಿತ್ರನಗರಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಕೃಪೆ: Ankit Kadam

ಅಬ್ಬಬ್ಬಾ...

ಅಬ್ಬಬ್ಬಾ...

ಏಕಕಾಲಕ್ಕೆ ಸುಮಾರು 50 ಚಿತ್ರೀಕರಣ ಘಟಕಗಳಿಗೆ ಸ್ಥಳಗಳನ್ನು ಒದಗಿಸುವಂತಹ ಸಾಮರ್ಥ್ಯ ಹೊಂದಿರುವ ರಾಮೋಜಿ ಚಿತ್ರನಗರಿಯಲ್ಲಿ ಹಲವು ಅದ್ಭುತ ಸೆಟ್ಟುಗಳನ್ನು ಕಾಣಬಹುದು. ಉದಾಹರಣೆಗೆ ಲಂಡನ್ ನೆನಪಿಸುವ ಬೀದಿಗಳು, ಹಾಲಿವುಡ್ ನ ಪ್ರತಿರೂಪ, ಜಪಾನಿ ಮಾದರಿಯ ಉದ್ಯಾನಗಳು, ಆಸ್ಪತ್ರೆ, ವಿಮಾನನಿಲ್ದಾಣ ಹೀಗೆ ಹತ್ತು ಹಲವು.

ಚಿತ್ರಕೃಪೆ: Joydeep

ಸಂಪೂರ್ಣ ಚಿತ್ರ

ಸಂಪೂರ್ಣ ಚಿತ್ರ

ಈ ಚಿತ್ರನಗರಿಯು ಎಷ್ಟೊಂದು ಸೌಲಭ್ಯಗಳನ್ನು ಒಳಗೊಂಡಿದೆ ಎಂದರೆ ಒಂದು ಚಿತ್ರವನ್ನು ಅದರ ಎಲ್ಲ ಕೆಲಸದ ಸಮೇತವಾಗಿ ಸಂಪೂರ್ಣವಾಗಿ ಇಲ್ಲಿ ತಯಾರಿಸಬಹುದಾಗಿದೆ. ಆ ಕಾರಣದಿಂದಾಗಿಯೆ ಬಹಳಷ್ಟು ನಿರ್ಮಾಪಕ, ನಿರ್ದೇಶಕರ ನೆಚ್ಚಿನ ತಾಣವಾಗಿದೆ ರಾಮೋಜಿ.

ಚಿತ್ರಕೃಪೆ: Joydeep

ಎಲ್ಲ ರಿತಿಯ ಅನುಕೂಲಗಳು!

ಎಲ್ಲ ರಿತಿಯ ಅನುಕೂಲಗಳು!

ಇಂದು ಈ ರಾಮೋಜಿ ಚಿತ್ರನಗರಿ ಕೇವಲ ಚಿತ್ರೀಕರಣಕ್ಕೆ ಮಾತ್ರ ಸಿಮಿತವಾಗಿಲ್ಲ. ಬದಲಾಗಿ ಒಂದು ಆಕರ್ಷಕ ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿಗಳಿಸಿದೆ. ರಾಮೋಜಿ ಆಡಳಿತ ಮಂಡಳಿಯಿಂದಲೆ ಹಲವಾರು ಪ್ರವಾಸಿ ಪ್ಯಾಕೆಜುಗಳು ಇಂದು ಪ್ರವಾಸಿಗರಿಗಾಗಿ ಲಭ್ಯವಿದೆ.

ಚಿತ್ರಕೃಪೆ: Vinayaraj

ಲೈವ್ ಆಗಿ ನೋಡಿ!

ಲೈವ್ ಆಗಿ ನೋಡಿ!

ರಾಮೋಜಿ ಚಿತ್ರನಗರದಲ್ಲಿ ಸುತ್ತುವಿಕೆ, ಉದ್ಯಾನಗಳಲ್ಲಿ ವಿಹರಿಸುವುದು, ವೃತ್ತಿಪರ ಸಾಹಸ ಕಲಾಗಾರರಿಂದ ಅದ್ಭುತ ಸಾಹಸಮಯ ದೃಶ್ಯಗಳನ್ನು ವೀಕ್ಷಿಸುವ ಸೌಲಭ್ಯ, ತಂಗಲು ಮನಸಿದ್ದವರಿಗೆ ಉಳಿಯಲು ಎರಡು ಐಷಾರಾಮಿ ಹೋಟೆಲುಗಳು ಹೀಗೆ ಹಲವಾರು ಸೌಲಭ್ಯಗಳು ಇಂದು ರಾಮೋಜಿ ಚಿತ್ರನಗರಿಯಲ್ಲಿದೆ.

ಚಿತ್ರಕೃಪೆ: Vinayaraj

ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ

ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ

ರಾಮೋಜಿ ಚಿತ್ರನಗರ ಪ್ರತಿ ದಿನ ಸಾರ್ವಜನಿಕರಿಗೆಂದು ಬೆಳಿಗ್ಗೆ ಒಂಭತ್ತು ಘಂಟೆಯಿಂದ ಸಂಜೆ ಐದು ಘಂಟೆಯವರೆಗೂ ತೆರೆದಿರುತ್ತದೆ ಹಾಗೂ ಪ್ರತಿಯೊಬ್ಬರಿಗೂ ಪ್ರವೇಶ ಶುಲ್ಕವನ್ನು ಒಳಗೊಂಡಿದೆ. ಚಿತ್ರನಗರಿಯಲ್ಲಿ ಬೇಕಿದ್ದರೆ ವಿಹರಿಸಲು ಪುರಾತನ ಮಾದರಿಯ ವಾಹನಗಳಿದ್ದು ಅವುಗಳ ಸೇವೆಯನ್ನೂ ಸಹ ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ.

ಚಿತ್ರಕೃಪೆ: Vinayaraj

ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ

ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ

ಅಷ್ಟೆ ಏಕೆ, ನವವಿವಾಹಿತ ದಂಪತಿಗಳ ಪಾಲಿಗೂ ರಾಮೋಜಿ ಚಿತ್ರನಗರಿ ಒಂದು ಸ್ವರ್ಗದಂತೆಯೆ ಇದೆ. ಸುಮಾರಾಗಿ ಚಿತ್ರಗಳಲ್ಲಿ ನೋಡಿದ ಹಾಗೆ ಅದ್ಭುತ ಹಿನ್ನೆಲೆಯ ದೃಶ್ಯಾವಳಿಗಳು, ಪ್ರಶಾಂತ ಹಾಗೂ ಮನಮೋಹಕ ಪರಿಸರದ ನೋಟಗಳನ್ನು ಇಲ್ಲಿ ಕಾಣಬಹುದಾಗಿದ್ದು ದಮ್ಪತಿಗಳು ಮಧುಚಂದ್ರವನ್ನು ಅಹ್ಲಾದಕರವಾಗಿ ಆಚರಿಸಬಹುದಾಗಿದೆ.

ಚಿತ್ರಕೃಪೆ: Vinayaraj

ಎಲ್ಲವೂ ಅಚ್ಚುಕಟ್ಟಾಗಿ!

ಎಲ್ಲವೂ ಅಚ್ಚುಕಟ್ಟಾಗಿ!

ಇಷ್ಟವಿದ್ದವರು ಅಥವಾ ಆರ್ಥಿಕವಾಗಿ ಸಬಲರಾಗಿದ್ದವರು ಇಲ್ಲಿ ಮದುವೆಯಂತಹ ಸಮಾರಂಭಗಳನ್ನೂ ಸಹ ಆಯೋಜಿಸಲು ಅವಕಾಶವಿದೆ. ರಾಮೋಜಿ ಆಡಳಿತ ಮಂಡಳಿಯು ನುರಿತ ವೃತ್ತಿಪರರನ್ನು ಹೊಂದಿದ್ದು ಅವರೆಲ್ಲರೂ ಇಂತಹ ಸಮಾರಂಭಗಳನ್ನು ಬಲು ಅಚ್ಚು ಕಟ್ಟಾಗಿ ನಿಮ್ಮಿಷ್ಟದಂತೆ ನಿರ್ವಹಿಸುತ್ತಾರೆ.

ಚಿತ್ರಕೃಪೆ: Vinayaraj

ಆಕ್ಷನ್

ಆಕ್ಷನ್

ಆಕ್ಷನ್ : ಇದೊಂದು ಇಪ್ಪತ್ತೈದು ನಿಮಿಷಗಳ ಕಾರ್ಯಾಗಾರ ಚಟುವಟಿಕೆಯಾಗಿದ್ದು ಇಲ್ಲಿ ನೀವು ನಿಜ ಜೀವನದಲ್ಲಿ ಚಿತ್ರದ ಎಡಿಟಿಂಗ್ ನಂತಹ ಹಲವಾರು ಕಾರ್ಯಗಳಲ್ಲಿ ಭಾಗವಹಿಸಬಹುದು. ಪ್ರವಾಸಿಗರಿಗೆ ಇದೊಂದು ವಿನೂತನ ಅನುಭವವಾಗಿದೆ.

ಚಿತ್ರಕೃಪೆ: Rameshng

ಫಿಲ್ಮಿ ದುನಿಯಾ

ಫಿಲ್ಮಿ ದುನಿಯಾ

ಫಿಲ್ಮಿ ದುನಿಯಾ : ಎಂಟು ನಿಮಿಷಗಳ ಈ ವಿಡಿಯೋದ ಮೂಲಕ ನೀವು ಜಗತ್ತಿನ ಹಾಗೂ ಸಮಯವನ್ನು ಮೀರಿ ಹಲವಾರು ವಿಶಿಷ್ಟ ಜಗತ್ತಿನ ಕಾಲ್ಪನಿಕ ಸವಾರಿ ಮಾಡುತ್ತೀರಿ. ಪ್ರತಿಯೊಬ್ಬ ಪ್ರವಾಸಿಗನಿಗೂ ಇದೊಂದು ರೋಮಾಂಚನಕಾರಿ ಅನುಭವ.

ಚಿತ್ರಕೃಪೆ: Rameshng

ರಾಮೋಜಿ ಗೋಪುರ

ರಾಮೋಜಿ ಗೋಪುರ

ರಾಮೋಜಿ ಗೋಪುರ. ಇದೊಂದು ಮಿಸ್ ಮಾಡಿಕೊಳ್ಳಲಾಗದಂತಹ ಆಕರ್ಷಣೆ. ಭೂಕಂಪನಗಳು ಉಂಟಾದಾಗ ಅನುಭವ ಯಾವ ರೀತಿ ಇರುತ್ತದೆಂದು ನೈಜವಾಗಿ ಇಲ್ಲಿ ತಿಳಿಯಬಹುದು. ಇದು ಆ ರೀತಿ ಭ್ರ್ಮ ಮೂಡಿಸುವ ಒಂದು ತಂತ್ರ ಮಾತ್ರವೆ ಆಗಿದ್ದು ಯಾವುದೆ ರೀತಿಯ ಹಾನಿ ಉಂಟು ಮಾಡುವುದಿಲ್ಲ.

ಚಿತ್ರಕೃಪೆ: Samruddhi patel

ಯುರೇಕಾ

ಯುರೇಕಾ

ಯುರೇಕಾ : ಪ್ರಾಚೀನ ಭಾರತದ ಸಂಸ್ಕೃತಿ ಸಂಪ್ರದಾಯ ಬಿಂಬಿಸುವ ಕೋಟೆ ಕೊತ್ತಲಗಗಳನ್ನು ಹಿಡಿದು ಇಂದಿನ ಆಧುನಿಕ ಶೈಲಿಯ ದೇವಾಲಯಗಳವರೆಗೂ ಅನೇಕ ಕುತೂಹಲಕರವಾದ ರಚನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಹೀಗೆ ರಾಮೋಜಿ ಇಂದು ಒಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ಸರವರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Pratish Khedekar

ಹಾಲಿವುಡ್

ಹಾಲಿವುಡ್

ಅಂತಾರಾಷ್ಟ್ರೀಯ ಅಥವಾ ಆಂಗ್ಲ ಚಲನಚಿತ್ರಗಳ ತವರಾದ ಹಾಲಿವುಡ್ ನ ಪ್ರಸಿದ್ಧ ಗುಡ್ಡದ ಮೇಲಿನ ಬರಹವನ್ನು ಪ್ರತಿನಿಧಿಸುವ ಮಾದರಿ

ಚಿತ್ರಕೃಪೆ: ShashiBellamkonda

ರೋಮಾಂಚನ

ರೋಮಾಂಚನ

ನಿರ್ದೇಶಕರ ಅಭಿರುಚಿಗಳಿಗೆ ತಕ್ಕಂತೆ ಸನ್ನಿವೇಶಗಳಿಗೆ ಪೂರಕವಾಗಿ ನಿರ್ಮಿಸಲಾದ ಸಾಕಷ್ಟು ವಿಶಿಷ್ಟವಾದ ಸೆಟ್ಟುಗಳಿರುವುದನ್ನು ಕಾಣಬಹುದಿಲ್ಲಿ.

ಚಿತ್ರಕೃಪೆ: ShashiBellamkonda

ನೀಟಾದ ರಸ್ತೆ

ನೀಟಾದ ರಸ್ತೆ

ಇಲ್ಲಿರುವ ರಸ್ತೆ ಬೀದಿಗಳು ಸುಂದರವಾಗಿ ನಿರ್ಮಿಸಲ್ಪಟ್ಟಿದ್ದು ಅಲ್ಲಿನ ಸ್ವಚ್ಛತೆ ಕೆಲವು ವಿದೇಶದ ವಾತಾವರಣವನ್ನು ನೆನಪಿಸುವಂತಿವೆ.

ಚಿತ್ರಕೃಪೆ: Vinayaraj

ಅದ್ಭುತ ಕ್ರಿಯಾತ್ಮಕತೆ

ಅದ್ಭುತ ಕ್ರಿಯಾತ್ಮಕತೆ

ರಾಮೋಜಿ ಚಿತ್ರನಗರದಲಿರುವ ಒಂದು ರಿಫ್ರೆಶ್ಮೆಂಟ್ ಸ್ಟಾಲ್ ಇದು. ಚಹಾದಂತಹ ಪಾನಿಯಗಳು ಇಲ್ಲಿ ದೊರೆಯುತ್ತದೆ.

ಚಿತ್ರಕೃಪೆ: Joydeep

ಫಂದುಸ್ತಾನ್

ಫಂದುಸ್ತಾನ್

ರಾಮೋಜಿ ಚಿತ್ರನಗರದಲ್ಲಿರುವ ಒಂದು ಮಾದರಿ ರೈಲು ನಿಲ್ದಾಣದಲ್ಲಿ ಸಮಯ ಕಳೆಯುತ್ತಿರುವ ಪ್ರವಾಸಿಗರು.

ಚಿತ್ರಕೃಪೆ: Vinayaraj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X