Search
  • Follow NativePlanet
Share
» »ಕಾವೇರಿ ತೀರದಲ್ಲಿರುವ ಈ ಗಾಯತ್ರಿ ಶಿಲೆಯೊಳಗೆ ನುಸುಳಿದರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತಂತೆ

ಕಾವೇರಿ ತೀರದಲ್ಲಿರುವ ಈ ಗಾಯತ್ರಿ ಶಿಲೆಯೊಳಗೆ ನುಸುಳಿದರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತಂತೆ

ಹಾಸನ ಜಿಲ್ಲೆಯಲ್ಲಿರುವ ರಾಮನಾಥ ಪುರದಲ್ಲಿರುವ ಕಾವೇರಿ ನದಿಯಲ್ಲಿ ಇದೆ ಈ ಗಾಯತ್ರಿ ಶಿಲೆ. ಈ ಗಾಯತ್ರಿ ಶಿಲೆಯು ರಾಮನಾಥಪುರದಲ್ಲಿದೆ.

ರಾಮೇಶ್ವರ ಕ್ಷೇತ್ರದ ಬಳಿ ಇರುವ ಈ ವಿಶೇಷ ಬಂಡೆಕಲ್ಲಿನ ಅಡಿಯಲ್ಲಿ ನುಸುಳಿದರೆ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದಂತೆ. ಅದಕ್ಕಾಗಿ ಅನೇಕ ಭಕ್ತರು ಈ ಗಾಯತ್ರಿ ಶಿಲೆಯ ಅಡಿಯಲ್ಲಿ ನುಸುಳುತ್ತಾರೆ. ರಾಮೇಶ್ವರ ಕ್ಷೇತ್ರ ಅಂದರೆ ಎಲ್ಲಿ ಅಂತ ಯೋಚಿಸಬೇಡಿ. ಅಂತಹ ಚಮತ್ಕಾರಿ ಶಿಲೆ ಇರುವುದು ನಮ್ಮ ಕರ್ನಾಟಕದಲ್ಲೇ.

ಎಲ್ಲಿದೆ ಈ ವಿಶೇಷ ತಾಣ

ಎಲ್ಲಿದೆ ಈ ವಿಶೇಷ ತಾಣ

PC: youtube
ಹಾಸನ ಜಿಲ್ಲೆಯಲ್ಲಿರುವ ರಾಮನಾಥ ಪುರದಲ್ಲಿರುವ ಕಾವೇರಿ ನದಿಯಲ್ಲಿ ಇದೆ ಈ ಗಾಯತ್ರಿ ಶಿಲೆ. ಈ ಗಾಯತ್ರಿ ಶಿಲೆಯು ರಾಮನಾಥಪುರದಲ್ಲಿದೆ. ರಾಮನಾಥಪುರ ಗ್ರಾಮವು ಕರ್ನಾಟಕದ ಹಾಸನ ಜಿಲ್ಲೆಯ ಅರಕಲಗೂಡು ತೆಹಸಿಲ್‌ನಲ್ಲಿದೆ. ಇದು ಜಿಲ್ಲೆಯ ಜಿಲ್ಲಾ ಕೇಂದ್ರ ಕಾರ್ಯಾಲಯ ಅರಕಲಗೂಡುನಿಂದ 20 ಕಿ.ಮೀ ದೂರದಲ್ಲಿದೆ ಮತ್ತು ಜಿಲ್ಲೆಯ ಪ್ರಧಾನ ಕೇಂದ್ರವಾದ ಹಾಸನದಿಂದ 60 ಕಿ.ಮೀ ದೂರದಲ್ಲಿದೆ.

ಶುಕ್ರಾಚಾರ್ಯರು ತಪಸ್ಸು ಮಾಡುತ್ತಿದ್ದ ಸ್ಥಳ

ಶುಕ್ರಾಚಾರ್ಯರು ತಪಸ್ಸು ಮಾಡುತ್ತಿದ್ದ ಸ್ಥಳ

PC:youtube
ಶುಕ್ರಾಚಾರ್ಯರು ಈ ಗಾಯತ್ರಿ ಶಿಲೆಯಲ್ಲಿ ತಪಸ್ಸು ಮಾಡುತ್ತಿದ್ದಾಗ ಇಂದ್ರನು ಶುಕ್ರಾಚಾರ್ಯರ ತಪಸ್ಸನ್ನು ಭಂಗ ಮಾಡಲು ಸ್ತ್ರೀರೂಪದಲ್ಲಿ ಕಾಮದೇನನ್ನು ಕಳುಹಿಸುತ್ತಾನೆ. ತಪೋಭಂಗವಾದ ಶುಕ್ರಾಚಾರ್ಯ ಕೋಪಗೊಂಡು ಕಲ್ಲಾಗಿ ಬಿಡುವಂತೆ ಆ ಸ್ತ್ರೀಗೆ ಶಾಪ ನೀಡುತ್ತಾರೆ. ಹಾಗೆ ಕಲ್ಲಾದ ಕಾಮಧೇನುವೇ ಗಾಯತ್ರಿ ಶಿಲೆಯಲ್ಲಿ ಕಾಣಲ್ಪಡುವ ಗೋಗರ್ಭ ಕಲ್ಲು ಎನ್ನಲಾಗುತ್ತದೆ.

ಕಾಮದೇನುವಿಗೆ ಶಾಪ ವಿಮೋಚನೆ

ಕಾಮದೇನುವಿಗೆ ಶಾಪ ವಿಮೋಚನೆ

PC:youtube
ಶ್ರೀರಾಮ ಚಂದ್ರ ನುಸುಳಿದ ನಂತರ ಕಾಮದೇನುವಿಗೆ ಶಾಪ ವಿಮೋಚನೆಯಾಯಿತು ಎನ್ನಲಾಗುತ್ತದೆ. ವಿಶೇಷ ಶಕ್ತಿಯನ್ನು ಪಡೆಯಿತು ಎನ್ನಲಾಗುತ್ತದೆ. ಪ್ರೇತಬಾಧೆ ಹಾಗೂ ನಾನಾ ಸಮಸ್ಯೆ ಇರುವ ಜನರು ಈ ಗೋಗರ್ಭ ಕಲ್ಲಿನ ಒಳಗಿನಿಂದ ನುಸುಳುತ್ತಾರೆ. ಈ ಕಲ್ಲಿನೊಳಗೆ ನುಸುಳಿದ ಜನರ ಸಮಸ್ಯೆ ಪರಿಹಾರವಾದ, ಇಚ್ಛೆಗಳು ಈಡೇರಿರುವಂತಹ ಹಲವಾರು ಸಾಕ್ಷಿ ಇಲ್ಲಿದೆ.

ಬಂಗಾರದ ಶಿಲೆಯಾಗಿದ್ದ ಕಲ್ಲು

ಬಂಗಾರದ ಶಿಲೆಯಾಗಿದ್ದ ಕಲ್ಲು

PC:youtube
ಇದು ಬಂಗಾರದ ಶಿಲೆಯಾಗಿದ್ದ ಈ ಕಲ್ಲು ಮನುಷ್ಯನ ಅತೀ ಆಸೆಯಿಂದಾಗಿ ಕಲ್ಲಾಗಿ ಕಾಣಲಾರರಂಭಿಸಿತು. ಆದರೆ ಪ್ರಾಣಿ ಪಕ್ಷಿಗಳಿಗೆ ಇವು ಬಂಗಾರದ ಕಲ್ಲಾಗಿಯೇ ಕಾಣಿಸುತ್ತವಂತೆ. ಹಾಗಾಗಿ ಅಕ್ಕ ಪಕ್ಕದಲ್ಲಿರುವ ಎಲ್ಲಾ ಕಲ್ಲಿನ ಮೇಲೆ ಮಲ ಮೂತ್ರ ವಿಸರ್ಜಿಸುವ ಪಕ್ಷಿಗಳು ಈ ಕಲ್ಲಿನ ಮೇಲೆ ಮಲ ಮೂತ್ರ ವಿಸರ್ಜಿಸೋದಿಲ್ಲವಂತೆ.

ಉದ್ಭವ ಶಿವಲಿಂಗ

ಉದ್ಭವ ಶಿವಲಿಂಗ

PC:youtube
ಶಿವನು ರಾಮನಿಗೆ ದರ್ಶನ ನೀಡಿದ ಕಾರಣದಿಂದ ರಾಮನಾಥ ಪುರ ಎನ್ನುವ ಹೆಸರು ಬಂದಿದೆ. ರಾಮನಿಗೆ ದರ್ಶನ ನೀಡಿದ ಸ್ಥಳದಲ್ಲಿ ಒಂದು ಶಿವಲಿಂಗ ಉದ್ಭವವಾಯಿತು. ಆ ಸ್ಥಳವೇ ರಾಮನಾಥೇಶ್ವರ ದೇವಸ್ಥಾನ. ಈ ಶಿವಲಿಂಗವನ್ನು ಸ್ವತಃ ಶ್ರೀರಾಮ ಚಂದ್ರರು ಪೂಜಿಸುತ್ತಿದ್ದರಂತೆ. ಹಾಗಾಗಿ ರಾಮೇಶ್ವರ ಎಂಬ ಹೆಸರು ಬಂದಿದೆ.

ಶ್ರೀ ಚಕ್ರ

ಶ್ರೀ ಚಕ್ರ

PC:youtube
ರಾಮನಾಥೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ಅಮ್ಮನವರ ಗುಡಿಯ ಮುಂಭಾಗದಲ್ಲಿ ಶಂಕಾರಾಚಾರ್ಯರು ಸ್ಥಾಪಿಸಿದ ಶ್ರೀ ಚಕ್ರವಿದೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರವೂ ಆಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:youtube
ಅರಕಲಗೂಡಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ. ಇದು 87 ಕಿ.ಮೀ ದೂರದಲ್ಲಿದೆ. ಇನ್ನೂ ರೈಲು ನಿಲ್ದಾಣವೆಂದರೆ ಮಾವಿನಕೆರೆ ರೈಲು ನಿಲ್ದಾಣ ಇದು 23 ಕಿ.ಮೀ ದೂರದಲ್ಲಿದೆ ಮತ್ತೊಂದು ಹೋಳೆನರಸೀಪುರವ ರೈಲು ನಿಲ್ದಾಣ ಇದು 25ಕಿ.ಮೀ ದೂರದಲ್ಲಿದೆ. ಅರಕಲಗೂಡಿಗೆ ಬೀರನಹಳ್ಳಿಗೆ ಹತ್ತಿರದ ಪಟ್ಟಣವಾಗಿದೆ. ಅರಕಲಗೂಡಿಗೆ ಬೀರನಹಳ್ಳಿಯಿಂದ 12 ಕಿ.ಮೀ.ದೂರದಲ್ಲಿದೆ. ಅರಕಲಗೂಡಿನಿಂದ ಬೀರನಹಳ್ಳಿಗೆ ರಸ್ತೆ ಸಂಪರ್ಕವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X