• Follow NativePlanet
Share
» »ಈ ನಾಗದ್ವಾರ ಯಾತ್ರೆಗೆ ಹೋಗುವುದು ಎಂದರೆ ಪ್ರಾಣದ ಜೊತೆ ಆಟವಾಡಿದಂತೆಯೇ ಸರಿ...

ಈ ನಾಗದ್ವಾರ ಯಾತ್ರೆಗೆ ಹೋಗುವುದು ಎಂದರೆ ಪ್ರಾಣದ ಜೊತೆ ಆಟವಾಡಿದಂತೆಯೇ ಸರಿ...

Posted By:

ನಾಗ ದ್ವಾರ ಯಾತ್ರೆಗೆ ಹೋಗುವುದು ಅಷ್ಟು ಸುಲಭವಾದುದಲ್ಲ.....

ಪ್ರತಿಯೊಬ್ಬರಿಗೆ ಅಲ್ಲಿಗೆ ಹೋಗುವುದು ಅಸಾಧ್ಯವಾದುದು.

ಕೇವಲ 10 ದಿನಗಳ ಮಾತ್ರವೇ ಈ ಯಾತ್ರೆಗೆ ಅನುಮತಿ ನೀಡಲಾಗುತ್ತದೆ.

ಹೆಜ್ಜೆ-ಹೆಜ್ಜೆಗೂ ಮೃತ್ಯುವು ಹಿಂದೆಯೇ ಇರುತ್ತದೆ.

ನಾಲ್ಕು ದಿಕ್ಕಿನಲ್ಲಿ ದಟ್ಟವಾದ ಅರಣ್ಯ, ಪರ್ವತಗಳು, ಕಣಿವೆಗಳು, ಜಲಪಾತಗಳು ಎಷ್ಟೊ ಸುಂದರವಾಗಿ ಹಾಗೆಯೇ ಭಯವಾಗಿಯೂ ಕೂಡ ಅನಿಸುತ್ತದೆ.

ಮಧ್ಯ ಪ್ರದೇಶ ಒಂದು ಸುಪ್ರಸಿದ್ಧವಾದ ಪ್ರವಾಸಿ ಕೇಂದ್ರವಾಗಿದೆ. ಮಧ್ಯ ಪ್ರದೇಶದಲ್ಲಿನ ಆಹಾರ, ಹಬ್ಬಗಳಂದು ಇಲ್ಲಿನ ವಿಭಿನ್ನವಾದ ಖಾದ್ಯಗಳು ಸ್ವಾಧಿಷ್ಟವಾಗಿರುತ್ತದೆ. ಆಹಾರದಲ್ಲಿ ಪ್ರಧಾನವಾಗಿ ರಾಜಸ್ಥಾನಿ, ಗುಜರಾತಿ ಆಹಾರಗಳು ಇರುತ್ತವೆ. ಸಿಖ್, ಷಾಹಿ ಕಬಾಬ್ ನಂತಹ ಚಾರಿತ್ರಿಕವಾದ ಆಹಾರಗಳಿಗೆ ರಾಜಧಾನಿಯಾದ ಭೂಪಾಲ್ ಪ್ರಸಿದ್ಧಿ. ಜಿಲೇಬಿ, ಗೋಡಂಬಿಯ ಬರ್ಫಿ ಮಧ್ಯ ಪ್ರದೇಶದ ಎಲ್ಲಾ ನಗರಗಳಲ್ಲಿಯೂ ಕೂಡ ದೊರೆಯುತ್ತದೆ.

ಆದರೆ ರಾಜ್ಯದಲ್ಲಿನ ವಿವಿಧ ಭಾಗಗಳ ಆಹಾರವು ಹಾಗು ಪದ್ಧತಿಗಳು ಮಾತ್ರ ಸ್ವಲ್ಪ ಭಿನ್ನವಾಗಿರುತ್ತದೆ. ಖಜುರಾಹೋದಲ್ಲಿನ ಖಜುರಾಹೋ ನೃತ್ಯ, ಗ್ವಾಲಿಯರ್‍ನಲ್ಲಿ ನಡೆಯುವ ತಾನ್ಸೆನ್ ಸಂಗೀತ ಉತ್ಸವ ವಿಶ್ವ ವಿಖ್ಯಾತಿಯಾಗಿದೆ.

1.ಎಲ್ಲಿದೆ?

1.ಎಲ್ಲಿದೆ?

ನಾಗದ್ವಾರ ಹಾಗು ಕೇವಲ 10 ದಿನಗಳು ಮಾತ್ರ ತೆರೆಯುವ ಆ ಪ್ರದೇಶವು ಇರುವುದು ಮಧ್ಯ ಪ್ರದೇಶದಲ್ಲಿನ ಭೊಪಾಲ್‍ನ ಪಚಮಾರಾಹಿ ಬೆಟ್ಟ ಎಂಬ ಪ್ರದೇಶದಲ್ಲಿ.

2.ಇಲ್ಲಿರುವ ಶಿವಾಲಯದ ವಿಶೇಷತೆ

2.ಇಲ್ಲಿರುವ ಶಿವಾಲಯದ ವಿಶೇಷತೆ

ಇಲ್ಲಿರುವ ಅತ್ಯಂತ ಪ್ರಾಚೀನವಾದ ಶಿವಾಲಯವನ್ನು ಎಷ್ಟೋ ವಿಶೇಷವಾದ ಹಾಗು ಪವಿತ್ರವಾದ ದೇವಾಲಯ ಎಂದು ಭಾವಿಸುತ್ತಾರೆ. ಇನ್ನು ಇದು ಶ್ರಾವಣ ಮಾಸದಲ್ಲಿ ಮಾತ್ರವೇ ಅನುಮತಿಯನ್ನು ನೀಡುತ್ತಾರೆ.

3.10 ಲಕ್ಷ ಮಂದಿ

3.10 ಲಕ್ಷ ಮಂದಿ

ಕೇವಲ ಆ 10 ದಿನಗಳಲ್ಲಿಯೇ ಸುಮಾರು 10 ಲಕ್ಷ ಮಂದಿ ಈ ನಾಗ ದ್ವಾರದ ಯಾತ್ರೆ ಎಂಬುದು ಮಾಡುತ್ತಾರೆ. ಇಲ್ಲಿ 10 ದಿನಗಳ ನಂತರ ಎಷ್ಟೋ ವಿಷಪೂರಿತವಾದ ಸರ್ಪಗಳು, ಕ್ರೂರವಾದ ಮೃಗಗಳು ಕೂಡ ತಿರುಗುತ್ತಿರುತ್ತವೆ.

4.ಪ್ರವೇಶ

4.ಪ್ರವೇಶ

ಇನ್ನು ಆ ಪ್ರದೇಶದಲ್ಲಿ ಪ್ರವೇಶಿಸಬೇಕಾದರೆ ಮಾನವರು ಯಾರು ಕೂಡ ಅಷ್ಟು ಸಾಹಸವನ್ನು ಮಾಡುವುದಿಲ್ಲ. ಇದು ಭೊಪಾಲ್‍ನಿಂದ ಸುಮಾರು 200 ಕಿ.ಮೀ ದೂರದಲ್ಲಿದೆ.

5.ಗುಹೆ

5.ಗುಹೆ

ದಟ್ಟವಾದ ಅರಣ್ಯದಲ್ಲಿ ಗುಹೆಗಳು ಶಿವನ ಒಂದು ರೂಪವನ್ನು ದರ್ಶಿಸುವ ಸಲುವಾಗಿ ಭಕ್ತರು ಅನೇಕ ಅಡೆ-ತಡೆಗಳನ್ನು ಎದುರಿಸಿಕೊಂಡು ಗುಹಾ ದೇವಾಲಯಕ್ಕೆ ಸೇರಿಕೊಳ್ಳುತ್ತಾರೆ.

6.ಮಂದಿರದ ಪ್ರವೇಶ ಯಾವಾಗ ಮಾಡಬೇಕು?

6.ಮಂದಿರದ ಪ್ರವೇಶ ಯಾವಾಗ ಮಾಡಬೇಕು?

ಈ ಮಂದಿರದ ಎಂಬುದು ಜುಲೈ 18 ರಿಂದ ಜುಲೈ 28ರ ಮಧ್ಯೆದಲ್ಲಿ ಮಾತ್ರವೇ ಭಕ್ತರ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗುತ್ತದೆ. ಅಂದರೆ ಕೇವಲ 10 ದಿನಗಳ ಕಾಲ ಮಾತ್ರ ಅನುಮತಿಯನ್ನು ನೀಡುತ್ತಾರೆ.

7.ದಟ್ಟವಾದ ಅರಣ್ಯ

7.ದಟ್ಟವಾದ ಅರಣ್ಯ

ವರ್ಷದ ಉದ್ದಕ್ಕೂ ಅನುಮತಿ ಇಲ್ಲದ ದಟ್ಟವಾದ ಅರಣ್ಯದಲ್ಲಿರುವ ಈ ಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಅನೇಕ ವಿಷ ಸರ್ಪಗಳು, ಚೇಳುಗಳಂತಹವು ಸಂದರ್ಶಕರಿಗೆ ದರ್ಶನವನ್ನು ನೀಡುತ್ತದೆ.

8.ಅನೇಕ ಬಗೆಯ ಔಷಧಿ ಎಲೆಗಳು

8.ಅನೇಕ ಬಗೆಯ ಔಷಧಿ ಎಲೆಗಳು

ಇನ್ನು ಈ ಯಾತ್ರೆಯಲ್ಲಿ ಎಷ್ಟೊ ಎತ್ತರದಿಂದ ಬೀಳುವ ಜಲಪಾತಗಳು, ಅನೇಕ ವಿಧವಾದ ಔಷಧಿ ಗುಣಗಳನ್ನು ಹೊಂದಿದೆ. ಪ್ರತಿಯೊಂದು ಹೆಜ್ಜೆಗೂ ಪ್ರವಾಸಿಗರು ಮತ್ತು ಯಾತ್ರಿಕರು ಜಾಗ್ರತೆಯಿಂದ ನಡೆಯಬೇಕಾಗುತ್ತದೆ.

9.ಸ್ವಲ್ಪ ಜಾರಿದರು ಅಷ್ಟೇ...

9.ಸ್ವಲ್ಪ ಜಾರಿದರು ಅಷ್ಟೇ...

ಈ ಮಾರ್ಗವು ತುಂಬ ಕಡಿದಾಗಿರುತ್ತದೆ. ಸ್ವಲ್ಪ ಹಾಗೆ-ಹೀಗೆ ಆದರೂ ಕೂಡ ಎಷ್ಟೊ ಆಳವನ್ನು ಹೊಂದಿರುವ ಬೆಟ್ಟದ ಮೇಲಿಂದ ಕೆಳಗೆ ಬೀಳುವ ಎಲ್ಲಾ ಅವಕಾಶಗಳು ಇರುತ್ತವೆ.

10.ಸಾಹಸ

10.ಸಾಹಸ

ಇನ್ನು ಹರಿಯುತ್ತಿರುವ ನೀರನ್ನು ದಾಟಿಕೊಂಡು ಹೋಗುವುದು ಎಂದರೆ ನಿಜವಾಗಿಯೂ ಒಂದು ಸಾಹಸವೇ ಸರಿ. ಇನ್ನು ಟ್ರೆಕ್ಕಿಂಗ್ ಅನ್ನು, ಸಾಹಸವನ್ನು ಇಷ್ಟ ಪಡುವವರು ಈ ಯಾತ್ರೆಯನ್ನು ಅತ್ಯಂತ ಸಂತೋಷವನ್ನು, ಆನಂದವನ್ನು ಉಂಟು ಮಾಡುತ್ತದೆ.

11.18 ಗಂಟೆಗಿಂತ ಹೆಚ್ಚು ಸಮಯ

11.18 ಗಂಟೆಗಿಂತ ಹೆಚ್ಚು ಸಮಯ

ದಟ್ಟವಾದ ಈ ಅರಣ್ಯದಲ್ಲಿ ಸುಮಾರು 20 ಕಿ.ಮೀ ನಡೆಯಬೇಕಾಗುತ್ತದೆ. ಇಲ್ಲಿ ಕಾಲ್ನಿಡಿಗೆಯಲ್ಲಿ ನಡೆಯಲು ಸುಮಾರು 18 ಗಂಟೆಗಿಂತ ಹೆಚ್ಚು ಕಾಲ ನಡೆಯಬೇಕಾಗುತ್ತದೆ.

12.ದೇಶ-ವಿದೇಶಗಳಿಂದ ಪ್ರವಾಸಿಗರು

12.ದೇಶ-ವಿದೇಶಗಳಿಂದ ಪ್ರವಾಸಿಗರು

ಏಕೆಂದರೆ ಕಲ್ಲು-ಮಣ್ಣು ಅಧಿಕವಾಗಿರುವ ಈ ಸ್ಥಳದಲ್ಲಿ, ಬೆಟ್ಟಗಳನ್ನು, ಕಣಿವೆಗಳನ್ನು ದಾಟುತ್ತಾ ತೆರಳಬೇಕಾದರೆ ಕಷ್ಟ ಎಂದೇ ಹೇಳಬಹುದು. ಕೇವಲ ಈ ಪ್ರದೇಶದ ಸುತ್ತಮುತ್ತ ಇರುವವರೇ ಅಲ್ಲದೇ ವಿದೇಶಿಯರು ಕೂಡ ಸಾಹಸವನ್ನು ಇಷ್ಟ ಪಡುವವರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

13.ಕುಲ ದೈವ

13.ಕುಲ ದೈವ

ನಾಗ ಪೂರ್ ಮೊದಲಾದ ಪ್ರದೇಶದವರಿಗೆ ಇಲ್ಲಿನ ನಾಗದೇವತೆಯು ಅವರ ಕುಲದೇವತೆಯಾಗಿದ್ದಾಳೆ. ಅಷ್ಟೇ ಅಲ್ಲ ಭೂಮಂಡಲ ಎಂಬುದು ಶೇಷನಾಗನ ತಲೆಯ ಮೇಲೆ ಇದೆ ಎಂದು ಕೂಡ ನಂಬುತ್ತಾರೆ.

14.ಪ್ರಾಮುಖ್ಯತೆ

14.ಪ್ರಾಮುಖ್ಯತೆ

ಹಾಗಾಗಿಯೇ ಅವರು ಈ ಪ್ರದೇಶಕ್ಕೆ ಅಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇಲ್ಲಿ ಶಿವನ ಸನ್ನಿಧಿಯಲ್ಲಿ ಮಹಾ ಯಜ್ಞವನ್ನು ಮಾಡಿ ಆ ಭಸ್ಮವನ್ನು ತೆಗೆದುಕೊಂಡು ಹೋಗಿ ತಮ್ಮ ಹೊಲದಲ್ಲಿ ಚೆಲ್ಲುತ್ತಾರೆ.

15.ನಂಬಿಕೆ

15.ನಂಬಿಕೆ

ಆ ವಿಧವಾಗಿ ಮಾಡಿದರೆ ಹಾವುಗಳು ಬರುವುದಿಲ್ಲ ಎಂದೂ, ಯಾರಿಗೂ ಕೂಡ ಹಾನಿಗೊಳಿಸುವುದಿಲ್ಲ ಎಂದು ಅವರ ನಂಬಿಕೆಯಾಗಿದೆ. ಹಾಗೆಯೇ ಈ ಪ್ರದೇಶದಿಂದ ನಾಗಲೋಕಕ್ಕೆ ದಾರಿ ಇದೆ ಎಂದು ಕೂಡ ಅವರು ಪ್ರಬಲವಾಗಿ ನಂಬುತ್ತಾರೆ.

16.ರೋಗಗಳನ್ನು ವಾಸಿಮಾಡುವ ಜಲಪಾತದ ನೀರು

16.ರೋಗಗಳನ್ನು ವಾಸಿಮಾಡುವ ಜಲಪಾತದ ನೀರು

ಇನ್ನು ಇಲ್ಲಿ ಹಾಲಿನ ನೊರೆಯಂತೆ ಬೀಳುವ ಜಲಪಾತದಲ್ಲಿನ ನೀರನ್ನು ಕುಡಿದರೆ ವರ್ಷವೆಲ್ಲಾ ಅನಾರೋಗ್ಯಕ್ಕೆ ಗುರಿಯಾಗದೇ ಇರುತ್ತಾರೆ ಎಂಬುದು ಕೂಡ ಅವರ ನಂಬಿಕೆಯಾಗಿದೆ.

17.ಕೋರಿಕೆಗಳನ್ನು ತಪ್ಪದೇ ನೇರವೇರಿಸುವ ನಾಗದ್ವಾರ್

17.ಕೋರಿಕೆಗಳನ್ನು ತಪ್ಪದೇ ನೇರವೇರಿಸುವ ನಾಗದ್ವಾರ್

ಇನ್ನು ನಾಗ ದ್ವಾರದಲ್ಲಿನ ಶಿವನನ್ನು ಮನ್ನ ದ್ವಾಲ ಬಾಬಾ ಎಂದು ಕರೆಯುತ್ತಾರೆ. ಇಲ್ಲಿಗೆ ಬಂದು ಕೋರಿಕೆಯನ್ನು ಕೋರಿಕೊಂಡರೆ ತಪ್ಪದೇ ನೆರವೇರುತ್ತದೆ ಎಂದು ಭಕ್ತರು ನಂಬುತ್ತಾರೆ.

18.ಬೆಟ್ಟಗಳು, ಕಣಿವೆಗಳು,ಜಲಪಾತಗಳು

18.ಬೆಟ್ಟಗಳು, ಕಣಿವೆಗಳು,ಜಲಪಾತಗಳು

ಹಾಗಾಗಿಯೇ ಬೆಟ್ಟದ ಪ್ರದೇಶಗಳಿಂದ ನಡೆದುಕೊಂಡು ಆ ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಪ್ರದೇಶಕ್ಕೆ ಸೇರಿಕೊಳ್ಳಬೇಕಾದರೆ 10 ಗಂಟೆಗಳ ಕಾಲ ನಡೆದುಕೊಂಡೇ ಅತ್ಯಂತ ಕಷ್ಟಕರವಾದ, ಬೆಟ್ಟಗಳನ್ನು, ಕಣಿವೆಗಳನ್ನು, ಜಲಪಾತಗಳನ್ನು ದಾಟುತ್ತಾ ಹೋಗಬೇಕು.

19.10 ದಿನಗಳ ಕಾಲ

19.10 ದಿನಗಳ ಕಾಲ

ಇನ್ನು ಇಷ್ಟು ಕಷ್ಟ ಇದೆ ಎಂದು ತಿಳಿದಿದ್ದರು ಕೂಡ ಭಕ್ತರು ಅಲ್ಲಿಗೆ ಹೋಗುತ್ತಿರುತ್ತಾರೆ. ಇನ್ನು ಆ ಪ್ರದೇಶದಲ್ಲಿ ಸ್ಥಳೀಯರು 10 ದಿನಗಳ ಕಾಲ ತಾತ್ಕಾಲಿಕವಾಗಿ ಅಂಗಡಿಗಳನ್ನು ತೆರೆಯುತ್ತಾರೆ.

20.ಇಲ್ಲಿ ನೋಡಬೇಕಾಗಿರುವ ಪ್ರದೇಶಗಳು

20.ಇಲ್ಲಿ ನೋಡಬೇಕಾಗಿರುವ ಪ್ರದೇಶಗಳು

ಅಶೋಕ ಪಿಲ್ಲರ್ ಸಾಂಚಿ ಸಾಂಚಿಯಲ್ಲಿರುವ ಅಶೋಕ ಪಿಲ್ಲರ್ ರಾಜ್ಯದಲ್ಲಿ ಅತ್ಯಂತ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಇದು ಮಧ್ಯ ಪ್ರದೇಶ ರಾಜ್ಯ ಸರ್ಕಾರದಿಂದ ಹೆಸರುವಾಸಿಯಾಯಿತು. ಪಿಲ್ಲರ್ ನಾಲ್ಕು ಸಿಂಹಗಳನ್ನು ಹೊಂದಿದೆ. ಇದನ್ನು 3 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು ಎಂದು ನಂಬಲಾಗಿದೆ.

21.ವನ ವಿಹಾರ, ಭೊಪಾಲ್

21.ವನ ವಿಹಾರ, ಭೊಪಾಲ್

ಭೊಪಾಲ್‍ನಲ್ಲಿನ ವನ ವಿಹಾರ ಪಾರ್ಕ್ ನಗರಕ್ಕೆ ಬಲಭಾಗದಲ್ಲಿದೆ. ಈ ಪಾರ್ಕ್ ಅನ್ನು 445 ಹೆಕ್ಟೆರ್ ಭೂಮಿಯಲ್ಲಿ ನಿರ್ಮಾಣ ಮಾಡಿದರು. ಬೆಟ್ಟದ ಮೇಲೆ ನಿಂತು ನಗರದ ಅಂದ-ಚೆಂದವನ್ನುಕಾಣಬಹುದು. ಈ ಪ್ರದೇಶವು ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಯಾಗಿದೆ. ಪ್ರತಿ ತಿಂಗಳುಸಾವಿರಾರು ಮಂದಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿರುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ