Search
  • Follow NativePlanet
Share
» »ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

By Vijay

ಈ ದೇವಾಲಯ ಸರಸ್ವತಿಗೆ ಮುಡಿಪಾದ ದೇವಾಲಯವಾಗಿದೆ. ದೇಗುಲದ ಮುಖ್ಯ ದೇವ ವಿಷ್ಣುವಾಗಿದ್ದರೂ ಸಹ ಪ್ರಧಾನವಾಗಿ ಸರಸ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ವರ್ಷಗಳ ಅದ್ಭುತ ಇತಿಹಾಸವನ್ನು ಈ ದೇವಾಲಯ ಹೊಂದಿದೆ. ದಕ್ಷಿಣ ಮೂಕಾಂಬಿಕಾ ದೇವಿ ಎಂತಲೆ ಪ್ರಸಿದ್ಧಿಗಳಿಸಿರುವ ಸರಸ್ವತಿಯ ಈ ದೇವಾಲಯವು ಅನನ್ಯವಾಗಿದ್ದು ಕೇರಳದ ಕೊಟ್ಟಾಯಂ ಜಿಲ್ಲೆಯ ಪನಚಿಕ್ಕಾಡು ಎಂಬ ಪಟ್ಟಣದಲ್ಲಿದೆ.

ಸರಸ್ವತಿಯ ಈ ಆಕರ್ಷಕ ದೇವಾಲಯಗಳು ಗೊತ್ತೆ?

ಕೇರಳ ರಾಜ್ಯದಲ್ಲಿ ಕಂಡುಬರುವ ಪ್ರಮುಖ ಹಾಗೂ ಅಪರೂಪದ ಸರಸ್ವತಿ ದೇವಾಲಯಗಳ ಪೈಕಿ ಈ ದೇವಾಲಯವೂ ಸಹ ಒಂದು. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ದಕ್ಷಿಣದ ಮೂಕಾಂಬಿಕಾ ದೇವಾಲಯ ಎಂದೆ ಕರೆಯಲಾಗುತ್ತದೆ. ಹೌದು ಕರ್ನಾಟಕದ ಕೊಲ್ಲೂರಿನ ಮೂಕಾಂಬಿಕೆಯಂತೆ ಇದೂ ಸಹ ಮೂಕಾಂಬಿಕೆಯ ದೇವಾಲಯವಾಗಿದೆ. ಮೂಕಾಂಬಿಕೆಯನ್ನು ಸರಸ್ವತಿಯ ಒಂದು ಅವತಾರವಾಗಿ ಪೂಜಿಸಲಾಗುತ್ತದೆ.

ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

ಚಿತ್ರಕೃಪೆ: arunpnair

ಇನ್ನೊಂದು ವಿಚಿತ್ರ ಹಾಗೂ ವಿಶೇಷವನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಅದರಂತೆ ಇದು ಮೂಕಾಂಬಿಕೆಯ ದೇವಾಲಯವಾಗಿದ್ದರೂ ಸಹ ಇಲ್ಲಿ ದೇವಿಯ ಯಾವುದೆ ಪ್ರಧಾನವಾಗಲಿ ಅಥವಾ ಸಾಮಾನ್ಯವಾಗಲಿ ವಿಗ್ರಹವಿಲ್ಲದಿರುವುದು. ಹೌದು, ದೇವಿಯ ಯಾವ ಮೂಲ ವಿಗ್ರಹವೂ ಈ ದೇವಿಯ ದೇವಾಲಯದಲ್ಲಿ ಕಂಡುಬರುವುದಿಲ್ಲ.

ಕೇರಳದ ಕೊಟ್ಟಾಯಂ ಜಿಲ್ಲೆಯ ಪನಚಿಕ್ಕಾಡು ಎಂಬ ಪಟ್ಟಣದಲ್ಲಿ ಸರಸ್ವತಿ ದೇವಿಯ ಈ ಸುಂದರವಾದ ದೇವಾಲಯವಿದೆ. ವಿಶೇಷ ಎಂದರೆ ಇಲ್ಲಿ ಸರಸ್ವತಿ ದೇವಿಯು ಚಿಕ್ಕ ನೀರಿನ ಮೂಲದ ಮಧ್ಯವೊಂದರಲ್ಲಿ ನೆಲೆಸಿದ್ದಾಳೆ ಹಾಗೂ ಅದಕ್ಕೆ ಯಾವುದೆ ರೀತಿಯ ಛಾವಣಿಯಾಗಲಿ ಗೋಪುರವಾಗಲಿ ಇಲ್ಲ. ಮೂರ್ತಿಯ ಸುತ್ತಲೂ ಬೆಳೆದಿರುವ ಬಳ್ಳಿಗಳೆ ಆಕೆಗೆ ಆಶ್ರಯ. ಹಾಗಾಗಿ ಆ ಬಳ್ಳಿಯ ಎಲೆಗಳನ್ನು ಸರಸ್ವತಿ ಎಲೆಗಳೆಂದು ಕರೆಯುತ್ತಾರೆ.

ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

ಚಿತ್ರಕೃಪೆ: Sailesh

ಮೂಲತಃ ಇದು ವಿಷ್ಣು ದೇವಾಲಯವಾಗಿದ್ದರೂ ಸರಸ್ವತಿಯ ಉಪಸ್ಥ್ತಿಯಿಂದ ಹೆಚ್ಚಿನ ಮಹತ್ವ ಪಡೆದು ಸರಸ್ವತಿ ದೇವಾಲಯ ಎಂತಲೆ ಜನಜನಿತವಾಗಿದೆ. ಬಹು ಹಿಂದೆ ಇಲ್ಲಿನ ನಂಬೂದಿರಿ ಬ್ರಾಹ್ಮಣನಾದ ಕಿಳಪುರಂ ಇಲ್ಲಂ ಎಂಬಾತನಿಗೆ ಗಂಡು ಸಂತಾನವಿರಲಿಲ್ಲ. ಸಾಕಷ್ಟು ವಯಸ್ಸಾಗಿದ್ದರಿಂದ ಕಾಶಿಗೆ ತೆರಳಿ ಪ್ರಾರ್ಥಿಸಿ ಬರುತ್ತ ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಮಾಡಿ ಅಲ್ಲಿನ ಪರಿಸರಕ್ಕೆ ಮಾರು ಹೋಗಿ ಒಂದು ವರ್ಷಗಳ ಕಾಲ ಕಳೆದ.

ಹೀಗಿರುವಾಗ ಒಮ್ಮೆ ಸ್ತ್ರೀಯೊಬ್ಬಳು ಅವನ ಕನಸಿನಲ್ಲಿ ಬಂದು ಆತನಿಗೆ ಗಂಡು ಸಂತಾನದ ಭಾಗ್ಯವಿಲ್ಲವೆಂದೂ ಆ ಕಾರಣ ಅವನ ಊರಿನ ಕರುನಾಟ್ಟು ಕುಟುಂಬದ ಮಹಿಳೆಯೊಬ್ಬಳು ಎರಡು ಸಂತಾನದ ಭಾಗ್ಯ ಹೊಂದಿದ್ದು ಅದರಲ್ಲಿ ಒಂದು ಗಂಡು ಸಂತಾನವನ್ನು ದತ್ತು ತೆಗೆದುಕೊ ಅಂತಹೇಳಿದಳು. ದೇವಾಲಯಕ್ಕೆ ಸಾಕಷ್ಟು ಜನ ಭಕ್ತರು ಭೇಟಿ ನೀಡುತ್ತಾರೆ.

ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

ಚಿತ್ರಕೃಪೆ: Manojk

ಇದಕ್ಕೊಪಿದ ಆ ಬ್ರಾಹ್ಮಣ ಪನಚಿಕ್ಕಾಡುಗೆ ಬಂದು ಕೊಳದಲ್ಲಿ ಸ್ನಾನ ಮಾಡಲೆಂದು ತನ್ನ ಎಲೆಗಳಿಂದ ಮಾಡಲಾದ ಕೊಡೆಯನ್ನು ಅಲ್ಲಿಯ ಭೂಮಿಯ ಮೇಲೆ ಬಿಟ್ಟು ಸ್ನಾನ ಮಾಡಿದ. ನಂತರ ಆ ಕೊಡೆಯನ್ನು ಎತ್ತಲು ಹೋದಾಗ ಅದನ್ನೆತ್ತಲಾಗಲಿಲ್ಲ. ಇದರಿಂದ ಬ್ರಾಹ್ಮಣ ಅಚ್ಚರಿಗೊಂಡ ಹಾಗೂ ಆ ಕ್ಷಣದಲ್ಲೆ ಆಕಾರವೊಂದು ಪ್ರತ್ಯಕ್ಷವಾಗಿ ಆ ಕೊಡೆಯಲ್ಲಿ ದೇವಿಯ ಆವಾಹನವಾಗಿದ್ದು ಆಕೆಯನ್ನು ಈ ಪ್ರದೇಶವೊಂದರಲ್ಲಿ ಅವಿತುಹೋಗಿರುವ ವಿಗ್ರಹದಲ್ಲೆ ಬರಮಾಡಿಕೊಳ್ಳಬೇಕೆಂದು ಹೇಳಿ ಮಾಯವಾಯಿತು.

ಭೀಮಕಾಳಿಯ ಅದ್ಭುತ ದೇವಾಲಯ!

ಅಷ್ಟಕ್ಕೂ ಆ ವಿಗ್ರಹ ಯಕ್ಷಿಯೊಬ್ಬಳ ಸುಪರ್ದಿಯಲ್ಲಿದ್ದು ಆಕೆಯ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿ ವಿಗ್ರಹ ಪಡೆಯಬೇಕೆಂದು ಎಚ್ಚರಿಸಿತ್ತು. ಅದರಂತೆ ಆ ಬ್ರಾಹ್ಮಣನಿಗೆ ವಿಗ್ರಹ ದೊರಕಿ ಯಕ್ಷಿಯನ್ನು ಸಂತುಷ್ಟಗೊಳಿಸಿ ವಿಗ್ರಹ ಪಡೆದು ನೀರಿನ ಮೂಲವೊಂದರ ಮೇಲೆ ಅದನ್ನು ಪ್ರತಿಷ್ಠಾಪಿಸಿದನು. ಹಾಗಾಗಿ ಅಲ್ಲಿ ನೀರು ಸದಾ ಹರಿಯುತ್ತಿರುತ್ತದೆ, ಬಿರು ಬೇಸಿಗೆಯಲ್ಲೂ ಕೂಡ. ಹೀಗೆ ನೀರಿನಲ್ಲಿ ನೆಲೆಸಿರುವ ದೇವಿಯು ಸರಸ್ವತಿಯ ಅವತಾರವಾಗಿ ಸರಸ್ವತಿಯ ದೇವಾಲಯ ಎಂದು ಪ್ರಸಿದ್ಧಿಗಳಿಸಿತು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more