Search
  • Follow NativePlanet
Share
» »ಸರ್ವ ಶೇಷ್ಠ ಪಶುಪತಿ ದೇವಾಲಯ ಒಮ್ಮೆ ಭೇಟಿ ನೀಡಿದರೆ ಜನ್ಮ ಪಾವನ

ಸರ್ವ ಶೇಷ್ಠ ಪಶುಪತಿ ದೇವಾಲಯ ಒಮ್ಮೆ ಭೇಟಿ ನೀಡಿದರೆ ಜನ್ಮ ಪಾವನ

ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದೇವಾಲಯವೆಂದರೆ ಅದು ಪಶುಪತಿನಾಥ ದೇವಾಲಯ. ಈ ದೇವಾಲಯವು ಹಿಮಾಲಯ ಪರ್ವತದಲ್ಲಿದೆ. ಶಿವನ ಪ್ರತಿರೂಪವೇ ಪಶುಪತಿನಾಥನಾಗಿದ್ದಾನೆ. ಅತ್ಯಂತ ಪ್ರಧಾನ ಪುಣ್ಯ ಕ್ಷೇತ್ರವಾದ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಹಾಗು ವೃದ

ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದೇವಾಲಯವೆಂದರೆ ಅದು ಪಶುಪತಿನಾಥ ದೇವಾಲಯ. ಈ ದೇವಾಲಯವು ಹಿಮಾಲಯ ಪರ್ವತದಲ್ಲಿದೆ. ಶಿವನ ಪ್ರತಿರೂಪವೇ ಪಶುಪತಿನಾಥನಾಗಿದ್ದಾನೆ. ಅತ್ಯಂತ ಪ್ರಧಾನ ಪುಣ್ಯ ಕ್ಷೇತ್ರವಾದ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಹಾಗು ವೃದ್ಧರು ಕೂಡ ಇಲ್ಲಿ ಭೇಟಿ ನೀಡುವ ಆಧ್ಯಾತ್ಮಿಕವಾದ ತಾಣವಾಗಿದೆ.

ಕೆಲವು ವೃದ್ಧರು ತಮ್ಮ ಜೀವನದ ಕೊನೆಯ ದಿನಗಳನ್ನು ಈ ಪವಿತ್ರವಾದ ಕ್ಷೇತ್ರದಲ್ಲಿ ಕಳೆಯಬೇಕು ಎಂದು ಸಾವಿರಾರು ಮಂದಿ ಇಲ್ಲಿ ಆಶ್ರಯ ಪಡೆಯುತ್ತಾರೆ. ಅವರ ಕುಟುಂಬ ಸಭ್ಯರು ಆಸ್ಥಿಕಗಳನ್ನು ಪವಿತ್ರವಾದ ನದಿಯಲ್ಲಿ ಲೀನಗೊಳಿಸುತ್ತಾರೆ. ನದಿ ಪ್ರವಾಹದಲ್ಲಿ ಸೇರಿದ ಆಸ್ಥಿಕಗಳು ಕೊನೆಗೆ ಗಂಗಾನದಿಗೆ ಸೇರುತ್ತದೆ ಎಂತೆ.

ಪ್ರಸ್ತುತ ಈ ದೇವಾಲಯದ ಬಗ್ಗೆ ನೀವು ತಿಳಿಯಬೇಕಾದದು ಸಾಕಷ್ಟು ಇದೆ. ಹಾಗಾಗಿ ಲೇಖನದ ಮೂಲಕ ತಿಳಿಯೋಣ.

ಪಶುಪತಿನಾಥ ದೇವಾಲಯ

ಪಶುಪತಿನಾಥ ದೇವಾಲಯ

ಆನೇಕ ಮಂದಿ ಹಿಂದುಗಳು ತಮ್ಮ ಜೀವನಯಾತ್ರೆ ಮುಗಿಸಿಕೊಳ್ಳುವ ಸಲುವಾಗಿ ಈ ಪಶುಪತಿನಾಥ ದೇವಾಲಯಕ್ಕೆ ಸೇರಿಕೊಳ್ಳುತ್ತಾರೆ. ಪಶುಪತಿನಾಥ ಸ್ವಾಮಿ ಸನ್ನಿಧಿಯಲ್ಲಿ ಮರಣ ಹೊಂದಿದವರು ತಮ್ಮ ಜೀವನದಲ್ಲಿ ಮಾಡಿರುವ ಎಲ್ಲಾ ಪಾಪ ಕರ್ಮಗಳ ನಿಮ್ಮಿತ್ತವಲ್ಲದೇ ಮತ್ತೊಂದು ಉತ್ತಮವಾದ ಜನ್ಮ ಜನಿಸುತ್ತಾರೆ ಎಂಬುದು ಭಕ್ತರ ದೃಢವಾದ ನಂಬಿಕೆಯಾಗಿದೆ.

ಜ್ಯೋತಿಷ್ಯಿಗಳು

ಜ್ಯೋತಿಷ್ಯಿಗಳು

ಆಶ್ಚರ್ಯ ಏನಪ್ಪ ಏಂದರೆ ಹುಟ್ಟು ಸಾವು ಆ ಭಗವಂತನಿಗೊಬ್ಬನೆ ಗೊತ್ತು ಎಂದು ಹೇಳುತ್ತಿರುತ್ತೇವೆ ಆದರೆ ಈ ದೇವಾಲಯದಲ್ಲಿ ಪ್ರಧಾನ ಜ್ಯೋತಿಷ್ಯಿಗಳು ಖಚಿತವಾದ ಮರಣದ ದಿನ ಹಾಗು ವೇಳೆಯನ್ನು ತಿಳಿಸುತ್ತಾರಂತೆ. ಇಲ್ಲಿನ ವಾತಾವರಣದಲ್ಲಿಯೇ ಮೃತ್ಯು ದೇವನು ನೆಲೆಸಿರುತ್ತಾನೆ.

ಪ್ರಧಾನ ದೇವಾಲಯ

ಪ್ರಧಾನ ದೇವಾಲಯ

ಪಶುಪತಿನಾಥ ಪ್ರಧಾನ ದೇವಾಲಯವು ಬಂಗಾರದ ಶಿಖರವನ್ನು ಹೊಂದಿರುವ ಭವ್ಯವಾದ ಭವನವಾಗಿದೆ. ಇಲ್ಲಿ ಭಗವತಿನದಿ ತೀರ ದೇವಾಲಯದ ಪಶ್ಚಿಮ ದಿಕ್ಕಿನಲ್ಲಿದೆ.

ಪ್ರಧಾನ ದ್ವಾರಗಳು

ಪ್ರಧಾನ ದ್ವಾರಗಳು

ಈ ದೇವಾಲಯವು ಹಿಂದೂ ವಾಸ್ತು ಶಿಲ್ಪದಿಂದ ಕಂಗೊಳಿಸುತ್ತಿದ್ದು, ಮಾಸ್ಟರ್ ಪೀಸ್ ಎಂದು ಈ ದೇವಾಲಯದ ವಾಸ್ತುಕಲೆಯನ್ನು ಕರೆಯುತ್ತಾರೆ. ಈ ದೇವಾಲಯಕ್ಕೆ 4 ಪ್ರಧಾನ ದ್ವಾರಗಳು ಇವೆ.

ಬಂಗಾರದ ಕಳಶ

ಬಂಗಾರದ ಕಳಶ

ಈ ದೇವಾಲಯದ ಭವನದ ಗೋಪುರದ ಮೇಲೆ ಒಂದು ಚಿನ್ನದ ಕಳಶವನ್ನು ಇಡಲಾಗಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ.

 ಶಿಲ್ಪಗಳು

ಶಿಲ್ಪಗಳು

ಅತ್ಯಂತ ಶುಭಾಯಮಾನವಾಗಿರುವ ಈ ದೇವಾಲಯದಲ್ಲಿನ ಕೆತ್ತಿರುವ ಶಿಲ್ಪಗಳು ನಿಜವಾದ ದೇವತ ಮೂರ್ತಿಗಳೇ ದರ್ಶನ ನೀಡುತ್ತಿದ್ದಾರೆ ಎಂಬ ಭಾವನೆಯನ್ನು ಉಂಟು ಮಾಡುತ್ತದೆ.

ಬೃಹತ್ ನಂದಿ

ಬೃಹತ್ ನಂದಿ

ಇವುಗಳ ಜೊತೆ ದೇವಾಲಯದಲ್ಲಿ ಕಾಣಿಸುವ ಬೃಹತ್ ನಂದಿ ಸ್ವರ್ಣ ಪ್ರತಿಮೆಯು ಪ್ರವಾಸಿಗರಿಗ ಆರ್ಕಷಣೆಯಾಗಿದೆ. ಪ್ರಧಾನವಾದ ದೇವಾಲಯದ ಒಳಭಾಗದಲ್ಲಿ ಕೇವಲ ಹಿಂದೂ ಧರ್ಮದವರಿಗೆ ಮಾತ್ರ ಪ್ರವೇಶವಿರುತ್ತದೆ.

ವಿದೇಶಿಯರಿಗೆ ಅನುಮತಿ

ವಿದೇಶಿಯರಿಗೆ ಅನುಮತಿ

ಆದರೆ ಉಳಿದ ಭವನವನ್ನು ಸಂದರ್ಶನ ಮಾಡಲು ವಿದೇಶಿಯರಿಗೆ ಅನುಮತಿಯನ್ನು ನೀಡಲಾಗುತ್ತದೆ. ಭಾಗಮತಿ ನದಿ ಪೂರ್ವದಿಕ್ಕಿನಿಂದ ಗಮನಿಸಿದರೆ ಈ ದೇವಾಲಯವು ಅತ್ಯಂತ ಶೋಭಾಯಮಾನವಾಗಿ ದರ್ಶನವನ್ನು ನೀಡುತ್ತದೆ.

ಅನಾಥರಿಗೆ ಆಶ್ರಯ

ಅನಾಥರಿಗೆ ಆಶ್ರಯ

ಪಶ್ಚಿಮ ತೀರದಲ್ಲಿ ಪಶುಪತಿನಾಥ ದೇವಾಲಯವೇ ಅಲ್ಲದೇ ಪಂಚ ದೇವಾಲಯಗಳು ಕೂಡ ಇದೆ. ಅಂದರೆ 5 ಪುಣ್ಯ ದೇವಾಯಗಳನ್ನು ಇಲ್ಲಿ ಕಾಣಬಹುದಾಗಿದೆ. ಪೂರ್ವ ಕಾಲದಲ್ಲಿ ಪವಿತ್ರ ಪ್ರಾರ್ಥನ ಮಂದಿರವಾಗಿ ಇದ್ದ ಈ ಸಮುದಾಯವು ಇಂದು ವೃದ್ಧರಿಗೆ ಹಾಗು ಅನಾಥರಿಗೆ ಆಶ್ರಯವಾಗಿದೆ.

ಶಿವನ ದೇವಾಲಯ

ಶಿವನ ದೇವಾಲಯ

ಭಾಗಮತಿ ನದಿತೀರದಲ್ಲಿ ಆನೇಕ ಮಂದಿರಗಳು ಇವೆ. ಇವುಗಳಲ್ಲಿ ಅಧಿಕವಾಗಿ ಶಿವನ ದೇವಾಲಯವಾಗಿರುವುದು ವಿಶೇಷವಾಗಿದೆ.

ಅಂತ್ಯಕ್ರಿಯೆಗಾಗಿ

ಅಂತ್ಯಕ್ರಿಯೆಗಾಗಿ

ಈ ಸಮುದಾಯದಲ್ಲಿ ಪ್ರತಿ ಸ್ಥಳದಲ್ಲಿಯೂ ಶಿವಲಿಂಗವನ್ನು ದರ್ಶನ ಮಾಡಿಕೊಳ್ಳಬಹುದಾಗಿದೆ. ಭಾಗಮತಿ ನದಿ ಬಲಭಾಗದಲ್ಲಿ ಅಂತ್ಯಕ್ರಿಯೆಗಾಗಿ ಆನೇಕ ವೇದಿಕೆಗಳು ಸಿದ್ಧವಾಗಿರುತ್ತದೆ. ವಾಸ್ತವವಾಗಿ ಅಂತ್ಯಕ್ರಿಯೆಗಳು ಇಲ್ಲಿ ದಿನನಿತ್ಯ ಕಾರ್ಯಕ್ರಮವಾಗಿರುತ್ತದೆ.

ಬಹಿರಂಗ ಅಂತ್ಯಕ್ರಿಯೆ

ಬಹಿರಂಗ ಅಂತ್ಯಕ್ರಿಯೆ

ಸಾಧಾರಣಾವಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕನಿಷ್ಟ ಒಮ್ಮೆಯಾದರೂ ಬಹಿರಂಗ ಅಂತ್ಯಕ್ರಿಯೆಯನ್ನು ಕಾಣುವ ಅವಕಾಶ ಲಭಿಸುತ್ತದೆ.

ವಿಸ್ಮಯ

ವಿಸ್ಮಯ

ಆದರೆ ಇಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳು ಅಸಾಧರಣವಾಗಿರುತ್ತದೆ ಅಲ್ಲದೇ ವಿದೇಶಿಯರಿಗೆ ಇದೊಂದು ವಿಸ್ಮಯದಂತೆ ಕಾಣುತ್ತದೆ.

ಸ್ಥಳೀಯ ಮಹಿಳೆಯರು

ಸ್ಥಳೀಯ ಮಹಿಳೆಯರು

ಪಶುಪತಿನಾಥ ದೇವಾಲಯದ ಪರಿಸರದಲ್ಲಿ ಸಂಪೂರ್ಣವಾಗಿ ಶವಗಳನ್ನು ಸುಡುತ್ತಿರುವ ವಾಸನೆಗಳಿಂದ ಅವೃತ್ತಗೊಂಡಿರುತ್ತದೆ ಎಂತೆ. ಆಶ್ಚರ್ಯ ಏನಪ್ಪ ಎಂದರೆ ಅಲ್ಲಿನ ಸ್ಥಳೀಯ ಮಹಿಳೆಯರು ಆ ನದಿ ತೀರದಲ್ಲಿಯೇ ಕುಳಿತು ಬಟ್ಟೆಗಳನ್ನು ಶುಚಿಗೊಳಿಸುತ್ತಾ ಇರುತ್ತಾರಂತೆ.

ಗಂಗಾ ಮಾತೆ

ಗಂಗಾ ಮಾತೆ

ನದಿತೀರವು ಗಂಗಾ ಮಾತೆಯಂತೆ ಸಾಕಷ್ಟು ಶವಗಳನ್ನು ಈ ಭಾಗಮತಿ ನದಿ ತೀರದಲ್ಲಿಯೂ ಕಾಣಬಹುದಂತೆ.

ಆಹಾರ

ಆಹಾರ

ಇಲ್ಲಿನ ಮಹಿಳೆಯರು ಶಿವನಿಗೆ ಈ ದೇವಾಲಯದ ಪರಿಸರದಲ್ಲಿ ಇರುವ ಪ್ರತಿ ಜೀವಿಗೆ, ಜಂತುವಿಗೆ, ಶೇಷನಿಗೆ ದೈವ ಸ್ವರೂಪವಾಗಿ ಭಾವಿಸಿ ಕೆಲವು ಆಹಾರವನ್ನು ನೀಡುತ್ತಾರಂತೆ.

ಸಾಧು

ಸಾಧು

ಪಶುಪತಿನಾಥ ದೇವಾಲಯದಲ್ಲಿ ಸಾಧುಗಳ ಸಂಚಾರ ಅತ್ಯಂತ ಸಾಧಾರಣವಾಗಿರುತ್ತದೆ. ಪರಮಶಿವನ ನಿವಾಸವೆಲ್ಲೂ ಸಾಧುಗಳು ಅಲ್ಲಿ ಎಂಬಂತೆ ಇಲ್ಲಿ ಹಲವಾರು ಸಾಧುಗಳನ್ನು ಕಂಡು ಆರ್ಶಿವಾದ ಪಡೆಯಬಹುದಾಗಿದೆ.

ವಿವಿಧ ಹಚ್ಚೆಗಳು

ವಿವಿಧ ಹಚ್ಚೆಗಳು

ಸಾಧುಗಳು ನಿರಂತರವಾಗಿ ಧ್ಯಾನವನ್ನು ಮಾಡುತ್ತಿರುತ್ತಾರೆ. ಇದರಿಂದಾಗಿ ಮೋಕ್ಷ ಸಂಪಾದನೆಯಾಗಿ ಪರಮಶಿವನಲ್ಲಿ ಲೀನವಾಗುವುದೇ ಅವರ ಧ್ಯಾನದ ಉದ್ದೇಶವಾಗಿರುತ್ತದೆ. ಇವರ ಮತ್ತೊಂದು ವಿಶೇಷವೆನೆಂದರೆ ಸಾಧುಗಳು ತಮ್ಮ ಶರೀರದ ಮೇಲೆ ವಿವಿಧ ಹಚ್ಚೆಗಳು ಕಾಣಿಸುವುದು.

ಫೋಟುಗಳಿಗೆ ಫೋಜ್

ಫೋಟುಗಳಿಗೆ ಫೋಜ್

ಸಾಧುಗಳಲ್ಲಿ ಅಧಿಕವಾಗಿ ಪ್ರವಾಸಕ್ಕೆ ಭೇಟಿ ನೀಡುವ ಹಲವಾರು ಪ್ರವಾಸಿಗಳೊಂದಿಗೆ ಸ್ನೇಹಯುತವಾಗಿ ಇದ್ದು, ಅವರ ಜೊತೆ ಫೋಟುಗಳಿಗೆ ಫೋಜ್ ಕೂಡ ನೀಡುತ್ತಿರುತ್ತಾರೆ. ಆದರೆ ಇದೆಲ್ಲಾ ಉಚಿತವಾಗಿ ಮಾತ್ರ ಅಲ್ಲ........

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X