Search
  • Follow NativePlanet
Share
» »ವಿಜಯ್‌ ದೇವರಕೊಂಡನ ಬಗ್ಗೆ ಗೊತ್ತು ಆದ್ರೆ ದೇವರಕೊಂಡ ಕೋಟೆ ಬಗ್ಗೆ ಗೊತ್ತಾ?

ವಿಜಯ್‌ ದೇವರಕೊಂಡನ ಬಗ್ಗೆ ಗೊತ್ತು ಆದ್ರೆ ದೇವರಕೊಂಡ ಕೋಟೆ ಬಗ್ಗೆ ಗೊತ್ತಾ?

ರಜಾದಿನಗಳನ್ನು ಕಳೆಯಲು ನೀವು ಯಾವುದಾದರೂ ವಿಶೇಷ ಹಾಗೂ ವಿಭಿನ್ನ ಸ್ಥಳಗಳ ಅನ್ವೇಷಣೆಯಲ್ಲಿದ್ದರೆ ನೀವು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿರುವ ನಲಗೊಂಡದ ಪ್ರವಾಸವನ್ನು ಕೈಗೊಳ್ಳಬಹುದು. ನಲಗೊಂಡದಲ್ಲಿ ನೀವು ಪ್ರಾಕೃತಿಕ ಸೌಂದರ್ಯದಿಂದ ಹಿಡಿದು ಐತಿಹಾಸಿಕ ಮಹತ್ವವನ್ನು ಹೊಂದಿರು ಸ್ಥಳಗಳನ್ನೂ ನೋಡಬಹುದು. ಎರಡು ಬೆಟ್ಟಗಳ ನಡುವೆ ಇರುವ ಈ ಸ್ಥಳವು ಟ್ರೆಕ್ಕಿಂಗ್‌ಗೆ ಸೂಕ್ತವಾದುದಾಗಿದೆ. ಇಲ್ಲಿ ನೀವು ಪ್ರಾಚೀನ ಮಂದಿರಗಳು. ಆಧ್ಯಾತ್ಮಿಕ ಸ್ಥಳಗಳನ್ನೂ ಕಾಣಬಹುದು. ಇಲ್ಲಿ ನೀವು ಮಾನಸಿಕ ಶಾಂತಿಯನ್ನು ಪಡೆಯಬಹುದು.

ಸ್ಮಾರಕಗಳು

ಸ್ಮಾರಕಗಳು

PC: J.M.Garg

ನಲಗೊಂಡವು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇದರ ಇತಿಹಾಸ ಹಲವು ವರ್ಷ ಹಳೆಯದು ಎನ್ನಲಾಗುತ್ತದೆ. ನಲಗೊಂಡವನ್ನು ಅನೇಕ ದಕ್ಷಿಣದ ರಾಜರುಗಳು ಆಳಿದ್ದಾರೆ. ಇಂದಿಗೂ ಇಲ್ಲಿರುವ ಸ್ಮಾರಕಗಳ ಮೂಲಕ ನೀವು ಇಲ್ಲಿನ ಇತಿಹಾಸವನ್ನು ತಿಳಿಯಬಹುದು. ಈ ನಗರವು ಪ್ರಾಕೃತಿಕ ಸೌಂದರ್ಯದ ಜೊತೆಗೆ ದೊಡ್ಡ ಕೋಟೆಗೂ ಹೆಸರುವಾಸಿಯಾಗಿದೆ.

ರೈಲ್ವೆ ನೀಡುತ್ತಿದೆ ಬಂಪರ್‌ ಆಫರ್, ಊಟಿ, ಕುನೂರ್‌ ಪ್ರವಾಸ ಈಗ ಬರೀ..

ದೇವರಕೊಂಡ ಕೋಟೆ

ದೇವರಕೊಂಡ ಕೋಟೆ

PC: Ssjasper2003

ನಲಗೊಂಡದ ಪ್ರವಾಸವನ್ನು ನೀವು ಐತಿಹಾಸಿಕ ದೇವರಕೊಂಡ ಕೋಟೆಯಿಂದ ಮಾಡಬಹುದು. ಇದು ಇಲ್ಲಿನ ಅತ್ಯಂತ ಪ್ರಾಚೀನ ಕೋಟೆಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಈ ನಗರದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಪಡೆಯಬಹುದು. ಈಗ ಈ ಕೋಟೆಯು ಒಂದು ಸ್ಮಾರಕದಂತೆ ಗೋಚರಿಸುತ್ತದೆ. ಆದರೆ ಈ ಕೋಟೆಯ ಗೋಡೆಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ನೋಡಿ ಈ ಕೋಟೆಯು ಒಂದು ಕಾಲದಲ್ಲಿ ಯಾವ ರೀತಿ ಇತ್ತು ಎನ್ನುವುದನ್ನು ಲೆಕ್ಕಾಚಾರ ಹಾಕಬಹುದು.

ಏಳು ಬೆಟ್ಟಗಳ ನಡುವೆ ಇರುವ ದೇವರಕೊಂಡ ಕೋಟೆ ತನ್ನ ವಿಶಾಲತೆಗೆ ಪ್ರಸಿದ್ಧವಾಗಿದೆ. ಈ ಕೋಟೆಯನ್ನು ೧೨೮೭ರಿಂದ ೧೪೮೨ನೇ ಇಸವಿಯಲ್ಲಿ ನಿರ್ಮಿಸಲಾಗಿದ್ದು ಎನ್ನಲಾಗುತ್ತದೆ.

ಮೆಲ್ಲಚೆರಾವು

ಮೆಲ್ಲಚೆರಾವು

PC: Naidugari Jayanna

ನಲಗೊಂಡಾದ ಬಳಿ ಮೆಲ್ಲಚೆರವೂ ಎನ್ನುವ ಐತಿಹಾಸಿಕ ಸ್ಥಳವೂ ಇದೆ. ಇದು ಭವ್ಯವಾದ ಮಂದಿರಗಳಿಗಾಗಿ ಪ್ರಸಿದ್ಧವಾಗಿದೆ. ಕಾಕತೀಯ ರಾಜರ ಶಾಸನ ಕಾಲದಲ್ಲಿ ನಿರ್ಮಿಸಲಾಗಿದ್ದ ಈ ಕೋಟೆಯು ತನ್ನ ವಾಸ್ತುಕಲೆಯಿಂದಾಗಿಯೂ ಪ್ರಸಿದ್ಧಿ ಹೊಂದಿದೆ.

ಸ್ವಯಂ ಭೂ ಶಂಭೂಲಿಂಗೇಶ್ವರ ಸ್ವಾಮಿ ಮಂದಿರವು ಇಲ್ಲಿನ ಆಕರ್ಷಣೆಗಳಲ್ಲೊಂದಾಗಿದೆ. ಇದನ್ನು ದಕ್ಷಿಣದ ವಾರಣಾಸಿ ಎಂದೂ ಕರೆಯುತ್ತಾರೆ. ಈ ಮಂದಿರದ ಎತ್ತರವು ತನ್ನಷ್ಟಕ್ಕೆ ಹೆಚ್ಚುತ್ತದೆ ಎನ್ನಲಾಗುತ್ತದೆ.

 ಪಿಲ್ಲಯಿಮರಿ

ಪಿಲ್ಲಯಿಮರಿ

PC: C.Chandra Kanth Rao

ನೀವು ಪಿಲ್ಲಯಿಮರಿಯ ಆನಂದವನ್ನು ಪಡೆಯಬಹುದು. ಈ ಹಳ್ಳಿಯು ಕಾಕತೀಯರ ಕಾಲದಲ್ಲಿ ನಿರ್ಮಿಸಲಾದ ಉತ್ಕೃಷ್ಟ ಮಂದಿರಗಳಿಗೆ ಪ್ರಸಿದ್ಧಿ ಹೊಂದಿದೆ. ಈ ಮಂದಿರವು ಸಮಯದ ಜೊತೆಗೆ ಸ್ಮಾರಕಗಳಾಗುತ್ತಾ ಬಂದಿವೆ. ಇದೀಗ ಐತಿಹಾಸಿಕ ಸ್ಮಾರಕಗಳಾಗಿವೆ. ಇಲ್ಲಿ ಸ್ವಾಮಿ ಚೆನ್ನಕೇಶವ ಮಂದಿರವು ಪ್ರಮುಖ ಆಕರ್ಷಣೀಯ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X