Search
  • Follow NativePlanet
Share
» »ಉತ್ತರ ಭಾರತದ ಚಹಾ ರಾಜಧಾನಿ ಯಾವುದು ಗೊತ್ತಾ?

ಉತ್ತರ ಭಾರತದ ಚಹಾ ರಾಜಧಾನಿ ಯಾವುದು ಗೊತ್ತಾ?

ಉತ್ತರ ಭಾರತದ ಬಹು ಭಾಗಗಳಲ್ಲಿ ಚಹಾ ಬೆಳೆಯನ್ನೇ ಅವಲಂಭಿಸಿದ್ದಾರೆ. ಚಹಾವನ್ನೇ ಜೀವನೋಪಾಯದ ಬೆಳೆಯನ್ನಾಗಿ ಬೆಳೆಯುತ್ತಾರೆ. ಉತ್ತಮ ಗುಣಮಟ್ಟದ ಇಳುವರಿ ಹೊಂದಿರುವ ಪ್ರದೇಶವೆಂದರೆ ಪಾಲಂಪೂರ್. ಇಲ್ಲಿಯ ಬೆಳೆಯ ಮೊದಲ ಆವಿಷ್ಕಾರ ಬ್ರಿಟಿಷರಿಂದ ಆಯಿತು ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ ವಾಣಿಜ್ಯ ವ್ಯಾಪಾರ ಕೇಂದ್ರವಾಗಿ ಬದಲಾಯಿತು.

ಚಹಾ ರಾಜಧಾನಿ ಪಾಲಂಪೂರ್

ಚಹಾ ರಾಜಧಾನಿ ಪಾಲಂಪೂರ್

PC:Sumeet Jain

ಇಲ್ಲಿಯ ಸ್ಥಳೀಯ ಭಾಷೆಯ ಪ್ರಕಾರ 'ಪಾಲಂ' ಎಂದರೆ ಅತಿಯಾದ ನೀರು ಎಂದರ್ಥ. ಈ ಪ್ರದೇಶಗಳಿಗೆ ಅನೇಕ ತೊರೆಗಳು ಹರಿದು ಬರುವುದರಿಂದ ಬೆಳೆಯ ಇಳುವರಿಯೂ ಅಧಿಕವಾಗಿರುತ್ತವೆ. ಒಂದೆಡೆ ಹಿಮಗಳಿಂದ ಆವೃತ್ತವಾಗಿರುವ ಗಿರಿಗಳ ಸಾಲು, ಇನ್ನೊಂದೆಡೆ ಚಹಾ ಬೆಳೆಯಿಂದ ಕೂಡಿರುವ ಬೆಟ್ಟಗಳು ನಿಮಗೆ ಉತ್ತಮ ಪ್ರಕೃತಿ ಸೌಂದರ್ಯದ ಸೊಬಗನ್ನು ನೀಡುತ್ತದೆ.

ಪುರಿಯ ಜಗನ್ನಾಥ ದೇವಸ್ಥಾನ ಹೋಲುವ ದೇವಾಲಯ

ಪುರಿಯ ಜಗನ್ನಾಥ ದೇವಸ್ಥಾನ ಹೋಲುವ ದೇವಾಲಯ

PC: Rakeshkdogra

ಇಲ್ಲಿ ಶಿವನ ಮಂದಿರವೊಂದಿದೆ, ಅದನ್ನು ಬಜಿನಾಥ ದೇವಾಲಯ ಎನ್ನಲಾಗುತ್ತದೆ. ಈ ದೇವಸ್ಥಾನದ ವಾಸ್ತುಶಿಲ್ಪವು ಪುರಿ ಜಗನ್ನಾಥ ದೇವಸ್ಥಾನವನ್ನು ಹೋಲುತ್ತದೆ. ಅಮರತ್ವ ವರವನ್ನು ಪಡೆಯಲು ರಾವಣನು ಇಲ್ಲಿಯೇ ಶಿವನನ್ನು ತಪಸ್ಸು ಮಾಡಿದ್ದನು ಎನ್ನುತ್ತದೆ ಇತಿಹಾಸ. ಈ ಮಂದಿರದಲ್ಲಿ ಸುಂದರ ಕಲಾಕೃತಿಯನ್ನು ಕಾಣಬಹುದು.

ಪ್ಯಾರಾಗ್ಲೈಡಿಂಗ್ ತಾಣ

ಪ್ಯಾರಾಗ್ಲೈಡಿಂಗ್ ತಾಣ

PC: Fabien1309

ಪಾಲಂಪೂರ್ ವಿಶ್ವದಲ್ಲೇ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ತಾಣವಾಗಿದೆ. ಇದನ್ನು ಉತ್ತರ ಭಾರತದ ಚಹಾ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಪುರಾತನ ಕಾಲದ ಪವಿತ್ರ ದೇವಾಲಯಗಳು ಹಾಗೂ ಕಟ್ಟಡಗಳಿವೆ.ಇಲ್ಲಿನ ಚಹಾದ ತೋಟಗಳು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ.ಇಲ್ಲಿನ ಸಹಕಾರಿ ಚಹಾ ಸಂಸ್ಥೆಯಲ್ಲಿ ಚಹಾ ಪುಡಿ ತಯಾರಿಸುವ ವಿಧಾನವನ್ನು ವೀಕ್ಷಿಸಬಹುದು.

ಚಾಮುಂಡ ದೇವಿ ದೇವಸ್ಥಾನ

ಚಾಮುಂಡ ದೇವಿ ದೇವಸ್ಥಾನ

PC: Ashish3724

ಇದು ಪಾಲಂಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಇದು ಹಿಂದೂಗಳ ಪವಿತ್ರ ದೇವಸ್ಥಾನವಾಗಿದೆ. ಇಲ್ಲಿ ವಾಮುಂಡ ದೇವಿಯನ್ನು ಪೂಜಿಸಲಾಗುತ್ತದೆ. ದೂರದೂರದ ಊರುಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಬಂದು ದೇವಿಯ ಆಶಿರ್ವಾದ ಪಡೆಯುತ್ತಾರೆ.

ಯಾವಾಗ ಭೆಟಿಗೆ ಸೂಕ್ತ

ಯಾವಾಗ ಭೆಟಿಗೆ ಸೂಕ್ತ

PC:Ashish3724

ಈ ಸ್ಥಳವೂ ಪ್ರತಿಯೊಂದು ಕಾಲದಲ್ಲೂ ತಂಪಾಗಿರುವುದರಿಂದ ಯಾವಾಗ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ಹಸಿರು ಸಿರಿಯಿಂದ ಕೂಡಿರುವುದರಿಂದ ಪ್ರವಾಸಿಗರು ಬಿಡುವಿನ ಸಮಯದಲ್ಲಿ ಭೇಟಿ ನೀಡಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Jon Connell

ವಿಮಾನ ಮಾರ್ಗ: ಇಲ್ಲಿಗೆ ಹತ್ತಿರದ ನಿಲ್ದಾಣವೆಂದರೆ ಗಗ್ಗಲ್ ವಿಮಾನ ನಿಲ್ದಾಣ. ಇದು ಧರ್ಮಶಾಲದಿಂದ ಸುಮಾರು 25 ಕಿ.ಮೀ. ದೂರಲ್ಲಿದೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಯಿಂದಲೂ ವಿಮಾನ ಸಂಪರ್ಕವಿದೆ.

ರೈಲ್ವೆ ಮಾರ್ಗ: ಭಾರತದ ವಿವಿಧೆಡೆಯಿಂದಲೂ ರೈಲ್ವೆ ಸಂಪರ್ಕವನ್ನು ಈ ತಾಣ ಹೊಂದಿದೆ.

ರಸ್ತೆ ಮಾರ್ಗ: ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿರುವ ಪಾಲಂಪೂರ್ ದೆಹಲಿಯಿಂದ 486 ಕಿ.ಮೀ ದೂರದಲ್ಲಿದ್ದರೆ ಚಂಡೀಘಢದಿಂದ 259 ಕಿ.ಮೀ. ದೂರದಲ್ಲಿದೆ. ಈ ಎರಡು ಪ್ರದೇಶಗಳಿಂದ ಇಲ್ಲಿಗೆ ಬರಲು ಅನೇಕ ಬಸ್ ಸೌಲಭ್ಯಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X