Search
  • Follow NativePlanet
Share
» »ಪುಲಿಕಾಟ್ ಸರೋವರ- ಒಂದು ಐತಿಹಾಸಿಕ ಬೀಚ್

ಪುಲಿಕಾಟ್ ಸರೋವರ- ಒಂದು ಐತಿಹಾಸಿಕ ಬೀಚ್

ಪುಲಿಕಾಟ್ ಸರೊವರ ಒಂದು ಅದ್ಭುತವಾದುದು. ಈ ಸುಂದರವಾದ ಸರೋವರವು ತಮಿಳುನಾಡು ಜಿಲ್ಲೆಯಲ್ಲಿದೆ. ಇದು ಭಾರತದ ಎರಡನೇ ಅತ್ಯಂತ ದೊಡ್ಡದಾದ ಸರೋವರವಾಗಿದೆ. ಈ ಸರೋವರವು ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯ ಗಡಿಯಲ್ಲಿ ವ್ಯಾಪಿಸಿದೆ. ಇಲ್ಲಿನ ನೈಸರ್

ಪುಲಿಕಾಟ್ ಸರೊವರ ಒಂದು ಅದ್ಭುತವಾದುದು. ಈ ಸುಂದರವಾದ ಸರೋವರವು ತಮಿಳುನಾಡು ಜಿಲ್ಲೆಯಲ್ಲಿದೆ. ಇದು ಭಾರತದ ಎರಡನೇ ಅತ್ಯಂತ ದೊಡ್ಡದಾದ ಸರೋವರವಾಗಿದೆ. ಈ ಸರೋವರವು ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯ ಗಡಿಯಲ್ಲಿ ವ್ಯಾಪಿಸಿದೆ. ಇಲ್ಲಿನ ನೈಸರ್ಗಿಕವಾದ ಸೌಂದರ್ಯ, ಹಕ್ಕಿಗಳ ನಿನಾದ, ಸಾಂಪ್ರದಾಯಿಕ ಕಟ್ಟಡಗಳು ಮತ್ತು ಶ್ರೀಮಂತ ಸಾಂಸ್ಕøತಿಕ ಇತಿಹಾಸ ಎಂಥಹ ಪ್ರವಾಸಿಗರನ್ನು ಕೂಡ ಮಂತ್ರ ಮುಗ್ಧರನ್ನಾಗಿಸದೇ ಬಿಡದು.

ಈ ಸರೋವರದಲ್ಲಿ ಹಲವಾರು ಪಕ್ಷಿಗಳು ತಮ್ಮ ವಾಸಸ್ಥಾನ ಮಾಡಿಕೊಂಡಿವೆ. ಈ ಸರೋವರದ ಸುತ್ತಲೂ ನೀರನ್ನು ಪೂರೈಸುವ ಮೂರು ಪ್ರಮುಖವಾದ ನದಿಗಳೆಂದರೆ ಆರಣಿ ನದಿ, ಜಲಂಗಿ ನದಿ ಹಾಗು ಸ್ವರ್ಣಮುಖಿ ನದಿಯಾಗಿವೆ. ಇಲ್ಲಿ ಸಣ್ಣ ಸಣ್ಣದಾದ ಹೊಳೆಗಳು, ಸಂಚಾರಿ ಕಾಲುವೆಗಳನ್ನು ಕಾಣಬಹುದಾಗಿದೆ. ಪುಲಿಕಾಟ್ ಸರೋವರದ ನೀರಿನ ಮಟ್ಟವು ವಿವಿಧ ಋತುಗಳಲ್ಲಿ ಬದಲಾಗುತ್ತಾ ಇರುತ್ತದೆ. ಅಂದರೆ ಮಾನ್ಸೂನ್‍ನಲ್ಲಿ ಹಾಗೂ ಮಾನ್ಸೂನ್ ನಂತರ ಸರೋವರದ ಆಳ ಹಾಗೂ ಅಗಲ ಬದಲಾಗುತ್ತಾ ಇರುತ್ತದೆ.

ಪುಲಿಕಾಟ್ ಸರೋವರ

ಪುಲಿಕಾಟ್ ಸರೋವರ

ಈ ಸರೋವರವು ಹಲವಾರು ಸಮುದ್ರದಲ್ಲಿನ ಜೀವಿಗಳಿಗೆ ಆಸರೆ ತಾಣವಾಗಿದೆ. ಇಲ್ಲಿ ಜಲಚರಗಳು, ಸಸ್ಯಗಳು, ಪ್ರಾಣಿಗಳು ಎಂದು ಮೂರು ಸ್ವಾಬಾವಿಕ ನೆಲೆಯನ್ನು ವಿಂಗಡಿಸಬಹುದು. ಸರೋವರದ ಸುತ್ತಮುತ್ತಲಿನ ಹಲವಾರು ಹಳ್ಳಿಗಳಿಗೆ ಮೀನುಗಾರಿಕೆ ಒಂದು ಪ್ರಮುಖವಾದ ಕಸುಬಾಗಿದೆ. ಈ ಪುಲಿಕಾಟ್ ಸರೋವರವು ಮೀನುಗಾರಿಕೆಗೆ ಸಮೃದ್ಧವಾಗಿದೆ. ಇಲ್ಲಿ ಹಲವಾರು ಜಾತಿಯ ಮೀನುಗಳನ್ನು ಕಾಣಬಹುದಾಗಿದೆ.


PC:Santhosh Janardhanan

ಪುಲಿಕಾಟ್ ಸರೋವರ

ಪುಲಿಕಾಟ್ ಸರೋವರ

ಸರೋವರದ ಮೂರನೇ 2 ಭಾಗದಷ್ಟು ನೆಲೆಯು ತಮಿಳುನಾಡಿನಲ್ಲಿದ್ದರೆ, ಉಳಿದ ಭಾಗವು ಆಂಧ್ರ ಪ್ರದೇಶದಲ್ಲಿ ನೆಲೆಯೂರಿದೆ. ಈ ಪುಲಿಕಾಟ್ ಸರೋವರದಲ್ಲಿ ಸುಮಾರು 12,370 ರಷ್ಟು ಮೀನುಗಾರರು ಸರೋವರದ ಮೀನುಗಾರಿಕೆಯ ಮೇಲೆ ಅವಲಂಬಿಸಿದ್ದಾರೆ. ಅಂದರೆ (ಆಂಧ್ರ ಪ್ರದೇಶದಲ್ಲಿ 6000 ಹಾಗೂ ತಮಿಳು ನಾಡಿನಲ್ಲಿ 6,370 ಮಂದಿ).


PC:Maksim

ಪಕ್ಷಿ ಸಂಕುಲ

ಪಕ್ಷಿ ಸಂಕುಲ

ನಿತ್ಯ ನೀರಿನಿಂದ ಹರಿಯುತ್ತಿರುವ ಈ ಸರೋವರದಲ್ಲಿ ಹಲವಾರು ಪಕ್ಷಿಗಳನ್ನು ಕಾಣಬಹುದಾಗಿದೆ. ಅಧಿಕವಾಗಿ ಆಳವಿಲ್ಲದ ಈ ಸರೋವರದ ನೀರಿನಲ್ಲಿ ಪಕ್ಷಿಗಳು ವಾಸಿಸುತ್ತಿರುತ್ತದೆ. ಇಲ್ಲಿ ವಲಸೆಗೆ ಬರುವ ಪಕ್ಷಿಗಳಿಗೂ ಕೂಡ ಒಂದು ಆಶ್ರಯ ತಾಣವಾಗಿದೆ. ಇಲ್ಲಿ ಹೆಚ್ಚಾಗಿ ವಸಂತ ಹಾಗೂ ಶರತ್ಕಾಲದಲ್ಲಿ ಪಕ್ಷಿಗಳ ವಲಸೆ ಹೆಚ್ಚಾಗಿರುತ್ತದೆ. ಇಲ್ಲಿ ಹೆಚ್ಚಾಗಿ ಪಕ್ಷಿಗಳು ಬರುವುದರಿಂದ 2 ಪಕ್ಷಿಧಾಮಗಳನ್ನು ಸ್ಥಾಪಿಸಲಾಗಿದೆ. ತಲಾ ಆಂಧ್ರ ಪ್ರದೇಶದಲ್ಲಿ ಒಂದು ತಮಿಳು ನಾಡಿನಲ್ಲಿ ಒಂದು.

PC:McKay Savage

ಸಸ್ಯವರ್ಗಗಳು

ಸಸ್ಯವರ್ಗಗಳು

ನೀರಿನಲ್ಲಿ ಸುಮಾರು 59 ಬಗೆಯ ಸಸ್ಯವರ್ಗಗಳು ಈ ಪುಲಿಕಾಟ್ ಸರೋವರದಲ್ಲಿ ಬೆಳೆಯುತ್ತವೆ. ಇಲ್ಲಿನ ಮನೋಹರವಾದ ದೃಶ್ಯವನ್ನು ಸವಿಯಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪ್ರಾಕೃತಿಕ ದೃಶ್ಯವು ಹಳ್ಳಿಯಲ್ಲಿನ ಸೌಂದರ್ಯ ನೆನಪಿಸುವಂತೆ ಮಾಡುತ್ತದೆ.

McKay Savage

ಕಟ್ಟಡಗಳು

ಕಟ್ಟಡಗಳು

ಈ ಪುಲಿಕಾಟ್ ಸರೋವರದಲ್ಲಿ ಡಚ್ ಚರ್ಚ್, ಡಚ್ ಸಮಾಧಿಗಳು, ಲೈಟ್ ಹೌಸ್, ದೇವಾಲಯಗಳು, ದೊಡ್ಡ ದೊಡ್ಡ ಮಸೀದಿಗಳು ಸೇರಿದಂತೆ ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಈ ಚರ್ಚ್‍ಗಳ ಹಾಗೂ ಪ್ರಾಚೀನ ಕಟ್ಟಡಗಳೆಲ್ಲವೂ ಕೂಡ ಡಚ್ ಶೈಲಿಯ ವಾಸ್ತು ಶಿಲ್ಪದಿಂದ ಕೂಡಿದೆ.

PC:McKay Savage

ತಲುಪುವ ಮಾರ್ಗ?

ತಲುಪುವ ಮಾರ್ಗ?

ಈ ಸುಂದರವಾದ ಸರೋವರಕ್ಕೆ ಒಮ್ಮೆ ಭೇಟಿ ನೀಡಬೇಕಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಚೆನ್ನೈ ವಿಮಾನ ನಿಲ್ದಾಣವಾಗಿದೆ. ಚೆನ್ನೈನಿಂದ ರಾಷ್ಟ್ರೀಯ ಹೆದ್ಧಾರಿಯಲ್ಲಿ ಪುಲಿಕಾಟ್ ಅನ್ನು ತಲುಪಬಹುದು. ಈ ಸರೋವರಕ್ಕೆ ವರ್ಷದಲ್ಲಿ ಯಾವಾಗಲಾದರೂ ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X