• Follow NativePlanet
Share
» »ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!

ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!

Written By:

ಗಿರಿಧಾಮ ಎಂದರೆ ಯಾರಿಗೆ ಇಷ್ಟ ಆಗಲ್ಲ. ಪ್ರಕೃತಿಯ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಅದ್ಭುತವಾದ ಶಕ್ತಿಯನ್ನು ಹೊಂದಿವೆ ಈ ಗಿರಿಧಾಮಗಳು. ವಾರಾಂತ್ಯ ಬಂದರೆ ಸಾಕು ಯಾವುದಾದರೂ ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಕಾಲ ಹಾಯಾಗಿ ಇದ್ದು ಬರಬೇಕು ಎಂದು ಕೊಂಡವರಿಗೆ ಈ ಸ್ಥಳ ಹೇಳಿ ಮಾಡಿಸಿದ ಹಾಗೆ ಇರುತ್ತದೆ.

ಇದು ದಕ್ಷಿಣ ಭಾರತದಲ್ಲಿ ಕಂಡು ಬರುವ ದೊಡ್ಡ ದೊಡ್ಡ ಗಿರಿಧಾಮಗಳಷ್ಟು ಇಲ್ಲದೇ ಇದ್ದರೂ ಕೂಡ ಚಿಕ್ಕದಾಗಿದ್ದರೂ ಅತ್ಯಂತ ಆಕರ್ಷಣೆಯುತವಾಗಿದೆ. ಹಾಗಾಗಿಯೇ ಇಲ್ಲಿಗೆ ಹಲವಾರು ಜನರು ಭೇಟಿ ನೀಡುತ್ತಿರುತ್ತಾರೆ. ವಿಶೇಷ ಏನೆಂದರೆ ಈ ಗಿರಿಧಾಮವು ಬೆಂಗಳೂರಿಗೆ ಅತ್ಯಂತ ಸಮೀಪವಾಗಿರುವುದು. ಪ್ರಕೃತಿಯೊಂದಿಗೆ ಧಾರ್ಮಿಕವಾಗಿಯು ನಿಮ್ಮನ್ನು ಈ ಸ್ಥಳವು ಆಕರ್ಷಿಸುತ್ತದೆ. ಅದರ ಅರ್ಥ ಏನೆಂದರೆ ಇಲ್ಲಿ ದೇವಾಲಯಗಳು ಕೂಡ ಇರುವುದನ್ನು ಕಾಣಬಹುದಾಗಿದೆ.

                           ಭಾರತ ದೇಶದಲ್ಲಿನ ಅತ್ಯಂತ ಭಯಂಕರವಾದ ಕಳಾವತಿ ಕೋಟೆಯ ರಹಸ್ಯ


ಅಷ್ಟಕ್ಕೂ ಬೆಂಗಳೂರಿಗೆ ಸಮೀಪದ ಆ ಅದ್ಭುತವಾದ ಗಿರಿಧಾಮವಾದರೂ ಯಾವುದು ಎಂಬ ಪ್ರೆಶ್ನೆಗೆ ಉತ್ತರ ದೇವರಾಯನದುರ್ಗ. ಇದು ತುಮಕೂರು ಜಿಲ್ಲೆಯಲಿದೆ. ಈ ಸುಂದರವಾದ ದೇವರಾಯನದುರ್ಗ ಗಿರಿಧಾಮವು ಬೆಂಗಳೂರಿನಿಂದ ಸುಮಾರು 72 ಕಿ.ಮೀ ಹಾಗು ತುಮಕೂರಿನಿಂದ 16 ಕಿ.ಮೀ ದೂರದಲ್ಲಿದೆ. ಈ ಸುಂದರವಾದ ಸ್ಥಳಕ್ಕೆ ಹಲವಾರು ಸ್ಥಳಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಒಂದು ದಿನದ ಪ್ರವಾಸಕ್ಕಾಗಿ..

ಒಂದು ದಿನದ ಪ್ರವಾಸಕ್ಕಾಗಿ..

ವಿಶೇಷ ಏನೆಂದರೆ ಈ ಗಿರಿಧಾಮದಲ್ಲಿ 2 ಪ್ರಮುಖವಾದ ದೇವಾಲಯಗಳು ಇವೆ. ಅವುಗಳೆಂದರೆ ಯೋಗನರಸಿಂಹ ದೇವಾಲಯ ಮತ್ತು ಭೋಗನರಸಿಂಹ ದೇವಾಲಯಗಳು. ಈ ದೇವಾಲಯವೇ ಅಲ್ಲದೇ ಇತರೆ ಸಣ್ಣ ಪುಟ್ಟದಾದ ದೇವಾಲಯಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ.

PC:Srinivasa83

ಒಂದು ದಿನದ ಪ್ರವಾಸಕ್ಕಾಗಿ..

ಒಂದು ದಿನದ ಪ್ರವಾಸಕ್ಕಾಗಿ..

ಮುಖ್ಯವಾಗಿ ಇಲ್ಲಿನ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ನೋಡಲು ಆಕರ್ಷಕವಾಗಿದ್ದು, ಇದರ ವಾಸ್ತುಶಿಲ್ಪ ಶೈಲಿಯು ದ್ರಾವಿಡವಾಗಿದೆ. ಈ ದೇವಾಲಯವನ್ನು ನಿರ್ಮಾಣ ಮಾಡಿದವರು ಮೈಸೂರಿನ ಒಂದನೇಯ ಕಂಠೀರವ ನರಸಿಂಹ ರಾಜರವರು.

PC:Bansal98

ಒಂದು ದಿನದ ಪ್ರವಾಸಕ್ಕಾಗಿ..

ಒಂದು ದಿನದ ಪ್ರವಾಸಕ್ಕಾಗಿ..

ಇಲ್ಲಿರುವ ಗುಡ್ಡದ ಕೆಳಗೆ ಭೋಗನರಸಿಂಹ ಸ್ವಾಮಿಯ ದೇವಾಲಯವಿದೆ. ಗುಡ್ಡದ ಮೇಲೆ ಯೋಗನರಸಿಂಹನ ದೇವಾಲಯವಿದೆ. ಇವೆರಡರ ಮಧ್ಯದಲ್ಲಿ ನರಸಿಂಹನ ದೇವಾಲಯವಿದ್ದು, ಇದನ್ನು "ಕುಂಭಿ" ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ಗರ್ಭಗೃಹ, ಸುಕಾನಸಿ, ನವಗ್ರಹ ಹಾಗು ಮೂಖ ಮಂಟಪಗಳು ಇರುವುದನ್ನು ಕಾಣಬಹುದಾಗಿದೆ.


PC:Gpitta

ಒಂದು ದಿನದ ಪ್ರವಾಸಕ್ಕಾಗಿ..

ಒಂದು ದಿನದ ಪ್ರವಾಸಕ್ಕಾಗಿ..

ದೇವಾಲಯಗಳ ಜೊತೆ ಜೊತೆಗೆ 3 ಪವಿತ್ರವಾದ ಕಲ್ಯಾಣಿಗಳು ಇರುವುದನ್ನು ಕಾಣಬಹುದಾಗಿದೆ. ಇವುಗಳನ್ನು ನರಸಿಂಹ ತೀರ್ಥ, ಪ್ರಸನ್ನ ತೀರ್ಥ ಹಾಗು ಪಾದ ತೀರ್ಥ ಎಂದು ವಿಭಾಗಿಸಿ ಕರೆಯಲಾಗುತ್ತದೆ. ಈ ದೇವಾಲಯಗಳೇ ಅಲ್ಲದೇ ಇಲ್ಲಿ ಹನುಮಂತನ ದೇವಾಲಯ ಕೂಡ ಇದೆ. ಇಲ್ಲಿನ ಹನುಮಂತನಿಗೆ ಸಂಜೀವರಾಯ ಸ್ವಾಮಿಯಾಗಿ ಆರಾಧಿಸಲಾಗುತ್ತದೆ.

PC:Akshatha Inamdar

ಒಂದು ದಿನದ ಪ್ರವಾಸಕ್ಕಾಗಿ..

ಒಂದು ದಿನದ ಪ್ರವಾಸಕ್ಕಾಗಿ..

ದೇವಾಲಯದ ಸುತ್ತಲೂ ಸಾಮಾನ್ಯವಾಗಿ ಪ್ರದಕ್ಷಿಣೆ ಹಾಕುತ್ತೇವೆ. ಇದೊಂದು ಹಿಂದೂಗಳ ಪದ್ಧತಿಯಾಗಿದ್ದು, ಹೀಗೆ ದೇವಾಲಯದ ಸುತ್ತಲೂ ಸುತ್ತುವುದರಿಂದ ತಮ್ಮ ಇಷ್ಟಾರ್ಥಗಳು ನೇರವೇರಿ ಒಳ್ಳೆಯದಾಗುತ್ತದೆ ಎಂಬ ಭಾವನೆ ಇರುವುದರಿಂದ ಈ ದೇವಾಲಯದಲ್ಲಿ ಈ ಪದ್ಧತಿಗೆ ಹೆಚ್ಚು ಮಾನ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ದೇವರಾಯನದುರ್ಗದ ಈ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕುವ ಪದ್ಧತಿಯು ಇಂದಿಗೂ ಆಚರಣೆಯಲ್ಲಿದೆ.


PC:Mishrasasmita

ಒಂದು ದಿನದ ಪ್ರವಾಸಕ್ಕಾಗಿ..

ಒಂದು ದಿನದ ಪ್ರವಾಸಕ್ಕಾಗಿ..

ಇಲ್ಲಿ ನಾಮ ಚಿಲುಮೆ ಇದೆ. ಇದೊಂದು ಪ್ರವಾಸಿ ಆಕರ್ಷಣೆಯಾಗಿದ್ದು, ಇದಕ್ಕೆ ಒಂದು ದಂತಕಥೆ ಕೂಡ ಇದೆ. ಅದೆನೆಂದರೆ ಹಿಂದೆ ರಾಮನು ವನವಾಸದ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ್ದನಂತೆ. ಪ್ರತಿ ನಿತ್ಯವು ತಿಲಕವನ್ನು ಹಾಕಿಕೊಳ್ಳಲು ನೀರಿನ ಅವಶ್ಯಕತೆ ಇರುವಾಗ ನೀರಿಗಾಗಿ ಎಲ್ಲಾ ಕಡೆಯಲ್ಲಿಯೂ ಹುಡುಕಾಡಿದನಂತೆ.

PC:Mishrasasmita

ಒಂದು ದಿನದ ಪ್ರವಾಸಕ್ಕಾಗಿ..

ಒಂದು ದಿನದ ಪ್ರವಾಸಕ್ಕಾಗಿ..

ಎಲ್ಲೂ ಸಿಗಲಿಲ್ಲ, ಹಾಗಾಗಿ ತನ್ನ ಬತ್ತಳಿಕೆಯಲ್ಲಿನ ಬಾಣದಿಂದ ಸಮೀಪದ ಬಂಡೆಗೆ ಒಡೆದನಂತೆ ಇದರಿಂದ ಅಲ್ಲಿ ರಂಧ್ರ ಉಂಟಾಗಿ ನೀರು ಚಿಮ್ಮಿತ್ತಂತೆ. ಹಾಗಾಗಿ ಆ ಸ್ಥಳಕ್ಕೆ ನಾಮಚಿಲುಮೆ ಎಂಬ ಹೆಸರು ಬಂದಿದ್ದು ಎಂದು ಹೇಳುತ್ತಾರೆ. ಇದನ್ನು ಇಂದಿಗೂ ದೇವರಾಯನದುರ್ಗಕ್ಕೆ ಭೇಟಿ ನೀಡಿದರೆ ನೋಡಬಹುದಾಗಿದೆ.

PC:Mishrasasmita

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ದೇವರಾಯನದುರ್ಗಕ್ಕೆ ಬೆಂಗಳೂರಿನಿಂದ ಸುಮಾರು 72 ಕಿ.ಮೀ ದೂರದಲ್ಲಿದೆ. ಹಾಗಾಗಿ ಮೊದಲು ತುಮಕೂರು ಜಿಲ್ಲೆಗೆ ತೆರಳಿ ಆನಂತರ ಅಲ್ಲಿಂದ ಕೇವಲ 12 ಕಿ.ಮೀ ದೂರದಲ್ಲಿ ದೇವರಾಯನದುರ್ಗವಿದೆ. ಇಲ್ಲಿ ಹಲವಾರು ಖಾಸಗಿ ಹಾಗು ಸರ್ಕಾರಿ ಬಸ್ಸುಗಳು ಸುಲಭವಾಗಿ ಸಿಗುತ್ತದೆ. ಈ ಪ್ರವಾಸ 1 ದಿನದ ಮಟ್ಟಿಗೆ ಏನ್‍ಜಾಯ್ ಮಾಡಬೇಕು ಎಂದು ಕೊಂಡಿರುವವರು ಒಮ್ಮೆ ಭೇಟಿ ನೀಡಬಹುದಾಗಿದೆ.

PC:Aniket Suryavanshi

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ