Search
  • Follow NativePlanet
Share
» » ಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆ

ಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆ

ಪ್ರತಿಯೊಬ್ಬರು ಶನಿಯ ದೋಷದಿಂದ ಭಾದಿತರಾಗುತ್ತಾರೆ. ಕೆಲವರಿಗೆ ಏಳರ ಶನಿಕಾಟ, ಇನ್ನೂಕೆಲವರಿಗೆ ಅಷ್ಟಮ ಶನಿ ಎನ್ನುವುದನ್ನು ನೀವು ಕೇಳಿರಬಹುದು. ನಿಮ್ಮ ಗ್ರಹದಲ್ಲಿ ಶನಿ ಕಾಲಿಟ್ಟನೆಂದಾದರೆ ಅನೇಕ ತಾಪತ್ರೆಯಗಳು ಪ್ರಾರಭವಾಗುತ್ತದೆ. ಮಕ್ಕಳಿಗೆ ವಿದ್ಯೆ ತಲೆಗೆ ಹತ್ತದೆ ಇರಬಹುದು. ಕೌಟುಂಬಿಕ ಕಲಹಗಳು, ವ್ಯಾಪಾರದಲ್ಲಿ ನಷ್ಟ ಹೀಗೆ ಇನ್ನಿತರ ಸಮಸ್ಯೆಗಳು ಕಾಡಲಾರಂಭಿಸುತ್ತದೆ. ಇವುಗಳ ಪರಿಹಾರಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕಲ್ಲವೆ. ಬಹುತೇಕರು ಶನಿದೋಷ ಪರಿಹಾರಕ್ಕೆ ಅನೇಕ ಪೂಜೆ ಹವನಗಳನ್ನು ಮಾಡಿಸುತ್ತಾರೆ. ಶನಿ ದೋಷನ್ನು ಪೂರ್ಣ ರೀತಿಯಲ್ಲವಾದರೂ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವ ಪ್ರಯತ್ನ ಜನರದ್ದು.

ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

ತಮಿಳುನಾಡಿನ ಕೀಲ್‌ಪುದ್‌ಪೇಟ್, ವಾಲಜಪೇಟೆಯ ವೆಲ್ಲೂರ್ ನಲ್ಲಿ ಶ್ರೀ ಧನ್ವಂತರಿ ಆರೋಗ್ಯ ಪೀಡಂ ಎನ್ನುವ ದೇವಾಲಯವಿದೆ. ಚೆನ್ನೈ - ಶ್ರೀಪೆರುಂಬುದುರ್ - ಕಾಂಚೀಪುರಂ ಮೂಲಕ ಈ ಸ್ಥಳಕ್ಕೆ ತಲುಪಬಹುದು. ಚೆನ್ನೈನಿಂದ ಸುಮಾರು 112 ಕಿ.ಮೀ ದೂರದಲ್ಲಿದೆ. ಸುಮಾರು 2.45 ಗಂಟೆಗಳ ಪ್ರಯಾಣವಿದೆ.

 ಶನಿಯ ಪ್ರಭಾವ

ಶನಿಯ ಪ್ರಭಾವ


PC: E.A.Rodrigues

ಶನಿಯ ಪ್ರಭಾವದಿಂದಾಗಿ ಕೈ ಹಿಡಿದಿರುವ ಕೆಲಸ ನಡೆಯೋದಿಲ್ಲ. ವ್ಯವ್ಹಾರದಲ್ಲಿ ನಷ್ಟ. ಶುಭಕಾರ್ಯ ನಡೆಯದೇ ಇರುವುದು, ಕುಟುಂಬದಲ್ಲಿ ಕಲಹ ಈ ರೀತಿಯ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.ಇವುಗಳೆಲ್ಲಕ್ಕೆ ಪರಿಹಾರ ಕಂಡುಕೊಳ್ಳಲು ಶನಿಶಾಂತಿ ಹೋಮ ಮಾಡಬೇಕಾದುದು ಮುಖ್ಯ.

27 ನಕ್ಷತ್ರಗಳಿಗೂ ನಡೆಯುತ್ತೆ ಪೂಜೆ

27 ನಕ್ಷತ್ರಗಳಿಗೂ ನಡೆಯುತ್ತೆ ಪೂಜೆ


ಇಲ್ಲಿ 27 ನಕ್ಷತ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮರಗಳಿಗೆ ಪೂಜೆ ನಡೆಯುತ್ತದೆ. ನವ ಗ್ರಹಗಳು, ಕಾಳಚಕ್ರಗಳಿಗೆ ಪೂಜೆ ಮಾಡುತ್ತಾರೆ. ಶನಿ ದೋಷ ಇರುವವರು ಆ ಕಾಳಚಕ್ರದ ಮುಂದೆ ತಮ್ಮ ತಮ್ಮ ನಕ್ಷತ್ರ ಹಾಗೂ ಮರಗಳ ಮುಂದೆ ಕೂತು ಈ ಪೂಜೆಯಲ್ಲಿ ಭಾಗಿಯಾಗಬೇಕು.

ಹೋಮಕ್ಕೆ ಏನೆಲ್ಲಾ ಹಾಕುತ್ತಾರೆ

ಹೋಮಕ್ಕೆ ಏನೆಲ್ಲಾ ಹಾಕುತ್ತಾರೆ


ಈ ಹೋಮಕ್ಕೆ ಕಪ್ಪು ವಸ್ತ್ರ, ನೀಲಿ ವಸ್ತ್ರ, ಕಪ್ಪು ದ್ರಾಕ್ಷಿ, ಎಳ್ಳು, ಎಳ್ಳೆಣ್ಣೆ, ಅಕ್ಕಿ, ಭತ್ತ, ಪುರಿ ಹಾಕುತ್ತಾರೆ. ಈ ಸಂದರ್ಭದಲ್ಲಿ ಭೈರವ ಹಾಗೂ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಬೇರೆ ಯಾವೆಲ್ಲಾ ದೇವರಿದ್ದಾನೆ

ಬೇರೆ ಯಾವೆಲ್ಲಾ ದೇವರಿದ್ದಾನೆ

ಈ ದೇವಾಲಯದಲ್ಲಿ ಲಕ್ಷ್ಮೀ ವಿನಾಯಕ, ಬಾಲ ಮುರುಗನ್, ಶೇಷಾದ್ರಿ ಸ್ವಾಮಿ, ಆನಂದ ಸ್ವಾಮಿ, ಸೂರ್ಯ, ಚಂದ್ರ, ಬುದ್ಧ, ಗುರುನಾನಕರ ಮೂರ್ತಿ ಕೂಡಾ ಇದೆ.

ವೆಲ್ಲೂರು ಕೋಟೆ

ವೆಲ್ಲೂರು ಕೋಟೆ

Chandrachoodan Gopalakrishnan

ಇದು ವೆಲ್ಲೂರಿನ ಆಕರ್ಷಣೀಯ ಸ್ಥಳವಾಗಿದೆ. ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ಕೋಟೆಯನ್ನು ವಿಧಿ ವಿಜ್ಞಾನ ಇಲಾಖೆ ನೋಡಿಕೊಳ್ಳುತ್ತಿದೆ. ಇದರ ಸುತ್ತಲು ಜಲಗಂಡೇಶ್ವರ ದೇವಾಲಯ, ಮಸೀದಿ, ಚರ್ಚ್, ವೆಲ್ಲೂರು ಕ್ರಿಶ್ಚಿಯನ್ ಕಾಲೇಜ್, ಮ್ಯೂಸಿಯಂ ಕೂಡಾ ಇದೆ.

ವಲ್ಲಿ ಮಲೈ

ವಲ್ಲಿ ಮಲೈ

Sreenivas101

ವಲ್ಲಿ ಮಲೈಯು ತಿರುವಳಂ ಎನ್ನುವ ಸ್ಥಳದಲ್ಲಿದೆ. ವೆಲ್ಲೂರಿನಿಂದ ಉತ್ತರಕ್ಕೆ ೧೬ ಕಿ.ಮೀ ದೂರದಲ್ಲಿದೆ . ಇಲ್ಲಿ ಮುರುಗನ್ ಪತ್ನಿ ವಲ್ಲಿ ಜನಿಸಿದ ಬೆಟ್ಟ ಇದಾಗಿದ್ದು, ಈ ಬೆಟ್ಟಕ್ಕೆ ವಲ್ಲಿ ಮಲೈ ಎನ್ನುವ ಹೆಸರಿಡಲಾಗಿದೆ ಎನ್ನಲಾಗುತ್ತದೆ. ಈ ಬೆಟ್ಟದಲ್ಲಿ ಶಿವನ ದೇವಾಯವಿದೆ.

ಬಾಲಮತಿ

ಬಾಲಮತಿ

Dsudhakar555
ವೆಲ್ಲೂರಿನಿಂದ 30 ನಿಮಿಷ ದೂರದಲ್ಲಿದೆ. ಇದೊಂದು ಪ್ರವಾಸಿ ತಾಣವಾಗಿದ್ದು, ಹೆಚ್ಚಿನ ಜನರು ಅಲ್ಲಿಗೆ ಹೋಗಲು ಇಷ್ಟಪಡುತ್ತಾರೆ. ಇಲ್ಲಿ ಬೇಸಿಗೆಯಲ್ಲಿ ಜನರು ಈ ಬೆಟ್ಟಕ್ಕೆ ಹೋಗುತ್ತಾರೆ.

Read more about: chennai tamilnadu temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X