Search
  • Follow NativePlanet
Share
» » ಕುಣಿಗಲ್‌ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿ

ಕುಣಿಗಲ್‌ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿ

ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ಈ ಹಾಡನ್ನು ಬಹುತೇಕರು ಕೇಳಿದ್ದಾರೆ. ಪಠ್ಯ ಪುಸ್ತಕದಲ್ಲೂ ಈ ಹಾಡನ್ನು ಅಳವಡಿಸಲಾಗಿತ್ತು. ಈ ಜನಪದ ಹಾಡು ಕುಣಿಗಲ್ ಕೆರೆಯ ಅಂದವನ್ನು ಬಿಚ್ಚಿಟ್ಟಿದೆ. ನಾವಿಂದು ತುಮಕೂರು ಬಳಿ ಇರುವ ಈ ಸುಂದರ ಕುಣಿಗಲ್‌ ಕೆರೆ ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ತಾಣಗಳ ಬಗ್ಗೆ ತಿಳಿಸಲಿದ್ದೇವೆ.

ನರ್ತನಪುರಿ ಎನ್ನಲಾಗುತ್ತಿತ್ತು

ನರ್ತನಪುರಿ ಎನ್ನಲಾಗುತ್ತಿತ್ತು

PC:Prof tpms
ಕುಣಿಗಲ್ ಕರ್ನಾಟಕದ ತುಮಕೂರು ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಕುಣಿಗಲ್ ತಾಲೂಕಿನ ಪ್ರಧಾನ ಕಚೇರಿಯಾಗಿದೆ. ಈ ಊರನ್ನು ಹಿಂದೆ ನರ್ತನಪುರಿ ಎನ್ನಲಾಗುತ್ತಿತ್ತು. ಆದರೆ ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಈಗ ಕುಣಿಗಲ್ ತುಮಕೂರಿನ ಆಡಳಿತ ಕಚೇರಿಯಾಗಿದೆ. ಕುಣಿಗಲ್ ಬೆಂಗಳೂರು-ಹಾಸನ ರಸ್ತೆಯಲ್ಲಿ ತುಮಕೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿದೆ ಮತ್ತು ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ. ಕುಣಿಗಲ್ ತಾಲ್ಲೂಕು ಕಸಬಾ,ಕೊತ್ತಗೆರೆ,ಹುತ್ರಿದುರ್ಗ,ಹುಲಿಯೂರುದುರ್ಗ,ಅಮೃತೂರು,ಎಡೆಯೂರು ಎನ್ನುವ 6 ಹೋಬಳಿಗಳನ್ನು ಹೊಂದಿದೆ.

ಕುಣಿಯುವ ಕಲ್ಲು

ಕುಣಿಯುವ ಕಲ್ಲು

C: Prof tpms P
ಮೊದಲಿಗೆ ಕುಣಿಯುವ ಕಲ್ಲು ಎನ್ನಲಾಗುತ್ತಿತ್ತು, ಕ್ರಮೇಣವಾಗಿ ಕುಣಿ ಕಲ್ ಎನ್ನಲಾಯಿತು. ಆ ನಂತರ ಕುಣಿಗಲ್ ಆಯಿತು. ಜನಪದದ ಪ್ರಕಾರ ಲೋಕ ಸಂಚಾರದ ಸಂದರ್ಭದಲ್ಲಿ ಶಿವನು ಪಾರ್ವತಿಯೊಂದಿಗೆ ಇಲ್ಲಿ ನೃತ್ಯ ಮಾಡಿದ್ದನ್ನು ಎನ್ನಲಾಗುತ್ತದೆ.

ಸ್ಟಡ್ ಫಾರಂ

ಸ್ಟಡ್ ಫಾರಂ

PC: Cgoodwin
ಟಿಪ್ಪು ಸುಲ್ತಾನ್ ಪ್ರಾರಂಭಿಸಿದನೆಂದು ಹೇಳಲಾಗುವ ಸ್ಟಡ್ ಫಾರಂ ಕುಣಿಗಲ್ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಂತೆ ಇದೆ. 500 ಎಕರೆ ವಿಸ್ತೀರ್ಣವನ್ನು ಹೊಂದಿದ್ದ ಈ ಸ್ಟಡ್ ಫಾರಂ, ನ್ಯಾಯಾಲಯ ಕಟ್ಟಡಗಳು, ಲೋಕೋಪಯೋಗಿ, ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆ ಕಛೇರಿ, ವಸತಿಗೃಹ, ಪರಿವಿಕ್ಷಣಾ ಮಂದಿರ, ಪ್ರಥಮ ದರ್ಜೆ ಕಾಲೇಜು, ಕೋರ್ಟ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮುಂತಾದವುಗಳಿಗೆ ಜಾಗ ಬಿಟ್ಟುಕೊಡುತ್ತಾ 400 ಎಕರೆ ಜಾಗವನ್ನಷ್ಟೇ ಉಳಿಸಿಕೊಂಡಿದೆ. ಸೈನ್ಯಕ್ಕೆ ಕುದುರೆಗಳನ್ನು ಒದಗಿಸುತ್ತಿದ್ದ ಈ ಸ್ಟಡ್ ಫಾರಂನಲ್ಲಿ ಈಗ ರೇಸ್ ಕುದುರೆಗಳನ್ನು ಸಾಕಲಾಗುತ್ತಿದೆ. ಇತ್ತೀಚೆಗೆ ಯುನೈಟೆಡ್ ರೇಸರ್ಸ್ ಮತ್ತು ಬ್ರೀಡರ್ಸ್ ಸಂಸ್ಥೆಯು ಈ ಸ್ಟಡ್ ಫಾರಂಅನ್ನು ಲೀಸ್ ಮೇಲೆ ಪಡೆದು, ಇಲ್ಲಿ ರೇಸ್ ಕುದುರೆಗಳ ತಳಿ ಅಭಿವೃದ್ದಿ ಪಡಿಸುತ್ತಲಿದೆ.

ಶ್ರೀ ಬೆಟ್ಟದ ರಂಗನಾಥ ಸ್ವಾಮಿ

ಶ್ರೀ ಬೆಟ್ಟದ ರಂಗನಾಥ ಸ್ವಾಮಿ

ಇದೊಂದು ಸುಂದರ ಪ್ರವಾಸಿ ತಾಣವಾಗಿದೆ. ಕುಣಿಗಲ್‌ ಸಿಟಿಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಸುತ್ತಲೂ ಕಾಡಿನಿಂದ ಆವರಿಸಿದೆ. ಈ ದೇವಸ್ಥಾನದಿಂದ ನೀವು ಕುಣಿಕಲ್ ಕೆರೆ ಹಾಗೂ ಕುಣಿಕಲ್ ಸಿಟಿಯ ನೋಟವನ್ನೂ ಪಡೆಯಬಹುದು.

ಹುಲಿಯೂರು ದುರ್ಗ

ಹುಲಿಯೂರು ದುರ್ಗ

PC:Gopakumar V R
ಕುಣಿಗಲ್ ನಿಂದ ದಕ್ಷಿಣಕ್ಕೆ 26 ಕಿ.ಮೀ. ದೂರದಲ್ಲಿ ಬೆಟ್ಟದ ತಪ್ಪಲಲ್ಲಿ ಹುಲಿಯೂರು ದುರ್ಗವಿದೆ. ಈ ಊರಿನಲ್ಲಿ ಹಳೇವೂರಮ್ಮನ ದೇವಾಲಯವಿದೆ . 16ನೇ ಶತಮಾನದ ಕೊನೆಯಲ್ಲಿ ಕೆಂಪೇಗೌಡನು ಕುಂಭಿ ಬೆಟ್ಟದಲ್ಲಿ ಕೋಟೆಯನ್ನು ಕಟ್ಟಿದ ನಂತರ ಹುಲಿಯೂರು ದುರ್ಗವಾಯಿತು ಎನ್ನಲಾಗುತ್ತದೆ. ಮಲ್ಲಿಕಾರ್ಜುನ ದೇವಾಲಯವು ಹುಲಿಯೂರು ದುರ್ಗದ ಪಕ್ಕದಲ್ಲಿ ಹೇಮಗಿರಿ ಬೆಟ್ಟದ ಶಿಖರದಲ್ಲಿದೆ.

ಹುತ್ರಿದುರ್ಗ

ಹುತ್ರಿದುರ್ಗ

PC:Srinivasa S
ಇದನ್ನು ದೊಡ್ಡ ಬೆಟ್ಟ ಎಂದು ಕರೆಯಲಾಗುತ್ತಿತ್ತು. ಇದು ಕುಣಿಗಲ್‌ನ ಆಗ್ನೇಯ ದಿಕ್ಕಿನಲ್ಲಿದೆ. ಇದನ್ನು 16ನೇ ಶತಮಾನದಲ್ಲಿ ಕೆಂಪೆಗೌಡ ನಿರ್ಮೀಸಿದನು. ಐತಿಹಾಸಿಕವಾಗಿ ಹುತ್ರಿದುರ್ಗ ಕೋಟೆ ಬ್ರಿಟಿಷ್ ವಿರುದ್ಧ ಟಿಪ್ಪು ಸುಲ್ತಾನನ ಮಿಲಿಟರಿ ಕೋಟೆಯಾಗಿದ್ದು, ಇದನ್ನು 1791 ರಲ್ಲಿ ವಶಪಡಿಸಿಕೊಂಡಿತು. ಶಿವನಿಗೆ ಅರ್ಪಿತವಾದ ಸಣ್ಣ ದೇವಸ್ಥಾನವಿದೆ. ಇದನ್ನು ಶಾಕಾರೇಶ್ವರ ದೇವಸ್ಥಾನ ಎನ್ನುತ್ತಾರೆ. ಬೆಟ್ಟದ ತುದಿಯಲ್ಲಿ ಒಂದು ನಂದಿ ಮೂರ್ತಿ ಮತ್ತು ಮಧ್ಯದಲ್ಲಿ ಆಂಜನೇಯ ದೇವಸ್ಥಾನವಿದೆ. ಆದಿ ನಾರಾಯಣಸ್ವಾಮಿ ಮತ್ತು ವೀರಭದ್ರ ದೇವಾಲಯಗಳು ಹಳ್ಳಿಯಲ್ಲಿವೆ. ದೇವರಿಗೆ ಸೋಮವಾರ ಮತ್ತು ಶುಕ್ರವಾರ ಮಾತ್ರ ಪೂಜೆಯನ್ನು ಮಾಡಲಾಗುತ್ತದೆ.

ಕುಣಿಗಲ್ ಕೆರೆ

ಕುಣಿಗಲ್ ಕೆರೆ

ಈ ಕೆರೆಯು 15 ಮೈಲಿ ಸುತ್ತಳತೆಯುಳ್ಳದ್ದಾಗಿದ್ದು, ಇತ್ತೀಚೆಗೆ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ . ಕೆರೆಯ ಏರಿಯ ಮೇಲೆ ಹೊಯ್ಸಳರ ಕಾಲದ ಪ್ರಾಚೀನ ಸೋಮೇಶ್ವರ ದೇವಾಲಯವಿದೆ. ಈ ಕೆರೆಯ ನೀರು ಸುತ್ತಮುತ್ತಲ ಹಳ್ಳಿಗಳಿಗೆ ಕೃಷಿಗೆ, ತೋಟಕ್ಕೆ ಬಳಸಲಾಗುತ್ತಿತ್ತು. ಈ ಕೆರೆಯಲ್ಲಿ ಗಂಗಮ್ಮನಿಗೆ ಪೂಜೆ ಸಲ್ಲಿಸಿ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಅಮೃತೂರು

ಅಮೃತೂರು

ಕುಣಿಗಲ್ ಪಟ್ಟಣದ ನೈರುತ್ಯ ಸುಮಾರು 11 ಕಿ.ಮೀ. ದೂರದಲ್ಲಿರುವ ಅಮೃತೂರು ಎನ್ನುವುದು ಹೋಬ್ಲಿಯ ಪ್ರಧಾನ ಕಛೇರಿಯಾಗಿದೆ. ಪ್ರಾಚೀನ ಕಾಲದಲ್ಲಿ ಈ ಸ್ಥಳವು ಒಂದು ಅಗ್ರಹಾರವಾಗಿತ್ತು ಮತ್ತು ಇದನ್ನು ಅಟಕುರ್ ಮತ್ತು ವೀರ-ನರಸಿಂಹಾಪುರ ಎಂದು ಕರೆಯಲಾಗುತ್ತಿತ್ತು. ಇಲ್ಲಿದ್ದ ಚೆನ್ನಕೇಶವ ದೇವಸ್ಥಾನವು 16 ನೇ ಶತಮಾನದಲ್ಲಿ ದ್ರಾವಿಡ ಶೈಲಿಯ ವಾಸ್ತುಶೈಲಿಯ ಪ್ರಾತಿನಿಧ್ಯವಾಗಿತ್ತು. ಈ ಸ್ಥಳದಲ್ಲಿರುವ ಚಂದ್ರಮೌಳಿಶ್ವರ ಎಂದು ಕರೆಯಲ್ಪಡುವ ಸೋಮೇಶ್ವರ ದೇವಸ್ಥಾನವು 16 ನೇ ಶತಮಾನಕ್ಕೆ ಸೇರಿದ್ದಾಗಿದೆ.

ಯಡಿಯೂರು

ಯಡಿಯೂರು

ಯಡಿಯೂರು ಹೋಬ್ಲಿಯ ಪ್ರಧಾನ ಕಛೇರಿಯಾಗಿದೆ. ಕುಣಿಗಲ್‌ನ ನೈಋತ್ಯ ದಿಕ್ಕಿನಲ್ಲಿ ಸುಮಾರು 19 ಕಿ.ಮೀ.ದೂರದಲ್ಲಿ ಯಡಿಯೂರು ಇದೆ. ಇಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನವು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪದ ದೊಡ್ಡ ರಚನೆಯಾಗಿದೆ. 16 ನೇ ಶತಮಾನದಲ್ಲಿ ವಾಸಿಸುತ್ತಿದ್ದ ತೋಂಟಾದ ಸಿದ್ದಲಿಂಗ ಸ್ವಾಮಿಯ ಗದ್ದುಗೆ ಇಲ್ಲಿದೆ.
ಸಿದ್ದಲಿಂಗೇಶ್ವರ ಗೌರವಾರ್ಥವಾಗಿ ಕಾರ್ ಉತ್ಸವವನ್ನು ಮಾರ್ಚ್-ಏಪ್ರಿಲ್‌ನಲ್ಲಿ ನಡೆಸಲಾಗುತ್ತದೆ. ಇಲ್ಲಿ ವರದರಾಜ ದೇವಾಲಯ ಮತ್ತು ಇನ್ನಿತರ ವೀರಶೈವ ಮಠಗಳಿವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ನೀವು ಕುಣಿಗಲ್ ರೈಲಿನ ಮೂಲಕ ಹೋಗುವುದಾದರೆ ಕುಣಿಗಲ್‌ಗೆ ನೇರ ರೈಲು ಇಲ್ಲ. ಹಾಗಾಗಿ ಗುಬ್ಬಿ ನಿಲ್ದಾಣವು ಕುಣಿಗಲ್‌ಗೆ ಸಮೀಪದ ರೈಲು ನಿಲ್ದಾಣವಾಗಿದೆ. ಅಲ್ಲಿಂದ ಟ್ಯಾಕ್ಸಿ ಮೂಲಕ ಕುಣಿಗಲ್ ತಲುಪಬಹುದು.
ಬೆಂಗಳೂರಿನಿಂದ ಕುಣಿಗಲ್‌ಗೆ ಸುಲಭವಾಗಿ ತಲುಪ ಬೇಕಾದರೆ ನೀವು ಬಸ್‌ ಮೂಲಕ ಪ್ರಯಾಣಿಸುವುದು ಸೂಕ್ತ. ಬೆಂಗಳೂರು-ಕುಣಿಗಲ್ ಬಸ್‌ನಲ್ಲಿ ಪ್ರಯಾಣಿಸಿ. ಇನ್ನು ನೀವು ಬೆಂಗಳೂರಿನಿಂದ ಕುಣಿಗಲ್‌ಗೆ ಟ್ಯಾಕ್ಸಿ ಮೂಲಕ ಪ್ರಯಾಣಿಸಿದರೆ ಇನ್ನೂ ಬೇಗನೇ ತಲುಪುತ್ತೀರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X