Search
  • Follow NativePlanet
Share
» »ಬಲು ಹತ್ತಿರ... ಬೇಗ ಹೋಗಿ ಬೇಗ ಬರಬಹುದು...

ಬಲು ಹತ್ತಿರ... ಬೇಗ ಹೋಗಿ ಬೇಗ ಬರಬಹುದು...

By Divya

ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕೊಳ್ಳಲು ಹಲವರು ಇಷ್ಟಪಡುವುದಿಲ್ಲ. ಬೆಂಗಳೂರಿಗೆ ಹತ್ತಿರದಲ್ಲೇ ಇರುವುದಾದರೆ ನೋಡೋಣ ಎನ್ನುವ ಮನಃ ಸ್ಥಿತಿ ಇರುತ್ತದೆ. ಈ ಕಾರಣಕ್ಕೆ ನಾನು ಬೆಂಗಳೂರಿನಿಂದ 300 ಕಿ.ಮೀ. ವ್ಯಾಪ್ತಿಯಲ್ಲಿರುವ ತಾಣಗಳ ಫೋಟೊ ಪರಿಚಯ ಮಾಡುತ್ತಿದ್ದೇನೆ. ಇಲ್ಲಿಗೆ ಹೋದರೆ ವಾರದ ರಜೆ ಸುಖಾಂತ್ಯ ಕಂಡು, ಪುನಃ ಕೆಲಸದ ಆರಂಭಕ್ಕೆ ಹೊಸ ಉತ್ಸಾಹ ಮೂಡುವುದು.

ಹಾರ್ಸ್ಲೆ ಗಿರಿ

ಹಾರ್ಸ್ಲೆ ಗಿರಿ

ಸುಂದರವಾದ ಗಿರಿಧಾಮ, ಪಕ್ಷಿಗಳ ವೀಕ್ಷಣೆ ಹಾಗೂ ಸೂರ್ಯಾಸ್ತದ ಸೊಬಗನ್ನು ಸವಿಯಲು ವೇದಿಕೆಯಂತಿರುವುದು ಹಾರ್ಸ್ಲೆ ಗಿರಿಧಾಮ. ಬೆಂಗಳೂರಿನಿಂದ 144.2.ಕಿ.ಮೀ ದೂರದಲ್ಲಿದೆ.
PC: flickr.com

ಯಳಗಿರಿ ಬೆಟ್ಟ

ಯಳಗಿರಿ ಬೆಟ್ಟ

ಬೆಂಗಳೂರಿನಿಂದ 159 ಕಿ.ಮೀ ದೂರದಲ್ಲಿರುವ ಈ ತಾಣ ಚಾರಣಕ್ಕೆ ಯೋಗ್ಯವಾದ ಸ್ಥಳ. ಇಲ್ಲಿಯ ಸುಂದರ ಪರಿಸರದಲ್ಲಿ ಇರುವ ಹಳ್ಳಿಗಳ ಪ್ರವಾಸವನ್ನು ಮಾಡಬಹುದು. ವ್ಯಾಲಿ ಪ್ರವಾಸ ಹಾಗೂ ಜಂಗಲ್ ಪ್ರವಾಸಕ್ಕೂ
ಇದು ಸೂಕ್ತ ತಾಣ. ಕಡಿಮೆ ಸಮಯದಲ್ಲಿ ಹೋಗಿ ಬರಬಹುದು.
PC: flickr.com

ಬಿಳಿಗಿರಿ ರಂಗನಾಥನ ಬೆಟ್ಟ

ಬಿಳಿಗಿರಿ ರಂಗನಾಥನ ಬೆಟ್ಟ

ಪಶ್ಚಿಮ ಹಾಗೂ ಪೂರ್ವ ಘಟ್ಟಗಳ ಸಂಗಮದಲ್ಲಿರುವ ತಾಣ ಇದು. ಬೆಂಗಳೂರಿನಿಂದ 182 ಕಿ.ಮೀ. ಅಂತರದ ಈ ತಾಣದಲ್ಲಿ ಚಾರಣ, ವನ್ಯಜೀವಿ ಧಾಮ, ಗುಡ್ಡಗಳಲ್ಲಿ ಬೈಕಿಂಗ್, ವನ್ಯ ಜೀವಿಗಳ ಚಿತ್ರೀಕರಣ ಹಾಗೂ ಬೆಟ್ಟದ ಮೇಲೆ ಶಿಬಿರಗಳನ್ನು ಕೈಗೊಳ್ಳಬಹುದು.
PC: flickr.com

ಕೊಡಗು

ಕೊಡಗು

ಸದಾ ಹಸಿರಾಗಿಯೇ ಕಂಗೊಳಿಸುವ ಕೊಡಗು ಪ್ರವಾಸ ತಾಣಕ್ಕೆ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನಿಂದ 260 ಕಿ.ಮೀ. ದೂರದಲ್ಲಿರುವ ಈ ತಾಣದಲ್ಲಿ ಚಾರಣ, ರಾಫ್ಟಿಂಗ್, ವನ್ಯ ಜೀವಿಧಾಮ, ಪವಿತ್ರ ಕ್ಷೇತ್ರಗಳು ಹಾಗೂ ಅನೇಕ ಜಲಧಾರೆಗಳನ್ನು ನೋಡಬಹುದು. ಪರಿಸರ ಪ್ರೇಮಿಗಳಾಗಿದ್ದರೆ ಹಾಗೇ ಇಲ್ಲಿರುವ ಹಳ್ಳಿಗಳಿಗೆ ತೆರಳಿ ಅಲ್ಲಿಯ ಸೊಗಡನ್ನು ಸವಿಯಬಹುದು. ಛಾಯಾಚಿತ್ರಕಾರರಿಗೊಂದು ಸ್ವರ್ಗ ತಾಣ. ವೈನ್ ಪ್ರಿಯರಿಗೆ ವಿವಿಧ ಬಗೆಯ ಹೋಮ್ ಮೇಡ್ ವೈನ್ ದೊರೆಯುತ್ತವೆ.
PC: flickr.com

ಚಿಕ್ಕಮಗಳೂರು

ಚಿಕ್ಕಮಗಳೂರು

ಗಿರಿಧಾಮಗಳಿಗೆ ಹೆಸರಾದ ಚಿಕ್ಕಮಗಳೂರು ಬೆಂಗಳೂರಿನಿಂದ 245 ಕಿ.ಮೀ. ದೂರದಲ್ಲಿದೆ. ಒಳ್ಳೆಯ ಸೌಲಭ್ಯಗಳನ್ನು ಒದಗಿಸುವ ಹೋಂ ಸ್ಟೇಗಳು ಇಲ್ಲಿವೆ. ಕಾಫಿ ಬೆಳೆಗೆ ಪ್ರಿಸಿದ್ಧವಾದ ಈ ತಾಣದಲ್ಲಿ ಸುಮ್ಮನೆ ಒಂದು ದಿನ ಹಸಿರು ಸಿರಿಯ ಮಧ್ಯೆ ಹಾಯಾಗಿ ಇರಬಹುದು.
PC: flickr.com

ವಯನಾಡು

ವಯನಾಡು

ಸಾಹಸ ಕ್ರೀಡೆಗಳಾದ ರಾಫ್ಟಿಂಗ್, ಹೈಕಿಂಗ್, ಆಂಗ್ಲಿಂಗ್, ಬೆಟ್ಟಗಳಲ್ಲಿ ಶಿಬಿರ ಹಾಗೂ ರಾತ್ರಿ ಚಾರಣಗಳನ್ನು ಇಲ್ಲಿ ಮಾಡಬಹುದು. ರಮ್ಯವಾದ ಪ್ರಕೃತಿ ಸೌಂದರ್ಯ ಹೊಂದಿರುವ ಈ ತಾಣ ಬೆಂಗಳೂರಿನಿಂದ 271 ಕಿ.ಮೀ. ದೂರದಲ್ಲಿದೆ. ಇಲ್ಲಿಯ ವಾತಾವರಣ ಮನಸ್ಸಿಗೊಂದು ನೆಮ್ಮದಿ ನೀಡುವುದು.
PC: flickr.com

ಊಟಿ

ಊಟಿ

ಕಾಫಿ ಬೆಳೆ ಬೆಳೆಯುವ ಈ ತಾಣದಲ್ಲಿ ಅನೇಕ ಉದ್ಯಾನವನಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಇಲ್ಲಿಯ ವಾತಾವರಣವನ್ನು ಸವಿಯುವುದೇ ಒಂದು ಸುಖ. ಉತ್ತಮ ಛಾಯಾಚಿತ್ರೀಕರಣ ಹಾಗೂ ಹಸಿರು ಸಿರಿಯ ಮಧ್ಯೆ ಓಡಾಡಲು ಸೂಕ್ತ ಜಾಗ. ಇದು ಬೆಂಗಳೂರಿನಿಂದ 275 ಕಿ.ಮೀ. ದೂರದಲ್ಲಿದೆ.
PC: wikipedia.org

ಯೆರ್ಕಾಡ್

ಯೆರ್ಕಾಡ್

ಬೆಂಗಳೂರಿನಿಂದ 228 ಕಿ.ಮೀ. ದೂರದಲ್ಲಿರುವ ಈ ತಾಣ ಗಿರಿ-ಶಿಖರಗಳಿಗೆ ಹೆಸರಾಗಿದೆ. ದಟ್ಟ ಅರಣ್ಯದ ಚಾರಣ, ಅರಣ್ಯದೊಳಗೆ ಶಿಬಿರ, ಛಾಯಾಚಿತ್ರೀಕರಣ, ವನ್ಯ ಜೀವಿಗಳ ವೀಕ್ಷಣೆ ಹಾಗೂ ಪಕ್ಷಿಗಳ ವೀಕ್ಷಣೆಗೊಂದು ಸುಂದರ ತಾಣ.
PC: flickr.com

Read more about: ooty coorg wayanad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X