Search
  • Follow NativePlanet
Share
» »ರಾಮಾಯಣ ಮಹಾಭಾರತದ ಪ್ರಮುಖ ಸ್ಥಳಗಳು

ರಾಮಾಯಣ ಮಹಾಭಾರತದ ಪ್ರಮುಖ ಸ್ಥಳಗಳು

By Vijay

ನಮ್ಮ ಸಂಸ್ಕೃತಿಯ ಎರಡು ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಒಂದು ಆದರ್ಶ ಮಗ, ಪತಿ, ಪತ್ನಿ, ಪ್ರೀತಿ - ಪ್ರೇಮಗಳ ತಿರುಳನ್ನು ಹೊಂದಿದ್ದರೆ ಇನ್ನೊಂದು ಬಂಧು ಬಾಂಧವರ, ನಂಟರ, ಸ್ನೇಹಿತರ, ದಾಯಾದಿಗಳ, ಸಹೋದರರ ನಡುವಿನ ಸಂಬಂಧಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ.

ಈ ಎರಡು ಕಾವ್ಯಗಳಲ್ಲಿ ಅನೇಕ ಸಾಮ್ರಾಜ್ಯಗಳ, ಸ್ಥಳಗಳ ಕುರಿತು ಉಲ್ಲೇಖವಿರುವುದು ಗೊತ್ತಿರುವ ವಿಚಾರ. ಒಮ್ಮೊಮ್ಮೆ ಈ ಕಾವ್ಯಗಳಲ್ಲಿ ಉಲ್ಲೇಖಿಸಲಾದ ಅಥವಾ ಹೆಸರಿಸಲಾದ ಸಂಸ್ಕೃತ ಹೆಸರುಗಳುಳ್ಳ ಆ ಸ್ಥಳಗಳು ನಿಜವಾಗಿಯೂ ಇಂದೂ ಕೂಡ ಇವೆಯೆ? ಎಂಬ ಸಂಶಯ, ಆಸಕ್ತಿ ಉಂಟಾಗುವುದು ಸಾಮಾನ್ಯ.

ಜೆಟ್ ಏರ್ ವೇಸ್ ನಲ್ಲಿ ದೇಶೀಯ ವಿಮಾನ ದರಗಳ ಮೇಲೆ ನೇರವಾದ 250 ರೂಪಾಯಿಗಳ ಕಡಿತ ಪಡೆಯಿರಿ, ತ್ವರೆ ಮಾಡಿ!

ಪ್ರಸ್ತುತ ಲೇಖನವು ಅಂತಹ ಒಂದು ಮೂಡಿರುವ ಆಸಕ್ತಿಯನ್ನು ತಣಿಸುವ ನಿಟ್ಟಿನಲ್ಲಿ ಪ್ರಸ್ತುತ ಪಡಿಸಲಾಗಿದೆ. ಇತಿಹಾಸಕಾರರ, ತಜ್ಞರ, ಪಂಡಿತರ ಪ್ರಕಾರ, ರಾಮಾಯಣ ಹಾಗೂ ಮಹಾಭಾರತ ಈ ಎರಡು ಕಾವ್ಯಗಳಲ್ಲಿ ಉಲ್ಲೇಖಿಸಲಾದ ಅನೇಕ ಸಾಮ್ರಾಜ್ಯಗಳು, ಸ್ಥಳಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ ಕೆಲ ಸ್ಥಳಗಳು ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳದಲ್ಲೂ ಸ್ಥಿತವಿದೆ.

ವಿಶೇಷ ಲೇಖನ : ಪ್ರಳಯ ಸೂಚಕವಿರುವ ಹರಿಶ್ಚಂದ್ರಗಡ್

ಇಲ್ಲಿ ಭಾರತದಲ್ಲಿರುವ ಅಂದಿನ ಕೆಲ ಪ್ರಮುಖ ಸ್ಥಳಗಳು ಇಂದು ಯಾವ ಹೆಸರಿನಿಂದ ಪ್ರಸಿದ್ಧವಾಗಿವೆ ಎಂಬುದರ ಕುರಿತು ತಿಳಿಸಲಾಗಿದೆ. ಇಂದಿಗೂ ಸಹ ಧಾರ್ಮಿಕ ಮಹತ್ವವುಳ್ಳ ಈ ಸ್ಥಳಗಳು ಧಾರ್ಮಿಕ ಪ್ರವಾಸಿ ಆಕರ್ಷಣೆಗಳೂ ಸಹ ಆಗಿವೆ.

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಅಯೋಧ್ಯ: ಸರಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ ಜನ್ಮಸ್ಥಳವಾಗಿದೆ. ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿರುವ ಅಯೋಧ್ಯೆಯು ಹಿಂದೆ ಸಾಕೇತ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತಿತ್ತು.

ಚಿತ್ರಕೃಪೆ: आशीष भटनागर

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಚಿತ್ರಕೂಟ: ಮಧ್ಯ ಪ್ರದೇಶ ರಾಜ್ಯದ ಸತನಾ ಜಿಲ್ಲೆಯಲ್ಲಿರುವ ಚಿತ್ರಕೂಟವು ರಾಮಾಯಣದಲ್ಲಿ ಉಲ್ಲೇಖಿಸಲಾದ ಒಂದು ಸ್ಥಳವಾಗಿದೆ. ವಾಲ್ಮಿಕಿ ರಾಮಾಯಣದಲ್ಲಿ ಚಿತ್ರಕೂಟದ ಉಲ್ಲೇಖವಿದ್ದು ಇದನ್ನು ಅಂದು ಮಹಾ ಋಷಿ-ಮುನಿಗಳು ವಾಸಿಸುತ್ತಿದ್ದ ಪವಿತ್ರ ಸ್ಥಳವೆಂದು ವಾಲ್ಮಿಕಿ ಕರೆದಿದ್ದಾರೆ.

ಚಿತ್ರಕೃಪೆ: vaticanus

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ದಂಡಕಾರಣ್ಯ: ರಾಮಾಯಣದಲ್ಲಿ ಉಲ್ಲೇಖಿಸಲಾದ ದಂಡಕಾರಣ್ಯವು ಆಧ್ಯಾತ್ಮಿಕವಾಗಿ ಪಾವಿತ್ರ್ಯತೆಯುಳ್ಳ ಪ್ರದೇಶವಾಗಿದೆ. ಅಂದಿನ ವಿಶಾಲವಾಗಿ ಹರಡಿದ್ದ ದಂಡಕಾರಣ್ಯವು ಇಂದು ಛತ್ತೀಸಗಡ್ ರಾಜ್ಯದ ಬಸ್ತಾರ್ ಜಿಲ್ಲೆ, ಒಡಿಶಾ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವು ಭಾಗಗಳನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: Meethi Biswas

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಕೋಶಲ : ರಾಮಾಯಣದ ಪ್ರಕಾರ, ಇದೊಂದು ಸಾಮ್ರಾಜ್ಯವಾಗಿದ್ದು ಇಕ್ಷ್ವಾಕು ವಂಶದ ದೊರೆಗಳು ಈ ರಾಜ್ಯವನ್ನು ಆಳುತ್ತಿದ್ದರು. ಪ್ರಸ್ತುತ ಉತ್ತರ ಪ್ರದೇಶ ರಾಜ್ಯದಲ್ಲಿರುವ ಅವಧ್ ಪ್ರದೇಶವು ಹಿಂದಿನ ಕೋಶಲ ಸಾಮ್ರಾಜ್ಯದ ಪ್ರಮುಖ ಭಾಗವಾಗಿತ್ತೆಂದು ಗುರುತಿಸಲಾಗಿದೆ. ಅವಧ್ ಒಂದು ಐತಿಹಾಸಿಕ ಪ್ರವಾಸಿ ತಾಣವಾಗಿದೆ ಹಾಗೂ ಲಖನೌ ಇದರ ಪ್ರಮುಖ ಭಾಗವಾಗಿದೆ.

ಚಿತ್ರಕೃಪೆ: BOMBMAN

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಕುಶವತಿ : ರಾಮಾಯಣದಲ್ಲಿ ಹೇಳಲಾಗಿರುವಂತೆ ಕುಶವತಿಯು ಕೋಶಲ ಸಾಮ್ರಾಜ್ಯದ ಪ್ರಮುಖ ಪ್ರದೇಶವಾಗಿತ್ತು ಹಾಗೂ ಪ್ರಸ್ತುತ ಉತ್ತರ ಪ್ರದೇಶದ ಗೋರಖಪುರ ಬಳಿಯಿರುವ ಕುಶಿನಗರವು ರಾಮಾಯಣದ ಕುಶವತಿ ಪಟ್ಟಣವಾಗಿತ್ತೆಂದು ಗುರುತಿಸಲಾಗಿದೆ.

ಚಿತ್ರಕೃಪೆ: Gaurav Tiwari

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಮಲಯ ಪರ್ವತಗಳು : ಮಲಯ ಪರ್ವತಗಳ ಹೆಸರು ರಾಮಾಯಣ, ಮಹಾಭಾರತಗಳೆರಡರಲ್ಲೂ ಉಲ್ಲೇಖಗೊಂಡಿವೆ. ವಿಷ್ಣುಪುರಾಣದ ಪ್ರಕಾರ, ಸಪ್ತ ಪರ್ವತಗಳ ಪೈಕಿ ಮಲಯ ಪರ್ವತಗಳೂ ಸಹ ಒಂದು. ಪ್ರಸ್ತುತ ಈ ಪರ್ವತದ ದಕ್ಷಿಣ ಭಾಗವು ಕೇರಳ, ಕರ್ನಾಟಕದ ಮಂಗಳೂರು ಹಾಗೂ ಪಶ್ಚಿಮ ಘಟ್ಟಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ.

ಚಿತ್ರಕೃಪೆ: Navaneeth KN

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ವಿದೇಹ : ರಾಮಾಯಣದಲ್ಲಿ ವಿದೇಹವನ್ನು ಮಿಥಿಲಾ ಎಂಬ ಹೆಸರಿನಿಂದ ಕರೆಯಲಾಗಿದೆ. ಈ ವಿದೇಹ ಸಾಮ್ರಾಜ್ಯವು ಪ್ರಸ್ತುತ ಹಿಮಾಲಯದ ಶಿವಾಲಿಕ್ ಪರ್ವತ ಶ್ರೇಣಿಯ ಭಾಗದಿಂದ ಪ್ರಾಂಭವಾಗಿ ನೇಪಾಳ ದೇಶದ ದಕ್ಷಿಣದ ಗಡಿಯವರೆಗೂ ಚಾಚಿತ್ತೆಂದು ಗುರುತಿಸಲಾಗಿದೆ.

ಚಿತ್ರಕೃಪೆ: Shanel

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಪಂಪ ಸರೋವರ : ಕೊಪ್ಪಳ ಜಿಲ್ಲೆಯಲ್ಲಿರುವ ಪಂಪ ಸರೋವರವು ಐತಿಹಾಸಿಕ ಪ್ರಸಿದ್ಧ ಹಂಪಿಯ ಬಳಿಯಿದೆ. ರಾಮಾಯಣದಲ್ಲಿ ಈ ಕೆರೆಯ ಉಲ್ಲೇಖವಿದೆ.

ಚಿತ್ರಕೃಪೆ: Indiancorrector

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಕಿಷ್ಕಿಂಧ : ವಿಜಯನಗರ ಸಾಮ್ರಾಜ್ಯದ ವೈಭವಯುತ ರಾಜಧಾನಿಯಾಗಿ ಮೆರೆದಿದ್ದ ಇಂದಿನ ಹಂಪಿಯಲ್ಲಿ ಹರಿದಿರುವ ತುಂಗಭದ್ರಾ ನದಿಯ ಸುತ್ತಮುತ್ತಲಿನ ಪ್ರದೇಶಗಳೆ, ಹಿಂದೆ ಕಿಷ್ಕಿಂಧೆ ಯಾಗಿತ್ತು ಎಂದು ತಜ್ಞ ಇತಿಹಾಸಕಾರರ ಪ್ರಕಾರ ಹೇಳಲಾಗಿದೆ.

ಚಿತ್ರಕೃಪೆ: ವೀಕಿಪಿಡಿಯ

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಪಂಚವಟಿ : ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಪಂಚವಟಿಯು ಇಂದಿನ ಮಹಾರಾಷ್ಟ್ರದಲ್ಲಿರುವ ನಾಶಿಕ್ ಪ್ರದೇಶದ ಭಾಗವಾಗಿದೆ. ಇಂದಿಗೂ ಕೂಡ ಇಲ್ಲಿ ಹಲವು ದೇವಸ್ಥಾನಗಳಿದ್ದು ಇದು ಒಂದು ಧಾರ್ಮಿಕ ತೀರ್ಥ ಕ್ಷೇತ್ರವಾಗಿದೆ.

ಚಿತ್ರಕೃಪೆ: Ashurockstarboy

ರಾಮಾಯಣದ ಸ್ಥಳಗಳು:

ರಾಮಾಯಣದ ಸ್ಥಳಗಳು:

ಶ್ರಾವಸ್ತಿ : ಇಂದಿಗೂ ಉತ್ತರ ಪ್ರದೇಶದಲ್ಲಿ ಇದೆ ಹೆಸರನ್ನು ಉಳಿಸಿಕೊಂಡು ಬಂದಿರುವ ಶ್ರಾವಸ್ತಿ ಜಿಲ್ಲೆಯನ್ನು ಕಾಣಬಹುದಾಗಿದೆ. ರಾಮಾಯಣದ ಸಂದರ್ಭದಲ್ಲಿ ಇದು ಪ್ರದೇಶದ ಪ್ರಮುಖ ಸ್ಥಳಗಳ ಪೈಕಿ ಒಂದಾಗಿತ್ತು. ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ ಸುಮಾರು 170 ಕಿ.ಮೀ ಗಳಷ್ಟು ದೂರವಿರುವ ಬಲರಾಮಪುರ ಎಂಬ ಪಟ್ಟಣದ ಬಳಿ ಇದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Bpilgrim

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಅಂಗ ಸಾಮ್ರಾಜ್ಯ : ವಿಶಾಲವಾಗಿದ್ದ ಅಂಗ ಸಾಮ್ರಾಜ್ಯವು ರಾಮಾಯಣ ಹಾಗೂ ಮಹಾಭಾರತಗಳೆರಡರಲ್ಲೂ ಉಲ್ಲೇಖಗೊಂಡಿದೆ. ಮಹಾಭಾರತದ ದುರ್ಯೋಧನನು ಅಂಗ ತನ್ನ ಪರಮ ಸ್ನೇಹಿತನಾಗಿದ್ದ ಕರ್ಣನನ್ನು ಅಂಗ ಸಾಮ್ರಾಜ್ಯದ ದೊರೆಯಾಗಿ ಮಾಡಿದ್ದನು. ಪ್ರಸ್ತುತ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಭಾಗಗಳು ಹಿಂದಿನ ಅಂಗ ಸಾಮ್ರಾಜ್ಯವಾಗಿತ್ತೆಂದು ಗುರುತಿಸಲಾಗಿದೆ. ಚಿತ್ರದಲ್ಲಿರುವುದು ಜಾರ್ಖಂಡ್ ರಾಜ್ಯದಲ್ಲಿರುವ ಹುಂಡ್ರು ಜಲಪಾತ.

ಚಿತ್ರಕೃಪೆ: Eddyvishal

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಮಗಧ ಸಾಮ್ರಾಜ್ಯ : ಮಹಾಭಾರತದಲ್ಲಿ ಮಗಧ ಸಾಮ್ರಾಜ್ಯದ ಹೆಸರನ್ನು ಕೇಳಬಹುದಾಗಿದೆ. ಈ ಸಾಮ್ರಾಜ್ಯವನ್ನು ಜರಾಸಂದನು ಪರಿಪಾಲಿಸುತ್ತಿದ್ದನು. ಪ್ರಸ್ತುತ ಬಿಹಾರದ ರಾಜಗೀರ್ ಎಂಬ ಗಿರಿಧಾಮ ಪ್ರದೇಶವು ಅಂದಿನ ಮಗಧ ಸಾಮ್ರಾಜ್ಯವಾಗಿತ್ತೆಂದು ತಿಳಿಯಲಾಗಿದೆ.

ಚಿತ್ರಕೃಪೆ: LRBurdak

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಆವಂತಿ : ಪುರಾತನ ಭಾರತದ ಆವಂತಿ ಸಾಮ್ರಾಜ್ಯದ ಕುರಿತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಮಧ್ಯ ಪ್ರದೇಶದ ಧಾರ್ಮಿಕ ತಾಣ ಉಜ್ಜಯಿನಿಯು ಹಿಂದೆ ಆವಂತಿಯ ರಾಜಧಾನಿ ನಗರವಾಗಿತ್ತೆಂದು ಹೇಳಲಾಗಿದೆ.

ಚಿತ್ರಕೃಪೆ: Bernard Gagnon

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಹಸ್ತಿನಾಪುರ : ಮಧ್ಯ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಇಂದು ಹಸ್ತಿನಾಪುರ ಪಟ್ಟಣವನ್ನು ಕಾಣಬಹುದಾಗಿದೆ. ಪಟ್ಟಣದ ಇತಿಹಾಸವು ಮಹಾಭಾರತದ ಸಮಯದಿಂದ ಪ್ರಾರಂಭವಾಗುತ್ತದೆ. ಇದನ್ನು ಗಜಪುರ, ನಾಗಪುರ, ಬ್ರಹ್ಮಸ್ಥಳ, ಶಾಂತಿನಗರ ಎಂಬ ಹೆಸರುಗಳಿಂದಲೂ ಸಹ ಕರೆಯಲಾಗುತ್ತಿತ್ತು.

ಚಿತ್ರಕೃಪೆ: Sanjeev Kohli

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ದ್ವಾರಕಾ : ಮಹಾಭಾರತದಲ್ಲಿ ಉಲ್ಲೇಖಗೊಂಡ ದ್ವಾರಕಾ ಶ್ರೀಕೃಷ್ಣನ ರಾಜಧಾನಿಯಾಗಿತ್ತು. ಪ್ರಸ್ತುತ ಈ ಸ್ಥಳವು ಗುಜರಾತ್ ರಾಜ್ಯದಲ್ಲಿದೆ. ಇಲ್ಲಿ ದ್ವಾರಕಾಧೀಶನ ದೇವಾಲಯವು ಪ್ರಸಿದ್ಧವಾಗಿದೆ.

ಚಿತ್ರಕೃಪೆ: Shishirdasika

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ವಿರಾಟನಗರ: ರಾಜಸ್ಥಾನ ರಾಜ್ಯದ ಜೈಪುರದಲ್ಲಿರುವ ಬೈರಾತ್ ಪಟ್ಟಣವು ಮಹಾಭಾರತದಲ್ಲಿ ಉಲ್ಲೇಖಿಸಲಾಗಿರುವ ಅಂದಿನ ವಿರಾಟನಗರವೆಂದು ಗುರುತಿಸಲಾಗಿದೆ. ಇದು ಮಚ್ಚ ಅಥವಾ ಮತ್ಸ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತೆಂದು ಹೇಳಲಾಗಿದೆ.

ಚಿತ್ರಕೃಪೆ: Giridharmamidi

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಇಂದ್ರಪ್ರಸ್ಥ : ಇಂದ್ರನ ನಗರ ಎಂದು ಅರ್ಥ ಕೊಡುವ ಇಂದ್ರಪ್ರಸ್ಥವು ಮಹಾಭಾರತದಲ್ಲಿ ಬಹುವಾಗಿ ಕೇಳಲ್ಪಟ್ಟಿದೆ. ಅಂದಿನ ವೈಭವಯುತ ಇಂದ್ರಪ್ರಸ್ಥವೆ ಇಂದಿನ ದೇಶದ ರಾಜಧಾನಿಯಾದ ದೆಹಲಿ ಯಾಗಿತ್ತೆಂದು ಗುರುತಿಸಲಾಗಿದೆ.

ಚಿತ್ರಕೃಪೆ: Francisco Anzola

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಗೋವರ್ಧನ ಗಿರಿ : ಮಹಾಭಾರತದಲ್ಲಿ ಕೇಳಿ ಬರುವ ಹೆಸರು ಗೋವರ್ಧನ ಗಿರಿಯು ಪ್ರಸ್ತುತ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಬಳಿಯಿದೆ.

ಚಿತ್ರಕೃಪೆ: KuwarOnline

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಕಂಖಲ : ವಾಯು ಪುರಾಣ ಹಾಗೂ ಮಹಾಭಾರತದಲ್ಲಿ ಕನಖಲ ಎಂದು ಕರೆಯಲ್ಪಟ್ಟಿದ್ದ ಈ ಸ್ಥಳವು ಉತ್ತರಾಖಂಡ ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರ ಹರಿದ್ವಾರದಲ್ಲಿದೆ. ಇಲ್ಲಿರುವ ದಕ್ಷೇಶ್ವರ ಮಹಾದೇವ ದೇವಾಲಯವು ಬಹು ಪ್ರಸಿದ್ಧವಾಗಿದೆ.

ಚಿತ್ರಕೃಪೆ: World8115

ಮಹಾಭಾರತದ ಸ್ಥಳಗಳು:

ಮಹಾಭಾರತದ ಸ್ಥಳಗಳು:

ಕುರುಕ್ಷೇತ್ರ : ಮಹಾಭಾರತದ ಅಂತಿಮ ಮಹಾಯುದ್ಧ ನಡೆದ ಕುರುಕ್ಷೇತ್ರವು ಪ್ರಸ್ತುತ ಹರ್ಯಾಣ ರಾಜ್ಯದಲ್ಲಿ ಅದೆ ಹೆಸರಿನ ಜಿಲ್ಲೆಯಾಗಿದೆ. ಪುರಣಗಳಲ್ಲಿ ಹೇಳಿರುವಂತೆ ಈ ಸ್ಥಳಕ್ಕೆ ಭರತ ವಂಶದ ಕುರುವಿನ ಗೌರವಾರ್ಥ ಹೆಸರಿಡಲಾಗಿದೆ. ಕುರು ಮಹಾರಾಜನು ಪಾಂಡವರ ಹಾಗೂ ಕೌರವರ ಪೂರ್ವಜ.

ಚಿತ್ರಕೃಪೆ: Balaji.B

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X