Search
  • Follow NativePlanet
Share
» »ಕಾಕತೀಯರು ನಿರ್ಮಾಣ ಮಾಡಿದ ಅದ್ಭುತವಾದ ದೇವಾಲಯವಿದು...

ಕಾಕತೀಯರು ನಿರ್ಮಾಣ ಮಾಡಿದ ಅದ್ಭುತವಾದ ದೇವಾಲಯವಿದು...

ಕಾಕತೀಯರು ತಮ್ಮ ಆಡಳಿತದ ಕಾಲವಧಿಯಲ್ಲಿ ಅದ್ಭುತವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಹಲವಾರು ಸುಂದರವಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದು, ಅವುಗಳಲ್ಲಿ ರಾಮಪ್ಪ ದೇವಾಲಯವು ಕೂಡ ಒಂದಾಗಿದೆ. ರಾಮಪ್ಪ ದೇವಾಲಯವು ಹೈದ್ರಾಬಾದ್‍ನಿಂದ 157 ಕಿ.ಮೀ ದೂರದಲ್ಲಿದೆ. ಕಾಕತೀಯ ರಾಜವಂಶಿಕರ ರಾಜಧಾನಿಯಾದ ವರಂಗಲ್ ಪಟ್ಟಣಕ್ಕೆ ಸುಮಾರು 70 ಕಿ.ಮೀ ದೂರದಲ್ಲಿದೆ.

ಕಾಕತೀಯರು ನಿರ್ಮಾಣ ಮಾಡಿರುವ ಅದ್ಭುತವಾದ ದೇವಾಲಯಗಳಲ್ಲಿ ರಾಮಪ್ಪ ದೇವಾಲಯವು ಒಂದು. ಈ ದೇವಾಲಯದ ಕಲಾ, ವಾಸ್ತುಶಿಲ್ಪವು ಅತ್ಯಂತ ಸುಂದರವಾಗಿದೆ. ಈ ದೇವಾಲಯದ ಬಗ್ಗೆ ಹಲವಾರು ಕುತೂಹಲಕಾರಿ ಮಾಹಿತಿಗಳಿವೆ. ಅವುಗಳನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ರಾಮಲಿಂಗೇಶ್ವರ ದೇವಾಲಯ

1.ರಾಮಲಿಂಗೇಶ್ವರ ದೇವಾಲಯ

ಈ ರಾಮಪ್ಪ ದೇವಾಲಯವು ತೆಲಂಗಾಣ ರಾಜ್ಯದ ಪಾಲಂಪೇಟ ಎಂಬ ಗ್ರಾಮದಲ್ಲಿದೆ. ಈ ದೇವಾಲಯವನ್ನು ರಾಮಲಿಂಗೇಶ್ವರ ದೇವಾಲಯ ಎಂದೂ ಕೂಡ ಕರೆಯುತ್ತಾರೆ. ಈ ದೇವಾಲಯವು ವರಂಗಲ್ ಜಿಲ್ಲೆಯಲ್ಲಿ ಅತ್ಯಂತ ಪ್ರಮುಖ್ಯತೆ ಗಳಿಸಿರುವ ದೇವಾಲಯವೇ ಆಗಿದೆ.

2.ರಾಮಲಿಂಗೇಶ್ವರ ದೇವಾಲಯ

2.ರಾಮಲಿಂಗೇಶ್ವರ ದೇವಾಲಯ

ಈ ದೇವಾಲಯವು ವಿಶ್ವ ಬ್ರಾಹ್ಮಣ ಶಿಲ್ಪಿಗಳ ಫಲಿತವೇ ಆಗಿದೆ. ಈ ದೇವಾಲಯದ ಸಮೀಪದಲ್ಲಿಯೇ ರಾಮಪ್ಪ ನದಿ ಕೂಡ ಇದೆ. ಆ ನದಿಯು ಕಾಕತೀಯ ಕಾಲದ್ದು, ಇದು ಇಂದಿಗೂ ಸಾವಿರಾರು ಕೃಷಿ ಭೂಮಿಗಳಿಗೆ ಆಧಾರವಾಗಿದೆ.

3.ರಾಮಲಿಂಗೇಶ್ವರ ದೇವಾಲಯ

3.ರಾಮಲಿಂಗೇಶ್ವರ ದೇವಾಲಯ

ಪಾಲಂಪೇಟ ಚಾರಿತ್ರಿತಾತ್ಮಕ ಗ್ರಾಮ. ಕಾಕತೀಯರ ಪರಿಪಾಲನೆಯಲ್ಲಿ 13 ಹಾಗು 14 ನೇ ಶತಮಾನಗಳ ಮಧ್ಯೆ ಕಾಲದಲ್ಲಿ ಹೆಚ್ಚಾಗಿ ಅಭಿವೃದ್ಧಿ ಹೊಂದಿತು ಎಂದೇ ಹೇಳಬಹುದು. ಕಾಕತೀಯರ ರಾಜ ಗಣಪತಿ ದೇವನು ಈ ರಾಮಪ್ಪ ದೇವಾಲಯದಲ್ಲಿರುವ ಶಿಲಾಶಾಸನದ ಪ್ರಕಾರ ಈ ದೇವಾಲಯವನ್ನು "ರೇಚಾರ ರುದ್ರಯ್ಯ" ನಿರ್ಮಾಣ ಮಾಡಿದನು.

4.ರಾಮಲಿಂಗೇಶ್ವರ ದೇವಾಲಯ

4.ರಾಮಲಿಂಗೇಶ್ವರ ದೇವಾಲಯ

ಈ ಅದ್ಭುತವಾದ ಚಾರಿತ್ರಿಕವಾದ ದೇವಾಲಯವು ಆನೇಕ ಯುದ್ಧಗಳಿಗೆ, ದಾಳಿಗಳಿಗೆ ಸಾಕ್ಷಿಯಾಗಿದೆ. ಪ್ರಕೃತಿಯಲ್ಲಿ ಸಂಭಂವಿಸುವ ವೈಪರಿತ್ಯವನ್ನೆಲ್ಲಾ ತಡೆದುಕೊಂಡು ನಿಂತಿದೆ. ದೇವಾಲಯದ ಪ್ರಾಂಗಣದಲ್ಲಿ ಆನೇಕ ಕಟ್ಟಡಗಳನ್ನು ನಿರ್ಲಕ್ಷ್ಯವಾಗಿ ಬಿಟ್ಟಿದ್ದರಿಂದ ಅವುಗಳಲ್ಲಿ ಕೆಲವು ಶಿಥಿಲಾವಸ್ಥೆಯಲ್ಲಿದೆ.

5.ರಾಮಲಿಂಗೇಶ್ವರ ದೇವಾಲಯ

5.ರಾಮಲಿಂಗೇಶ್ವರ ದೇವಾಲಯ

ಈ ದೇವಾಲಯದ ಮತ್ತೊಂದು ವಿಶೇಷವೆನೆಂದರೆ ಇಲ್ಲಿ ನೀರಿನ ಮೇಲೆ ತೇಲುವ ಇಟ್ಟಗೆಗಳು ಇರುತ್ತಿದ್ದವು. ಇವುಗಳನ್ನು ಅಲ್ಲಿಗೆ ಬರುತ್ತಿದ್ದ ಕೆಲವು ಪ್ರವಾಸಿಗರು ತೆಗೆದುಕೊಂಡು ಹೋಗುತ್ತಿದ್ದರು. ಅಂದಿನಿಂದ ಭಾರತೀಯ ಪುರಾವಸ್ತು ಶಾಖೆಯು ತನ್ನ ಅಧೀನದಲ್ಲಿ ತೆಗೆದುಕೊಂಡು ರಕ್ಷಣೆ ಮಾಡುತ್ತಿದೆ.

6.ರಾಮಲಿಂಗೇಶ್ವರ ದೇವಾಲಯ

6.ರಾಮಲಿಂಗೇಶ್ವರ ದೇವಾಲಯ

PC: Muralidhara Rao Patri

ಪ್ರಧಾನ ದ್ವಾರದ ಸಮೀಪದಲ್ಲಿಯೂ ಕೂಡ ಶಿಥಿಲಾವಸ್ಥೆಯಾಗಿದೆ. ಹಾಗಾಗಿ ಪಶ್ಚಿಮ ದಿಕ್ಕಿನಲ್ಲಿರುವ ದ್ವಾರದ ಮೂಲಕವೇ ಪ್ರವೇಶವನ್ನು ಪಡೆಯಬೇಕಾಗುತ್ತದೆ. ಈ ದೇವಾಲಯದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಸತತ 3 ದಿನಗಳ ಕಾಲ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸುತ್ತಾರೆ.

7.ರಾಮಲಿಂಗೇಶ್ವರ ದೇವಾಲಯ

7.ರಾಮಲಿಂಗೇಶ್ವರ ದೇವಾಲಯ

ದೇವಾಲಯದ ಪ್ರಾಂಗಣದಲ್ಲಿ ಒಂದು ಮಂಟಪವಿದೆ. ಆ ಮಂಟಪವನ್ನು ಕ್ರಿ.ಶ 1213 ರಲ್ಲಿ ಗಣಪತಿ ದೇವನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಮಧ್ಯಯುಗಕ್ಕೆ ಸಂಬಂಧಿಸಿದ ಈ ಶಿವಾಲಯವನ್ನು, ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಹೆಸರನ್ನು ಅಲ್ಲದೇ ದೇವಾಲಯವನ್ನು ಕೆತ್ತನೆ ಮಾಡಿದ ರಾಮಪ್ಪನ ಹೆಸರಿನ ಮೇಲೆ ದೇವಾಲಯವನ್ನು ಇಟ್ಟಿರುವುದು ಇದರ ವಿಶೇಷವೇ ಆಗಿದೆ.

8.ರಾಮಲಿಂಗೇಶ್ವರ ದೇವಾಲಯ

8.ರಾಮಲಿಂಗೇಶ್ವರ ದೇವಾಲಯ

ಆ ಹೆಸರಿಗೆ ಅಂದರೆ ರಾಮಪ್ಪ ಮತ್ತು ಪರಮೇಶ್ವರನ ನಾಮವಾದ ಲಿಂಗೇಶ್ವರ ಎಂಬ 2 ಹೆಸರುಗಳನ್ನು ಕಲಿಸಿ ರಾಮಲಿಂಗೇಶ್ವರ ದೇವಾಲಯ ಎಂದು ಹೆಸರನ್ನು ಇಡಲಾಯಿತು. ಮುಖ್ಯವಾಗಿ ಈ ದೇವಾಲಯದ ಪ್ರಧಾನವಾದ ಲಿಂಗ ರಾಮಲಿಂಗೇಶ್ವರ ಸ್ವಾಮಿ. ವಿಷ್ಣುವಿನ ಅವತಾವಾದ ರಾಮ ಹಾಗು ಶಿವ ಇಬ್ಬರ ಹೆಸರನ್ನು ಇಲ್ಲಿನ ಸ್ವಾಮಿಗೆ ಕರೆಯಲಾಗುತ್ತದೆ.

9.ರಾಮಲಿಂಗೇಶ್ವರ ದೇವಾಲಯ

9.ರಾಮಲಿಂಗೇಶ್ವರ ದೇವಾಲಯ

ಈ ದೇವಾಲಯವು ಕಾಕತೀಯರ ಪ್ರತ್ಯೇಕವಾದ ಶೈಲಿಯಾದ ಒಂದು ಪೀಠದ ಮೇಲೆ ನಕ್ಷತ್ರಾಕಾರದಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ಪೂರ್ವ ದಿಕ್ಕಿಗೆ ಎತ್ತರವಾದ ಹಾಗು ವಿಶಾಲವಾದ ಪೀಠದ ಮೇಲೆ ಅದ್ಭುತವಾಗಿದೆ. ಮೂರು ಕಡೆಗಳಿಂದ ಪ್ರತ್ಯೇಕವಾದ ಪ್ರವೇಶ ದ್ವಾರವನ್ನು ಮಂಟಪದಲ್ಲಿ ಕಾಣಬಹುದಾಗಿದೆ.

10.ರಾಮಲಿಂಗೇಶ್ವರ ದೇವಾಲಯ

10.ರಾಮಲಿಂಗೇಶ್ವರ ದೇವಾಲಯ

ಇಲ್ಲಿನ ಎತ್ತರವಾದ ಗರ್ಭಾಲಯದಲ್ಲಿ ಕಪ್ಪಗಿನ ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಸುಂದರವಾದ ಶಿವಲಿಂಗವಿದೆ. ದೇವಾಲಯದಲ್ಲಿನ ಸ್ತಂಭಗಳು, ಅವುಗಳ ಸೂಕ್ಷ್ಮವಾದ ಕೆತ್ತನೆಗಳನ್ನು ನಾವು ಇಲ್ಲಿ ಕಾಣಬಹುದು. ಆ ಕೆತ್ತನೆಗಳು ಮುಖ್ಯವಾಗಿ ರಾಮಾಯಣ, ಮಹಾಭಾರತ ಹಾಗು ಇತಿಹಾಸಕ್ಕೆ ಸಂಬಂಧಿಸಿದ ರಮಣೀಯವಾದ ಶಿಲ್ಪಗಳು ಇಲ್ಲಿವೆ.

11.ರಾಮಲಿಂಗೇಶ್ವರ ದೇವಾಲಯ

11.ರಾಮಲಿಂಗೇಶ್ವರ ದೇವಾಲಯ

ಇಷ್ಟೇ ಅಲ್ಲದೇ ಇಲ್ಲಿ ಸುಂದರವಾದ ಭಂಗಿಯನ್ನು ಹೊಂದಿರುವ ಮದನಿಕೆಯರ ಶಿಲ್ಪಗಳು ಮುಖ್ಯವಾದ ಆಕರ್ಷಣೆಗಳೇ ಆಗಿವೆ. ಈ ದೇವಾಲಯದ ಪ್ರಾಂಗಣದಲ್ಲಿ ಇತರ ಕಟ್ಟಡಗಳಲ್ಲಿ ನಂದಿ ಮಂಟಪ, ಕಾಮೇಶ್ವರ ಮಂದಿರ, ಕಾಟೇಶ್ವರ ಮಂದಿರ ಇನ್ನು ಹಲವಾರು ದೇವಾಲಯಗಳನ್ನು ಕಾಣಬಹುದು.

12.ರಾಮಲಿಂಗೇಶ್ವರ ದೇವಾಲಯ

12.ರಾಮಲಿಂಗೇಶ್ವರ ದೇವಾಲಯ

ದೇವಾಲಯಗಳ ಶಿಲ್ಪಕಲಾ ಸಂಪತ್ತು ಕಾಕತೀಯ ರಾಜರ ಶಿಲ್ಪ ಸೌಂದರ್ಯವನ್ನು ಹಾಗು ಅಭಿರುಚಿಯನ್ನು ತಿಳಿಸುತ್ತದೆ. ದೇವಾಲಯವನ್ನು ವಿಶಿಷ್ಟವಾದ ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ. ಅದು ನೀರಿನಲ್ಲಿಯೂ ಕೂಡ ತೇಲುವ ಶಕ್ತಿಯನ್ನು ಹೊಂದಿದೆ ಎಂದೇ ಹೇಳುತ್ತಾರೆ.

13.ರಾಮಲಿಂಗೇಶ್ವರ ದೇವಾಲಯ

13.ರಾಮಲಿಂಗೇಶ್ವರ ದೇವಾಲಯ

ದೇವಾಲಯದ ಎದುರಿಗೆ ಒಂದು ನಂದಿ ಇದೆ. ಈ ನಂದಿಯು ತನ್ನದೇ ಆದ ವಿಶೇಷವನ್ನು ಹೊಂದಿದೆ. ಅದೆನೆಂದರೆ ಒಂದು ಕಾಲನ್ನು ಸ್ವಲ್ಪ ಮೇಲೆ ಇಟ್ಟುಕೊಂಡು, ಕಿವಿಗಳನ್ನು ತೆರೆದುಕೊಂಡು ತನ್ನ ಸ್ವಾಮಿಯಾದ ರಾಮಲಿಂಗೇಶ್ವರನು ಯಾವಾಗ ಅಜ್ಞಾಪಿಸುತ್ತಾನೆ ಎಂಬುವ ಹಾಗೆ ಇರುತ್ತದೆ. ಇಲ್ಲಿನ ನಂದಿ ಯಾವ ದಿಕ್ಕಿನಲ್ಲಿ ನೋಡಿದರು ಕೂಡ ನಮ್ಮ ಹತ್ತಿರವೇ ನೋಡಿದ ಹಾಗೆ ಭಾಸವಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more