Search
  • Follow NativePlanet
Share
» »ಬೀದರ್‌ನ ಪಾಪನಾಶಿನಿ ದೇವಾಲಯದ ತೀರ್ಥದಲ್ಲಿ ಮಿಂದರೆ ಪಾಪ ಪರಿಹಾರವಾಗುತ್ತಂತೆ

ಬೀದರ್‌ನ ಪಾಪನಾಶಿನಿ ದೇವಾಲಯದ ತೀರ್ಥದಲ್ಲಿ ಮಿಂದರೆ ಪಾಪ ಪರಿಹಾರವಾಗುತ್ತಂತೆ

ಬೀದರ್‌ ಒಂದು ಸಣ್ಣ ಜಿಲ್ಲೆಯಾದರೂ ಅಲ್ಲಿ ಸಾಕಷ್ಟು ಧಾರ್ಮಿಕ ಐತಿಹಾಸಿಕ ತಾಣಗಳು ಇವೆ. ಬೀದರ್‌ನಲ್ಲಿರುವ ಪಾಪನಾಶಿನಿ ಶಿವನ ದೇವಾಲಯಕ್ಕೆ ಹೋದ್ರೆ ನಿಮ್ಮ ಪಾಪಗಳೆಲ್ಲಾ ಪರಿಹಾರವಾಗುತ್ತಂತೆ. ಅಂತಹ ಒಂದು ಭವ್ಯ ಕ್ಷೇತ್ತ ಇದಾಗಿದೆ. ಇಲ್ಲಿನ ಉದ್ಭವ ಶಿವಲಿಂಗದ ದರ್ಶನ ಮಾಡಿದ್ರೆ ಪುಣ್ಯ ಲಭಿಸುತ್ತಂತೆ. ಹಾಗಾದ್ರೆ ಬನ್ನಿ ಆ ಪಾಪನಾಶಿನಿ ಶಿವ ದೇವಾಲಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗಾಗಿ ನೀಡಿದ್ದೇವೆ.

ಪಾಪನಾಶಿನಿ ಕ್ಷೇತ್ರ

ಪಾಪನಾಶಿನಿ ಕ್ಷೇತ್ರ

ಬೀದರ್‌ನಲ್ಲೇ ಇರುವ ಈ ಕ್ಷೇತ್ರದಲ್ಲಿ ಪರಮೇಶ್ವರ ನೆಲೆಯೂರಿದ್ದಾನೆ. ಪಾಪನಾಶಲಿಂಗ ದೇವಸ್ಥಾನ ವು ಬೀದರ್‌ನ ಶಿವನಗರದಲ್ಲಿದೆ. ಶಿವರಾತ್ರಿಯಂದು ಹಾಗೂ ಶ್ರಾವಣ ಮಾಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.

ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ರಾಮತೀರ್ಥ

ರಾಮತೀರ್ಥ

ಈ ಕೊಳವನ್ನು ರಾಮತೀರ್ಥ ಎನ್ನುತ್ತಾರೆ. ಶಿವನಿಗೆ ಅಭಿಷೇಕ ಮಾಡಲು ನೀರಿಲ್ಲದಿದ್ದಾಗ ರಾಮನು ತನ್ನ ಬಾಣದಿಂದ ಈ ತೀರ್ಥವನ್ನು ಉದ್ಭವಿಸಿದ ಎನ್ನಲಾಗುತ್ತದೆ. ಈ ದೇವಾಲಯಕ್ಕೆ ಬಂದ ಭಕ್ತರು ಮೊದಲು ಈ ತೀರ್ಥದ ದರ್ಶನ ಮಾಡಿ ಆ ನಂತರ ಶಿವನ ದರ್ಶನಕ್ಕೆ ಹೋಗುತ್ತಾರಂತೆ.

ಪುರಾಣ ಕಥೆ

ಪುರಾಣ ಕಥೆ

ರಾಮನು ರಾವಣನ ಸಂಹಾರ ಮಾಡಿದ ನಂತರ ಆತನಿಗೆ ದೋಷ ಉಂಟಾಯಿತಂತೆ. ಅದಕ್ಕಾಗಿ ದೇಶದಲ್ಲೆಲ್ಲಾ ಈಶ್ವರನ ದೇವಾಲಯವನ್ನು ನಿರ್ಮಿಸಿ ಪೂಜಿಸಲು ಪ್ರಾರಂಭಿಸಿದನಂತೆ. ಆದರೆ ಎಲ್ಲೂ ಪಾಪ ಪರಿಹಾರವಾದ ಭಾವ ಮೂಡದಿದ್ದಾಗ ಕೊನೆಗೆ ಬಂದಿದ್ದು ಈ ಪಾಪನಾಶಿನಿ ಕ್ಷೇತ್ರಕ್ಕೆ.

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಉದ್ಭವ ಲಿಂಗ

ಉದ್ಭವ ಲಿಂಗ

ಅಲ್ಲಿನ ಉದ್ಭವ ಲಿಂಗವನ್ನು ಕಂಡು ರಾಮನು ಪೂಜೆ, ಧ್ಯಾನ ಮಾಡಲು ಆರಂಭಿಸಿದನು. ಆಗ ಬ್ರಹ್ಮ ವಿಷ್ಣು, ಮಹೇಶ್ವರು ಬಂದು ಶ್ರೀರಾಮನಿಗೆ ಹರಸಿ ಪಾಪ ವಿಮೋಚನೆ ಮಾಡಿದರು ಎನ್ನಲಾಗುತ್ತದೆ. ಹಾಗಾಗಿ ಈ ಕ್ಷೇತ್ರಕ್ಕೆ ಬಂದರೆ ಪಾಪ ವಿಮೋಚನೆ ಯಾಗುತ್ತದೆ ಎನ್ನಲಾಗುತ್ತದೆ. ಅದಕ್ಕಾಗಿ ಈ ಹೆಸರು ಬಂದಿದೆ.

ಪಾಪ ಪರಿಹಾರ

ಪಾಪ ಪರಿಹಾರ

ಇಲ್ಲಿನ ನೀರಿನ ಕುಂಡದಲ್ಲಿ ಮುಳುಗಿ ಎದ್ದರೆ ಆ ವ್ಯಕ್ತಿ ಮಾಡಿರುವ ಪಾಪಗಳೆಲ್ಲಾ ಪರಿಹಾರವಾಗುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಈ ತೀರ್ಥದಲ್ಲಿ ಮಿಂದರೆ ಸಾಕಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

ಮೂರು ಇತರ ಲಿಂಗಗಳು

ಮೂರು ಇತರ ಲಿಂಗಗಳು

ಇಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಒಂದು ದೊಡ್ಡ ಶಿವಲಿಂಗವಿದೆ. ಗರ್ಭಗುಡಿಯ ಹೊರಗೆ ಮೂರು ಶಿವಲಿಂಗಗಳಿವೆ. ಇವುಗಳು ಭಕ್ತರಿಗೆ ಮುಟ್ಟಲು ಅವಕಾಶವಿದೆ. ಭಕ್ತರು ಸ್ವತಃ ತಮ್ಮ ಕೈಯಾರೆ ಹೂಗಳನ್ನು ಅರ್ಪಿಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಬೀದರ್‌ಗೆ ಕೆಲವೇ ಕೆಲವು ಬಸ್‌ಗಳಿರುವುದು. ಬೆಂಗಳೂರು-ಹೈದರಾಬಾದ್ ಮೂಲಕ ಬೀದರ್ ತಲುಪಬಹುದು. ಕುಮಟ-ಹುಬ್ಬಳ್ಳಿ ಮಾರ್ಗವಾಗಿ ಮಂಗಳೂರಿನಿಂದ ಬೀದರ್‌ಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X