Search
  • Follow NativePlanet
Share
» »ರಕ್ಷಾಬಂಧನ ಆಫರ್: ಮಹಿಳೆಯರಿಗಾಗಿ ಸ್ಪೆಶಲ್ ಟ್ರೈನ್

ರಕ್ಷಾಬಂಧನ ಆಫರ್: ಮಹಿಳೆಯರಿಗಾಗಿ ಸ್ಪೆಶಲ್ ಟ್ರೈನ್

ರಕ್ಷಾಬಂಧನ ಹಬ್ಬವೆಂದರೆ ಸಹೋದರ ಸಹೋದರಿಯರಿಗೆ ನಿಜಕ್ಕೂ ವಿಶೇಷವಾದ ಹಬ್ಬವಾಗಿದೆ. ಹಾಗಾಗಿ ಈ ಬಾರಿ ಈ ರಕ್ಷಾಬಂಧನವನ್ನು ಇನ್ನಷ್ಟು ವಿಶೇಷವಾಗಿಸಲು ರೈಲ್ವೆಯು ಹೊಸ ಆಫರ್‌ ಒಂದನ್ನು ತಂದಿದೆ. ಈ ದಿನವನ್ನು ಮಹಿಳೆಯರಿಗೆ ಇನ್ನಷ್ಟು ಸ್ಪೆಶಲ್ ಆಗಿಸುವ ಕಾರ್ಯಕ್ಕೆ ರೈಲ್ವೆ ಕೈ ಹಾಕಿದೆ.

ರಕ್ಷಾಬಂಧನ

ರಕ್ಷಾಬಂಧನ

ಈ ಬಾರಿ ಆಗಸ್ಟ್ 26 , ಭಾನುವಾರ ರಕ್ಷಾಬಂಧನ ಹಬ್ಬ ಬಂದಿದೆ. ದೆಹಲಿಯ ರೈಲ್ವೆ ವಿಭಾಗವು ಈ ರಕ್ಷಾಬಂಧನದಂದು ರೈಲ್ವೆ ಇಲಾಖೆಯು ಮಹಿಳೆಯರಿಗೆ ವಿಶೇಷ ಟ್ರೈನ್‌ ಓಡಿಸಲಿದೆ. ಇದು ಕೇವಲ ಮಹಿಳೆಯರಿಗಾಗಿಯೇ ಮೀಸಲಿರುತ್ತದೆ.

ಸಾಧು ಸಂತರು ಮೋಕ್ಷ ಗಳಿಸಿದ ಪಾರಸನಾಥ ಶಿಖರದ ಯಾತ್ರೆ ಮಾಡಿ ಸಾಧು ಸಂತರು ಮೋಕ್ಷ ಗಳಿಸಿದ ಪಾರಸನಾಥ ಶಿಖರದ ಯಾತ್ರೆ ಮಾಡಿ

ಆಗಸ್ಟ್‌ 26ಕ್ಕೆ ಚಲಿಸಲಿದೆ

ಆಗಸ್ಟ್‌ 26ಕ್ಕೆ ಚಲಿಸಲಿದೆ

ಈ ರೈಲು ಬೆಳಗ್ಗೆ 8.20 ಕ್ಕೆ ನವದೆಹಲಿಯಿಂದ ಹೊರಟು 10 ಗಂಟೆಗೆ ಪಲ್‌ವಾಲ್ ತಲುಪುತ್ತದೆ. ಗಾಜೀಯಾಬಾದ್ ಹಾಗೂ ನವದೆಹಲಿಯ ನಡುವೆಯೂ ಸ್ಪೆಶಲ್ ರೈಲು ಚಲಿಸುತ್ತದೆ. ಗಾಜೀಯಾಬಾದ್‌ನಿಂದ ಬೆಳಗ್ಗೆ 8.30 ಕ್ಕೆ ರೈಲು ಹೊರಟರೆ ಬೆಳಗ್ಗೆ 9ಗಂಟೆಗೆ ನವದೆಹಲಿ ತಲುಪುತ್ತದೆ. ನವದೆಹಲಿಯಿಂದ ಸಂಜೆ 5.50ಕ್ಕೆ ರೈಲು ಹೊರಟರೆ ಸಂಜೆ 6.40ಕ್ಕೆ ಗಾಜಿಯಾಬಾದ್‌ ತಲುಪುತ್ತದೆ.

ಗಾಜಿಯಾಬಾದ್‌ ನಿಂದ ಅಲಿಘಡ್‌ಗೂ ಸ್ಪೆಶಲ್ ರೈಲು

ಗಾಜಿಯಾಬಾದ್‌ ನಿಂದ ಅಲಿಘಡ್‌ಗೂ ಸ್ಪೆಶಲ್ ರೈಲು

ಉತ್ತರ ರೈಲ್ವೆಯು ಆಗಸ್ಟ್ 24ರಿಂದ ಆಗಸ್ಟ್28ರವರೆಗೆ ಗಾಜಿಯಾಬಾದ್‌ ನಿಂದ ಅಲಿಘಡ್‌ವರೆಗೆ ಇಎಮ್‌ಯು ಸ್ಪೆಶಲ್ ರೈಲು ಚಲಾಯಿಸುವುದಾಗಿ ತಿಳಿಸಿದೆ. ಈ ಮಾರ್ಗದಲ್ಲೂ ರಕ್ಷಾಬಂಧನದ ದಿನ ತುಂಬಾನೇ ರಶ್ ಇರುತ್ತದೆ. ಹಾಗಾಗಿ ಸ್ಪೆಶಲ್ ರೈಲಿನ ವ್ಯವಸ್ಥೆ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಬಸ್‌ನಲ್ಲಿ, ಹರಿಯಾಣದಲ್ಲಿ ಉಚಿತ ಪ್ರಯಾಣ

ಉತ್ತರ ಪ್ರದೇಶದಲ್ಲಿ ಬಸ್‌ನಲ್ಲಿ, ಹರಿಯಾಣದಲ್ಲಿ ಉಚಿತ ಪ್ರಯಾಣ

ರಕ್ಷಾಬಂಧನದ ಮುಂದಿನ ದಿನ ರಾತ್ರಿ 12 ಗಂಟೆಯಿಂದ 26ನೇ ತಾರಿಕು ರಾತ್ರಿ12 ಗಂಟೆವರೆಗೆ ಉತ್ತರ ಪ್ರದೇಶದ ಬಸ್‌ನಲ್ಲಿ ಟಿಕೇಟ್ ಕೇಳಲಾಗುವುದಿಲ್ಲ. ಇದೇ ರೀತಿಯ ಆಫರ್ ಹರಿಯಾಣದ ಬಸ್‌ಗಳಲ್ಲೂ ಇದೆ. ಹರಿಯಾಣದಲ್ಲಿ ರಕ್ಷಾಬಂಧನದ ದಿನದಂದು ಬಸ್‌ನಲ್ಲಿ ಓಡಾಡುವವರಿಗೆ ಯಾವುದೇ ಟಿಕೇಟ್ ಕೇಳಲಾಗುವುದಿಲ್ಲ. ಉಚಿತ ಪ್ರಯಾಣ ಒದಗಿಸಲಾಗುವುದು.

ನೂಕುನುಗ್ಗಲು ತಡೆಯಲು

ನೂಕುನುಗ್ಗಲು ತಡೆಯಲು

PC: vishal dutta

ರಕ್ಷಾಬಂಧನ ಹಬ್ಬದಂದು ದೆಹಲಿಯಿಂದ ಹೊರಡುವ ಲೋಕಲ್ ಟ್ರೈನ್‌ನಲ್ಲಿ ಬಹಳಷ್ಟು ನೂಕುನುಗ್ಗಲು ಇರುತ್ತದೆ. ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೋಡುತ್ತಾ ರೈಲ್ವೆಯು ಈ ನಿರ್ಧಾರವನ್ನು ಕೈಗೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X