
ತಮಿಳುನಾಡಿನ ತಿರುಪುವನಮ್‌ನಲ್ಲಿರುವ ಪೂವನನಾತರ್ ದೇವಸ್ಥಾನವನ್ನು ಕಾಶಿಯಷ್ಟೇ ಪವಿತ್ರ ಎನ್ನಲಾಗುತ್ತದೆ. ಐತಿಹಾಸಿಕ ದೇವಸ್ಥಾನ ಇದಾಗಿದ್ದು, ತನ್ನದೇ ಆದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅಸ್ಥಿ ವಿಸರ್ಜನೆ ಮಾಡುವವರು ಕಾಶಿಯಲ್ಲಿ ವಿಸರ್ಜಿಸಲು ಸಾಧ್ಯವಾಗದಿದ್ದಲ್ಲಿ ಇಲ್ಲಿ ಅಸ್ಥಿ ವಿಸರ್ಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ.

ವಾರಣಾಸಿಯಷ್ಟೇ ಪವಿತ್ರ
ಈ ದೇವಾಲಯವು ವೈಗೈ ನದಿಯ ದಕ್ಷಿಣದ ದಂಡೆಯ ಮೇಲೆ ತಿರುಪ್ಪುವಂನಲ್ಲಿದೆ. ಈ ಶಿವಸ್ಥಳವನ್ನು ವಾರಣಾಸಿಯಷ್ಟೇ ಪವಿತ್ರವೆಂದು ಪರಿಗಣಿಸಲಾಗಿದೆ. ವೈಗೈ ನದಿಯು ಇಲ್ಲಿ ಉತ್ತರಕ್ಕೆ ತಿರುಗುತ್ತದೆ ಮತ್ತು ನಂತರ ಪೂರ್ವಕ್ಕೆ ಹರಿಯುತ್ತದೆ. ಮುಖ್ಯ ಪ್ರವೇಶದ್ವಾರದಲ್ಲಿ 5 ಹಂತದ ಗೋಪುರವಿದೆ. ತಿರುಪುವಣಂನಲ್ಲಿರುವ ದೇವಾಲಯವು ದೇವಸ್ಥಾನದ ಮುಖ್ಯ ಪ್ರವೇಶದ್ವಾರದಲ್ಲಿಸಣ್ಣಗೋಪುರವನ್ನು ಹೊಂದಿದೆ. ಈ ದೇವಸ್ಥಾನವು ಪಾಂಡ್ಯ ರಾಜರ ರಾಜಮನೆತನವನ್ನು ಪಡೆದುಕೊಂಡಿತು ಮತ್ತು ನಂತರ ಮಧುರೈನಿಂದ ಆಳಿದ ನಾಯಕ್ ರಾಜರು ಇದನ್ನು ಪಡೆದರು.

ದಂತ ಕಥೆಯ ಪ್ರಕಾರ
ಪೂವನಾನಾಥರನ್ನು ಆರಾಧಿಸುವ ಉದ್ದೇಶದಿಂದ ಸಂಬಂದರ್ ವೈಗೈ ನದಿಯ ಉತ್ತರ ದಂಡೆಯಲ್ಲಿ ತಿರುಪುವಣಕ್ಕೆ ಭೇಟಿ ನೀಡುತ್ತಾನೆ. ನದಿಯ ಇನ್ನೊಂದು ಬದಿಯಲ್ಲಿರುವ ದೇವಸ್ಥಾನ ಪೂವನಾನಾಥರನ್ನು ಪೂಜಿಸಲು ಬಯಸಿದನು. ಆದರೆ ಆತ ವೈಗೈ ನದಿಯ ಮರಳಿನಲ್ಲಿ ಸಾವಿರಾರು ಶಿವಲಿಂಗಗಳನ್ನು ಕಾಣುತ್ತಾನೆ ಹಾಗಾಗಿ ವೈಗೈ ನದಿಯ ಮರಳಿನ ಮೇಲೆ ತನ್ನ ಪಾದವನ್ನು ಇಬಾರದೆಂದು ಸಮಬಾಂದರ್ ನಿರ್ಧರಿಸಿದನು . ಇನ್ನೊಂದು ದಡದಲ್ಲಿರುವ ಸುಂಬಂದರ್‌ಗೆ ಶಿವನ ದರ್ಶನವಾಗಲಿ ಎಂದು ಶಿವನು ಗರ್ಭಗುಡಿಯ ಮುಂದಿದ್ದ ನಂದಿಗೆ ಸ್ವಲ್ಪ ಸರಿಯುವಂತೆ ಆದೇಶಿಸಿದನು. ಹಾಗಾಗಿ ಈ ದೇವಸ್ಥಾನದಲ್ಲಿ ನಂದಿಯು ಶಿವನ ನೇರಕ್ಕೆಇಲ್ಲ.

ದಂತಕಥೆಯ ಪ್ರಕಾರ
ವಿಷ್ಣು ಮತ್ತು ಅವನ ಪತ್ನಿ ತಿರುಮಗಲ್, ಬ್ರಹ್ಮದೇವ, ಭಗವಾನ್ ಶಿವನ ಸಂಗಾತಿ ಉಮಾದೇವಿ, ಅಗಸ್ತ್ಯಋಷಿ , ಮಾರ್ಕಂಡೇಯರ್ ಋಷಿ , ವಸಿಷ್ಠ ಋಷಿ , ಇಂದ್ರ, ಸೂರ್ಯರು ಈ ಶಿವಸ್ತಮದಲ್ಲಿ ಭಗವಾನ್ ಪೂಜನಾನಾಥನನ್ನು ಪೂಜಿಸಿದ್ದರು ಎಂದು ಹೇಳಲಾಗುತ್ತದೆ. ಸಂತಾನ ಭಾಗ್ಯ, ಕಂಕಣ ಭಾಗ್ಯ, ಉತ್ತಮ ವಿದ್ಯಾಭ್ಯಾಸಕ್ಕಾಗಿ ಭಕ್ತರು ಇಲ್ಲಿ ಪ್ರಾರ್ಥಿಸುತ್ತಾರೆ.

ಶಿವನ ಭಕ್ತೆ ಪೊನ್ನನೈಲ್
ಈ ಕಥೆಯ ತಿರುಪೂರವಾನಂನಲ್ಲಿ ವಾಸವಾಗಿದ್ದ ಪೂವನಾನಾಥರ್ ಅವರ ಪರಮ ಭಕ್ತೆ ಪೊನ್ನನೈಲ್ ಅವರ ಜೀವನವನ್ನು ನಿರೂಪಿಸುತ್ತದೆ. ಬೆಳಿಗ್ಗೆ ವೈಗೈ ನದಿಯಲ್ಲಿ ಪ್ರತಿದಿನ ಆಕೆ ಸ್ನಾನ ಮಾಡಿ ದೇವರಿಗೆ ಹಾರವನ್ನು ಅರ್ಪಿಸಿ ಶಿವನ ಮುಂದೆ ನೃತ್ಯ ಮಾಡುತ್ತಿದ್ದಳು. ಶಿವನ ಬಂಗಾರದ ವಿಗ್ರಹವನ್ನು ಮಾಡಿಸಬೇಕೆಂಬ ಆಸೆ ಆಕೆಯ ಮನದಲ್ಲಿತ್ತು. ಆಕೆಯ ಭಕ್ತಿಗೆ ಮೆಚ್ಚಿದ ಶಿವ ಸಿದ್ಧಾರನ ವೇಷದಲ್ಲಿ ಆಕೆಯ ಮುಂದೆ ಕಾಣಿಸಿಕೊಂಡನು. ತಾನು ಯಾವುದೇ ಲೋಹವನ್ನು ಚಿನ್ನದ ರೂಪದಲ್ಲಿ ಬದಲಾಯಿಸುವುದಾಗಿ ತಿಳಿಸುತ್ತಾನೆ.

ಚಿನ್ನದ ಮೂರ್ತಿ
ಪೊನ್ನನೈಲ್ ತನ್ನ ಮನೆಯಲ್ಲಿದ್ದ ಎಲ್ಲಾ ಪಾತ್ರೆಗಳನ್ನು ಅವನಿಗೆ ಒಪ್ಪಿಸಿದರು. ವೇಷದಲ್ಲಿ ಸಿದ್ಧಾರ್ ಶಿವನು ಪವಿತ್ರ ಬೂದಿಗಳನ್ನು ಆ ಪಾತ್ರೆಗಳ ಮೇಲೆ ಚಿಮುಕಿಸಿ ಪೊನ್ನನೈಲ್‌ಗೆ ಮುಂದಿನ ದಿನ ಬೆಳಿಗ್ಗೆ ಚಿನ್ನವಾಗಿ ತಿರುಗುತ್ತದೆ ಎಂದು ತಿಳಿಸಿ ತೆರಳುತ್ತಾನೆ. ಮರುದಿನ ಬೆಳಗಿನ ಪೊನ್ನನೈಲ್ ಚಿನ್ನವನ್ನು ಕಂಡುಕೊಂಡಾಗ, ಆಕೆ ಆ ಚಿನ್ನವನ್ನು ಅಕ್ಕಸಾಲಿಗನಿಗೆ ಕೊಟ್ಟು ತಾನು ಬಯಸಿದಂತೆಯೇ ಚಿನ್ನದ ವಿಗ್ರಹವನ್ನು ತಯಾರಿಸುತ್ತಾಳೆ. ಈ ಚಿನ್ನದ ವಿಗ್ರಹದ ಸೌಂದರ್ಯದಿಂದ ರೋಮಾಂಚನಗೊಂಡ ಪೊನ್ನನೈಲ್ ದೇವತೆಯ ಕೆನ್ನೆಗೆ ಚಿವುಟುತ್ತಾಳೆ. ಸೋಮಸ್ಕಂದರ್ ಅಲಿಯಾಸ್ ಅಳಜಿಯ ನಾಯರ್ ಅವರ ಈ ವಿಗ್ರಹದಲ್ಲಿ ಇಂದಿಗೂ ಚಿವುಟಿದ ಚಿಹ್ನೆಯನ್ನು ಕಾಣಬಹುದು.

ಅನೇಕ ಹೆಸರುಗಳಿವೆ
ಈ ಸ್ಥಳವನ್ನು ಅನೇಕ ಹೆಸರಿನಿಂದ ಕರೆಯಲಾಗುತ್ತದೆ. ಪುಪ್ಪವಂಕಾಶಿ, ಪಿತೃಮೋಕ್ಷಪುರಂ, ಭಾಸ್ಕರಪುರಂ, ಲಕ್ಷ್ಮೀಪುರಂ, ಬ್ರಹ್ಮಪುರಂ, ರಸವಾದರಪುರಂ. ಪುಷ್ಪವನೀಶ್ವರಂ ತನ್ನ ಪತ್ನಿ ಸೌಂದರ್ಯನಾಯಕಿ ಜೊತೆ ಸೇರಿ ಅನೇಕ ಪವಾಡಗಳನ್ನು ನಡೆಸಿದ್ದಾರೆ. ಭಕ್ತರ ಸಂಕಷ್ಟಗಳನ್ನು ದೂರ ಮಾಡಿದ್ದಾರೆ. ಹಾಗಾಗಿ ಈ ಸ್ಥಳವು ಬಹಳ ಪವಿತ್ರವಾದದ್ದು ಎನ್ನಲಾಗುತ್ತದೆ.
ಅಸ್ಥಿ ವಿಸರ್ಜನೆ
ಈ ತಾಣವು ಕಾಶಿಗಿಂತಲೂ ಪವಿತ್ರವಾದದ್ದಂತೆ, ಒಂದು ವೇಳೆ ಕಾಶಿಯ ಗಂಗಾ ನದಿಯಲ್ಲಿ ಅಸ್ಥಿಯನ್ನು ವಿಸರ್ಜಿಸಲು ಸಾಧ್ಯವಾಗದಿದ್ದಲ್ಲಿ , ತಿರುಪುವನಮ್‌ನ ವೈಗೈ ನದಿಯಲ್ಲಿ ಅಸ್ಥಿಯನ್ನು ವಿಸರ್ಜಿಸಿ ಮೋಕ್ಷ ದೀಪವನ್ನು ಬೆಳಗಿಸಿದರೆ ಸಾಕಂತೆ. ಈ ದೇವಾಲಯದಲ್ಲಿ ಐದು ತೀರ್ಥಗಳಿವೆ.

ತಲುಪುವುದು ಹೇಗೆ?
ಮಧುರೈನಿಂದ ಆಗ್ನೇಯಕ್ಕೆ 20 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಮಧುರೈನಿಂದ ರಸ್ತೆ ಮತ್ತು ರೈಲು ಸೇವೆಗಳು ಸಂಪರ್ಕಿಸುತ್ತದೆ. ದಕ್ಷಿಣ ರೈಲ್ವೆಯ ಮಧುರೈ-ಮನಾಮಧುರೈ ವಿಭಾಗದಲ್ಲಿ ತಿರುಪುವಾಣದಲ್ಲಿ ರೈಲು ನಿಲ್ದಾಣವಿದೆ. ಮಧುರೈನಿಂದ ಟೌನ್ ಬಸ್ ಮತ್ತು ನಿಯಮಿತ ಬಸ್ ಸೇವೆಗಳು ತಿರುಪ್ಪುವಣಂಗೆ ಹೋಗಲು ಲಭ್ಯವಿದೆ.