• Follow NativePlanet
Share
Menu
» »"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

Written By:

"ಪುಷ್ಪಗಿರಿ" ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸದಾದ ಪ್ರದೇಶವೇನೂ ಅಲ್ಲ..! ಸುಪರಿಚಿತವಾದ ಪ್ರದೇಶವೇ ಆಗಿದೆ. ಕಡಪ ನಗರದಿಂದ 23 ಕಿ.ಮೀ ದೂರದಲ್ಲಿ ಇರುವ ಪುಷ್ಪಗಿರಿ ಶೈವರಿಗೆ, ವೈಷ್ಣವರಿಗೂ ಒಂದು ಪ್ರಮುಖವಾದ ಪುಣ್ಯ ಕ್ಷೇತ್ರವೇ ಆಗಿದೆ. ಆದಿ ಶಂಕರಾಚಾರ್ಯ ಮಠವು ಕೂಡ ಇಲ್ಲಿದೆ. ಈ ರಾಜ್ಯದಲ್ಲಿರುವ ಮಠದಂತೆ ಮತ್ತೇ ಬೇರೆ ಯಾವ ಪ್ರದೇಶದಲ್ಲಿಯೂ ಇಲ್ಲ. ವೈಷ್ಣವರು ಈ ಕ್ಷೇತ್ರವನ್ನು "ಮಧ್ಯ ಅಹೋಬಿಲಂ" ಆಗಿ, ಶೈವರಿಗೆ "ಮಧ್ಯ ಕೈಲಾಸ" ಎಂದು ಕರೆಯುತ್ತಾರೆ. ಕಡಪ ಜಿಲ್ಲೆಯಿಂದ ಕರ್ನೂಲಿಗೆ ಹೋಗುವ ಮಾರ್ಗದಲ್ಲಿ ಚೆನ್ನೂರು ಸಮೀಪದಲ್ಲಿ ಎಡಗಡೆಗೆ ಒಂದು ದಾರಿಯಲ್ಲಿದೆ. ಆ ದಾರಿಯಿಂದ ಸುಮಾರು 10 ಕಿ.ಮೀ ಪ್ರಯಾಣಿಸಿದರೆ ಬೆಟ್ಟದ ಮೇಲೆ ಪುಷ್ಪಗಿರಿ ಕ್ಷೇತ್ರವಿದೆ. ಪಕ್ಕದಲ್ಲಿ ಪೆನ್ನಾ ನದಿ ಪ್ರವಹಿಸುತ್ತಿರುತ್ತದೆ.

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಪುಷ್ಪಗಿರಿ ಸೇರಿಕೊಳ್ಳುವುದಕ್ಕೆ ಸುಲಭವಾದ ಮಾರ್ಗವೇ ರಸ್ತೆವೇ ಮಾರ್ಗ. ರೈಲ್ವೆ, ವಿಮಾನ ಮಾರ್ಗವು ಕೂಡ ಸುಲಭವಾಗಿ ದೊರೆಯುತ್ತದೆ. ವಿಮಾನ ಮಾರ್ಗದ ಮೂಲಕ ಕಡಪದಲ್ಲಿ ಹೊಸದಾಗಿ ಪ್ರಾರಂಭಿಸಿದ ಏರ್ ಪೋರ್ಟ್ ಪುಷ್ಪಗಿರಿ ಗ್ರಾಮಕ್ಕೆ ಸಮೀಪದಲ್ಲಿರುವ ಏರ್ ಪೋರ್ಟ್ ಆಗಿದೆ. ಈ ಏರ್ ಫೊರ್ಟ್ ಸುಮಾರು 26 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಕ್ಯಾಬ್ ಅಥವಾ ಬಸ್ ಸ್ಟಾಂಡ್‍ಗೆ ತೆರಳಿ ಬಸ್ಸುಗಳು ಪ್ರಯಾಣಿಸಿ ಪುಷ್ಪಗಿರಿಗೆ ಸುಲಭವಾಗಿ ಸೇರಿಕೊಳ್ಳಬಹುದು.

PC:: Ravisagili

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಪುಷ್ಪಗಿರಿ ಸೇರಿಕೊಳ್ಳುವ ಬಗೆ ಹೇಗೆ?
ರೈಲು ಮಾರ್ಗದ ಮೂಲಕ ಕಡಪ, ಕಮಲಾಪುರ ರೈಲ್ವೆ ನಿಲ್ದಾಣಗಳು ಪುಷ್ಪಗಿರಿಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಈ 2 ಪ್ರದೇಶಗಳಿಂದ ಪುಷ್ಪಗಿರಿಗೆ ಬಸ್ಸುಗಳು ಲಭಿಸುತ್ತದೆ.

PC:: Vinayaraj

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಬೆಟ್ಟದ ಮೇಲೆ ಹೇಗೆ ಸೇರಿಕೊಳ್ಳಬೇಕು?

ಪುಷ್ಪಗಿರಿ ಬೆಟ್ಟಕ್ಕೆ ಸೇರಿಕೊಳ್ಳಲು ಪಿನಾಕಿನಿ ನದಿ ದಾಟಿ ತೆರಳಬೇಕು. ಬೆಟ್ಟದ ಮೇಲೆ ಹೋಗಬೇಕಾದರೂ ಅಥವಾ ಕೆಳಗೆ ಇಳಿದು ಹೋಗಬೇಕಾದರೂ ಈ ನದಿ ದಾಟಲೇಬೇಕು. ಬೆಟ್ಟದ ಮೇಲಿನಿಂದ ಗ್ರಾಮವನ್ನು ನೋಡಿದರೆ ಎಷ್ಟೊ ಅದ್ಭುತವಾಗಿ ಕಾಣುತ್ತದೆ.


PC:: Archaeo2

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಯಾವ ಯಾವ ದೇವಾಲಯವನ್ನು ಕಾಣಬಹುದು?
ಪುಷ್ಪಗಿರಿ ಬೆಟ್ಟದ ಮೇಲೆ ದೇವಾಲಯದ ಪ್ರಾಂಗಣದಲ್ಲಿ ಶಿವಕೇಶವರು ಇಬ್ಬರೂ ಪೂಜೆಯನ್ನು ಮಾಡಿಕೊಳ್ಳುತ್ತಿರುವುದು ವಿಶೇಷ. ಎಲ್ಲಿಯೇ ಕಾಣಿಸುವ ಬ್ರಹ್ಮ ದೇವನ ವಿಗ್ರಹ ಕೂಡ ಕಾಣಬಹುದು. ಸಂತಾನ ಮಲ್ಲೇಶ್ವರ, ಉಮಾ ಮಹೇಶ್ವರ, ರಾಜ್ಯಲಕ್ಷ್ಮಿ, ಯೋಗಾಂಜನೇಯ ದೇವಾಲಯ, ಸಾಕ್ಷಿ ಮಲ್ಲೇಶ್ವರ ಸ್ವಾಮಿ ದೇವಾಲಯಕ್ಕೂ ಕೂಡ ಭೇಟಿ ನೀಡಬಹುದು.


PC: Archaeo2

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಪಾದಗಳು
ರುದ್ರ ಪಾದಗಳು, ವಿಷ್ಣು ಪಾದಗಳು ಬೆಟ್ಟದ ಮೇಲೆ ಕಾಣಿಸುತ್ತದೆ. ಆದಿ ಶಂಕರಾಚಾರ್ಯರು ತನ್ನ ಸ್ವಹಾಸ್ತಗಳು ಪ್ರತಿಷ್ಟಾಪಿಸಿ ಶ್ರೀ ಚಕ್ರವನ್ನು ದರ್ಶಿಸಿಕೊಳ್ಳಲು ಎಷ್ಟೊ ಜನ್ಮಗಳು ಪುಣ್ಯ ಫಲ ಹೊಂದಿರಬೇಕು ಎಂದು ಭಕ್ತರು ಭಾವಿಸುತ್ತಾರೆ.

PC: Archaeo2

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಪುಷ್ಪಗಿರಿ ದೇವಾಲಯ ಹೊರಗಿನ ಗೋಡೆಗಳ ಮೇಲೆ ಶಿಲ್ಪ ಸಂಪತ್ತು ಎಲ್ಲರಿಗೂ ಆಶ್ಚರ್ಯಕ್ಕೆ ಗುರಿ ಮಾಡುತ್ತದೆ. ಇಲ್ಲಿ ಆನೆಗಳ ಮೇಲೆ, ಕುದುರೆಗಳ ಮೇಲೆ ಕುಳಿತಿರುವ ವೀರರು ಇನ್ನು ಹಲವಾರು ಪ್ರಾಣಿಗಳು ವಿನ್ಯಾಸಗಳನ್ನು ಇಲ್ಲಿ ಕಾಣಬಹುದು. ರಾಮಾಯಣ ಕಾಲದಲ್ಲಿ ನಟರಾಜನು ನೃತ್ಯವನ್ನು ಮಾಡುತ್ತಿದ್ದ ನೃತ್ಯದ ಚಿತ್ರಣವು ಅಮೋಘವಾಗಿದೆ.

PC: Archaeo2

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಸರೋವರ
ಪುಷ್ಪಗಿರಿಯಲ್ಲಿರುವ ಸರೋವರವನ್ನು ಅಮೃತ ಸರೋವರ ಎಂದು ಕೂಡ ಕರೆಯುತ್ತಾರೆ. ಇದರಲ್ಲಿ ಭಕ್ತರು ಮುಳುಗಿ ಸ್ನಾನಗಳು ಮಾಡಿ, ಸ್ವಾಮಿಗೆ ದರ್ಶಿಸಿಕೊಳ್ಳುತ್ತಾರೆ. ಪಾಪಾಘ್ನಿ, ಕುಮುದ್ವತಿ, ವಲ್ಕಲ, ಮಾಂಡವಿ ನದಿಗಳು ಪೆನ್ನಾ ಎಂಬ ನದಿಯಲ್ಲಿ ಸೇರುತ್ತದೆ ಎಂತೆ. ಇದರಿಂದಾಗಿ ಈ ಕ್ಷೇತ್ರವನ್ನು ಪಂಚನದಿ ಕ್ಷೇತ್ರ ಎಂದು ಹೆಸರುವಾಸಿಯಾಗಿದೆ.

PC:: Rpratesh

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

ಬ್ರಹ್ಮೋತ್ಸವಗಳು
ಪುಷ್ಪಗಿರಿ ಕ್ಷೇತ್ರದಲ್ಲಿ ಸಾಧಾರಣವಾಗಿ ಪ್ರತಿ ವರ್ಷ ಏಪ್ರಿಲ್ 15 ರಿಂದ ಬ್ರಹ್ಮೋತ್ಸವಗಳು ನಿರ್ವಹಿಸುತ್ತಾರೆ. ಈ ಉತ್ಸವವು ಸತತ 9 ದಿನಗಳ ಕಾಲ ನಡೆಯುತ್ತವೆ. ಬ್ರಹ್ಮೋತ್ಸವಗಳು ನಡೆಯುವ ಸಮಯದಲ್ಲಿ ಜಾತ್ರೆ ಕೂಡ ನಡೆಯುತ್ತದೆ.

PC:: chandranarayana

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ