Search
  • Follow NativePlanet
Share
» »ಮಹಾಬಲಿಪುರಂನಲ್ಲಿರುವ ಪಂಚ ಪಾಂಡವ ರಥಕ್ಕೂ ಪಾಂಡವರಿಗೂ ಸಂಬಂಧ ಏನು?

ಮಹಾಬಲಿಪುರಂನಲ್ಲಿರುವ ಪಂಚ ಪಾಂಡವ ರಥಕ್ಕೂ ಪಾಂಡವರಿಗೂ ಸಂಬಂಧ ಏನು?

ಪೌರಾಣಿಕ ಕಾಲದ ರಾಜ, ಮಹಾರಾಜರ ಇತಿಹಾಸಗಳನ್ನೊಮ್ಮೆ ನೋಡಿದರೆ ನಿಮಗೆ ರಥಗಳ ಬಗ್ಗೆ ತಿಳಿಯಲು ಸಿಗುತ್ತದೆ. ವರ್ತಮಾನದಲ್ಲಿ ನಿಮಗೆ ಅಂತಹ ವಾಹನಗಳನ್ನು ಬಳಸೋದು ಕಾಣಿಸೋದಿಲ್ಲ. ಆದರೆ ಇಂದಿಗೂ ಕೆಲವು ಮದುವೆ ಕಾರ್ಯದಲ್ಲಿ ಇಂತಹ ವಾಹನವನ್ನು ಕಾಣಬಹುದು. ಪೌರಾಣಿಕ ಕಾಲದಲ್ಲಿ ಇಂತಹ ರಥಗಳ ಬಳಕೆಯನ್ನು ಕೇವಲ ರಾಜ ಮನೆತನದವರು ಮಾಡುತ್ತಿದ್ದರು. ಈ ರಥ ಸುಂದರ ಆಕಾರದಿಂದ ನಿರ್ಮಿಸಲಾಗಿದೆ. ಇದು ಕೇವಲ ವಾಹನ ಮಾತ್ರವಲ್ಲ.ಇತಿಹಾಸಿಕವನ್ನು ಹೇಳುತ್ತಿತ್ತು. ಅವರ ರಥ ಕೂಡಾ ಅವರ ಮನೆತನಕ್ಕೆ ತಕ್ಕಂತೆ ಇರುತ್ತಿತ್ತು.

ಮಹಾಭಾರತದ ಪಾಂಡವ ರಥ

ಮಹಾಭಾರತದ ಪಾಂಡವ ರಥ

ಪಂಚ್ ರಥ ತಮಿಳುನಾಡಿನ ಮಹಾಬಲಿಪುರಂನಲ್ಲಿ ಮನೋಲಿಥಿಕ ರಥವಿದೆ. ಮನೋಲಿಥಿಕವೆಂದರೆ ಒಂದೇ ಕಲ್ಲಿನಿಂದ ಕೆತ್ತಲಾಗಿರುವ ರಥ. ಈ ರಥದ ನಿರ್ಮಾಣವನ್ನು ದಕ್ಷಿಣ ಭಾರತದ ಪಲ್ಲವ ರಾಜರು ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ. ಪಲ್ಲವರ ರಾಜ ಮಹೇಂದ್ರವರ್ಮ ಹಾಗೂ ನರಸಿಂಹವರ್ಮರ ಶಾಸನ ಕಾಲದಲ್ಲಿ ಈ ಅದ್ಭುತ ರಥವನ್ನು ನಿರ್ಮಿಸಲಾಗಿತ್ತು.

ಈ ಐದು ರಥಗಳಿಗೆ ಮಹಾಭಾರತದ ಪಂಚ ಪಾಂಡವರ ಹೆಸರನ್ನು ಇಡಲಾಗಿದೆ. ಇದಕ್ಕೆ ಹೆಸರನ್ನೇನೋ ಪಾಂಡವರದ್ದಿಟ್ಟಿರಬಹುದು. ಆದರೆ ಅವರಿಗೂ ಈ ರಥಕ್ಕೂ ಯಾವುದೇ ಸಂಬಂಧವಿಲ್ಲ.

ಕಲ್ಲಿನ ರಥ

ಕಲ್ಲಿನ ರಥ

PC: Av.kumar85

ಈ ಐದು ರಥಗಳು ಓಡಾಡುವ ರಥಗಳಲ್ಲ ಬದಲಾಗಿ ಒಂದೇ ಕಲ್ಲಿನಿಂದ ರಚಿಸಿರುವಂತಹ ಕಲ್ಲಿನ ರಥಗಳು. ಇದು ಮಂದಿರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಐದು ರಥಗಳಲ್ಲಿ ನಾಲ್ಕು ಒಂದೇ ಸಾಲಿನಲ್ಲಿ ನಿಂತಿದೆ. ಇವುಗಳಲ್ಲಿ ದ್ರೌಪದಿಯ ಹೆಸರಿನ ಒಂದು ರಥ ಕೂಡಾ ಇದೆ. ಇದು ಎಲ್ಲಾ ರಥಕ್ಕಿಂತ ಸಣ್ಣದಾಗಿದ್ದು ರಥದೊಳಗೆ ದುರ್ಗಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ವಿಶ್ವ ಪರಂಪರೆಯ ಪಟ್ಟಿ ಸೇರಿದೆ

ವಿಶ್ವ ಪರಂಪರೆಯ ಪಟ್ಟಿ ಸೇರಿದೆ

PC- Vikas Rana

ಇಲ್ಲಿನ ಐತಿಹಾಸಿಕ ಮಹತ್ವವನ್ನು ಕಂಡು ಯುನೆಸ್ಕೋ ವಿಶ್ವಪಾರಂಪರ್ಯ ಪಟ್ಟಿಯಲ್ಲಿ ಇದನ್ನು ಸೇರಿಸಿದೆ. ಇಲ್ಲಿನ ರಥಗಳು ಧರ್ಮರಾಯ ರಥ, ಭೀಮ ರಥ, ಅರ್ಜುನ ರಥ, ನಕುಲ ರಥ, ಸಹದೇವ ರಥ, ದ್ರೌಪದಿ ರಥ ಇವುಗಳು ಬರೀ ಪಾಂಡವರ ಹೆಸರನ್ನು ಹೊಂದಿವೆಯಷ್ಟೇ ಹೊರತು ಪಾಂಡವರಿಗೂ ಈ ರಥಕ್ಕೂ ಬೇರೆಯಾವುದೇ ಸಂಬಂಧವಿಲ್ಲ.

ನಂದಿ ಮೂರ್ತಿ

ನಂದಿ ಮೂರ್ತಿ

PC- Venu62

ಪಂಚ ರಥಗಳಲ್ಲಿ ಅರ್ಜುನ ರಥದ ಮುಂಭಾಗದಲ್ಲಿ ನಂದಿಯ ಮೂರ್ತಿ ಇದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾನ್ಯವಾಗಿ ಶಿವ ಮಂದಿರಗಳಲ್ಲಿ ನಂದಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಆದರೆ ಅಲ್ಲಿ ಯಾವುದೇ ಶಿವಲಿಂಗವಿಲ್ಲ ಹಾಗೂ ಶಿವನ ದೇವಸ್ಥಾನವೂ ಇಲ್ಲ. ಈ ನಂದಿಯನ್ನು ನೋಡಿದರೆ ಅಲ್ಲಿ ಹಿಂದೆ ಶಿವ ದೇವಾಲಯ ಇತ್ತು ಎನ್ನುವುದನ್ನು ಪ್ರತಿಬಿಂಬಿಸುತ್ತದೆ.

ಪ್ರವೇಶಿಸುವುದು ಹೇಗೆ?

ಪ್ರವೇಶಿಸುವುದು ಹೇಗೆ?

PC: Av.kumar85

ಪಂಚ ಪಾಂಡವ ರಥವು ತಮಿಳುನಾಡಿನ ಮಹಾಬಲಿಪುರಂನಲ್ಲಿದೆ. ಇಲ್ಲಿಗೆ ನೀವು ವಿಮಾನದ ಮೂಲಕ ಹೋಗುವುದಾದರೆ ಚೆನ್ನೈ ಏರ್‌ಪೋರ್ಟ್ ಸಮೀಪದಲ್ಲಿದೆ. ರೈಲು ಮೂಲಕ ಹೋಗುವುದಾದರೆ ಚೆಂಗಲ್‌ಪಟ್ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು. ಬಸ್ ಮೂಲಕ ಹೋಗುವುದಾದರೆ ಮಹಾಬಲಿಪುರಂಗೆ ಸಾಕಷ್ಟು ಬಸ್‌ಗಳು ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X