» »ಚಿತ್ರತಾರೆಗಳನ್ನು ಸುಲಭವಾಗಿ ನೋಡಬಹುದಿಲ್ಲಿ!

ಚಿತ್ರತಾರೆಗಳನ್ನು ಸುಲಭವಾಗಿ ನೋಡಬಹುದಿಲ್ಲಿ!

Written By:

ಇಂದು ಪ್ರಪಂಚದಲ್ಲಿ ಅತಿ ಮಂಚೂಣಿಯಲ್ಲಿರುವ ಚಿತ್ರೋದ್ಯಮಗಳಲ್ಲಿ ಹಿಂದಿ ಚಲನಚಿತ್ರರಂಗವೂ ಸಹ ಒಂದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಖ್ಯಾತಿಗಳಿಸುತ್ತಿರುವ ಹಿಂದಿ ಚಿತ್ರೋದ್ಯಮ ಸಾಕಷ್ಟು ವಿದೇಶಿ ಕಲಾವಿದರನ್ನೂ ಸಹ ಆಕರ್ಷಿಸುತ್ತಿದೆ.

ಜನಪ್ರೀಯವಾಗಿ ಬಾಲಿವುಡ್ ಎಂದೆ ಕರೆಯಲ್ಪಡುವ ಹಿಂದಿ ಚಲನ ಚಿತ್ರೋದ್ಯಮವು ಮುಖ್ಯವಾಗಿ ನೆಲೆ ನಿಂತಿರುವುದು ಭಾರತದ ಕನಸಿನ ಅಥವಾ ಮಾಯಾಲೋಕ ಎಂತಲೆ ಹೇಳಲಾಗುವ ಮುಂಬೈ ಮಹಾನಗರದಲ್ಲಿ. ಹಾಗಾಗಿ ಹಿಂದಿ ಚಿತ್ರರಂಗದ ಅತಿರಥ ಮಹಾರಥರು ಮುಂಬೈನಲ್ಲಿ ವಾಸಿಸುತ್ತಿರುವುದು ಸಾಮಾನ್ಯ ಸಂಗತಿ.

ಮುಂಬೈನ ಸುತ್ತ ಮುತ್ತಲಿನ ಜಾಗಗಳಿಗೆ ಭೇಟಿ ನೀಡಿ

ಕರುನಾಡ ನೆಲೆಗಳಲ್ಲಿ ರೂಪಗೊಂಡ ಹಿಂದಿ ಚಿತ್ರಗಳು!

ಹಿಂದಿ ಚಲನ ಚಿತ್ರಗಳಲ್ಲಿ ಮುಖ್ಯವಾಗಿ ಜನಾಕರ್ಷಣೆಯ ಕೇಂದ್ರ ಬಿಂದುಗಳೆಂದರೆ ನಾಯಕ, ನಾಯಕಿ ನಂತರ ಇತರೆ ಪೋಷಕ ವರ್ಗದವರು. ನಾಯಕ ನಾಯಕಿಯರಿಗೆ ಇರುವ ಅಭಿಮಾನಿ ಸಂಖ್ಯೆಗಳಿಗೇನೂ ಕಮ್ಮಿ ಇಲ್ಲ. ಹಾಗಾಗಿ ಪ್ರತಿನಿತ್ಯ ಚಿತ್ರತಾರೆಗಳನ್ನು ಕಾಣಬೇಕೆಂದೆ ಅದೆಷ್ಟೊ ಜನ ಭಾರತದ ಮೂಲೆ ಮೂಲೆಗಳಿಂದ ಮುಂಬೈಗೆ ಬರುತ್ತಾರೆಂದರೆ ನೀವೆ ಊಹಿಸಬಹುದು ಅವರ ಪ್ರೀತಿ, ಅಭಿಮಾನಗಳನ್ನು.

ಮುಂಬೈ ತಲುಪುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಮುಂಬೈ ಎಂದ ತಕ್ಷಣ ಚಿತ್ರತಾರೆಗಳು ಕಂಡೆ ಬಿಡುತ್ತಾರೆಂದಲ್ಲ. ಈ ಮಹಾನಗರದಲ್ಲಿ ತಾರೆಗಳನ್ನು ಹುಡುಕುವುದೆಂದರೆ ಅಕ್ಕಿಯಲ್ಲಿ ಕಲ್ಲು ಆರಿಸುವ ಹಾಗೆ. ಒಮ್ಮೆಲೆ ಗೋಚರವಾಗುವುದಿಲ್ಲ. ಆದರೆ ನಿಮಗೆ ಗೊತ್ತೆ ಮುಂಬೈನ ಕೆಲವು ಸ್ಥಳಗಳು ನಿಮ್ಮ ಹುಡುಕುವಿಕೆಗೆ ಸುಲಭ ಪರಿಹಾರ ಕೇಂದ್ರಗಳಾಗಿವೆ. ಏಕೆಂದರೆ ಈ ಸ್ಥಳಗಳಲ್ಲಿ ಚಿತ್ರತಾರೆಗಳು ಅತಿ ಹೆಚ್ಚಾಗಿ ಕಾಣಸಿಗುತ್ತಾರೆ. ಆ ಒಂದು ದೃಷ್ಟಿಯಿಂದ ಈ ಸ್ಥಳಗಳು ಮುಂಬೈನ ಪ್ರವಾಸಿ ಆಕರ್ಷಣೆಗಳಾಗಿಯೂ ಗಮನಸೆಳೆಯುತ್ತವೆ. ನೀವೇನಾದರು ಮುಂಬೈಗೆ ತೆರಳುವವರಿದ್ದರೆ ಹಾಗೆ ಸುಮ್ಮನೆ ಈ ಸ್ಥಳಗಳಿಗೊಮ್ಮೆ ಭೇಟಿ ನೀಡಿ. ನಿಮಗೂ ಸಹ ನಿಮ್ಮ ನೆಚ್ಚಿನ ನಾಯಕ/ನಾಯಕಿಯ ದರ್ಶನವಾಗಬಹುದು.

ಜಾಗಿಂಗ್

ಜಾಗಿಂಗ್

ಬೆಳ್ಳಂಬೆಳಿಗ್ಗೆ ಮುಂಬೈನ ಪ್ರಸಿದ್ಧ ಕಡಲ ತೀರವಾದ ಜುಹುಗೆ ತೆರಳಿದರೆ ನಿಮಗೆ ಚಿತ್ರತಾರೆಗಳ ದರ್ಶನವಾಗಬಹುದು. ಅಮ್ರೀಶ್ ಪುರಿ, ಅಮಿತಾಬ್ ಬಚ್ಚನ್, ಸನ್ನಿ ದೇವಲ್ ನಂತಹ ಹಲವು ಚಿತ್ರೋದ್ಯಮದ ವ್ಯಕ್ತಿಗಳ ಬಂಗಲೆಗಳು ಜುಹು ಕಡಲ ತೀರದ ಬಳಿ ಇವೆ. ಮುಂಜಾವಿನ ಸಮಯದಲ್ಲಿ ಈ ಚಿತ್ರತಾರೆಗಳು ಅಂಗರಕ್ಷಕರೊಂದಿಗೆ ಜಾಗಿಂಗ್ ಮಾಡುತ್ತಿರುವ ಸನ್ನಿವೇಶಗಳು ನಿಮಗೆ ಕಾಣಸಿಗುವುದರಲ್ಲಿ ಸಂದೇಶವಿಲ್ಲ.

ಚಿತ್ರಕೃಪೆ: Sarah Nichols

ಬಲು ಜನಪ್ರೀಯ

ಬಲು ಜನಪ್ರೀಯ

ಈಗೀಗ ಚಿತ್ರಗಳಲ್ಲಿ ನಟಿಸುತ್ತಿರುವ, ಪೋಷಕ ಪಾತ್ರಗಳನ್ನು ಮಾಡುತ್ತಿರುವ ಹಾಗೂ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಹಲವಾರು ವ್ಯಕ್ತಿಗಳು ಈ ಒಂದು ಜನಪ್ರೀಯ ಸ್ಥಳದಲ್ಲಿ ವಾಸಿಸುತ್ತಾರೆ. ಲೋಖಂಡ್ವಾಲಾ ಒಂದು ಕಟ್ಟಡ ನಿರ್ಮಾಣ ಸಂಸ್ಥೆಯಾಗಿದ್ದು ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿರುವ ಕಾರಣ ಇದು ಲೋಖಂಡ್ವಾಲಾ ಕಾಂಪ್ಲೆಕ್ಸ್ ಎಂದು ಕರೆಯಲ್ಪಡುತ್ತದೆ.

ಚಿತ್ರಕೃಪೆ: Extempore

ಶ್ರೀ ಸ್ವಾಮಿ ಸಮರ್ಥ ನಗರ

ಶ್ರೀ ಸ್ವಾಮಿ ಸಮರ್ಥ ನಗರ

ಈ ಪ್ರದೇಶದ ಅಧಿಕೃತ ಹೆಸರು ಶ್ರೀ ಸ್ವಾಮಿ ಸಮರ್ಥ ನಗರ ಎಂದಾಗಿದೆ. ಆದರೂ ಸಹ ಇದು ಜನಪ್ರೀಯವಾಗಿ ಲೋಖಂಡ್ವಾಲಾ ಎಂಬ ಹೆಸರಿನಿಂದಲೆ ಗುರುತಿಸಲ್ಪಡುತ್ತದೆ. ವಸತಿ ಪ್ರದೇಶವಾಗಿದ್ದು ಆಧುನಿಕ ಕಟ್ಟಡಗಳು,ವಾಣಿಜ್ಯ ಮಳಿಗೆಗಳು, ಶಾಪಿಂಗ್ ಮಾಲ್ ಗಳಿಂದ ತುಂಬಿದ್ದು ಹಲವು ಚಿತ್ರೋದ್ಯಮದ ವ್ಯಕ್ತಿಗಳು ಇಲ್ಲಿ ಶಾಪಿಂಗ್ ಮಾಡುತ್ತಿರುವುದನ್ನು, ವಿಹರಿಸುತ್ತಿರುವುದನ್ನು ಸುಲಭವಾಗಿ ಗಮನಿಸಬಹುದು.

ಚಿತ್ರಕೃಪೆ: Shiv S Tripathi

ಜನಪ್ರೀಯ

ಜನಪ್ರೀಯ

ಮುಂಬೈ ನಗರದ ಬಲು ಪ್ರತಿಷ್ಠಿತ ಹಾಗೂ ಜನಪ್ರೀಯವಾದ ಸ್ಥಳ ಇದಾಗಿದೆ. ಹಲವು ಕಟ್ಟಡಗಳು, ವಸತಿ ಸಂಕೀರ್ಣಗಳು, ಐಷಾರಾಮಿ ಹೋಟೆಲ್ ಗಳು, ಜಗಮಗಿಸುವ ಅಂಗಡಿ ಮುಗ್ಗಟ್ಟುಗಳು ಇಲ್ಲಿ ಕಂಡುಬರುತ್ತವೆ. ಪ್ರಸಿದ್ಧ ಚಿತ್ರತಾರೆಗಳಾದ ಸ್ಲ್ಮಾನ್ ಖಾನ್, ಶಾರೂಕ್ ಖಾನ್, ಸಂಜಯ್ ದತ್, ಸುಶ್ಮಿತಾ ಸೇನ್ ಮುಂತಾದ ಹಲವು ವ್ಯಕ್ತಿಗಳು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಹಾಗಾಗಿ ಸಾಮಾನ್ಯವಾಗಿ ಪ್ರವಾಸಿಗರಿಂದ ಈ ಪ್ರದೇಶವು ತುಂಬಿರುತ್ತದೆ.

ಬಾಂದ್ರಾದ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ!

ಚಿತ್ರಕೃಪೆ: Logan King

ಹೋಟೆಲ್

ಹೋಟೆಲ್

ಮುಂಬೈನ ಕೆಲ ಪ್ರಸಿದ್ಧ ಐಷಾರಾಮಿ ಹೋಟೆಲ್ಲುಗಳ ಪೈಕಿ ಇದೂ ಸಹ ಒಂದು. ಭಾನುವಾರಗಳ ಮಧ್ಯಾಹ್ನದ ಭೋಜನ ಸವಿಯಲು ಅತ್ಯದ್ಭುತ ಸ್ಥಳ. ಬಲು ರುಚಿಕರವಾದ ಖಾದ್ಯಗಳು ಹಾಗೂ ಬೇಕಾದಷ್ಟು ಡ್ರಿಂಕು ಇಲ್ಲಿ ಲಭ್ಯವಿರುತ್ತದೆ. ಅರೆರೆ, ಇದೇನಪ್ಪಾ ಹೋಟೆಲ್ ಹಾಗೂ ಊಟದ ಕುರಿತು ಹೇಳುತ್ತಿದ್ದೀರಿ ಎಂದು ತಿಳಿಯಬೇಡಿ. ಏಕೆಂದರೆ ಈ ಹೋಟೆಲ್ ನಲ್ಲಿ ಸಾಮಾನ್ಯವಾಗಿ ಬೆಳೆಯುತ್ತಿರುವ ಚಿತ್ರತಾರೆಗಳು ಕಾಣಸಿಗುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Dion Hinchcliffe

ಕೊಲಾಬಾ

ಕೊಲಾಬಾ

ಮುಂಬೈನ ಹೆಮ್ಮೆಯ ಹೋಟೆಲ್ ಇದು. ಸಾಕಷ್ಟು ಪಾರಂಪರಿಕತೆ ಹಾಗೂ ಆಧುನಿಕತೆಯನ್ನು ಹೊಂದಿರುವ ಐಷಾರಾಮಿ ಹೋಟೆಲ್. ಹಿಂದಿ ಚಿತ್ರ ತಾರೆಗಳು ಆಗಾಗ ಈ ಹೋಟೆಲ್ ನಲ್ಲಿ ಭೋಜನ ಸವಿಯಲೆಂದು ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Varun160490

ಚಿತ್ರತಾರೆಗಳು

ಚಿತ್ರತಾರೆಗಳು

ಅಯ್ಯೊ ಇದೇನು ಆಸ್ಪತ್ರೆ ಎಂದು ಗಾಬರಿಯಾಗಬೇಡಿ. ಸಾಮಾನ್ಯವಾಗಿ ಚಿತ್ರತಾರೆಗಳು ಹಾಗೂ ಅವರ ಸಂಬಂಧಿಕರು ಹೆಚ್ಚಾಗಿ ಈ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಈ ಆಸ್ಪತ್ರೆಗೇನಾದರೂ ಯಾವುದೆ ಕೆಲಸದಿಂದ ಹೋಗಿದ್ದಲ್ಲಿ ನಿಮಗೆ ಚಿತ್ರತಾರೆಗಳ ದರ್ಶನವಾದರೂ ಆಗಬಹುದು.

ಚಿತ್ರಕೃಪೆ: Nicholas

ಗಣೇಶ ದೇವಾಲಯ

ಗಣೇಶ ದೇವಾಲಯ

ಮುಂಬೈನ ಸಿದ್ಧಿವಿನಾಯಕ ಮಂದಿರವು ದೇಶದಲ್ಲೆ ಹೆಸರುವಾಸಿ ಹಾಗೂ ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಈ ವಿನಾಯಕನಿಗೆ ಸಾಕಷ್ಟು ಚಿತ್ರತಾರೆ ಭಕ್ತರೂ ಇದ್ದಾರೆ ಹಾಗಾಗಿ ವಿನಾಯಕ ಚತುರ್ಥಿ ಹಾಗೂ ವಿಶೇಷ ಉತ್ಸವಗಳ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಚಿತ್ರತಾರೆಗಳು ಸಾಮಾನ್ಯವಾಗಿ ಭೇಟಿ ನೀಡಿ ವಿನಾಯಕನ ದರ್ಶನ ಪಡೆಯುತ್ತಾರೆ. ನಾನಾ ಪಾಟೇಕರ್, ಸಲ್ಮಾನ್, ಅಮಿತಾಬ್ ಬಚ್ಚನ್, ಶಿಲ್ಪಾ ಶೆಟ್ಟಿ ಹೀಗೆ ಅನೇಕ ಕಲಾವಿದರು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಹಾಗೂ ನೀಡುತ್ತಲೀ ಇರುತ್ತಾರೆ.

ಚಿತ್ರಕೃಪೆ: Darwininan

Please Wait while comments are loading...