Search
  • Follow NativePlanet
Share
» »ಗೂಗುಲ್ ಕಂಡು ಹಿಡಿದ ಮಹಾಶಿವನ ಬಂದು ಹೋಗುತ್ತಿರುವ ಪ್ರದೇಶವಿದು!

ಗೂಗುಲ್ ಕಂಡು ಹಿಡಿದ ಮಹಾಶಿವನ ಬಂದು ಹೋಗುತ್ತಿರುವ ಪ್ರದೇಶವಿದು!

ಓಂ ಎಂಬ ಮಂತ್ರ ಚಿಕ್ಕದೇ ಆಗಿದ್ದರೂ ಕೂಡ, ನಮ್ಮ ಬಾಯಿಯಿಂದ ಮನಸ್ಸಿನಲ್ಲಿ ಒಂದು ರೀತಿಯ ಭಕ್ತಿ, ಧೈರ್ಯ, ಆಧ್ಯಾತ್ಮಿಕತೆ, ಮಾನಸಿಕ ಪ್ರಶಾಂತತೆ ಅವರಿಸುತ್ತದೆ. ಓಂ ಎಂಬ ಪ್ರತಿ ಮಂತ್ರದ ಮೊದಲು ಬರುತ್ತದೆ. ಪ್ರತಿ ಪೂಜೆಗೆ, ಪ್ರತಿ ಕೆಲಸಕ್ಕೆ ಈ ಓಂಕ

ಓಂ ಎಂಬ ಮಂತ್ರ ಚಿಕ್ಕದೇ ಆಗಿದ್ದರೂ ಕೂಡ, ನಮ್ಮ ಬಾಯಿಯಿಂದ ಮನಸ್ಸಿನಲ್ಲಿ ಒಂದು ರೀತಿಯ ಭಕ್ತಿ, ಧೈರ್ಯ, ಆಧ್ಯಾತ್ಮಿಕತೆ, ಮಾನಸಿಕ ಪ್ರಶಾಂತತೆ ಅವರಿಸುತ್ತದೆ. ಓಂ ಎಂಬ ಪ್ರತಿ ಮಂತ್ರದ ಮೊದಲು ಬರುತ್ತದೆ. ಪ್ರತಿ ಪೂಜೆಗೆ, ಪ್ರತಿ ಕೆಲಸಕ್ಕೆ ಈ ಓಂಕಾರ ನಾದ ಅತ್ಯಂತ ಪ್ರಮುಖವಾದುದು. ಈ ಓಕಾಂ ನಾದವು ಸವೇಶ್ವರನಾದ ಮಹಾಶಿವನು ನುಡಿಯುವ ನಾದವಾಗಿದೆ. ಆ ದೇವನ ಶರೀರದಿಂದ ಒಂದು ಜ್ಯೋತ್ಯಿ ಹುಟ್ಟಿತ್ತು. ಅದರಲ್ಲಿನ ಶೃತಿಬದ್ಧವಾಗಿ ಒಂದು ನಾದ ಹುಟ್ಟಿತ್ತು. ಅದೇ ಓಕಾಂ ಮಂತ್ರ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಈ ಓಂ ಕಾರವನ್ನು ಹೇಳುವವರು ಅಷ್ಟ ಐಶ್ವರ್ಯಗಳ ಜೊತೆ ಜೊತೆಗೆ ಆಯುರಾರೋಗ್ಯಗಳು ಕೂಡ ಪ್ರಾಪ್ತಿಯಾಗುತ್ತದೆ ಎಂಬುದು ಪ್ರತೀತಿ. ಐಶ್ವರ್ಯಕ್ಕಿಂತ ಆರೋಗ್ಯವೇ ಅತಿ ಮುಖ್ಯವಾದುದು ಎಂದು ಪೂರ್ವಕಾಲದಲ್ಲಿ ಭಾವಿಸುತ್ತಿದ್ದರು.

ಹಾಗಾಗಿಯೇ ಅವರು ಓಂಕಾರ ಮಂತ್ರವನ್ನು ಹೇಳುತ್ತಾ ಬದುಕುತ್ತಿದ್ದರು. ಯಾವುದೇ ರೀತಿಯ ಆಹಾರವಾಗಲಿ, ನೀರಾಗಲಿ ಇಲ್ಲದೆಯೇ ಮುನಿಗಳು, ದೇವತೆಗಳು ಕೇವಲ ಓಂಕಾರ ನಾದವನ್ನು ಜಪಿಸುತ್ತಾ ತಪಸ್ಸು ಮಾಡುತ್ತಿದ್ದರು. ಹೊಕ್ಕಳಿನಿಂದ ಪ್ರಾರಂಭವಾಗುವ ಆ ನಾದವು ಮೆದುಳಿನ ನರಮಂಡಲಗಳಲ್ಲಿಯೂ ಕೂಡ ಚಲಿಸುತ್ತದೆ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಇನ್ನು ಓಂ ನಮಃ ಶಿವಾಯ ಎಂದರೆ ಮಾನಸಿಕ ಪ್ರಶಾಂತತೆಯನ್ನು ನೀಡುತ್ತದೆ. ಮನಸ್ಸಿನಲ್ಲಿ ಯಾವುದೇ ಅಶಾಂತಿ, ನೋವನ್ನು ಓಂ ಕಾರ ನಾದವೊಂದೆ ತೊಲಗಿಸುತ್ತದೆ. ಇದು ಒಂದು ಅತ್ಯಂತ ಪವಿತ್ರವಾದ ಪದವಾಗಿದೆ. ಇದು ಒಂದು ಪರಮ ಪವಿತ್ರವಾದ ಹಿಂದೂ ಧರ್ಮದ ಪ್ರತೀಕ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಇಂತಹ ದೊಡ್ಡ ಓಂ ಕಾರವು ಹಿಂದುಗಳ ಪುಣ್ಯ ಕ್ಷೇತ್ರವಾಗಿ, ಸಂಗೀತದ ಭಾಗವಾಗಿದೆ. ಓಂಕಾರ ಮಂತ್ರವು ನಮ್ಮ ಹಿಮಾಲಯದಲ್ಲಿ ಕಾಣಿಸಿದರೆ ಅದು ನಮ್ಮೆಲ್ಲಾರ ಅದೃಷ್ಟವಲ್ಲವೇ?. ನಿಜವಾದ ಪ್ರಕೃತಿ ಸಿದ್ಧವಾದ ಪುಣ್ಯಕ್ಷೇತ್ರಗಳಲ್ಲಿ ಪವಿತ್ರವಾದ ಓಂಕಾರವನ್ನು ಕಾಣಬಹುದು. ಅದೆಲ್ಲೂ ಅಲ್ಲ ಹಿಮಾಲಯದಲ್ಲಿ ಮಾತ್ರ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಅದನ್ನೇ ಓಂಕಾರ ಪರ್ವತ ಎಂದು ಕರೆಯುತ್ತಾರೆ. ಈ ಓಂ ಕಾರ ಪರ್ವತವು ಭಾರತ ಹಾಗು ನೇಪಾಳದ ಸರಿಹದ್ದುವಿನಲ್ಲಿದೆ. ಈ ಪ್ರದೇಶವು ಕೆಲವು ನೇಪಾಳ ಮತ್ತು ಇನ್ನು ಕೆಲವು ಭಾಗ ಉತ್ತರಾಖಂಡ ರಾಜ್ಯದ ಸರಿಹದ್ದುವಿನಲ್ಲಿ ಕಾಣಬಹುದು.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಅದರ ಹಿಂಭಾಗದಲ್ಲಿ ಕಪ್ಪು ಬಣ್ಣದ ಪರ್ವತವಿರುವುದರಿಂದಲೇ ಈ ಓಂ ಕಾರ ಮಂತ್ರ ಇನ್ನು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಬೆಟ್ಟವನ್ನು ಕಾಣಬೇಕಾದರೆ ಅದೃಷ್ಟವಿರಬೇಕು ಎನ್ನುತ್ತಾರೆ ಪಂಡಿತರು. ಏಕೆಂದರೆ ಪುರಾಣಗಳ ಪ್ರಕಾರ 8 ಓಂ ಕಾರ ಪರ್ವತಗಳು ಇರಬೇಕು. ಆದರೆ ನಮಗೆ ಅತ್ಯಂತ ಸ್ಪಷ್ಟವಾಗಿ ಕಾಣಿಸುವ ಸ್ಥಳವೆಂದರೆ ಅದು ಈ ಓಂಕಾರ ಮಂತ್ರ ಮಾತ್ರ. ಈ ಪರ್ವತದ ಮತ್ತೊಂದು ವಿಚಿತ್ರವೆನೆಂದರೆ ಕೈಲಾಸ ಪರ್ವತದಂತೆಯೇ ಇದು ಹೋಲುವುದು ಮತ್ತೊಂದು ವಿಶೇಷವಾಗಿದೆ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಇದನ್ನು ಆದಿ ಕೈಲಾಸ ಎಂದು, ಚೋಟಾ ಕೈಲಾಸ ಎಂದು, ಬಾಬಾ ಕೈಲಾಸ ಎಂದು ಕೂಡ ಕರೆಯುತ್ತಾರೆ. ಇದಕ್ಕೆ ಪ್ರಕೃತಿ ದತ್ತವಾಗಿಯೇ ಈ ಪರ್ವತಕ್ಕೆ ಸಂಗೀತದ ಶಕ್ತಿ ಇದೆ ಎಂದು ಕೆಲವರು ಹೇಳುತ್ತಾರೆ. ಆಗಸ್ಟ್-ಸೆಪ್ಟೆಂಬರ್ ಸಮಯದಲ್ಲಿ ನೋಡಿದರೆ ಈ ಪರ್ವತಕ್ಕೆ ಓಂಕಾರ ಮಂತ್ರವು ಸ್ಪಷ್ಟವಾಗಿ ಭಕ್ತರಿಗೆ ಕಾಣಿಸುತ್ತದೆ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಈ ಪರ್ವತವನ್ನು ಕೈಲಾಸಮಾನಸ ಸರೋವರ ಯಾತ್ರೆಯನ್ನು ಮಾಡುವವರು ಓಂಕಾರ ಪರ್ವತವನ್ನು ಕೂಡ ದರ್ಶಿಸಿಕೊಳ್ಳಲು ಬಯಸುತ್ತಾರೆ. ಆ ಪರಮಶಿವನು ತಿರುಗಿದ ಸ್ಥಳಗಳಲ್ಲಿ ಈ ಸ್ಥಳವು ಒಂದಾಗಿದ್ದು, ಈ ಪ್ರದೇಶ ನಿಜಕ್ಕೂ ಅದೃಷ್ಟವಾದುದು ಎಂದೇ ಭಾವಿಸುತ್ತಾರೆ. ಪ್ರತಿಯೊಬ್ಬ ಹಿಂದುವೂ ಈ ಓಂ ಪರ್ವತವನ್ನು ಕಾಣಲಾಗಲಿಲ್ಲವೆಂದರೂ ಕೂಡ ಆತನು ನಮಗೆ ನೀಡಿದ ಓಂಕಾರ ಮಂತ್ರವನ್ನು ಧ್ಯಾನ ಮಾಡಿದರೆ ಪುಣ್ಯ ಲಭಿಸುತ್ತದೆ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಓಂ ಕಾರ ಪರ್ವತಕ್ಕೆ ಸಾಕ್ಷಿ ಏನೆಂದರೆ ಆ ಪರಮಶಿವನು ಈ ಪ್ರದೇಶಕ್ಕೆ ಬಂದು ಹೋಗುತ್ತಿದ್ದಾನೆ ಎಂದು ಹಲವಾರು ಮಂದಿ ನಂಬುತ್ತಾರೆ. ಆ ಪರಮಶಿವನು ಕೈಲಾಸಗಿರಿ ಪರ್ವತದ ನಂತರ ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾನೆ ಎಂದು ಹೇಳುತ್ತಿರುತ್ತಾರೆ. ಏಕೆಂದರೆ ಯೋಗಾಸನ, ಪೂಜೆಗಳಿಗೆ ಓಂಕಾರ ಜಪ ಮಾಡದೇ ನಡೆಯದು ಅಥವಾ ಪೂರ್ತಿಯಾಗುವುದಿಲ್ಲ. ಹಾಗಾಗಿ ಜೀವನದಲ್ಲಿ ಒಮ್ಮೆಯಾದರು ಈ ಓಂಕಾರ ಪರ್ವತವನ್ನು ಭೇಟಿ ನೀಡಲೇಬೇಕು.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಉತ್ತಾರಂಚಲಕ್ಕೆ ಸಮೀಪದಲ್ಲಿನ ಅಲ್ಮೋರ್ ಕುಮಾವಾನ್ ಪ್ರದೇಶಕ್ಕೆ ಎತ್ತರವಾದ ಪ್ರದೇಶದಲ್ಲಿ ಒಂದು ಪ್ರಸಿದ್ಧವಾದ ಗಿರಿಧಾಮವಿದೆ. ಇಲ್ಲಿಂದ 5 ಕಿ.ಮೀ ದೂರದಲ್ಲಿ ಈ ಪ್ರದೇಶವು ಸೂಯಾಲ್ ನದಿ ಮತ್ತು ಕೋಸಿ ನದಿ ಮಧ್ಯದಲ್ಲಿ ಇದೆ. ಈ ಗಿರಿಧಾಮವು ಸಮುದ್ರ ಮಟ್ಟದಿಂದ 1651 ಮೀಟರ್ ಎತ್ತರದಲ್ಲಿದೆ. ಸುತ್ತಲೂ ಸುಂದರವಾದ ಹಚ್ಚ ಹಸಿರಿನ ಅರಣ್ಯಗಳಿಂದ ಅವೃತ್ತಗೊಂಡಿದೆ. ಕ್ರಿ.ಶ 15 ಮತ್ತು 16 ನೇ ಶತಮಾನದಲ್ಲಿ ಈ ಪ್ರದೇಶವನ್ನು ಚಾಂದ್ ಮತ್ತು ಕಾತ್ಯೂರ್ ವಂಶಿಕರು ಆಳ್ವಿಕೆ ನಡೆಸಿದರು.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಪ್ರವಾಸಿಗರು ಹಿಮಾಲಯದಲ್ಲಿನ ಮಂಜಿನಿಂದ ಕೂಡಿದ ಶಿಖರಗಳು ಅಲ್ಮೋರ ಪರ್ವತಗಳಿಂದ ನೋಡಿ ಆನಂದಿಸಬಹುದಾಗಿದೆ. ಈ ಪ್ರದೇಶವು ಪ್ರತಿ ವರ್ಷ ಪ್ರಪಂಚ ವ್ಯಾಪಕವಾಗಿ ಆನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಕಾಸರ್ ದೇವಿ ದೇವಾಲಯ, ನಂದಾ ದೇವಿ ದೇವಾಲಯ, ಚಿತಿ ದೇವಾಲಯ, ಕಾತರ್ಮಾಲ್ ಸನ್ ದೇವಾಲಯನಂತಹ ಕೆಲವು ಪವಿತ್ರವಾದ ಕ್ಷೇತ್ರಗಳನ್ನು ಕಾಣಬಹುದು.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಇಲ್ಲಿ ಪ್ರಾಚೀನವಾದ ನಂದಾ ದೇವಿ ದೇವಾಲಯವನ್ನು ಕೂಡ ಕಾಣಬಹುದು. ಈ ದೇವಾಲಯದ ಶಿಲ್ಪ ಶೈಲಿಯು ಅತ್ಯಂತ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ಈ ದೇವಾಲಯದಲ್ಲಿ ಚಾಂದ್ ವಂಶದವರ ಕುಲದೇವತೆಯು ಕೂಡ ಇದೆ. ಪ್ರತಿ ವರ್ಷ ಭಕ್ತರಿಂದ ದೇವಾಲಯವು ತುಂಬಿತುಳುಕುತ್ತದೆ. ಇಲ್ಲಿನ ಮತ್ತೊಂದು ದೇವಾಲಯ ಎಂದರೆ ಕಾಸರ್ ದೇವಿ ದೇವಾಲಯ ಕೂಡ ಅಲ್ಮೋರದಿಂದ ಕೇವಲ 5 ಕಿ.ಮೀ ದೂರದಲ್ಲಿದೆ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಈ ದೇವಾಲಯವನ್ನು 2 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು. ಸ್ವಾಮಿ ವಿವೇಕಾನಂದರು ಕೂಡ ಇಲ್ಲಿಯೇ ತನ್ನ ತಪಸ್ಸನ್ನು ಮಾಡಿದರು ಎಂದು ಹೇಳುತ್ತಾರೆ. ಪ್ರವಾಸಿಗರು ಇಲ್ಲಿನ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತಮ ದೃಶ್ಯಗಳನ್ನು ಕಾಣಬಹುದು.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಇಲ್ಲಿನ ಅಲ್ಮೋರ ಎಂಬ ನಗರದಿಂದ ಕೇವಲ 3 ಕಿ.ಮೀ ದೂರದಲ್ಲಿ ಜಿಂಕೆಗಳ ಪಾರ್ಕ್ ಕೂಡ ಇದೆ. ಇದೊಂದು ಪ್ರಸಿದ್ಧವಾದ ಪ್ರವಾಸಿ ಸ್ಥಳ ಕೂಡ ಆಗಿದೆ. ಇದರಲ್ಲಿ ಆನೇಕ ಚಿರತೆಗಳು, ಹಿಮಾಲಯದ ಕರಡಿಗಳನ್ನು ಕೂಡ ಇಲ್ಲಿವೆ. ಈ ಪ್ರದೇಶದಲ್ಲಿ ಗೋವಿಂದ ವಲ್ಲಭಪಂತ ಎಂಬ ಮ್ಯೂಜಿಯಂ, ಬಿನ್ಸಾರ್ ಎಂಬ ಕಾಡು ಅಭಯಾರಣ್ಯವು ಕೂಡ ತಪ್ಪದೇ ಕಾಣಲೇಬೇಕಾಗಿದೆ.

ಓಂ ನಮಃ ಶಿವಾಯ

ಓಂ ನಮಃ ಶಿವಾಯ

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ. ಈ ಪ್ರದೇಶಕ್ಕೆ ವಾಯು, ರೈಲ್ವೆ ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. ಪಂತ್ ನಗರ ವಿಮಾನ ನಿಲ್ದಾಣವು ಕತೊಗೊಡಂ ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲಿದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ದೆಹಲಿಯಿಂದ ಉತ್ತರಾಂಚಲದಿಂದ ಸಮೀಪದಲ್ಲಿನ ಅಲ್ಮೋರ್‍ಗೆ ಆನೇಕ ಬಸ್ಸುಗಳ ಸೌಕರ್ಯವಿದೆ. ದೆಹಲಿ-ಅಲ್ಮೋರ್‍ಗಳ ಮಧ್ಯೆ ಸುಮಾರು 350 ಕಿ.ಮೀ ದೂರದಲ್ಲಿದೆ. ಸಮೀಪದ ಪ್ರದೇಶಗಳಿಂದ ಸರ್ಕಾರಿ ಬಸ್ಸುಗಳು ಕೂಡ ಇವೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಅಲ್ಮೋರದಿಂದ ಸುಮಾರು 75 ಕಿ.ಮೀ ದೂರದಲ್ಲಿ ಕತ್ಗೊಡಂ ರೈಲು ನಿಲ್ದಾಣವಿದೆ. ಈ ರೈಲು ನಿಲ್ದಾಣದಿಂದ ದೇಶದಲ್ಲಿನ ಪ್ರಧಾನವಾದ ನಗರಗಳಿಗೆಲ್ಲಾ ಸಂಪರ್ಕವನ್ನು ಈ ಮಾರ್ಗ ಸಾಧಿಸುತ್ತದೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಈ ಓಂಕಾರ ಪರ್ವತಕ್ಕೆ ಭೇಟಿ ನೀಡಲು ಸಮೀಪದ ವಿಮಾನ ಮಾರ್ಗವೆಂದರೆ ಅದು ಅಲ್ಮೊರದಿಂದ ಸಮೀಪದಲ್ಲಿ ಒಂದು ನಗರವಿದೆ. ಇಲ್ಲಿಂದ ಸುಮಾರು 125 ಕಿ.ಮೀ ದೂರದಲ್ಲಿದೆ. ಇದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನನಿತ್ಯ ಸಂಪರ್ಕ ಸಾಧಿಸುತ್ತದೆ. ಇಲ್ಲಿಂದ ಟ್ಯಾಕ್ಸಿಯ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X