Search
  • Follow NativePlanet
Share
» »ಅಕ್ಬರನ ಬೇಸಿಗೆ ಅರಮನೆ ಪಂಚ್ ಮಹಲ್‌ಗೆ ಹೋಗಿದ್ದೀರಾ?

ಅಕ್ಬರನ ಬೇಸಿಗೆ ಅರಮನೆ ಪಂಚ್ ಮಹಲ್‌ಗೆ ಹೋಗಿದ್ದೀರಾ?

ಈ ಕಟ್ಟಡದಲ್ಲಿ ಎದ್ದು ಕಾಣುವಂತಹ ಅಂಶವೇನೆಂದರೆ, ಇದರ ಪ್ರತಿ ಮಹಡಿಯು ತನ್ನ ಮೇಲೆ ಮೇಲೆ ಹೋದಂತೆ ಹಿಂದಿನದಕ್ಕಿಂತ ಕಿರಿದಾಗುತ್ತ ಸಾಗುತ್ತದೆ.

ಪಂಚ್ ಮಹಲ್ ಎಂಬುದು ಒಂದು ಬೇಸಿಗೆ ಅರಮನೆ. ಇದು ಅಕ್ಬರನ ಮೂವರು ಪತ್ನಿಯರಿಗಾಗಿ ಹಾಗು ರಾಜ ಮನೆತನದ ಇನ್ನಿತರ ಸ್ತ್ರೀಯರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಐದು ಅಂತಸ್ತಿನ ಮೊಗಸಾಲೆಯಾಗಿದೆ. ಈ ಕಟ್ಟಡವು ಅಕ್ಬರ್ ಚಕ್ರವರ್ತಿಯ ಪತ್ನಿಯಾದ ಜೋಧಾ ಬಾಯಿಯವರ ಅರಮನೆಗೆ ಸಮೀಪದಲ್ಲಿ ನೆಲೆಗೊಂಡಿದೆ. ಅಲ್ಲದೆ ಈ ಮಹಲ್ ಜೋಧಾಬಾಯಿ ಅರಮನೆಯೊಂದಿಗೆ ಹಾಗು ಅರಸರ ಕೋಣೆಯೊಂದಿಗೆ ಸಂಪರ್ಕದ ಹಾದಿಯನ್ನು ಹೊಂದಿದೆ.

ಗಾಳಿ ಗೋಪುರ

ಗಾಳಿ ಗೋಪುರ

PC: Bruno Girin

ಪಂಚ್ ಮಹಲನ್ನು ಬಡ್ಗೆರ್ ಅಥವಾ ಗಾಳಿ ಗೋಪುರ ಎಂದು ಸಹ ಕರೆಯುತ್ತಾರೆ. ಏಕೆಂದರೆ ಪರ್ಷಿಯನ್ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡವು ಗಾಳಿ ಸುಲಲಿತವಾಗಿ ಹಾದು ಹೋಗುವಂತಹ ರಚನೆಗಳನ್ನು ಹೊಂದಿದೆ. ಏಕೆಂದರೆ ಆಗ್ರಾದಲ್ಲಿ ಬೇಸಿಗೆಯು ಅತ್ಯಂತ ಅಸಹನೀಯವಾಗಿರುವುದರಿಂದಾಗಿ ಇಂತಹ ರಚನೆಗಳು ಅತ್ಯಾವಶ್ಯಕವಾಗಿತ್ತು.

ಐದು ಮಹಡಿಯ ಕಟ್ಟಡ

ಐದು ಮಹಡಿಯ ಕಟ್ಟಡ

PC: Olebole
ಈ ಕಟ್ಟಡದಲ್ಲಿ ಎದ್ದು ಕಾಣುವಂತಹ ಅಂಶವೇನೆಂದರೆ, ಇದರ ಪ್ರತಿ ಮಹಡಿಯು ತನ್ನ ಮೇಲೆ ಮೇಲೆ ಹೋದಂತೆ ಹಿಂದಿನದಕ್ಕಿಂತ ಕಿರಿದಾಗುತ್ತ ಸಾಗುತ್ತದೆ. ಹಾಗಾಗಿ ಇದರ ನೆಲ ಮಹಡಿಯು 130 ಅಡಿ ಉದ್ದ ಮತ್ತು 40 ಅಡಿ ಅಗಲವಿದ್ದರೆ, ಐದನೇ ಮಹಡಿಯು 10 ಅಡಿ ಉದ್ದ ಮತ್ತು 10 ಅಡಿ ಅಗಲವಿದೆ. ಜೊತೆಗೆ ಇಲ್ಲಿ ಗುಮ್ಮಟವನ್ನು ಹೊಂದಿರುವ ಚೌಕಾಕಾರದ ಛಾತ್ರಿಯಿದೆ.

ತೆರೆದ ಹಜಾರಗಳು

ತೆರೆದ ಹಜಾರಗಳು

PC:Shakti

ಪ್ರತಿ ಮಹಡಿಯು ಸುಂದರವಾಗಿ ಕೆತ್ತಲ್ಪಟ್ಟಿರುವ ಸ್ತಂಭಗಳ ಮೇಲೆ ನಿಂತಿವೆ. ಜೊತೆಗೆ ಎಲ್ಲಾ ಮಹಡಿಗಳು ತೆರೆದ ಹಜಾರಗಳನ್ನು ಹೊಂದಿದೆ. ಇದು ಗಾಳಿ ಬೀಸಲು ಯಾವುದೇ ತಡೆ ಇಲ್ಲದಂತೆ ಮಾಡಲು ಬಳಸಲಾದ ತಂತ್ರವಾಗಿದೆ. ಇಲ್ಲಿನ ನೆಲ ಮಹಡಿಯನ್ನು ನೌಕರ ವರ್ಗದವರಿಗಾಗಿ ಮೀಸಲಾಗಿಡಲಾಗಿತ್ತು.

ಅಕ್ಬರನ ವಿಶ್ರಾಂತಿ ಅರಮನೆ

ಅಕ್ಬರನ ವಿಶ್ರಾಂತಿ ಅರಮನೆ

PC: Saumya Pareek
ಫತೇಪುರ್ ಸಿಕ್ರಿಯಲ್ಲಿನ ವಿವಿಧ ಸ್ಮಾರಕಗಳ ಸುತ್ತಲೂ ಕಣ್ಣಾಡಿಸಿದರೆ ಫತೇಪುರ್ ಸಿಕ್ರಿಯ ಎಲ್ಲಾ ಸ್ಮಾರಕಗಳಲ್ಲಿ ಅತ್ಯಂತ ಎತ್ತರದ ಕಟ್ಟಡವೆಂದು ಸುಲಭವಾಗಿ ಗುರುತಿಸಬಹುದಾದಂತಹದ್ದು ಪಂಚ್ ಮಹಲ್ ಹಾಗೂ ಫತೇಪುರ್ ಸಿಕ್ರಿ. ಫತೇಪುರ್ ಸಿಕ್ರಿಯ ಪಂಚ್ ಮಹಲ್ ಚಕ್ರಾಧಿಪತಿ ಅಕ್ಬರನು ಒಂದು ರೀತಿಯ ಬೇಸಿಗೆ ಅರಮನೆಯಾಗಿ ಬಳಸುತ್ತಿದ್ದನು. ಅಲ್ಲಿ ಅವನು ವಿಶ್ರಾಂತಿ ಪಡೆಯುತ್ತಿದ್ದನು, ತನ್ನ ಸಾಮ್ರಾಜ್ಯದ ವ್ಯವಹಾರಗಳಿಂದ ಸ್ವಲ್ಪ ಸಮಯ ಬಿಡುವು ತೆಗೆದುಕೊಳ್ಳಲು ಇಲ್ಲಿಗೆ ಬರುತ್ತಿದ್ದನು.

ಹುಣ್ಣಿಮೆ ಚಂದ್ರನ ದರ್ಶನ

ಹುಣ್ಣಿಮೆ ಚಂದ್ರನ ದರ್ಶನ

PC: Khalil Sawant
ಬೌದ್ಧ ವಿಹಾರಗಳ ನಿರ್ಮಾಣದ ಮಾದರಿಯಲ್ಲಿ ನಿರ್ಮಿಸಲಾಗಿರುವ ಪಂಚ ಮಹಲ್‌ ಕೋಟೆಯ ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಕ್ವಾರ್ಟರ್ಸ್ ಭಾಗದಲ್ಲಿ ನೆಲೆಗೊಂಡಿದೆ. ಅಕ್ಬರ್ ಚಕ್ರವರ್ತಿಯ ಪತ್ನಿಯರು ಹಾಗೂ ಅರಮನೆಯ ಸ್ತ್ರೀಯರು ಪಂಚ ಮಹಲ್‌ಗೆ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನ ನೋಟವನ್ನು ಕಣ್ತುಂಬಿಸಲು ಇಲ್ಲಿಗೆ ಬರುತ್ತಿದ್ದರು.

 ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Arian Zwegers
ಫತೇಪುರ್ ಸಿಕ್ರಿಯನ್ನು ತಲುಪುವುದು ಸುಲಭ ಮಾರ್ಗವಾಗಿದೆ. ಫತೇಪುರ್ ಸಿಕ್ರಿಗೆ ಹತ್ತಿರದ ವಿಮಾನ ನಿಲ್ದಾಣವು ಆಗ್ರಾದಲ್ಲಿದೆ. ಇದು ನಗರದ ಮಧ್ಯಭಾಗದಿಂದ 7 ಕಿ.ಮೀ ದೂರದಲ್ಲಿದೆ ಮತ್ತು ಇದ್ಗಾದಲ್ಲಿರುವ ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ.
ಫತೇಪುರ್ ಸಿಕ್ರಿಯನ್ನು ರೈಲಿನ ಮೂಲಕ ತಲುಪುವುದು ಪ್ರವಾಸಿಗರಿಗೆ ಉತ್ತಮ ಆಯ್ಕೆಯಾಗಿದೆ. ಈ ಪ್ರದೇಶದ ಪ್ರಮುಖ ರೈಲು ನಿಲ್ದಾಣವು ಆಗ್ರಾ ಕಂಟೋನ್ಮೆಂಟ್‌ನಲ್ಲಿ ಒಂದಾಗಿದೆ. ಇದು ದೆಹಲಿ, ವಾರಣಾಸಿ ಮತ್ತು ರಾಜಸ್ಥಾನದ ಹಲವಾರು ನಗರಗಳು ಸೇರಿದಂತೆ ಭಾರತದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಉತ್ತಮ ಸಂಪರ್ಕ ಹೊಂದಿದೆ.
ರಸ್ತೆಯ ಮೂಲಕವೂ ಫತೇಪುರ್ ಸಿಕ್ರಿಯನ್ನು ಸುಲಭವಾಗಿ ತಲುಪ ಬಹುದು. ಏಕೆಂದರೆ ಪ್ರದೇಶದ ಎಲ್ಲ ಪ್ರಮುಖ ನಗರಗಳಿಗೆ ಉತ್ತಮವಾದ ನಿರ್ವಹಣೆ ಮತ್ತು ದಕ್ಷತೆಯ ಜಾಲಗಳ ಮೂಲಕ ಈ ಪ್ರದೇಶವು ಉತ್ತಮ ಸಂಪರ್ಕವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X