Search
  • Follow NativePlanet
Share
» »ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

By Sowmyabhai

ಧರ್ಮವು ಮಾನವರನ್ನು ಕಾಪಾಡುತ್ತದೆಯೇ? ಇಲ್ಲವೇ ತಿಳಿದಿಲ್ಲ. ಆದರೆ ಭಕ್ತಿ ಪರಮ ಪವಿತ್ರವನ್ನಾಗಿಸುತ್ತದೆಯೇ? ಹೌದು ಖಚಿತವಾಗಿ ಮಾಡುತ್ತದೆ. ನಮ್ಮ ಆಚರಣೆ, ಪದ್ಧತಿ, ಭಕ್ತಿ ದೇವರಿಗೆ ಸಂಬಂಧಿಸಿದ ವಿಷಯವೇ ಆಗಿದ್ದರೆ ಆ ಶಕ್ತಿಯು ನಮ್ಮನ್ನು ಕಾಪಾಡುತ್ತದೆ. ದೈವದ ಶಕ್ತಿಯು ಅತೀತವಾದುದು ಎಂಬುದು ಅನೇಕ ಮಂದಿಯ ನಂಬಿಕೆಯಾಗಿದೆ. ನಮ್ಮ ದೇಶದಲ್ಲಿ ಅನೇಕ ಧರ್ಮಗಳು ಇವೆ. ಧರ್ಮದ ಅನುಗುಣವಾಗಿ, ಕ್ರೈಸ್ತರಲ್ಲಿ ಫಾದರ್ ಎಂದೂ, ಹಿಂದೂಗಳು ಪುರೋಹಿತರು ಎಂದೂ ಬಗೆ ಬಗೆಯಾಗಿ ಕರೆಯುತ್ತಿರುತ್ತೇವೆ.

ಧರ್ಮದ ಬಗ್ಗೆ ಈ ಎಲ್ಲಾ ವಿಷಯವನ್ನು ದೃಢವಾಗಿ ನಂಬಲೇಬೇಕು ಎಂಬುವ ಹಾಗೆ ಒಂದು ಚರ್ಚ್‍ನಲ್ಲಿ ಒಬ್ಬ ಫಾದರ್ 500 ವರ್ಷಗಳಿಂದಲೂ ಇರುವುದು. ಇದೆನಪ್ಪಾ ಆಶ್ಚರ್ಯ ಎಂದು ಅಂದುಕೊಳ್ಳುತ್ತಿದ್ದೀರಾ? ನೀವು ಒಮ್ಮೆ ಆ ಸ್ಥಳಕ್ಕೆ ಭೇಟಿ ನೀಡಿ ಬರಹುದು. ಹಾಗಾದರೆ ಆ ವಿಷಯದ ಬಗ್ಗೆ ಸಂಪೂರ್ಣವಾಗಿ ಲೇಖನದ ಮೂಲಕ ಮಾಹಿತಿಯನ್ನು ಪಡೆಯಿರಿ.

1. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

1. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

500 ವರ್ಷಗಳಷ್ಟು ಹಿಂದೆ ಒಬ್ಬ ಫಾದರ್ ಮರಣ ಹೊಂದಿದ್ದರೂ ಕೂಡ ತಾನು ಜೀಸಸ್‍ನನ್ನು ಪೂಜಿಸಿದ ಆ ಚರ್ಚ್‍ನಲ್ಲಿಯೇ ನಿವಾಸವಿದ್ದಾನೆ. ಮರಣ ಹೊಂದಿದ ನಂತರವು ಕೂಡ ಇನ್ನು ಅಲ್ಲಿಯೇ ಇರಲು ಹೇಗೆ ಸಾಧ್ಯ ಎಂದು ಸಂದೇಹವಾದರು ಅದು ನಿಜ.

2. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

2. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

ಅಷ್ಟಕ್ಕೂ ಆ ದೇಹ ಇರುವುದು ಭೌತಿಕವಾಗಿಯೋ ಅಥವಾ ಆತ್ಮವಾಗಿಯೋ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಢಿದ್ದರೆ. ಅದಕ್ಕೆ ಉತ್ತರ ಭೌತಿಕವಾಗಿಯೇ. ವರ್ಷಕ್ಕೆ ಒಮ್ಮೆ ತನ್ನ ಅಭಿಮಾನಿ ಭಕ್ತರಿಗೆ ದರ್ಶನವನ್ನು ಕೂಡ ನೀಡುತ್ತಿದ್ದಾನೆ. ಕೇಳುವುದಕ್ಕೆ ವಿಚಿತ್ರವಾಗಿದೆಯಲ್ಲ ಎಂದು ಅಂದುಕೊಳ್ಳುವ ಈ ಸ್ಥಳ ಇರುವುದು ಬೇರೆ ಎಲ್ಲೂ ಅಲ್ಲ...ಗೋವಾದಲ್ಲಿನ ಬೊಮ್ ಜೀಸಸ್ ಚರ್ಚ್.

3. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

3. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

ನಾವು ಆಸಕ್ತಿಕರವಾಗಿ ಓದುತ್ತಿರುವ ಆ ವ್ಯಕ್ತಿಯ ಹೆಸರು ಜೀಸಸ್‍ನ ಪರಮಭಕ್ತನಾದ ಸಂತ ಫ್ರಾನ್ಸಿಸ್ ಸಾವೇರಿ. ಇವರು ಬದುಕಿರುವವರೆವಿಗೂ ಏಸುಕ್ರಿಸ್ತನ ಮಹಿಮೆಯ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಅವರು ಸತ್ತು 500 ವರ್ಷಗಳು ಆದರೂ ಕೂಡ ಅವರ ಶರೀರವನ್ನು ಯಾವುದೇ ಅಂತ್ಯಕ್ರಿಯೆ ಮಾಡದೇ ಪಾರ್ಥಿವ ಶರೀರವನ್ನು ಹಾಗೆಯೇ ಇಟ್ಟಿದ್ದಾರೆ ಎಂದರೆ ಆತನ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ.

4.ಇತನ ಜನನ

4.ಇತನ ಜನನ

PC:Rajib Ghosh

ಸಂತ ಫ್ರಾನ್ಸಿಸ್ ಸಾವೇರಿ ಸ್ಪೇನ್ ದೇಶದ ನವಾರೆ ಸಾವೇರಿ ಎಂಬ ರಾಜಮನೆತನದಲ್ಲಿ ಜನಿಸಿದರು. ಇವರು ಚಿಕ್ಕವಯಸ್ಸಿನಿಂದಲೂ ಐಶಾರಾಮಿ ಜೀವನವನ್ನು ನಡೆಸುತ್ತಿದ್ದರು. ಇವರಿಗೆ "ಇಡೀ ವಿಶ್ವವನ್ನೇ ಜಯಿಸಿ, ನಿನ್ನ ಆತ್ಮವನ್ನು ಕಳೆದುಕೊಂಡರೆ ಏನು ಪ್ರಯೋಜನ? ಎಂಬ ಕಿಡಿ ಮಾತು ಅವರನ್ನು ಆಧ್ಯಾತ್ಮಿಕತೆಯತ್ತ ಕರೆದೊಯ್ಯಿತು.

5. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

5. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

PC:Rajib Ghosh

1540 ರಲ್ಲಿ ಪೋರ್ಚುಗಲ್‍ನ ರಾಜನಾದ ಜಾನ್ ಪೆದ್ರೋ ಮಸ್ಕರೇನಸ್ಮೌ ಜೆಸ್ಯೂಟ್ ಪ್ರಚಾರಕರನ್ನು ಭಾರತಕ್ಕೆ ಆಹ್ವಾನಿಸಿದರು. ಅವರಿಗೆ ಕ್ರೈಸ್ತದ ಮೌಲ್ಯಗಳ ಮೇಲೆ ತುಂಬಾ ನಂಬಿಕೆ ಇದ್ದ ಕಾರಣ, ಅವರ ಕೆಲಸಗಳು ಭಾರತ ದೇಶದಲ್ಲಿಯೂ ನಡೆಯಬೇಕು ಎಂದು ಆಶಿಸಿದರು. ಭಾರತಕ್ಕೆ ಬೊಂಬದಿಲ್ಲರವರನ್ನು ಕಳುಹಿಸಬೇಕು ಎಂದು ಅಂದುಕೊಂಡರು. ಆದರೆ ಕೊನೆಗೆ ಬೊಂಬದಿಲ್ಲರವರು ಖಾಯಿಲೆಗೆ ಒಳಗಾದ್ದರಿಂದ ಸಂತ ಫ್ರಾನ್ಸಿಸ್ ಅವರನ್ನು ಕಳುಹಿಸುವುದಾಗಿ ಇಗ್ನಾಸಿಯವರು ನಿರ್ಧರಿಸಿದರು.

6. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

6. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

PC:Suganthiprabhu

ಸುಮಾರು 13 ತಿಂಗಳುಗಳ ಕಠಿಣ, ಅಪಾಯಕರ ಹಾಗು ಸಾಹಸಮಯ ಸಮುದ್ರಯಾನವನ್ನು ನಡೆಸಿ ಗೋವಾಗೆ ತಲುಪಿದರು. ಅಲ್ಲಿ ಯೇಸುವಿನ ಜೀವನ ಮೌಲ್ಯವನ್ನು ಬೋಧಿಸಿ, ಜನರ ಮನ ಗೆದ್ದರು. ಇವರ ಪ್ರಚಾರದಿಂದಾಗಿ ಅನೇಕರು ಕ್ರಿಸ್ತನ ಅನುಯಾಯಿಯಾಗಿ ಮತಾಂತರಗೊಂಡರು. ಆ ಸಮಯದಲ್ಲಿ ಅನೇಕ ವಿರೋಧಗಳನ್ನು ಅವರು ಎದುರಿಸಬೇಕಾಗಿತು.

7. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

7. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

PC:Nakuldubey0601

ಅವರು ಭಾರತಕ್ಕೆ ಬರುವಾಗ ಕೈಯಲ್ಲಿ ಕೇವಲ ಒಂದು ರೂಲ್ ಬುಕ್, ಶಿಲುಭೆ ಹಾಗು ಭೋಧನ ಪುಸ್ತಕವನ್ನು ತಂದಿದ್ದರಂತೆ. ಅವರು ಮಾಡುವ ಪ್ರತಿಯೊಂದು ಕೆಲಸವು ಅವರಲ್ಲಿ ಸದಾ ದೇವರ ಪ್ರೀತಿಯನ್ನು ಹೆಚ್ಚಿಸುತ್ತಿತ್ತು. ಸಾವೇರಿಯವರ ಜೀವನದ ಅತೀ ಮಹತ್ತರವಾದ ಆಸೆ ಎಂದರೆ ಚೀನಾದಲ್ಲಿ ಸುವಾರ್ತೆ ಸಾರುವುದೇ ಆಗಿತ್ತು.

8. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

8. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

PC:Nakuldubey0601

ಆದರೆ 1552 ರ ಆಗಸ್ಟ್ ತಿಂಗಳಿನಲ್ಲಿ ಸಾಂಚಿಯಾಂಗ್ ಎಂಬ ದ್ವೀಪದಲ್ಲಿದ್ದಾಗ ಒಂದು ರೋಗದಿಂದ ನರಳಿದರು. ಡಿಸೆಂಬರ್ 3, 1552 ರಂದು ಅದೇ ದ್ವೀಪದಲ್ಲಿ ಕೊನೆಯುಸಿರೆಳೆದರು. ಅವರ ಸಂಗಡಿಗರು ಅಲ್ಲಿಂದ ಹೊರಡಲೇಬೇಕಾಗಿದ್ದರಿಂದ ಬೇರೆ ದಾರಿ ಇಲ್ಲದೇ ಅವರ ಮೃತ ದೇಹವನ್ನು ಅಲ್ಲಿಯೇ ಹೂತು ಹೋದರು.

9. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

9. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

PC:Nakuldubey0601

ಕೆಲವು ದಿನಗಳ ನಂತರ ವಾಪಸ್ಸು ಅವರ ಮೂಳೆಗಳನ್ನು ತೆಗೆಯಲು ಬಂದಾಗ ಎಲ್ಲರೂ ದಿಗ್ಬ್ರಾಂತರಾದರು. ಏಕೆಂದರೆ ಅವರ ದೇಹ ಕೊಳೆಯದೆ ಹಾಗೆಯೇ ಉಳಿದಿತ್ತು. ಆ ದೇಹವನ್ನು ಇಂದಿಗೂ ನೀವು ಗೋವಾದಲ್ಲಿ ಕಾಣಬಹುದಾಗಿದೆ. ಡಿಸೆಂಬರ್ 3 ರಂದು ಸಂತ ಫ್ರಾನ್ಸಿಸ್ ಸಾವೇರಿಯವರ ಹಬ್ಬದ ದಿನವಾಗಿದೆ. ಅವರ ಮೂಲಕ ಅನೇಕ ಪವಾಡಗಳು ನಡೆದಿವೆ. ಈಗಲೂ ನಡೆಯುತ್ತಲೆ ಇವೆ.

10. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

10. ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....

PC:Nakuldubey0601

ಗೋವಾಗೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಗೋವಾ ಬೀಚ್‍ಗಾಗಿಯೇ ಪ್ರಸಿದ್ಧಿ ಅಲ್ಲ, ಬದಲಾಗಿ ಚರ್ಚ್, ಕಟ್ಟಡಗಳು, ಹೋಟೆಲ್, ಪಾರ್ಟಿಗಳಿಗೂ ಕೂಡ ಹೆಸರುವಾಸಿಯಾಗಿದೆ. ಅಷ್ಟಕ್ಕೂ ಗೋವಾಗೆ ತೆರಳಿದಾಗ ಹೇಗೆಲ್ಲಾ ಏಂಜಾಯ್ ಮಾಡಬೇಕು ಎಂದು ಗೊತ್ತ?

11.ವಿಶೇಷ

11.ವಿಶೇಷ

ಗೋವಾದಲ್ಲಿನ ವಿಶೇಷವೆನೆಂದರೆ ಇಲ್ಲಿ ಬ್ರೆಕ್ ಫಾಸ್ಟ್ ತಿನ್ನುವ ಸಮಯದಲ್ಲಿಯೇ ಒಂದು ಬಿಯರ್ ಬಾಟಿಲ್ ತೆಗೆದುಕೊಳ್ಳುವುದು ಸರ್ವೆ ಸಾಧಾರಣವಾದ ವಿಷಯ. ಇಲ್ಲಿ ನಿಮಗೆ ಬೈಕ್ ಬಾಡಿಗೆಗೆ ಕೂಡ ನೀಡುತ್ತಾರೆ.

12.ಬೈಕ್

12.ಬೈಕ್

ಒಂದು ಬೈಕ್ ದಿನಕ್ಕೆ 250 ರೂ ನಿಂದ ಪ್ರಾರಂಭವಾಗುತ್ತದೆ. ನೀವು ಬೀಚ್‍ಗಳಿಗೆ ತೆರಳುವ ಮುಂಚೆಯೇ ಅತ್ಯಂತ ಕಡಿಮೆ ಬೆಲೆಯ ಕೆಲವು ವಸ್ತುಗಳನ್ನು ಷಾಪಿಂಗ್ ಮಾಡಬಹುದಾಗಿದೆ.

13.ಬೀಚ್

13.ಬೀಚ್

ಸಾಮಾನ್ಯವಾಗಿ ಗೋವಾದಲ್ಲಿ ಅತ್ಯಂತ ಸುಂದರವಾಗಿರುವ ಬೀಚ್‍ಗಳು ಇವೆ. ಅದರಲ್ಲಿ ಕಾಂಡೊಲಿ ಪ್ರದೇಶದಲ್ಲಿ 3 ಪ್ರಧಾನವಾದ ಬೀಚ್‍ಗಳು ಇವೆ. ಅವುಗಳೆಂದರೆ ಕಾಂಡೊಲಿಂ ಬೀಚ್, ಕಾಲಾಗೂಟೆ ಬೀಚ್ ಮತ್ತು ಬಾಗಾಬೀಚ್. ಆದರೆ ಇವುಗಳಲ್ಲಿ ಬಾಗಾ ಬೀಚ್‍ನನ್ನು ಅತ್ಯಂತ ಸ್ವಚ್ಛತೆಯನ್ನು ಕಾಪಾಡುತ್ತಾರೆ.

14.ವಾಟರ್ ಗೇಮ್ಸ್

14.ವಾಟರ್ ಗೇಮ್ಸ್

ಎಲ್ಲಾ ಬೀಚ್‍ಗಳಲ್ಲಿ ವಾಟರ್ ಗೇಮ್ಸ್‍ಗಳು ಸಾಮಾನ್ಯವಾಗಿ ಇರುತ್ತದೆ. ಅಲ್ಲಿನ ಕೆಲವು ಮಂದಿ ಬ್ರೋಕರ್‍ಗಳು ನಿರ್ವಹಿಸುತ್ತಾರೆ. ಜೆಟ್ ಸ್ಕೈ, ಬನಾನಾ ರೈಡ್‍ನಂತಹ ಗೇಮ್ಸ್‍ಗಳನ್ನು ಹಾರಿಸಿಕೊಳ್ಳುತ್ತಾರೆ.

15.ಕೊಲ್ವಾ ಬೀಚ್

15.ಕೊಲ್ವಾ ಬೀಚ್

ಗೋವಾದಲ್ಲಿ ಎಷ್ಟೊ ಹೆಸರುವಾಸಿಯಾಗಿರುವ ಕೊಲ್ವಾ ಬೀಚ್ ದಕ್ಷಿಣ ಪ್ರದೇಶದಲ್ಲಿದೆ. ಈ ಪ್ರದೇಶದಲ್ಲಿ ಅತ್ಯಂತ ದುಬಾರಿ ಹೋಟೆಲ್‍ಗಳನ್ನು ಕಾಣಬಹುದಾಗಿದೆ. ಕ್ರಮಶಿಕ್ಷಣವನ್ನು ಅನುಸರಿಸುವವರಿಗೆ ಈ ಪ್ರದೇಶವು ಸುಂದರವಾಗಿರುತ್ತದೆ.

16.ಪಾರ್ಟಿ ಪ್ರಿಯರಿಗೆ

16.ಪಾರ್ಟಿ ಪ್ರಿಯರಿಗೆ

ಸ್ವರ್ಗ ಅದರಲ್ಲೂ ಸಾಯಂಕಾಲವಾಗುತ್ತಿದ್ದಂತೆ ಗೋವಾ ಪಟ್ಟಣ ಪಾರ್ಟಿ ಪಟ್ಟಣವಾಗಿ ಮಾರ್ಪಾಟಾಗುತ್ತದೆ. ಪಾರ್ಟಿ ಪ್ರಿಯರಿಗೆ ಇದೊಂದು ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಪಾರ್ಟಿಗಳು ಬೆಳಗಿನ ಜಾವ 3 ಗಂಟೆಯವರೆವಿಗೂ ನಡೆಯುತ್ತಿರುತ್ತದೆ.

17.ಜಾಗ್ರತೆ

17.ಜಾಗ್ರತೆ

ಜಾಗ್ರತೆ ಆದರೆ ಬೀಚ್‍ನ ಒಳಗೆ ಹೋಗುವುದು ರಾತ್ರಿ ಸಮಯದಲ್ಲಿ ಅಷ್ಟೊ ಒಳ್ಳೆಯದು ಅಲ್ಲ. ಇಲ್ಲಿನ ಬೀಚ್‍ಗಳಿಗೆ ಏಕಾಂತವಾಗಿ ಹೋದರೆ ಕಳ್ಳರು ಹಾಗು ನಾಯಿಗಳ ಕಾಟ ಹೆಚ್ಚಾಗಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more