Search
  • Follow NativePlanet
Share
» »ರಾಮನ ಈಶ್ವರ ಭಕ್ತಿ ರಾಮೇಶ್ವರಂನ ಶಕ್ತಿ

ರಾಮನ ಈಶ್ವರ ಭಕ್ತಿ ರಾಮೇಶ್ವರಂನ ಶಕ್ತಿ

By Vijay

ಸಾಮಾನ್ಯವಾಗಿ ಪ್ರತಿಯೊಂದು ಧರ್ಮಗಳಲ್ಲೂ ಹೇಳಿರುವಂತೆ ಹಿಂದೂ ಧರ್ಮದಲ್ಲೂ ಸಹ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭಕ್ತಿ, ಶೃದ್ಧೆಗಳಿಂದ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಂಡರೆ ಸಕಲ ಪಾಪಗಳು ನಶಿಸಿ ಹೋಗುತ್ತವೆ ಹಾಗೂ ಆ ವ್ಯಕ್ತಿ ದೇವರ ಕೃಪಾ ಕಟಾಕ್ಷ ಪಡೆಯುತ್ತಾನೆ ಎಂದು ಹೇಳಲಾಗಿದೆ.

ಅದರಂತೆ ಅನೇಕ ಪುರಾಣ ಪುಣ್ಯಕಥೆಗಳ ಹಿನ್ನಿಲೆಯ ಆಧಾರದ ಮೇಲೆ ಸಾಕಷ್ಟು ಪುಣ್ಯ ಕ್ಷೇತ್ರಗಳು ಭಾರತದ ಬಹುತೇಕ ಎಲ್ಲ ಸ್ಥಳಗಳಲ್ಲೂ ಕಂಡುಬರುತ್ತವೆ. ದಕ್ಷಿಣ ಭಾರತದ ನಿವಾಸಿಗಳಿಗೆ ದೇಶದ ದಕ್ಷಿಣ ಭಾಗದಲ್ಲಿರುವ ರಾಮೇಶ್ವರಂ ಸಹ ಅಷ್ಟೆ ಪವಿತ್ರ ಕ್ಷೇತ್ರವಾಗಿದೆ. ಸ್ವತಃ ರಾಮನೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವನನ್ನು ಆರಾಧಿಸಿದ ಪುಣ್ಯ ಕ್ಷೇತ್ರ ರಾಮೇಶ್ವರಂ.

ವಿಶೇಷ ಲೇಖನ : ಭಾರತದ ಮಹತ್ತರ ತೀರ್ಥ ಕ್ಷೇತ್ರಗಳು

ಮಹಾ ಸೋಮವಾರ : ವಿಮಾನ ಹಾರಾಟಚ್ ದರಗಳ ಮೇಲೆ 2500 ರೂಪಾಯಿಗಳಷ್ಟು ಕಡಿತ ಪಡೆಯಿರಿ!

ಅಷ್ಟೆ ಅಲ್ಲ, ಹಿಂದೂ ಧರ್ಮದಲ್ಲಿ ಪ್ರಸ್ತಾಪಿಸಲಾಗಿರುವ ಶಿವನ ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ರಾಮೇಶ್ವರಂನಲ್ಲಿರುವ ಶಿವಲಿಂಗವು ಒಂದಾಗಿದ್ದು ದೇಶದ ದಕ್ಷಿಣದ ದಿಕ್ಕನ್ನು ಪ್ರತಿನಿಧಿಸುತ್ತದೆ. ರಾಮೇಶ್ವರಂ ತಮಿಳುನಾಡು ರಾಜ್ಯದ ರಾಮನಾಥಪುರಂ ಜಿಲ್ಲೆಯಲ್ಲಿದೆ. ಅದರಲ್ಲೂ ವಿಶೇಷವಾಗಿ ಈ ಕ್ಷೇತ್ರವು ಪಂಬನ್ ನಡುಗಡ್ಡೆಯಲ್ಲಿ ನೆಲೆಸಿದೆ. ಪಂಬನ್ ನಡುಗಡ್ಡೆಯು ಭಾರತ ಮಹಾಭೂಮಿಯಿಂದ ಪ್ರತ್ಯೇಕವಾಗಿದ್ದು ಪಂಬನ್ ಸೇತುವಿನ ಮೂಲಕ ಸಂಪರ್ಕ ಹೊಂದಿದೆ.

ವಿಶೇಷ ಲೇಖನ : 12 ಜ್ಯೋತಿರ್ಲಿಂಗಗಳು ಯಾವುವು?

ಈ ಲೇಖನದ ಮೂಲಕ ರಾಮೇಶ್ವರಂ ಕುರಿತು ಸಾಕಷ್ಟು ಮಾಹಿತಿಯನ್ನು ತಿಳಿಯಿರಿ.

ರಾಮೇಶ್ವರಂ:

ರಾಮೇಶ್ವರಂ:

ರಾಮಾಯಣದ ಸಮಸ್ತ ಚಿತ್ರಣವನ್ನು ಕಣ್ಣ ಮುಂದೆ ತಂಡಿಡುವ ಸ್ಥಳವೇ ತಮಿಳುನಾಡಿನ ರಾಮೇಶ್ವರಂ ಪಟ್ಟಣ. ಇಲ್ಲಿನ ಪ್ರತಿಯೊಂದು ಸ್ಥಳವೂ ರಾಮಾಯಣದ ಸಂಪೂರ್ಣ ಕಥೆಯನ್ನು ವಿವರಿಸುತ್ತವೆ. ರಾಮಾಯಣದ ಕಥೆಗಳನ್ನು ಕೇಳುವುದಕ್ಕಿಂತ ರಾಮನ ನೆಲೆಯಾದ ರಾಮೇಶ್ವರಕ್ಕೊಮ್ಮೆ ಭೇಟಿ ನೀಡುವುದೇ ಸೂಕ್ತ.

ಚಿತ್ರಕೃಪೆ: Tracy Hunter

ರಾಮೇಶ್ವರಂ:

ರಾಮೇಶ್ವರಂ:

ರಾಮೇಶ್ವರಂ, ಎಂದಿಗೂ ನಶಿಸದ ಅಥವಾ ಹಾಳಾಗದ, ಪ್ರಶಾಂತವಾದ, ಪವಿತ್ರ ಪಟ್ಟಣ. ಪ್ರಸಿದ್ಧ ಪಂಬನ್ ಸೇತುವೆಯು ಈ ಪಟ್ಟಣವನ್ನು ದೇಶದ ಇತರ ಭಾಗಗಳೊಂದಿಗೆ ಬೆಸೆಯುತ್ತದೆ. ಶ್ರೀಲಂಕಾದ ಮನ್ನಾರ್ ದ್ವೀಪ ರಾಮೇಶ್ವರದಿಂದ ಕೇವಲ 50 ಕಿ.ಮೀ ದೂರದಲ್ಲಿದೆ!

ಚಿತ್ರಕೃಪೆ: Ashwin Kumar

ರಾಮೇಶ್ವರಂ:

ರಾಮೇಶ್ವರಂ:

ರಾಮೇಶ್ವರಂ ಅನ್ನು ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಈ ಸ್ಥಳಕ್ಕೆ 'ಚಾರ್ ಧಾಮ್ ಯಾತ್ರಾ' ಅಥವಾ ಪವಿತ್ರ ಯಾತ್ರೆಯ ಸಂದರ್ಭದಲ್ಲಿ ಭೇಟಿ ನೀಡಲೇ ಬೇಕು.

ಚಿತ್ರಕೃಪೆ: ASIM CHAUDHURI

ರಾಮೇಶ್ವರಂ:

ರಾಮೇಶ್ವರಂ:

ಪುರಾಣಗಳ ಪ್ರಕಾರ, ಶ್ರೀ ಮಹಾವಿಷ್ಣುವಿನ ಏಳನೇ ಅವತಾರ ಎಂದು ಕರೆಯಲ್ಪಡುವ ಶ್ರೀ ರಾಮನು, ಲಂಕಾಧೀಶ ರಾವಣನಿಂದ ಅಪಹರಿಸಲ್ಪಟ್ಟ ತನ್ನ ಪತ್ನಿ ಸೀತಾ ಮಾತೆಯ ರಕ್ಷಣೆಗಾಗಿ ಶ್ರೀ ಲಂಕಾಕ್ಕೆ ಸೇತುವೆಯನ್ನು ನಿರ್ಮಿಸಿದ್ದನು. ಈ ಸ್ಥಳವನ್ನೇ ರಾಮೇಶ್ವರ ಎನ್ನಲಾಗುತ್ತದೆ.

ಚಿತ್ರಕೃಪೆ: BOMBMAN

ರಾಮೇಶ್ವರಂ:

ರಾಮೇಶ್ವರಂ:

ಈ ಕ್ಷೇತ್ರದ ಕುರಿತು ಎರಡು ದಂತಕಥೆಗಳಿವೆ. ಮೊದಲನೇಯ ಕಥೆ ಪ್ರಕಾರ, ರಾಮನು ಲಂಕೆಯ ದೊರೆ ರಾವಣನನ್ನು ವಧಿಸಿ ತನ್ನ ಮಾತೃ ಭೂಮಿಗೆ ಕಾಲಿಟ್ಟಾಗ ಬ್ರಾಹ್ಮಣನನ್ನು ವಧಿಸಿದ ಕಾರ್ಯದ ಪರಿಹಾರಾರ್ಥವಾಗಿ ಸ್ವತಃ ಆತನೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವನನ್ನು ಕುರಿತು ಪೂಜಿಸುತ್ತಾನೆ ಹಾಗೂ ಶಿವನು ಇಲ್ಲಿ ನಿರಂತರವಾಗಿ ವಾಸಿಸಲು ಪ್ರಾರ್ಥಿಸುತ್ತಾನೆ. ರಾಮನು ಈಶ್ವರನನ್ನು ಪೂಜಿಸಿದುದರಿಂದ ಕ್ರಮೇಣವಾಗಿ ಇದಕ್ಕೆ ರಾಮೇಶವರಂ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ.

ಚಿತ್ರಕೃಪೆ: tlongacre

ರಾಮೇಶ್ವರಂ:

ರಾಮೇಶ್ವರಂ:

ಇನ್ನೊಂದು ದಂತಕಥೆಯ ಪ್ರಕಾರ, ರಾಮನು ಯುದ್ಧಕ್ಕೆ ತೆರಳುವ ಸಂದರ್ಭದಲ್ಲಿ ಈ ಸ್ಥಳಕ್ಕೆ ಆಗಮಿಸುತ್ತಾನೆ. ಕಡಲ ತೀರದಲ್ಲಿ ನೀರನ್ನು ಸೇವಿಸುವಾಗ "ನನ್ನನ್ನು ಪೂಜಿಸದೆಯೆ ನೀರನ್ನು ಕುಡಿಯುತ್ತಿರುವೆ" ಎಂಬ ಆಕಾಶವಾಣಿಯುಂಟಾಗುತ್ತದೆ. ಇದರ ತಿರಳನ್ನರಿತ ರಾಮನು ಮರಳಿನಿಂದ ಶಿವಲಿಂಗ ಸ್ಥಾಪಿಸಿ ಶಿವನನ್ನು ಪೂಜಿಸುತ್ತಾನೆ ಎಂದು ಹೇಳುತ್ತದೆ.

ಚಿತ್ರಕೃಪೆ: wishvam

ರಾಮೇಶ್ವರಂ:

ರಾಮೇಶ್ವರಂ:

ಶ್ರೀ ರಾಮನನ್ನು ಪೂಜಿಸಲ್ಪಡುವ ರಾಮನಾಥಸ್ವಾಮಿ ದೇವಾಲಯ ನಗರದ ಕೇಂದ್ರ ಭಾಗದಲ್ಲಿದೆ. ಪ್ರತಿವರ್ಷ, ಶ್ರೀ ರಾಮನಿಗೆ ಸೇವೆ ಸಲ್ಲಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಲು ಲಕ್ಷಾಂತರ ಜನ ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೇ ರಾಮೇಶ್ವರಂ ಸ್ಥಳ ಭಗವಾನ್ ರಾಮನು ತನ್ನ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ನಿರ್ಧರಿಸಿದ ಸ್ಥಳ ಎಂದೂ ಹೇಳಲಾಗುತ್ತದೆ. ಆದ್ದರಿಂದ ಲಕ್ಷಾಂತರ ಭಕ್ತಾದಿಗಳು ತಮ್ಮ ಪಾಪ ಕೃತ್ಯಗಳ ಪ್ರಾಯಶ್ಚಿತ ಮಾಡಿಕೊಳ್ಳುವ ಉದ್ದೇಶದಿಂದಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Mathanagopal

ರಾಮೇಶ್ವರಂ:

ರಾಮೇಶ್ವರಂ:

ಇನ್ನು ಐತಿಹಾಸಿಕವಾಗಿ ಗಮನಿಸಿದಾಗ ರಾಮೇಶ್ವರಂ ಭಾರತದ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಬೇರೆ ದೇಶಗಳೊಂದಿಗಿನ ವ್ಯಾಪಾರ ಸಂಬಂಧದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದ್ವೀಪವು ಅಂದಿನ ಸಿಲೋನ್ ಇಂದಿನ ಶ್ರೀಲಂಕಾಕ್ಕೆ ಪ್ರಯಾಣಿಸುವವರ ತಂಗುವ ಘಟ್ಟವಾಗಿತ್ತು.

ಚಿತ್ರಕೃಪೆ: M.Mutta

ರಾಮೇಶ್ವರಂ:

ರಾಮೇಶ್ವರಂ:

ಜಾಫ್ನಾ ರಾಜವಂಶವು, ಈ ನಗರದ ಮೇಲೆ ತನ್ನ ಪ್ರಭುತ್ವ ಸಾಧಿಸಿತ್ತು ಹಾಗೂ ಜಾಫ್ನಾ ರಾಜಮನೆತನ ತಮ್ಮನ್ನು ತಾವು ಸೇತುಕಲವನ್ ಅಥವಾ ರಾಮೇಶ್ವರಂ ನ ಉಸ್ತುವಾರಿ ನೋಡಿಕೊಳ್ಳುವವರು ಎಂದು ಕರೆದುಕೊಂಡಿದ್ದರು. ಅಲ್ಲದೇ ದೆಹಲಿಯ ಖಿಲ್ಜಿ ವಂಶವೂ ಕೂಡ ರಾಮೇಶ್ವರದ ಇತಿಹಾಸದೊಂದಿಗೆ ಬೆರೆತಿದೆ.

ಚಿತ್ರಕೃಪೆ: M.Mutta

ರಾಮೇಶ್ವರಂ:

ರಾಮೇಶ್ವರಂ:

16 ನೇ ಶತಮಾನದಿಂದ 1795 ರ ವರೆಗೆ ಅಂದರೆ, ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ರಾಮೇಶ್ವರವನ್ನು ವಶಕ್ಕೆ ತೆಗೆದುಕೊಳ್ಳುವವರೆಗೂ ರಾಮೇಶ್ವರ ವಿಜಯನಗರದ ರಾಜರ ಆಡಳಿತಕ್ಕೊಳಪಟ್ಟಿತ್ತು. ಅಂದಿನ ಅನೇಕ ಸಂಸ್ಕೃತಿಗಳ ಒಳಹರಿವು ಇನ್ನೂ ಸ್ಥಳೀಯ ಜನರ ದೈನಂದಿನ ಸಂಪ್ರದಾಯಗಳಲ್ಲಿ ಅಲ್ಲದೆ ಕಟ್ಟಡಗಳ ವಾಸ್ತುಶಿಲ್ಪಗಳಲ್ಲಿ ಕಾಣಬಹುದು.

ಚಿತ್ರಕೃಪೆ: Nsmohan

ರಾಮೇಶ್ವರಂ:

ರಾಮೇಶ್ವರಂ:

ಪ್ರಮುಖವಾಗಿ ಶಿವ ಹಾಗೂ ವಿಷ್ಣುವಿಗೆ ಮುಡಿಪಾದ ಹಲವಾರು ದೇವಾಲಯಗಳು, ಪವಿತ್ರತೆಯನ್ನು ಹೊಂದಿರುವ ಇಂದಿಗೂ ಇರುವ ತೀರ್ಥಗಳು ರಾಮೇಶ್ವರಂ ಜನಪ್ರೀಯತೆಗೆ ಬಹು ಮುಖ್ಯವಾದ ಕಾರಣಗಳಾಗಿವೆ.

ಚಿತ್ರಕೃಪೆ: tlongacre

ರಾಮೇಶ್ವರಂ:

ರಾಮೇಶ್ವರಂ:

ರಾಮೇಶ್ವರದಲ್ಲಿ ಸುಮಾರು 64 ತೀರ್ಥಗಳು ಅಥವಾ ಪವಿತ್ರ ನೀರು ಕಂಡುಬರುವ ಸ್ಥಳಗಳನ್ನು ಕಾಣಬಹುದು. ಇವುಗಳಲ್ಲಿ, 24 ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು, ಎಂದು ಈ ನೀರಿನಲ್ಲಿ ಸ್ನಾನ ಮಾಡಿದರೆ ಪಾಪಗಳನ್ನು ತೊಡೆದುಹಾಕುತ್ತವೆ ಎಂದು ನಂಬಲಾಗಿದೆ. ಅಗ್ನಿ ತೀರ್ಥ.

ಚಿತ್ರಕೃಪೆ: Nsmohan

ರಾಮೇಶ್ವರಂ:

ರಾಮೇಶ್ವರಂ:

ಪಾಪಗಳನ್ನು ತೊಳೆಯುವ ಈ ನೀರಿನ ಮೂಲಕ ಮೋಕ್ಷ ಪಡೆಯಬಹುದು ಎಂಬ ಕಾರಣಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿದ ಯಾವುದೆ ಭಕ್ತನು ನೀರಿನಲ್ಲಿ ಸ್ನಾನ ಮಾಡದೇ ಹಿಂತಿರುಗಲಾರ. ವಾಸ್ತವವಾಗಿ, ಎಲ್ಲಾ 24 ತೀರ್ಥಗಳ ಸ್ನಾನ ಸ್ವತಃ ಪ್ರಾಯಶ್ಚಿತ ನೀಡುವ ಜಲ ಎಂದು ಪರಿಗಣಿಸಲಾಗುತ್ತದೆ.

ಚಿತ್ರಕೃಪೆ: Tamil1510

ರಾಮೇಶ್ವರಂ:

ರಾಮೇಶ್ವರಂ:

ರಾಮೇಶ್ವರದಲ್ಲಿ, ಹಿಂದೂಗಳಿಗೆ ಧಾರ್ಮಿಕ ಮಹತ್ವ ಹೊಂದಿರುವ ಅನೇಕ ಸ್ಥಳಗಳಿವೆ. ಅವುಗಳಲ್ಲಿ ಕೆಲವು ಶ್ರೀ ರಾಮನಾಥಸ್ವಾಮಿ ದೇವಸ್ಥಾನ, 24 ದೇವಾಲಯ ತೀರ್ಥಗಳು, ಕೋದಂಡರಾಮ ದೇವಾಲಯ, ಆಡಂ ಸೇತುವೆ ಅಥವಾ ರಾಮ ಸೇತು, ಮತ್ತು ನಂಬು ನಾಯಾಗಿ ಅಮ್ಮನ್ ದೇವಾಲಯ ಮೊದಲಾದವುಗಳು.

ಚಿತ್ರಕೃಪೆ: tlongacre

ರಾಮೇಶ್ವರಂ:

ರಾಮೇಶ್ವರಂ:

ಅಗ್ನಿ ತೀರ್ಥಂ, ಶ್ರೀ ರಾಮನಾಥಸ್ವಾಮಿ ದೇವಾಲಯದ ಆವರಣದ ಹೊರಗೆ ನೆಲೆಗೊಂಡಿರುವ ಮೊದಲ ನೀರಿನ ಮೂಲ. ಈ ತೀರ್ಥಂ ಸಮುದ್ರದ ಒಂದು ಮೂಲೆಯಲ್ಲಿ ನೆಲೆಗೊಂಡಿದೆ. ಭಗವಾನ್ ರಾಮ, ಲಂಕಾ ರಾಜ ರಾವಣನನ್ನು ಕೊಂದ ನಂತರ ಸಮುದ್ರದ ಈ ಭಾಗದಲ್ಲಿ ಸ್ನಾನ ಮಾಡಿದ್ದನು ಎಂಬ ಪ್ರತೀತಿಯಿದೆ. ಈ ತೀರ್ಥದಲ್ಲಿ ಸ್ನಾನ ಮಾಡಿ ತಮ್ಮ ಐಹಿಕ ಪಾಪಗಳನ್ನು ವ್ಯಕ್ತಿಯು ತೊಳೆದುಕೊಳ್ಳಬಹುದು ಎಂಬ ನಂಬಿಕೆಗೆ ಇದೂ ಒಂದು ಕಾರಣ. ರಾಮೇಶ್ವರದ ಕಡೆಗೆ ತೀರ್ಥಯಾತ್ರೆ ಹೋಗುವ ಪ್ರತಿ ಯಾತ್ರಿಗಳೂ ಅಗ್ನಿ ತೀರ್ಥಂ ನಲ್ಲೇ ಮೊದಲ ಸ್ನಾನದ ನಂತರ ಯಾತ್ರೆಯನ್ನು ಆರಂಭಿಸ್ತಾರೆ.

ಚಿತ್ರಕೃಪೆ: Vrajacand4rika dd

ರಾಮೇಶ್ವರಂ:

ರಾಮೇಶ್ವರಂ:

ಪಲಕ್ ಕೊಲ್ಲಿಯ ಒಂದು ಬದಿಯಲ್ಲಿರುವ ಅರಿಯಮ್ಮನ್ ಕಡಲತೀರ, ಇಲ್ಲಿನ ಅಚ್ಚುಕಟ್ಟು ಮತ್ತು ಸ್ವಚ್ಛತೆಯಿಂದಾಗಿ ಪ್ರವಾಸಿಗರ ನಡುವೆ ಜನಪ್ರಿಯವಾಗಿದೆ. ಸ್ಥಳೀಯರ ನಡುವೆ ಪಿಕ್ನಿಕ್ ತಾಣವಾಗಿದ್ದು ರಾಮೇಶ್ವರದ ಜನರಿಗೆ ಮನರಂಜನೆಯ ಮೂಲವಾಗಿದೆ. ವಾಸ್ತವವಾಗಿ ಹೇಳುವುದಾದರೆ, ಹತ್ತಿರದ ಜಿಲ್ಲೆಗಳಿಂದ ಸಾಕಷ್ಟು ಜನರು ವಾರಾಂತ್ಯಗಳಲ್ಲಿ ಈ ಬೀಚ್ ಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: ramnad.tn.nic.in

ರಾಮೇಶ್ವರಂ:

ರಾಮೇಶ್ವರಂ:

ಕೋದಂಡರಾಮ ದೇವಾಲಯ ರಾಮೇಶ್ವರದಲ್ಲಿದ್ದು ಐತಿಹಾಸಿಕ ಜೊತೆಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದೇವಾಲಯವು ಶ್ರೀ ರಾಮನು ರಾವಣನನ್ನು ಕೊಂದ ನಂತರ ವಿಭೀಷಣನನ್ನು ಲಂಕಾಧಿಪತಿಯನ್ನಾಗಿ ಮಾಡಿದ ಸ್ಥಳ ಎಂಬ ನಂಬಿಕೆಯಿದೆ. ದೇವಾಲಯದ ಗೋಡೆಗಳ ಮೇಲಿರುವ ವರ್ಣಚಿತ್ರಗಳು ವಿಭೀಷಣನ ಪಟ್ಟಾಭಿಷೇಕದ ಪುರಾವೆಗಳನ್ನು ಒದಗಿಸುತ್ತವೆ.

ಚಿತ್ರಕೃಪೆ: Nsmohan

ರಾಮೇಶ್ವರಂ:

ರಾಮೇಶ್ವರಂ:

ಅನ್ನೈ ಇಂದಿರಾ ಗಾಂಧಿ ರಸ್ತೆ ಸೇತುವೆ, ಪಂಬನ್ ಸೇತುವೆಗೆ ನೀಡಿದ ಅಧಿಕೃತ ಹೆಸರು. ಈ ಸೇತುವೆಯ ವಿಶೇಷತೆಯೆಂದರೆ ಇದು ಪಲ್ಕ್ ಸ್ಟ್ರೈಟ್ / ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಕ್ಯಾಂಟಿಲಿವರ್ ಬ್ರಿಡ್ಜ್ ಆಗಿದೆ. ಈ ಸೇತುವೆ ರಾಮೇಶ್ವರಂ ಅನ್ನು ಭಾರತ ದೇಶದ ಮಹಾಭೂಮಿಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಸೇತುವೆಯು ವಿಶಿಷ್ಟವಾಗಿದ್ದು ಸಮುದ್ರದ ಮೇಲೆ ನಿರ್ಮಾಣ ಮಾಡಲಾಗಿರುವ ಈ ರೀತಿಯ ಸೇತುವೆಗಳಲ್ಲಿ ಮೊದಲನೆಯದಾಗಿದೆ. ಇದು 2.3 ಕಿ. ಮೀ ಉದ್ದವನ್ನು ಹೊಂದಿರುವ ದೇಶದ ಎರಡನೇ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ.

ಚಿತ್ರಕೃಪೆ: Ashwin Kumar

ರಾಮೇಶ್ವರಂ:

ರಾಮೇಶ್ವರಂ:

ಶ್ರೀ ರಾಮನಾಥಸ್ವಾಮಿ ದೇವಾಲಯ ರಾಮೇಶ್ವರದ ಜನಪ್ರಿಯತೆಯ ಕಾರಣಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ದೇವಸ್ಥಾನವಾಗಿರದೆ ಒಂದು ಪಟ್ಟಣದ ಇತಿಹಾಸದಲ್ಲಿ ಹೆಗ್ಗುರುತು, ಮತ್ತು ಬಹುಶಃ ದೇವಾಲಯದವು ರಾಮೇಶ್ವರದ ಬಲ ಕೇಂದ್ರದಲ್ಲಿ ನೆಲೆಗೊಂಡಿದ್ದೂ ಇನ್ನೊಂದು ಕಾರಣ. ಈ ದೇವಸ್ಥಾನ ಶಿವನಿಗೆ ಮೀಸಲಾಗಿದ್ದು, ಪ್ರತಿ ವರ್ಷ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇದು ದೇಶದಲ್ಲಿ ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ಎಡಿಟ್ ಮಾಡಲಾದ ರಾಮನಾಥ ಸ್ವಾಮಿ ದೇವಸ್ಥಾನದ ಚಿತ್ರ.

ಚಿತ್ರಕೃಪೆ: RJ Rituraj

ರಾಮೇಶ್ವರಂ:

ರಾಮೇಶ್ವರಂ:

ಜಡ ತೀರ್ಥಂ ಧನುಷ್ಕೋಡಿ ಹೋಗುವ ದಾರಿಯಲ್ಲಿ ರಾಮೇಶ್ವರದವರೆಗೆ 3.5 ಕಿಮೀ ದೂರದಲ್ಲಿದೆ. ಧನುಷ್ಕೋಡಿಯಲ್ಲಿ ಪವಿತ್ರ ಸ್ನಾನ ಮಾಡುಲು ಹೋಗುವ ಅನೇಕ ಪ್ರವಾಸಿಗರು ಹಾಗೆಯೇ ಜಡ ತೀರ್ಥಂ ನಲ್ಲಿಯೂ ಪವಿತ್ರ ಸ್ನಾನ ಮಾಡುತ್ತಾರೆ. ರಾಮನು ಇಲ್ಲಿ ಒಂದು ಲಿಂಗವನ್ನು ತಯಾರಿಸಿ ಅದನ್ನು ಪೂಜಿಸಿದ್ದನು. ಲಿಂಗವನ್ನು ಶ್ರೀ ರಾಮಲಿಂಗ ಎಂದೇ ಕರೆಯಲಾಗುತ್ತದೆ. ಶ್ರೀ ರಾಮನೂ ಕೂಡ ಬ್ರಾಹ್ಮಣನನ್ನು ಕೊಂದಿದ್ದ ಪಾಪದಿಂದ ತನ್ನನ್ನು ಬಿಡುಗಡೆ ಗೊಳಿಸಿಕೊಳ್ಳುವ ಸಲುವಾಗಿ ನೀರಿನಲ್ಲಿ ತನ್ನ 'ಜಡ' ಅಥವಾ ಕೂದಲನ್ನು ತೊಳೆದುಕೊಂಡನು.

ಚಿತ್ರಕೃಪೆ: ramnad.tn.nic.in

ರಾಮೇಶ್ವರಂ:

ರಾಮೇಶ್ವರಂ:

ಧನುಷ್ಕೋಡಿ, ರಾಮೇಶ್ವರ ದ್ವೀಪದಲ್ಲಿ ನೆಲೆಸಿರುವ ಒಂದು ಸಣ್ಣ ಹಳ್ಳಿ (ಈಗ ಪಟ್ಟಣ ಪ್ರಾಮುಖ್ಯತೆಯನ್ನು ತೆಗೆದುಕೊಂಡಿದೆ) ಯಾಗಿದೆ. ಹಳ್ಳಿಯ ಪೂರ್ವ ಕರಾವಳಿಯ ದ್ವೀಪದ ದಕ್ಷಿಣ ಅತ್ಯಂತ ತುದಿಯಲ್ಲಿದೆ. ಈ ಹಳ್ಳಿಯು ಶ್ರೀಲಂಕಾದ ತಲೈಮನ್ನಾರ್ ನಿಂದ ಕೇವಲ 31 ಕಿ. ಮೀ ಅಂತರದಲ್ಲಿದೆ. ಒಂದು ದಂತಕಥೆಯ ಪ್ರಕಾರ, ರಾವಣನ ಸಹೋದರ ವಿಭೀಷಣ, ಸೇತುವನ್ನು ಮುರಿಯಲು ರಾಮನನ್ನು ಕೇಳಿದಾಗ, ರಾಮ ತನ್ನ 'ಧನುಷ್' ಅಥವಾ ಬಿಲ್ಲಿನಿಂದ ಸೇತುವನ್ನು ಮುರಿದನು. ಆನಂತರ ಸ್ಥಳದ ಹೆಸರು ಈ ದಂತಕಥೆಯ ಮೂಲಕ ಹುಟ್ಟಿಕೊಂಡಿತು. ವಾಸ್ತವವಾಗಿ, ಬಹುಶಃ ರಾಮನ ನಾಯಕತ್ವದಲ್ಲಿ ಶ್ರೀಲಂಕಾದವರೆಗೆ ನಿರ್ಮಿಸಲಾದ ಸೇತುವೆಯ ಅವಶೇಷಗಳಾದ ಬಂಡೆಗಳು ಮತ್ತು ದ್ವೀಪಗಳನ್ನು ಇಂದಿಗೂ ಕಾಣಬಹುದು.

ಚಿತ್ರಕೃಪೆ: M.Mutta

ರಾಮೇಶ್ವರಂ:

ರಾಮೇಶ್ವರಂ:

ಈ ಸೇತುವೆಯನ್ನು ಇನ್ನೂ ರಾಮನ ಸೇತುವೆ ಎಂದೇ ಕರೆಯಲಾಗುತ್ತದೆ. ಈ ಸೇತುವೆಯಲ್ಲಿ ಹುಟ್ಟಿದ ನೀರು ಪವಿತ್ರವಾಗಿದ್ದು ಮತ್ತು ಯಾತ್ರಿಕರು ರಾಮೇಶ್ವರದ ತಮ್ಮ ತೀರ್ಥಯಾತ್ರೆ ಪ್ರಾರಂಭಿಸುವ ಮೊದಲು ಇಲ್ಲಿ ಸ್ನಾನ ಮಾಡುತ್ತಾರೆ. ಹಲವರು ಕಾಶಿಗೆ ತೀರ್ಥಯಾತ್ರೆಗೆ ಹೋಗುವ ಯಾತ್ರಿಗಳು ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಲು ಧನುಷ್ಕೋಡಿಯಲ್ಲಿ ಸ್ನಾನ ಮಾಡಲು ಬರುತ್ತಾರೆ.

ಚಿತ್ರಕೃಪೆ: Nsmohan

ರಾಮೇಶ್ವರಂ:

ರಾಮೇಶ್ವರಂ:

ಚಿತ್ರದಲ್ಲಿರುವುದು ಲಕ್ಷ್ಮಣ ತೀರ್ಥ. ರಾಮೇಶ್ವರಂ ಪಂಬನ ರಸ್ತೆಯ ಮೇಲೆ ಈ ತೀರ್ಥವನ್ನು ಕಾಣಬಹುದು. ಇದರ ಮಹತ್ವವೆಂದರೆ ಬಲರಾಮನು ಇಲ್ಲಿ ಸ್ನಾನ ಮಾಡಿ ಬ್ರಹ್ಮಹತ್ಯೆಯ ಪಾಪದಿಂದ ಮುಕ್ತಿ ಪಡೆದಿದ್ದನು.

ಚಿತ್ರಕೃಪೆ: poobesh a.k.a ECTOTHERMS lakshman

ರಾಮೇಶ್ವರಂ:

ರಾಮೇಶ್ವರಂ:

ರಾಮಾಯಣದ ಪ್ರಕಾರ, ರಾಮ ಸೇತುವೆ ನಿರ್ಮಿಸಲು ತೇಲುವ ಕಲ್ಲುಗಳನ್ನು ಬಳಸಲಾಗುತ್ತದೆ. (ಕಥೆಯ ಪ್ರಕಾರ, ಆ ಕಲ್ಲುಗಳ ಮೇಲೆ ಜೈ ಶ್ರೀ ರಾಮ ಎಂದು ಬರೆದಾಗ ಕಲ್ಲುಗಳು ತೇಲತೊಡಗುತ್ತವೆ). ಧನುಷ್ಕೊಡಿಯಲ್ಲಿರುವ ಅಂತಹ ಒಂದು ತೇಲುವ ಕಲ್ಲು.

ಚಿತ್ರಕೃಪೆ: Arunkumarbalakrishnan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X