Search
  • Follow NativePlanet
Share
» »ಗೋವಾದ ಈ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ....

ಗೋವಾದ ಈ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ....

ಗೋವಾ ಎಂದಾಕ್ಷಣ ಪ್ರವಾಸಿಗರಿಗೆ ಮೊದಲಿಗೆ ನೆನಪಾಗುವುದೇ ಅಲ್ಲಿನ ಸುಂದರವಾದ ಬೀಚ್‍ಗಳು. ಒಂದಲ್ಲಾ ಎರಡಲ್ಲಾ ಅನೇಕ ಬೀಚ್‍ಗಳು ಪ್ರವಾಸಿಗರು ಭೇಟಿ ನೀಡಬಹುದು. ಹಾಗೆಯೇ ಸುಂದರವಾದ ಸಮಯವನ್ನು ತಮ್ಮ ಸ್ನೇಹಿತರ ಅಥವಾ ಸಂಗಾತಿಯೊಂದಿಗೆ ಕಾಲ ಕಳೆಯಬಹುದು

By Sowmyabhai

ಗೋವಾ ಎಂದಾಕ್ಷಣ ಪ್ರವಾಸಿಗರಿಗೆ ಮೊದಲಿಗೆ ನೆನಪಾಗುವುದೇ ಅಲ್ಲಿನ ಸುಂದರವಾದ ಬೀಚ್‍ಗಳು. ಒಂದಲ್ಲಾ ಎರಡಲ್ಲಾ ಅನೇಕ ಬೀಚ್‍ಗಳು ಪ್ರವಾಸಿಗರು ಭೇಟಿ ನೀಡಬಹುದು. ಹಾಗೆಯೇ ಸುಂದರವಾದ ಸಮಯವನ್ನು ತಮ್ಮ ಸ್ನೇಹಿತರ ಅಥವಾ ಸಂಗಾತಿಯೊಂದಿಗೆ ಕಾಲ ಕಳೆಯಬಹುದು. ಗೋವಾ ಕೇವಲ ಬೀಚ್‍ಗಳಿಗೇ ಅಲ್ಲದೇ ಪವಿತ್ರವಾದ ದೇವಾಲಯಗಳು ಹಾಗು ಚರ್ಚ್‍ಗಳಿಗೂ ಕೂಡ ಪ್ರಸಿದ್ಧಿಯನ್ನು ಪಡೆದಿದೆ. ಅಷ್ಟೇ ಅಲ್ಲ ಅಲ್ಲಿನ ಭವ್ಯವಾದ ಕೋಟೆಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸದೇ ಇರದು. ಅಲ್ಲಿನ ಸುಂದರವಾದ ವಾತಾವರಣ, ನಿಶ್ಯಬ್ಧವಾದ ಕಡಲತೀರಗಳು, ಮುಗಿಲೆತ್ತರದ ವೃಕ್ಷಗಳು, ಸದಾ ದೇಶ, ವಿದೇಶದ ಪ್ರವಾಸಿಗರಿಂದ ತುಂಬಿತುಳುಕುವ ಸ್ಥಳಗಳು ಆಹಾ ನೋಡುಗರಿಗೆ ಮಂತ್ರಮುಗ್ಧರನ್ನಾಗಿಸದೇ ಇರದು. ಇವೆಲ್ಲಾ ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತವೆ.

ಒಮ್ಮೆ ಗೋವಾಗೆ ಭೇಟಿ ನೀಡಿದಾಗ ಯಾವೆಲ್ಲಾ ಸ್ಥಳಗಳಿಗೆ ತೆರಳಬೇಕು ಎಂದು ನೀವು ಅಲೋಚಿಸುತ್ತಿದ್ದರೆ ಒಮ್ಮೆ ನೇಟಿವ್ ಪ್ಲಾನೆಟ್‍ನ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

1.ಬೀಚ್(ಕಡಲತೀರ)

1.ಬೀಚ್(ಕಡಲತೀರ)

PC::FaizanAhmad21

ಗೋವಾದಲ್ಲಿನ ಸುಂದರವಾದ ಮರಳಿನ ಕರಾವಳಿ ತೀರಗಳು ಪ್ರವಾಸಿಗರನ್ನು ಆಕರ್ಷಿಸದೇ ಇರದು. ಬೀಚ್‍ಗಳಿಗಾಗಿಯೇ ಅತ್ಯಂತ ಪ್ರಸಿದ್ಧವಾದ ತಾಣವಾದ್ದರಿಂದ ದೇಶ-ವಿದೇಶಗಳಿಂದ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ತಂಗಲು ಅನೇಕ ಐಷಾರಾಮಿ ರೆಸಾರ್ಟ್‍ಗಳು, ತಾತ್ಕಾಲಿಕ ಗುಡಿಸಲುಗಳು ಕೂಡ ಇವೆ. ಮೋಜು-ಮಸ್ತಿಗಾಗಿ ಯುವಕರು ಗೋವಾದ ಬೀಚ್‍ಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಆಗೊಂಡಾ ಅಥವಾ ಪ್ಯಾಟ್ನೆಮ್ ಬೀಚ್‍ಗಳು ಜಲಕ್ರೀಡೆಗೆ ಅತ್ಯುತ್ತಮವಾದ ಕಡಲತೀರವಾಗಿದೆ.

2.ಮಾರುಕಟ್ಟೆ

2.ಮಾರುಕಟ್ಟೆ

PC: Ipshita B

ಅಂಜುನಾ ಬೀಚ್ ದಕ್ಷಿಣ ತುದಿಯಲ್ಲಿದ್ದು, ಮಳೆಗಾಲದಲ್ಲಿ ಹೊರತುಪಡಿಸಿ ಪ್ರತಿ ಬುಧವಾರದಂದು ಬೆಳಗ್ಗೆಯಿಂದ ಸಂಜೆಯವರೆಗೆ ಅಂಜುನಾ ಫ್ಲಿ ಮಾರುಕಟ್ಟೆ ತೆರೆದಿರುತ್ತದೆ. ಈ ಮಾರುಕಟ್ಟೆಯು ಗೋವಾದಲ್ಲಿನ ಜನರನ್ನು ಆಕರ್ಷಿಸುತ್ತದೆ. ಇದು ಪ್ರಸ್ತುತ 500 ಮಳಿಗೆಗಳನ್ನು ಹೊಂದಿದೆ. ನೀವು ಒಮ್ಮೆ ಮಾರುಕಟ್ಟೆಗೆ ತೆರಳಬೇಕು ಎಂದಾದರೆ ಇಲ್ಲಿಗೆ ಭೇಟಿ ನೀಡಿ. ಇಲ್ಲಿ ನೀವು ಸರಕುಗಳ ಒಂದು ದೊಡ್ಡ ಸಂಗ್ರಹವನ್ನೇ ಕಾಣಬಹುದು. ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಕೊಳ್ಳಬೇಕಾದರೆ ಇಲ್ಲಿ ದೊರೆಯುತ್ತವೆ. ಇದೊಂದೇ ಅಲ್ಲದೇ ಹಿಪ್ ಸ್ಯಾಟರ್ಡೇ ನೈಟ್ ಮಾರ್ಕೆಟ್ ಮತ್ತು ಮ್ಯಾಕೀಸ್ ನೈಟ್ ಬಜಾರ್‍ಗಳಿಗೂ ಕೂಡ ಭೇಟಿ ನೀಡಿ ಬನ್ನಿ.

3.ಪ್ರಾಚೀನ ಗೋವಾ

3.ಪ್ರಾಚೀನ ಗೋವಾ

PC:SOURCE

ಪ್ರಾಚೀನ ಗೋವಾ ತನ್ನದೇ ಆದ ಚರಿತ್ರೆಯನ್ನು ಹೊಂದಿದೆ. ಇಲ್ಲಿ ಗೋವಾದ ಪ್ರಾಚೀನವಾದ ಅವಶೇಷಗಳು, ಭವ್ಯವಾದ ಚರ್ಚ್‍ಗಳನ್ನು ಕಾಣಬಹುದು. ವಿಶೇಷವೆನೆಂದರೆ ಇಲ್ಲಿನ ಕೆಲವು ಕಟ್ಟಡಗಳು ಪ್ರಸ್ತುತ ಪುರಾತತ್ತ್ವ ವಸ್ತುಸಂಗ್ರಹಾಲಯಗಳಾಗಿ ಮಾರ್ಪಟ್ಟಿವೆ. ಇಲ್ಲಿ ಗೋವಾದ ಐತಿಹಾಸಿಕ ಆಕರ್ಷಕ ಪ್ರದರ್ಶನವನ್ನು ಕೂಡ ಪ್ರವಾಸಿಗರು ಭೇಟಿ ನೀಡಬಹುದು. ಓಲ್ಡ್ ಗೋವಾದಲ್ಲಿನ ಅತ್ಯಂತ ಆಸಕ್ತಿದಾಯಕ ಕಟ್ಟಡವೆಂದರೆ 1521ರಲ್ಲಿ ನಿರ್ಮಿಸಲಾದ ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿಯ ಕಾನ್ವೆಂಟ್. ಇಲ್ಲಿ ಅನೇಕ ಭವ್ಯವಾದ ಕಟ್ಟಡಗಳು, ಕೋಟೆಗಳು ಕೂಡ ಇವೆ.

4.ಗೋವಾದ ವನ್ಯಜೀವಿ ಧಾಮಗಳು

4.ಗೋವಾದ ವನ್ಯಜೀವಿ ಧಾಮಗಳು

PC: skeeze

ವನ್ಯಜೀವಿ ಧಾಮಗಳು ಮಕ್ಕಳಿಗೆ ಅಲ್ಲ ದೊಡ್ಡವರಿಗೂ ಅಚ್ಚು-ಮೆಚ್ಚು. ಬೀಚ್‍ಗಳ ಜೊತೆ-ಜೊತೆಗೆ ಗೋವಾದಲ್ಲಿನ ವನ್ಯಜೀವಿ ಧಾಮಗಳು ಕೂಡ ಅಷ್ಟೇ ಪ್ರಸಿದ್ಧವಾದುವು. ಗೋವಾದ ಪರ್ವತದ ಪಶ್ಚಿಮ ಘಟ್ಟಗಳ ಉದ್ದಕ್ಕೂ ಅನೇಕ ಪಕ್ಷಿ ಹಾಗು ಪ್ರಾಣಿಗಳ ನೆಲೆಯಾಗಿದೆ. ನಿಮಗೆ ಗೊತ್ತೆ? ಶೇಕಡ 20ರಷ್ಟು ಗೋವಾದಲ್ಲಿ ವನ್ಯಜೀವಿ ಅಭಯಾರಣ್ಯಗಳನ್ನು ಒಳಗೊಂಡಿದೆ. ಗೋವಾದ ಎರಡು ಪ್ರಮುಖ ಅಭಯಾರಣ್ಯಗಳೆಂದರೆ ಭಗವಾನ್ ಮಹಾವೀರ್ ಮತ್ತು ಕೋಟಿಗೋವಾ. ಈ ಅಭಯಾರಣ್ಯಗಳಿಗೆ ಭೇಟಿ ನೀಡಲು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಅತ್ಯುತ್ತಮವಾದ ಕಾಲಾವಧಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X