Search
  • Follow NativePlanet
Share
» » ಈ ಮಂದಿರವನ್ನು ಚಮತ್ಕಾರಿ ದೇವಾಲಯ ಎಂದು ಯಾಕೆ ಕರೆಯುತ್ತಾರೆ?

ಈ ಮಂದಿರವನ್ನು ಚಮತ್ಕಾರಿ ದೇವಾಲಯ ಎಂದು ಯಾಕೆ ಕರೆಯುತ್ತಾರೆ?

ಮಾಧೋಪುರ ಹೆಸರಿನ ಸವಾಯಿ ಮಾದೋಪುರ್ ರಾಜಸ್ಥಾನದ ಒಂದು ಸುಂದರವಾದ ಪೌರಾಣಿಕ ನಗರವಾಗಿದೆ. ನೀವು ಇತಿಹಾಸ ಪ್ರೇಮಿಯಾಗಿದ್ದಲ್ಲಿ ಹಾಗೂ ರೋಮಾಂಚಕತೆಯಲ್ಲಿ ಆಸಕ್ತಿ ಹೊಂದಿದ್ದರೆ ನೀವು ಈ ಸ್ಥಳಕ್ಕೇ ಭೇಟಿ ನೀಡಲೇ ಬೇಕು. ಈ ಪ್ರಾಚೀನ ನಗರದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಹಾಗೂ ಕೋಟೆಗಳು ಇವೆ. ಇದು ಪ್ರವಾಸಿಗರನ್ನು ರೋಮಾಂಚಿತಗೊಳಿಸುತ್ತದೆ.

ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು

ಈ ನಗರವು ಪ್ರಸಿದ್ಧ ರಣಥಂಬೋರ್‌ ನ್ಯಾಷನಲ್ ಪಾರ್ಕ್‌ನ ಸಮೀಪವಿದೆ. ಇದು ವಿಭಿನ್ನ ಜೀವ ಜಗತ್ತುಗಳ ಜೊತೆಗೆ ತನ್ನ ವನ್ಯ ಜೀವನಕ್ಕೂ ಪ್ರಸಿದ್ಧಿಯಾಗಿದೆ. ಹಾಗಾಗಿ ಇದು ಭಾರತದ ಇತಿಹಾಸದ ಜೊತೆಗೆ ವಲ್ಡ್‌ ಲೈಫ್‌ ಪ್ರೇಮಿಗಳ ನಡುವೆಯೂ ಬಹಳ ಜನಪ್ರೀಯವಾಗಿದೆ.

ರಣಥಂಬೇಶ್ವರ ನ್ಯಾಷನಲ್ ಪಾರ್ಕ್‌

ರಣಥಂಬೇಶ್ವರ ನ್ಯಾಷನಲ್ ಪಾರ್ಕ್‌

PC: Aravalli Range

ರಣಥಂಬೇಶ್ವರ ನ್ಯಾಷನಲ್ ಪಾರ್ಕ್‌ ದೇಶದ ಪ್ರಸಿದ್ಧ ವನ್ಯಜೀವಿ ಧಾಮಗಳಲ್ಲಿ ಒಂದಾಗಿದೆ. ಇದು ಮುಖ್ಯ ನಗರದಿಂದ 11 ಕಿ.ಮೀ ದೂರದಲ್ಲಿದೆ. ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚು ಇದೆ. ಈ ಹುಲಿಗಳನ್ನು ನೋಡಿಕೊಳ್ಳಲು ಅಧಿಕಾರಿಗಳಿಗೆ ವಿಶೇಷ ರೀತಿಯಲ್ಲಿ ನಿರ್ದೇಶನವನ್ನು ನೀಡಲಾಗುತ್ತದೆ. ಹುಲಿಯನ್ನು ಹೊರತುಪಡಿಸಿ ಇಲ್ಲಿ ಇನ್ನಿತರ ವನ್ಯಜೀವಿಗಳನ್ನೂ ನೋಡಬಹುದು. ಪಕ್ಷಿ ಪ್ರಜಾತಿಗಳನ್ನು ನೋಡಬಹುದು.

ರಣಥಂಬೋರ್ ಕೋಟೆ

ರಣಥಂಬೋರ್ ಕೋಟೆ

PC: Farhan Khan

ವನ್ಯ ಜೀವಿ ಅಭಯಾರಣ್ಯವನ್ನು ಹೊರತುಪಡಿಸಿ ನೀವು ಇಲ್ಲಿ ಐತಿಹಾಸಿಕ ಕೋಟೆಯನ್ನು ನೋಡಬಹುದು. ರಣಥಂಬೋರ್ ಕೋಟೆಯು ರಾಜ್ಯದ ಪ್ರಾಚೀನ ಕೋಟೆಗಳಲ್ಲಿ ಒಂದಾಗಿದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನದ ಒಳಗೆ ಈ ಕೋಟೆಯನ್ನು 8ನೇ ಶತಮಾನದಲ್ಲಿ ಚೌಹಾನ ರಾಜರು ನಿರ್ಮಿಸಿದರು ಎನ್ನಲಾಗುತ್ತದೆ. ಈ ಕೋಟೆಯಲ್ಲಿ ಬಹಾದ್ದೂರ್‌ ಷಾ, ಫೀರೋಜ್ ಷಾ ತುಘಲಕ್, ಕುತುಬ್‌ ಉದ್‌ ದಿನ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಮೂಲಕ ಆಕ್ರಮಣಗಳಾಗುತ್ತಿದ್ದವು ಎನ್ನುತ್ತದೆ ಇಲ್ಲಿನ ಇತಿಹಾಸಕ್ಕೆ ಸಂಬಂಧಿಸಿದ ಸಾಕ್ಷ್ಯ.

ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು! ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!

ಖಂದರ್ ಕೋಟೆ

ಖಂದರ್ ಕೋಟೆ

PC: Rahulsahurahul

ರಣಥಂಬೋರ್ ಕೋಟೆಯನ್ನು ಹೊರತುಪಡಿಸಿ ನೀವು ಮುಖ್ಯ ನಗರದಿಂದ 40 ಕಿ.ಮಿ ದೂರದಲ್ಲಿ ಖಂದರ್‌ ಕೋಟೆಯನ್ನು ನೋಡಬಹುದು. ಇತಿಹಾಸದ ಸಾಕ್ಷ್ಯಗಳ ಪ್ರಕಾರ, ಈ ಕೋಟೆಯನ್ನು ಯಾವ ರಾಜ ನಿರ್ಮಿಸಿದ್ದನೋ ಆತನನ್ನು ಯಾರೂ ಸೋಲಿಸಲು ಸಾಧ್ಯವಾಗಿರಲಿಲ್ಲ. ಇತಿಹಾಸಕ್ಕೆ ಸಂಬಂಧಿಸಿದ ಈ ವಿಚಾರಗಳಿಂದಾಗಿ ಈ ಕೋಟೆಯು ಪ್ರವಾಸಿಗರ ನಡುವೆ ಜನಪ್ರೀಯವಾಗಿದೆ. ಕಾಲಕ್ರಮೇಣ ಈ ಕೋಟೆಯಲ್ಲಿ ಸಿಸೋಧಿಯಾ ರಾಜರಿಂದ ಹಿಡಿದು ಮೊಘಲ್ ರಾಜರು ಆಳ್ವಿಕೆ ನಡೆಸಿದರು. ಈ ಕೋಟೆಯ ಒಳಗೆ 7 ಮಂದಿರಗಳಿವೆ.

ಚೌಥ್‌ ಮಾತಾ ಮಂದಿರ

ಚೌಥ್‌ ಮಾತಾ ಮಂದಿರ

ಪ್ರಾಕೃತಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ಹೊರತುಪಡಿಸಿ ನೀವು ಇಲ್ಲಿ ಪ್ರಸಿದ್ಧ ಧಾರ್ಮಿಕ ಸ್ಥಳಗಳನ್ನೂ ನೋಡಬಹುದು. ಇಲ್ಲಿನ ಚೌಥ್ ಮಂದಿರದ ದರ್ಶನವನ್ನೂ ಪಡೆಯಬಹುದು. ನಗರದಿಂದ 45 ಕಿ.ಮೀ ದೂರದಲ್ಲಿರುವ ಈ ಮಂದಿರವು ಇಲ್ಲಿನ ಪ್ರಾಚೀನ ಮಂದಿರವಾಗಿದೆ. ಈ ಮಂದಿರವ ಮೂರ್ತಿಯನ್ನು ಬಾರ್‌ವಾಡದ ರಾಜ ಭೀಮ್ ಸಿಂಗ್ ತಂದಿದ್ದು ಎನ್ನಲಾಗುತ್ತದೆ. ಭೀಮ್ ಸಿಂಗ್ ಈ ಮಂದಿರವನ್ನು ಒಂದು ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಿದ್ದನು ನಂತರ ಅದಕ್ಕೆ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಿದನು ಎನ್ನಲಾಗುತ್ತದೆ. ಇಲ್ಲಿ ಚೌಥ್‌ ಮಾತಾ ಮೂರ್ತಿಯನ್ನು ಹೊರತುಪಡಿಸಿ ಗಣೇಶ ಹಾಗೂ ಬೈರವನ ಮೂರ್ತಿಯೂ ಇದೆ. ಗಣೇಶ ಚತುರ್ಥೀಯ ಸಂದರ್ಭ ಭವ್ಯ ಆಯೋಜನೆಯನ್ನು ನಡೆಸಲಾಗುತ್ತದೆ.

ಚಮತ್ಕಾರಿ ಮಂದಿರ

ಚಮತ್ಕಾರಿ ಮಂದಿರ

ಈ ಮೇಲಿನ ಸ್ಥಳಗಳನ್ನು ಹೊರತುಪಡಿಸಿ ನೀವು ಇಲ್ಲಿನ ಪ್ರಸಿದ್ಧ ಜೈನ ಮಂದಿರದ ದರ್ಶನವನ್ನೂ ಮಾಡಬಹುದು. ಈ ಜೈನ ಮಂದಿರವನ್ನು ಚಮತ್ಕಾರಿ ಮಂದಿರ ಎಂದೂ ಕರೆಯಲಾಗುತ್ತದೆ. ಇದರ ಹಿಂದೆ ಹಲವು ಕಥೆಗಳಿವೆ. ಇದು ಜೈನರ ಪವಿತ್ರಸ್ಥಾನವಾಗಿದೆ. ಹಿಂದೆ ನಡೆದ ಘಟನೆಗಳ ಕಾರಣದಿಂದಾಗಿ ಈ ಮಂದಿರವು ಅಸ್ತಿತ್ವಕ್ಕೆ ಬಂತು ಹಾಗಾಗಿ ಈ ಮಂದಿರಕ್ಕೆ ಚಮತ್ಕಾರಿ ಮಂದಿರ ಎನ್ನುವ ಹೆಸರು ಬಂದಿದೆ.

ಕಥೆಗಳ ಪ್ರಕಾರ, ಇಲ್ಲಿ ಓರ್ವ ರೈತನಿಗೆ ದೇವರು ಕನಸಿನಲ್ಲಿ ಬಂದು ಒಂದು ಸ್ಥಳದ ಬಗ್ಗೆ ಹೇಳಿ ಅಲ್ಲಿ ಅಗೆಯುವಂತೆ ತಿಳಿಸುತ್ತಾರೆ. ರೈತನು ಅದೇ ರೀತಿ ಆ ಸ್ಥಳದಲ್ಲಿ ಅಗೆಯುವಾಗ ಒಂದು ದೇವರ ಮೂರ್ತಿ ಸಿಗುತ್ತದೆ. ಆ ರೈತನು ಆ ಮೂರ್ತಿಯನ್ನು ಜೈನ ದಿಗಂಬರ ಸಾಧುಗಳಿಗೆ ಹಸ್ತಾಂತರಿಸುತ್ತಾನೆ.

ಅದೇ ರೈತನಿಗೆ ಮತ್ತೆ ದೇವರು ಕನಸಿನಲ್ಲಿ ಬಂದು ಆ ಮೂರ್ತಿಯನ್ನು ಒಂದು ಕುದುರೆಗಾಡಿಯಲ್ಲಿಡುವಂತೆ ಆದೇಶಿಸುತ್ತಾರೆ. ಆ ಕುದುರೆಗಾಡಿಯು ಎಲ್ಲಿ ನಿಲ್ಲುತ್ತದೋ ಅಲ್ಲೇ ಮಂದಿರ ನಿರ್ಮಿಸುವಂತೆ ತಿಳಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X