Search
  • Follow NativePlanet
Share
» »ಈ ದೇವಾಲಯದಲ್ಲಿ ಮಂಗಳಸೂತ್ರ ಅರ್ಪಿಸಿದ್ರೆ ಕಂಕಣ ಭಾಗ್ಯ ಕೂಡಿ ಬರುತ್ತಂತೆ!

ಈ ದೇವಾಲಯದಲ್ಲಿ ಮಂಗಳಸೂತ್ರ ಅರ್ಪಿಸಿದ್ರೆ ಕಂಕಣ ಭಾಗ್ಯ ಕೂಡಿ ಬರುತ್ತಂತೆ!

ಯಾವ ಹೆತ್ತವರಿಗೆ ತಾನೇ ತಮ್ಮ ಮಕ್ಕಳ ಮೇಲೆ ಪ್ರೀತಿ ಇರೋದಿಲ್ಲ ಹೇಳಿ. ಮಕ್ಕಳ ಸುಖ ಸಂತೋಷಕ್ಕಾಗಿ ಹೆತ್ತವರು ಏನೆಲ್ಲಾ ತ್ಯಾಗ ಮಾಡುತ್ತಾರೆ. ಅಂತಹದ್ದರಲ್ಲಿ ಮಕ್ಕಳ ಶ್ರೇಯೋಭಿವೃದ್ಧೀಗಾಗಿ ಹಾಗೂ ಅವರ ಕಲ್ಯಾಣ ಸಂಬಂಧಿಸಿದ ಸಮಸ್ಯೆಗಳಿಗಾಗಿ ಪರಿಹಾರ ಒದಗಿಸುವ ದೇವಾಲಯವೊಂದು ತಮಿಳುನಾಡಿನಲ್ಲಿದೆ. ಹಾಗಾದ್ರೆ ಬನ್ನಿ ಅದು ಯಾವ ದೇವಸ್ಥಾನ ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎರಡು ಲಿಂಗಗಳು

ಎರಡು ಲಿಂಗಗಳು

ಈ ದೇವಸ್ಥಾನದಲ್ಲಿ ಎರಡು ಶಿವಲಿಂಗವಿದೆ. ಮಹಾಲಿಂಗಂ ಹಾಗೂ ಪಡಗಲಿಂಗಂ. ಈ ಎರಡೂ ಲಿಂಗಗಳು ಗಾತ್ರದಲ್ಲಿ ಸಣ್ಣದೇ ಆಗಿವೆ. ಅಲ್ಲಿ ಸಣ್ಣ ನಂದಿಯೂ ಇದೆ. ಅವನಿ ಓಣಂ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬ ಆಚರಿಸಿದರೆ ಮಾರ್ಚ್-ಎಪ್ರಿಲ್‌ನಲ್ಲಿ ಪಂಗುನಿ ಉತ್ತಿರಮ್ ಎನ್ನುವ ಉತ್ಸವವನ್ನು ಆಚರಿಸಲಾಗುತ್ತದೆ.

ದೇಶದ ಭಯಾನಕ ರಸ್ತೆಗಳಿವು; ಇಲ್ಲಿ ಗುಂಡಿಗೆ ಕೈಯಲ್ಲಿಡಿದು ಪ್ರಯಾಣಿಸಬೇಕು!

ದೇವಸ್ಥಾನ ತೆರೆದಿರುವ ಸಮಯ

ದೇವಸ್ಥಾನ ತೆರೆದಿರುವ ಸಮಯ

ದೇವಸ್ಥಾನ ತೆರೆದಿರುವ ಸಮಯಬುಧವಾರ ಹಾಗೂ ಶನಿವಾರ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಬೆಳಗ್ಗೆ 8 ಗಂಟೆಯಿಂದ 10 ಗಂಟೆ ವರೆಗೆ ತೆರೆದಿರುತ್ತದೆ. ಉಳಿದ ಸಮಯಗಳಲ್ಲಿ ಬರುವವರು ದೇವಸ್ಥಾನಕ್ಕೆ ಆಗಮಿಸುವವರು ದೇವಾಲಯದ ಅರ್ಚಕರನ್ನು ಫೋನ್‌ ಮುಖಾಂತರ ಸಂಪರ್ಕಿಸಿ ಮುಂಚಿತವಾಗಿ ತಿಳಿಸಬೇಕಾಗುತ್ತದೆ.

ಪಡಗ ಪಿಲ್ಲಯಾರ್ ದೇವಸ್ಥಾನ

ಪಡಗ ಪಿಲ್ಲಯಾರ್ ದೇವಸ್ಥಾನ

ಶ್ರೀ ಪಡಗಲಿಂಗಸ್ವಾಮಿ ದೇವಸ್ಥಾನ, ಮಲಯಾನ್‌ಕುಲಮ್, ತಮಿಳುನಾಡಿನ ತಿರುನೆಲ್‌ವಿಲ್ ಜಿಲ್ಲೆಯಲ್ಲಿದೆ. ಗರ್ಭಗುಡಿಯ ಮುಂಭಾಗದಲ್ಲಿ ವಾಹನಗಳಾದ ಆನೆ, ಕುದುರೆ ಹಾಗೂ ನಂದಿ ವಿಗ್ರಹವಿದೆ. ಇಲ್ಲಿನ ಗಣೇಶನನ್ನು ಕೂಡಾ ಪಡಗ ಪಿಲ್ಲಯಾರ್ ಎಂದು ಕರೆಯಲಾಗುತ್ತದೆ. ಇಲ್ಲಿನ ಮುಖ್ಯ ದೇವರನ್ನು ಪಡಗಲಿಂಗಸ್ವಾಮಿ ಎಂದು ಕರೆಯುತ್ತಾರೆ. ಇದನ್ನು ಪಡಗ ಪಿಲ್ಲಯಾರ್ ದೇವಸ್ಥಾನ ಎಂದೂ ಕರೆಯುತ್ತಾರೆ.

ಮನೆ ದೇವರೆಂದು ಪೂಜಿಸುತ್ತಾರೆ

ಮನೆ ದೇವರೆಂದು ಪೂಜಿಸುತ್ತಾರೆ

ಯಾರಿಗೆ ತಮ್ಮ ಮನೆದೇವರು ಯಾವುದು ಎಂದು ಗೊತ್ತಿರುವುದಿಲ್ಲವೋ ಅಂತಹವರು ಧರ್ಮ ಶಾಸ್ತನನ್ನೇ ಮನೆದೇವರು ಎಂದು ಪೂಜಿಸುತ್ತಾರೆ. ಬುಧವಾರ ಹಾಗೂ ಶನಿವಾರ ಈ ದೇವಾಲಯದಲ್ಲಿ ಭಕ್ತರಿಂದ ವಿಶೇಷ ಪೂಜೆ ಇರುತ್ತದೆ.

ಇತರ ದೇವರುಗಳು

ಇತರ ದೇವರುಗಳು

ಇತರ ದೇವರುಗಳು ಇಲ್ಲಿ ಅನೇಕ ದೇವರ ವಿಗ್ರಹಗಳನ್ನು ಕಾಣಬಹುದು. ಸಗಿಲಿ ಭೂತತಾರ, ತಲವೈ ಮದನ್, ತಲವೈ ಮದತಿ , ವಾನ ಪೆಚ್ಚಿ ಅಮ್ಮನ್, ಬ್ರಹ್ಮರಾಚಿ, ಗಂಗಾದೇವಿ, ವಿಧು ಮದನ್, ತಕ್ಕರಾಜನ್, ಸುಧಾಲಿಮದನ್, ಚಿನ್ನತಂಬಿ ಮುಂತಾದ ದೈವಗಳ ಮೂರ್ತಿಯೂ ಇದೆ.

ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ಮಂಗಳ ಸೂತ್ರ ಅರ್ಪಿಸಬೇಕು

ಮಂಗಳ ಸೂತ್ರ ಅರ್ಪಿಸಬೇಕು

ಯಾರಿಗೆ ಮಕ್ಕಳ ಶ್ರೇಯೋಭಿವೃದ್ಧೀಗಾಗಿ ಹಾಗೂ ಮದುವೆ ವಿಚಾರವಾಗಿ ಇಲ್ಲಿ ಬೇಡಿಕೆ ಸಲ್ಲಿಸಲಾಗುತ್ತದೆ. ಬ್ರಹ್ಮರಚಿಗೆ ಪ್ರಾರ್ಥನೆ ಮಾಡಿ ಮಂಗಳಸೂತ್ರ ಅರ್ಪಿಸಬೇಕು. ಹಾಗೂ ಹಣೆಗೆ ಕುಂಕುಮ ಹಚ್ಚಬೇಕು. ಇದರಿಂದ ನಿಮ್ಮ ಕೋರಿಕೆ ಬೇಗನೆ ಈಡೇರುತ್ತದೆ ಎನ್ನಲಾಗುತ್ತದೆ. ಭಕ್ತರು ಪೊಂಗಲ್‌ನ್ನು ಅರ್ಪಿಸುವ ಮೂಲಕ ತಮ್ಮ ಬೇಡಿಕೆಯನ್ನು ಮುಂದಿಡುತ್ತಾರೆ.

ಮೂರ್ತಿ ರೂಪದಲ್ಲಿ ನೆಲೆಸಿರುವ ಏಳು ಸಹೋದರರರು

ಮೂರ್ತಿ ರೂಪದಲ್ಲಿ ನೆಲೆಸಿರುವ ಏಳು ಸಹೋದರರರು

ಈ ಊರಿನಲ್ಲಿ ಏಳು ಜನ ಅಣ್ಣತಮ್ಮಂದಿರುವ ತಮ್ಮ ಏಕೈಕ ಸಹೋದರಿ ಜೊತೆ ವಾಸಿಸುತ್ತಿದ್ದರು. ಓರ್ವ ಬೇರೆ ಜಾತಿಯವ ಆಕೆಯನ್ನು ಮದುವೆಯಾಗಬೇಕೆಂದು ಬಯಸಿದ್ದ ಆದರೆ ಅಣ್ಣಂದಿರು ಒಪ್ಪಲಿಲ್ಲ, ಏಳು ಸಹೋದರರು, ಸಹೋದರಿ ಹಾಗೂ ಜನರು ಮೂರ್ತಿಗಳ ರೂಪದಲ್ಲಿ ಮಂದಿರದಲ್ಲಿ ನೆಲೆಸಿದ್ದಾರೆ.

ರಾಣಿಯ ಗೆಜ್ಜೆ ಸಿಲುಕಿಕೊಳ್ಳುತ್ತದೆ

ರಾಣಿಯ ಗೆಜ್ಜೆ ಸಿಲುಕಿಕೊಳ್ಳುತ್ತದೆ

ಚೀರಾದ ರಾಣಿಯು ಕಾಡಿನಲ್ಲಿ ಸುತ್ತಾಡುತ್ತಾ ಹೋಗುತ್ತಾಳೆ. ದಾರಿ ಮಧ್ಯೆ ಆಕೆಗೆ ಬಾಯಾರಿಕೆಯಾಗುತ್ತದೆ. ಆಕೆ ನೀರಿನ ಕೊಳವನ್ನು ನೋಡುತ್ತಾಳೆ. ಅಲ್ಲಿಗೆ ಹೋಗುವ ಮೊದಲು ತನ್ನ ಕಾಲಿನ ಗೆಜ್ಜೆಯನ್ನು ಅಲ್ಲೇ ಬಿಡುತ್ತಾಳೆ. ಕೊಳದಲ್ಲಿ ನೀರು ಕುಡಿದ ನಂತರ ಆಕೆಗೆ ದಡಕ್ಕೆ ಬರಲು ಆಗೋದಿಲ್ಲ. ಅದನ್ನು ನೋಡಿದ ಜನರು ರಾಜರಿಗೆ ಈ ಬಗ್ಗೆ ತಿಳಿಸುತ್ತಾರೆ. ರಾಜನು ಬಂದು ರಾಣಿಯನ್ನು ರಕ್ಷಿಸುತ್ತಾನೆ. ಆಕೆಯ ಗೆಜ್ಜೆಯು ಬಿದಿರಿನ ಮರದಲ್ಲಿ ಸಿಲುಕಿಕೊಂಡಿರುತ್ತದೆ. ರಾಜ ಬಿದಿರಿನ ಮರವನ್ನೇ ಕಡಿಯಲು ಹೇಳುತ್ತಾನೆ. ಆಗ ಅದರಿಂದ ರಕ್ತ ಸುರಿಯಲಾರಂಭಿಸುತ್ತದೆ. ಇದನ್ನು ಕಂಡು ಗಾಬರಿಯಾದ ರಾಜ ಹಿಂದಿರುಗುತ್ತಾನೆ.

ದೇವರೊಳಗೆ ವಿಲೀನವಾದ ರಾಜ,ರಾಣಿ

ದೇವರೊಳಗೆ ವಿಲೀನವಾದ ರಾಜ,ರಾಣಿ

ಮರುದಿನ ಅದೇ ಜಾಗಕ್ಕೆ ತನ್ನ ಗುರುಗಳ ಜೊತೆ ಬಂದಾಗ ಅಲ್ಲಿ ಎರಡು ಶಿವಲಿಂಗಗಳಿರುತ್ತವೆ. ಅಶರೀರ ವಾಣಿಯಲ್ಲಿ ಶಿವಲಿಂಗಕ್ಕೆ ದೇವಸ್ಥಾನ ಕಟ್ಟುವಂತೆ ತಿಳಿಸುತ್ತದೆ. ಅದರಂತೆಯೇ ರಾಜನು ದೇವಾಲಯವನ್ನು ನಿರ್ಮಿಸುತ್ತಾನೆ. ರಾಜ, ರಾಣಿಯರಿಬ್ಬರು ಶಿವಲಿಂಗದ ಸೇವೆ ಮಾಡುತ್ತಾರೆ. ಸೇವೆ ಮಾಡುತ್ತಾ ಮಾಡುತ್ತಾ ತಾವು ದೇವರಲ್ಲಿ ವಿಲೀನಗೊಳ್ಳುತ್ತಾರೆ. ಊರಿನ ಜನರು ರಾಜನನ್ನು ಚಿತ್ರಪುತ್ರ ಧರ್ಮಶಾಸ್ತ ಎಂದೂ ರಾಣಿಯನ್ನು ಪಡಗಲಿಂಗ ನಚಿಯರ್ ಎಂದೂ ಕರೆಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more