• Follow NativePlanet
Share
Menu
» »ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

Written By:

ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ. ಈತ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಈತ ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವನು. ಬುದ್ಧನ ಮೊದಲ ಶಿಷ್ಯ ಆನಂದ. ಬುದ್ಧನೆಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವನು, ಜ್ಞಾನಿ, ವಿಕಸಿತ ಎಲ್ಲವನ್ನು ತಿಳಿದವನು ಹೀಗೆ ಇನ್ನು ಅನೇಕ ಅರ್ಥಗಳು ಇವೆ. ಬುದ್ಧನ ತತ್ವವೆಂದರೆ "ಆಸೆಯೇ ದುಃಖಕ್ಕೆ ಮೂಲ". ಈತನ ಬಗ್ಗೆ ಚಿಕ್ಕ ವಯಸ್ಸಿನಿಂದಲೂ ನಾವು ಓದುತ್ತಾ, ಕೇಳುತ್ತಾಲೇ ಬರುತ್ತಿದ್ದೇವೆ ಅಲ್ಲವೇ? ಆತ ತನ್ನ ಕೊನೆಯುಸಿರು ಎಳೆದಿದ್ದು ಎಲ್ಲಿ? ಎಂಬುದು ನಿಮಗೆ ಗೊತ್ತ? ಹಾಗಾದರೆ ಲೇಖನದ ಮೂಲಕ ಆತನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯಿರಿ.

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಕಪಿಲ ವಸ್ತುವಿನ ಸಿಂಹವಿನ ಮಗ ಶುದ್ದೋಧನ. ಶುದ್ದೋಧನನಿಗೆ ನೆರೆಯ ರಾಜ್ಯದ ದೊರೆ ಸುಪ್ರಬುದ್ಧನ ಮಕ್ಕಳಾದ ಪ್ರಜಾಪತಿ ದೇವಿ ಮತ್ತು ಮಾಯಾದೇವಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿದರು. ಶುದ್ದೋಧನನ ಪಟ್ಟಮಹೀಷಿ ಮಾಯಾದೇವಿ. ಬುದ್ಧನು ಲುಂಬಿನಿ ವನದಲ್ಲಿ ವೈಶಾಖ ಶುದ್ಧ ಪೌಣರ್ಮಿಯಂದು ಮಾಯಾದೇವಿ ಹಾಗು ಶುದ್ದೋಧನನ ಮಗನಾಗಿ ಜನಿಸುತ್ತಾನೆ.

PC:myself

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನಿಗೆ 7 ದಿನಗಳಾದ ನಂತರ ತಾಯಿ ಮಾಯಾದೇವಿ ಮರಣ ಹೊಂದಿದಳು. ನಂತರ 2 ನೇ ತಾಯಿಯಾದ ಪ್ರಜಾಪತಿದೇವಿಯು ಸಾಕಿ ಸಲಹುತ್ತಾಳೆ. ಈತನಿಗೆ ಮೊದಲು ಸಿದ್ಧಾರ್ಥ ಎಂದು ನಾಮಕರಣ ಮಾಡುತ್ತಾರೆ. ಪ್ರಜಾಪತಿ ದೇವಿ ಸಾಕಿದ್ದರಿಂದ ಪ್ರಜಾಪತಿ ಗೌತಮನೆಂದೂ, ಜ್ಞಾನ ಸಂಪಾದನೆಯಾದ ಮೇಲೆ ಬುದ್ಧನೆಂದು ಕರೆಯಲಾಗುತ್ತಿತ್ತು.

PC:myself

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಸಿದ್ಧಾರ್ಥ ಜನಿಸಿದಾಗಲೇ ಅವನಲ್ಲಿ ಅಪೂರ್ವವಾದ ಮಹಾಪುರುಷನ ಲಕ್ಷಣ ಇರುವುದನ್ನು ದೈವಜ್ಞರು ಅರಿತಿದ್ದರು. ಪ್ರಸವಕ್ಕೆ ಮುಂಚೆ ಮಾಯಾದೇವಿಯು ಕನಸೊಂದನ್ನು ಕಂಡಳು. ಅದರಲ್ಲಿ ದೇವತೆಗಳು ಮಾಯಾದೇವಿಯನ್ನು ಹಿಮಾಲಯದ ಮೇಲಕ್ಕೆ ಕರೆದುಕೊಂಡು ಹೋಗಿ ಮಹಾಸರೋವರದಲ್ಲಿ ಸ್ನಾನ ಮಾಡಿಸಿ, ಬೆಳ್ಳಿ ಮೇಲಿದ್ದ ಬಂಗಾರದ ತೊಟ್ಟಿಲಿನಲ್ಲಿ ಅವಳನ್ನು ಮಲಗಿಸಿದರು.

PC:Abanindranath Tagore

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಆಗ ಬಿಳಿಯ ಆನೆಯೊಂದು ತನ್ನ ಸೊಂಡಿಲಿನಿಂದ ಕಮಲ ಪುಷ್ಪವನ್ನು ಹಿಡಿದು, ಉತ್ತರ ದಿಕ್ಕಿನಿಂದ ಬಂದು ಮಾಯಾದೇವಿಯ ಬಲಪಾಶ್ರ್ವದಿಂದ ಉದರವನ್ನು ಪ್ರವೇಶಿಸಿತಂತೆ. ಜ್ಯೋತಿಷಿಗಳು ಕೂಡ ಹುಟ್ಟುವ ಮಗು ಗಂಡು ಎಂದೂ, ಮಹಾಯೋಗಿಯಾಗುವನು ಎಂದು ಹೇಳಿದರು.

PC:Asia Society

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಶಿಕ್ಷಣವನ್ನು ಮುಗಿಸಿದ ಬುದ್ಧನು ಅತಿ ಸುಂದರವಾದ, ಸುಸಂಸ್ಕøತವಾದ ಹೆಣ್ಣು ಯಶೋಮತಿಯನ್ನು ವಿವಾಹ ಮಾಡಿಕೊಂಡನು. ಇದರ ಹಿಂದೆ ಒಂದು ರೋಚಕವಾದ ಕಥೆ ಇದೆ. ಅದೆನೆಂದರೆ ಬುದ್ಧನ ತಂದೆ-ತಾಯಿಗಳು ಹರೆಯದಲ್ಲಿ ಮದುವೆಯನ್ನು ಮಾಡಿದರೆ ಸಂಸಾರಸುಖದಲ್ಲಿ ಮಗ್ನನಾಗಿರುತ್ತಾನೆ ಎಂದು ಮಗನಿಗೊಂದು ಸ್ವಯಂವರ ಏರ್ಪಡಿಸಿದರು.

PC: Otgonbayar Ershuu

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಒಂದು ದಿನ ಊರಿನ ಎಲ್ಲಾ ಕನ್ಯೆಯರು ಬಂದು ರಾಜಕುಮಾರನಿಂದ ಅಭರಣವನ್ನು ದಾನ ಪಡೆಯುವಂತೆ ಸಮಾರಂಭ ಏರ್ಪಡಿಸಲಾಗಿತ್ತು. ಅಂತೆಯೇ ಊರಿನ ಎಲ್ಲಾ ಕನ್ಯೆಯರು ಬಂದು ಸಿದ್ಧಾರ್ಥನ ಕೈಯಿಂದ ಅಭರಣಗಳನ್ನು ಪಡೆದರು. ಕೊನೆಯಲ್ಲಿ ಬಂದ ಯಶೋಮತಿಗೆ ದಾನವಾಗಿ ನೀಡುತ್ತಿದ್ದ ಒಡೆವೆಗಳು ಮುಗಿದು ಹೋಗಿತ್ತು.

PC:Unknown

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಆಗ ಸಿದ್ಧಾರ್ಥನು ತನ್ನ ಬೆರಳಿನಲ್ಲಿದ್ದ ಉಂಗುರವನ್ನೇ ತೆಗೆದು ಕೊಡಲು ಮುಂದಾದನು. ಅದಕ್ಕೆ ಅವಳು ನಿಮ್ಮ ವಾತ್ಸಲ್ಯಮಯವಾದ ನೋಟವೇ ನನಗೊಂದು ಅಭರಣ ಎಂದು ನುಡಿದಳು. ಆಕೆಯನ್ನು ಮೆಚ್ಚಿದ ಬುದ್ಧನು ವರಿಸಿದನು.

PC:Sarnath Museum, India.

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಒಮ್ಮೆ ಸಿದ್ಧಾರ್ಥನು ಪೂರ್ವ ಸೂಚನೆಯನ್ನು ಕೊಡದೆ ತನ್ನ ಸಾರಥಿ ಚೆನ್ನನೊಂದಿಗೆ ನಗರ ಸಂಚಾರಕ್ಕೆ ಹೊರಟು ಹಾದಿಯಲ್ಲಿ ಮುದುಕನನ್ನು, ರೋಗಿಯನ್ನು ಮತ್ತು ಒಂದು ಸಾವಿನ ಸನ್ನಿವೇಶವನ್ನು ಕಂಡು ವ್ಯಾಕುಲಗೊಳ್ಳುತ್ತಾನೆ. ದುಃಖವನ್ನು ಹೊಂದಿ ವಿರಕ್ತಿ ಹೊಂದುತ್ತಾನೆ. ಚಿಂತಾಕ್ರಾಂತನಾಗಿ ಕುಳಿತು ಯೋಚಿಸುತ್ತಿರುವಾಗ ಅವನ ಮುಂದೆ ಸನ್ಯಾಸಿಯೊಬ್ಬ ಸಾಗುತ್ತಾನೆ.

PC:Unknown

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ತದನಂತರ ಬುದ್ಧನು ಸಂಸಾರವನ್ನು ಪರಿತ್ಯಾಗ ಮಾಡುತ್ತಾನೆ. ಬಂಧನದ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಕಾಡಿನತ್ತ ಹೋಗುವುದೇ ಸರಿಯಾದ ಮಾರ್ಗವೆಂದು ನಿರ್ಧರಿಸಲಾಗಿದೆ. ತನ್ನ ಅಗಲುವಿಕೆಯಿಂದ ಎಷ್ಟೋಂದು ನೋವಾಗಬಹುದೆಂದು ಯೋಚಿಸಿ ತಕ್ಷಣವೇ ತನ್ನ ತಂದೆ ಶುದ್ದೋಧನನ ಬಳಿಗೆ ಹೋಗಿ ತಾನು ಸನ್ಯಾಸಿಯಾಗಲಿರುವ ವಿಷಯವನ್ನು ತಿಳಿಸಿ ಅನುಮತಿ ಬೇಡುತ್ತಾನೆ.

PC:Marie-Lan Nguyen

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಇದಕ್ಕೆ ಒಪ್ಪದ ತಂದೆಗೆ ಬುದ್ಧನು, ನನ್ನ ಬೇಡಿಕೆಗಳನ್ನು ಈಡೇರಿಸಿದರೆ ಸಂಸಾರ ತ್ಯಾಗ ಮಾಡುವುದಿಲ್ಲ ಎಂದು ಹೇಳುತ್ತಾನೆ. ಅದೆನೆಂದರೆ ತನಗೆ ಎಂದೂ ವೃದ್ಧಾಪ್ಯ ಬಾರದಂತಿರಬೇಕು, ನಿತ್ಯವೂ ತಾನು ದುಃಖರಹಿತನಾಗಿರಬೇಕು, ತನಗೆ ಮರಣವೇ ಸಂಭವಿಸದೇ ಅಮರಜೀವಿಯಾಗಿರಬೇಕು, ಯಾವ ರೋಗ ರುಜಿನಗಳು ತನ್ನನ್ನು ಸ್ಪರ್ಶಿಸಬಾರದು ಎಂಬ ಬೇಡಿಕೆಗಳೇ ಆಗಿದ್ದವು.

PC:Daderot

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಇದು ಅಸಾಧ್ಯ ಎಂದು ಹೇಳಿದ ತಂದೆಗೆ, ತಾನು ಸನ್ಯಾಸಿಯಾಗಲು ಅಪ್ಪಣೆಯನ್ನು ಪಡೆದು ಹಾಗೆ ಸುಖ ನಿದ್ದೆಯಲ್ಲಿ ಮಲಗಿದ್ದ ಪತ್ನಿ ಹಾಗು ಮಗನನ್ನು ಕಣ್ಣು ತುಂಬಿಕೊಂಡು ಹೊರ ನಡೆಯುತ್ತಾನೆ. ತದನಂತರ ದೊಡ್ಡ ಜ್ಞಾನಿಯಾಗುತ್ತಾನೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಕಥೆಯೇ ಆಗಿದೆ.

PC:PHGCOM

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಪರಿನಿರ್ವಾಣ ಸ್ತೂಪ ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧನ ಮರಣವಾದ ಸ್ಥಳವೆಂದು ಹೇಳಲಾಗುತ್ತದೆ. ಇದು ಭಾರತದ ಉತ್ತರ ಪ್ರದೇಶ ರಾಜ್ಯದ ಕುಶಿನಗರದಲ್ಲಿರುವ ಬೌದ್ಧ ದೇವಾಲಯವೇ ಆಗಿದೆ. ಆ ಪ್ರದೇಶದಲ್ಲಿನ ಅಲೆಕ್ಸಾಂಡರ್ ಕನ್ನಿಂಗ್ಯಮ್ ಹೆಚ್ಚಿನ ಗಮನ ಸೆಳೆಯುತ್ತಾನೆ.

PC:Abanindranath Tagore

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಏಕೆಂದರೆ ಗೌತಮ ಬುದ್ಧನು ಈ ಪ್ರದೇಶದಲ್ಲಿಯೇ ಮರಣ ಹೊಂದಿದನು ಎಂದು ದೃಢವಾಗಿ ಸಾಬೀತು ಮಾಡಿದನು. ಈ ದೇವಾಲಯವು 2,500 ನೇ ವರ್ಷದ ಸ್ಮರಣೆಯ ಭಾಗವಾಗಿ ಭಾರತೀಯ ಸರ್ಕಾರದಿಂದ ನಿರ್ಮಿಸಲ್ಪಟ್ಟಿತು. ಈ ದೇವಾಲಯದ ಒಳಭಾಗದಲ್ಲಿ ಬುದ್ಧನ ಚಿತ್ರವನ್ನು ಉತ್ತರಕ್ಕೆ ತಲೆಯಿಂದ ಬಲಗಡೆಗೆ ಇಡಲಾಗಿದೆ.

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಈ ಪ್ರತಿಮೆಯು 6.1 ಮೀ ಉದ್ದವಾಗಿದೆ. ಒಂದು ಕಲ್ಲಿನ ಮಂಚದ ಮೇಲೆ ಬುದ್ಧನು ಮಲಗಿದ್ದಾನೆ. ಬುದ್ಧನು ತನ್ನ 45 ನೇ ವರ್ಷಗಳ ಮಿಷನರಿ ಚಟುವಟಿಕೆಗಳ ನಂತರ ಅನಾರೋಗ್ಯದಿಂದ ಗಭೀರವಾಗಿ ಸಿಲುಕಿ ಅಂತಿಮವಾಗಿ ಕುಶಿನಗರಕ್ಕೆ ತಲುಪಿದನು.

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

260 ಕ್ರಿ,ಪೂರ್ವದಲ್ಲಿ ಮೌರ್ಯ ರಾಜ ಅಶೋಕ ಕುಶಿನಗರಕ್ಕೆ ಭೇಟಿ ನೀಡಿದ್ದು, ಬುದ್ಧನ ನಿರ್ವಾಣದ ಸ್ಥಳವನ್ನು ಗೌರವಿಸುವ ಸಲುವಾಗಿ ಹಲವಾರು ಸ್ತೂಪಗಳನ್ನು ನಿರ್ಮಿಸಿದನು. ಕುಶಿನಗರ ಬೌದ್ಧ ಸ್ಥಳಗಳನ್ನು ಕುಶನ್ ಸಾಮ್ರಾಜ್ಯ ವಿಸ್ತಾರಿಸಲಾಯಿತು.

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಆದರೆ ಕುಶಿನಗರ ಗುಪ್ತರ ಸಾಮ್ರಾಜ್ಯದಲ್ಲಿ ಪರವರ್ಣಿನಾ ಸ್ತೂಪವು ವಿಸ್ತರಿಸಲ್ಪಟ್ಟಾಗ ಗೋಲ್ಡನ್ ಯುಗವನ್ನು ಕಂಡಿತು. ಹಾಗೆಯೇ ಪರಿನಿರ್ವಾಣ ದೇವಾಲಯವನ್ನು ಬೃಹತ್ ಆಶ್ರಯ ಬುದ್ಧನೊಂದಿಗೆ ಪುನರ್ ನಿರ್ಮಾಣ ಮಾಡಲಾಯಿತು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ