Search
  • Follow NativePlanet
Share
» »ಕಲಾ ಅಭಿಮಾನಿಗಳು ಭೇಟಿ ಕೊಡಲೇಬೇಕಾದ ಸಾಂಸ್ಕೃತಿಕ  ಕ್ಷೇತ್ರ  ‘ಹೆಗ್ಗೋಡು’  

ಕಲಾ ಅಭಿಮಾನಿಗಳು ಭೇಟಿ ಕೊಡಲೇಬೇಕಾದ ಸಾಂಸ್ಕೃತಿಕ  ಕ್ಷೇತ್ರ  ‘ಹೆಗ್ಗೋಡು’  

ಸಾಮಾನ್ಯವಾಗಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ರಂಗಭೂಮಿ ಹಾಗೂ ನಾಟಕ ಶಾಲೆಗಳು ಅಥವಾ ಅಕಾಡೆಮಿಗಳು ಇರುವುದನ್ನು ನೋಡಿದ್ದೇವೆ. ಆದರೆ ನೀವು ನಿಜವಾಗಿಯೂ ಕಲೆಯ ಸೂಕ್ಷ್ಮವಾದ ಅನುಭವವನ್ನು ಪಡೆಯಬೇಕೆಂದರೆ ಕರ್ನಾಟಕದ ಈ ಪುಟ್ಟ ಹಳ್ಳಿ ಹೆಗ್ಗೋಡಿಗೆ ಹೋಗಬೇಕು. ಹೆಗ್ಗೋಡು ಗ್ರಾಮವು ವಿಶೇಷವಾಗಿ ಸಾಹಿತ್ಯಾಸಕ್ತರಿಗೆ ಕರ್ನಾಟಕದ ಗುಪ್ತ ರತ್ನಗಳಲ್ಲಿ ಒಂದಾಗಿದೆ. ಈ ಪುಟ್ಟ ಹಳ್ಳಿಯು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಪ್ರಾಚೀನ ಕಾಲದ ಕಲಾ ಪ್ರಕಾರವು ಹೆಗ್ಗೋಡಿನಲ್ಲಿ ಒಂದು ಸುಂದರವಾದ ತಿರುವು ಪಡೆದಿದೆ.

ಹೆಗ್ಗೋಡು ಒಂದು ಸಣ್ಣ ಕುಗ್ರಾಮವಾಗಿದ್ದು, ಶಿವಮೊಗ್ಗದಿಂದ 84.7 ಕಿಮೀ ದೂರದಲ್ಲಿದೆ. ಕಲೆ ಮತ್ತು ಸಂಸ್ಕೃತಿಯ ನಿಗರ್ವಿ ಕೇಂದ್ರವಾಗಿದೆ. ರಂಗಭೂಮಿ ಕೇವಲ ಗಣ್ಯರಿಗಾಗಿ ಎಂಬ ಕಲ್ಪನೆಯನ್ನು ಇಲ್ಲಿ ದೂರ ಮಾಡಲಾಗಿದೆ. ಹೆಗ್ಗೋಡಿನ ಬೀದಿಗಳಲ್ಲಿ ಸ್ವಲ್ಪ ದೂರ ಅಡ್ಡಾಡಿದರೂ ಸ್ಥಳೀಯರು ರಂಗಭೂಮಿಯ ಬಗ್ಗೆ ಸಂಭಾಷಣೆ ನಡೆಸುವುದು, ಪ್ರಪಂಚದ ಶ್ರೇಷ್ಟ ನಾಟಕಕಾರರ ಬಗ್ಗೆ ಅಂಗಡಿಯವರು, ರೈತರು, ವಿದ್ಯಾರ್ಥಿಗಳ ಬಾಯಿಂದ ಕೇಳಬಹುದು. ಸಂಸ್ಕೃತಿ ಮತ್ತು ಕಲೆಯನ್ನು ಆನಂದಿಸುವವರಿಗೆ, ಹೆಗ್ಗೋಡು ನಿಸ್ಸಂದೇಹವಾಗಿ ನಿಧಿಯಾಗಿದೆ. ರಂಗಭೂಮಿ ಮತ್ತು ಸಿನಿಮಾ ಬಗ್ಗೆ ಕಲಿಯಲು ಮತ್ತು ಭಾಗವಹಿಸಲು ಅಥವಾ ನಿಮ್ಮ ನೆಚ್ಚಿನ ನಾಟಕಕಾರರೊಂದಿಗೆ ಚರ್ಚಿಸಲು ನೀವಿಲ್ಲಿಗೆ ಭೇಟಿ ನೀಡಬಹುದು.

'ಸಂಸ್ಕೃತಿ ಶಿಬಿರ'ಗಳಲ್ಲಿ ಭಾಗವಹಿಸಬಹುದು

ಇಂದು ಸುಬ್ಬಣ್ಣನವರ ಮಗ ಕೆ.ವಿ.ಅಕ್ಷರ ಅವರು ನೀನಾಸಂ ಮುಖ್ಯಸ್ಥರು. ನೀನಾಸಂ ತನ್ನದೇ ಆದ ನಾಟಕ ತಂಡ ಮತ್ತು ಫಿಲ್ಮ್ ಸೊಸೈಟಿಯನ್ನು ಹೊಂದಿದೆ. ಸಂಸ್ಥೆಯು ಡಿಪ್ಲೊಮಾ (ಅವಧಿ: 10 ತಿಂಗಳು) ಮತ್ತು ಬೇಸಿಗೆ ಕಾರ್ಯಾಗಾರಗಳ ಮೂಲಕ ಕಲೆಯ ಬಗ್ಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತದೆ. ಪ್ರತಿ ಅಕ್ಟೋಬರ್‌ನಲ್ಲಿ 'ಸಂಸ್ಕೃತಿ ಶಿಬಿರ' ಎಂಬ 7 ದಿನಗಳ ಕೋರ್ಸ್ ಕೂಡ ಇರುತ್ತದೆ. ಇದರಲ್ಲಿ ಹೆಚ್ಚಾಗಿ ಪತ್ರಕರ್ತರು, ರಾಜಕಾರಣಿಗಳು, ಅಂಗಡಿ ಮಾಲೀಕರು, ಗೃಹಿಣಿಯರು, ರೈತರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇವರು ಸಾಮಾಜಿಕ-ರಾಜಕೀಯ ವಿಷಯಗಳ ಕುರಿತ ಕಾರ್ಯಾಗಾರಗಳಲ್ಲಿಯೂ ಭಾಗವಹಿಸುತ್ತಾರೆ. ಹೆಚ್ಚಿನ ಚರ್ಚೆಗಳು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ನಡೆಯುತ್ತವೆ.

ಪ್ರವಾಸಿಗರನ್ನು ಆಕರ್ಷಿಸುವ ಕಲೆ-ಸಂಸ್ಕೃತಿ

ಮಲೆನಾಡಿನ ಹೃದಯಭಾಗದಲ್ಲಿರುವ ಹೆಗ್ಗೋಡು ಪ್ರತಿಯೊಬ್ಬರನ್ನು ಒಟ್ಟುಗೂಡಿಸಲು ಮತ್ತು ಕಲೆ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಿಗೆ ಪ್ರೋತ್ಸಾಹಿಸುವ ಸ್ಥಳವಾಗಿದೆ. ನಾಟಕ, ಚಲನಚಿತ್ರವನ್ನು ನೋಡುವ ಮೂಲಕ ಅಥವಾ ಸಮಕಾಲೀನ ಸಮಸ್ಯೆಗಳ ಬಗ್ಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇದು ಕರ್ನಾಟಕದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬೇರೆ ರಾಜ್ಯದವರಾಗಲಿ ಅಥವಾ ಬೇರೆ ದೇಶದವರಾಗಲಿ ಎಲ್ಲರಿಗೂ ಸ್ವಾಗತ. ಕ್ಯಾಂಟೀನ್‌ನ ಹಿಂದೆ ಸುಂದರವಾದ ಆವರಣವಿದ್ದು, ಇದನ್ನು ಮುಖವಾಡಗಳು ಮತ್ತು ರಂಗಪರಿಕರಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಲ್ಲಿ ಹತ್ತಿರದ ಹಳ್ಳಿಗಳ ಮಕ್ಕಳಿಗೆ ಯಕ್ಷಗಾನ ಪ್ರದರ್ಶನದ ತರಬೇತಿ ನೀಡಲಾಗುತ್ತದೆ.

ಸಾಹಿತ್ಯಸಕ್ತರು ಒಮ್ಮೆಯಾದರೂ ಭೇಟಿ ನೀಡಿ

ಇನ್ನೂ ಪ್ರಬಲವಾಗಿರುವ ನೀನಾಸಂ ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲಿ ಸಾಂಸ್ಕೃತಿಕ ಸಾಕ್ಷರತೆಯನ್ನು ಬೆಳೆಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಅಲ್ಲದೆ, ರಂಗಭೂಮಿಯ ಬಹು ಉಪಯೋಗಗಳನ್ನು ವಿವರಿಸುವ ಮೂಲಕ ಇತರರನ್ನು ಪ್ರೇರೇಪಿಸಿದೆ. ಹೆಗ್ಗೋಡಿನ ಪ್ರತಿಯೊಬ್ಬರೂ ಸಾಹಿತ್ಯ ಮತ್ತು ರಂಗಭೂಮಿಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ. ಕಲೆ ಮತ್ತು ಸಂಸ್ಕೃತಿಯ ಬಗ್ಗೆ ತುಂಬಾ ಕಾಳಜಿ ವಹಿಸುವ ಈ ಗ್ರಾಮಕ್ಕೆ ಎಲ್ಲಾ ರಂಗಭೂಮಿ ಮತ್ತು ಸಂಸ್ಕೃತಿ ಆಸಕ್ತರು ಒಮ್ಮೆ ಭೇಟಿ ನೀಡಲೇಬೇಕು.

ಇಡೀ ವರ್ಷ, ದಿನಾ ನಡೆಯುವ ತರಗತಿಗಳು

ಬೆಂಗಳೂರಿನಿಂದ 350 ಕಿಮೀ ದೂರದಲ್ಲಿರುವ ಹೆಗ್ಗೋಡುಗೆ ಹತ್ತಿರದ ನಗರ ಸಾಗರ. ಇದು 8 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಸಾಗರಕ್ಕೆ ರಾತ್ರಿ ಎಸಿ ರಹಿತ ಬಸ್ಸುಗಳು ಸಂಚರಿಸುತ್ತವೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಮೈಸೂರು - ತಾಳಗುಪ್ಪ ಎಕ್ಸ್‌ಪ್ರೆಸ್ ನಲ್ಲಿ ತೆರಳಬಹುದು. ಇದು ಸಾಮಾನ್ಯವಾಗಿ ಸಾಗರವನ್ನು ಮುಂಜಾನೆ ತಲುಪುತ್ತದೆ. ನೀವು ವರ್ಷದ ಯಾವುದೇ ಸಮಯದಲ್ಲಿ ಸಾಂಸ್ಕೃತಿಕ ನಗರವಾದ ಹೆಗ್ಗೋಡುಗೆ ಭೇಟಿ ನೀಡಬಹುದು. ತರಗತಿಗಳು ನೀನಾಸಂನಲ್ಲಿ ಇಡೀ ದಿನ ನಡೆಯುತ್ತವೆ. ಇಡೀ ಸಮುದಾಯವು ಸಂಜೆಯ ಪ್ರದರ್ಶನ ವೀಕ್ಷಿಸಲು ಸೇರುತ್ತದೆ. ಆದರೆ ಸಂಸ್ಕೃತಿ ಸಂಬಂಧಿತ ಕೋರ್ಸ್‌ಗಳು ಅಕ್ಟೋಬರ್‌ನಲ್ಲಿ ಮಾತ್ರ ನಡೆಯುತ್ತವೆ. ಕೋರ್ಸ್‌ಗಳು ಯಾವಾಗಲೂ ನಡೆಯುವುದರಿಂದ ನೀವು ವರ್ಷಪೂರ್ತಿ ಯಾವುದೇ ಸಮಯದಲ್ಲಿ ಗ್ರಾಮಕ್ಕೆ ಭೇಟಿ ನೀಡಬಹುದು, ಆದರೆ ಕೆಲವು ಉತ್ತಮ ಕೋರ್ಸ್ ಗಳು ಅಕ್ಟೋಬರ್‌ನಲ್ಲಿ ನಡೆಯುತ್ತವೆ. ಹೋಟೆಲ್‌ಗಳು ನಿನಾಸಮ್‌ನಿಂದ ಕನಿಷ್ಠ 20-30 ನಿಮಿಷಗಳ ದೂರದಲ್ಲಿವೆ.

ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)

ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)

ನೀನಾಸಂ ಎಂದು ಜನಪ್ರಿಯವಾಗಿ ಕರೆಯಲ್ಪಡುವ ‘ನೀಲಕಂಠೇಶ್ವರ ನಾಟ್ಯಸೇವಾ ಸಂಘ' ಹೆಗ್ಗೋಡಿನ ಆಕರ್ಷಣೆಯ ಕೇಂದ್ರವಾಗಿದೆ. ಎಂಥವರನ್ನೂ ತನ್ನತ್ತ ಸೆಳೆಯುವ ನೀನಾಸಂ ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಇದು ಗ್ರಾಮೀಣ ಪ್ರದೇಶದ ಜನರು ಮತ್ತು ಕಲೆಯ ನಡುವಿನ ಅಂತರವನ್ನು ಸೇತುವೆಯಾಗಿ ಮಾಡಲು ಶ್ರಮಿಸುತ್ತಿದೆ. ಇದು ದೇಶ ಮಾತ್ರವಲ್ಲ, ವಿಶ್ವದಲ್ಲೇ ಶ್ರೇಷ್ಠ ಸಂಸ್ಥೆಯಾಗಿದೆ. 1949 ರಲ್ಲಿ ಕನ್ನಡದ ಖ್ಯಾತ ಸಾಹಿತಿ, ಕುಂಟಗೋಡು ವಿಭೂತಿ ಸುಬ್ಬಣ್ಣ ಅವರು ಇದನ್ನು ಸ್ಥಾಪಿಸಿದರು. ನೀನಾಸಂ ರಂಗಭೂಮಿ, ಚಲನಚಿತ್ರಗಳು ಮತ್ತು ಪ್ರಕಾಶನ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ನೀಡಿದೆ. ಅಂದಹಾಗೆ ದಿವಂಗತ ಕೆ.ವಿ.ಸುಬ್ಬಣ್ಣ ಅವರಿಗೆ 1991 ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೀಡಲಾಯಿತು.

ನೀನಾಸಂ ಬೆಳೆದದ್ದು ಹೇಗೆ?

ನೀನಾಸಂ ಬೆಳೆದದ್ದು ಹೇಗೆ?

ನೀನಾಸಂ, ಹೆಗ್ಗೋಡಿನ ಹಸಿರಿನಿಂದ ಕೂಡಿದ ಪರಿಸರದಲ್ಲಿ ಚಿಕ್ಕ ಹುಲ್ಲಿನ ಗುಡಿಸಲಿನಲ್ಲಿ ಒಂದು ಹವ್ಯಾಸಿ ನಾಟಕ ತಂಡವಾಗಿ ಪ್ರಾರಂಭವಾಯಿತು. ಆದರೆ ಕನ್ನಡ ಸಂಸ್ಕೃತಿ ಮತ್ತು ಬುದ್ಧಿಶಕ್ತಿಯ ಶಕ್ತಿ ಕೇಂದ್ರವಾಗಿ ವೇಗವಾಗಿ ಬೆಳೆಯಿತು. ನೀನಾಸಂನ ಗಮನವು ಸಾಮಾಜಿಕ-ಸಾಂಸ್ಕೃತಿಕ ಕೆಲಸವಾಗಿತ್ತು. ನೀನಾಸಂ ರಂಗಭೂಮಿ ಮತ್ತು ಸಾಹಿತ್ಯ ಕಾರ್ಯಾಗಾರಗಳನ್ನು ನಡೆಸುತ್ತಿತ್ತು. ಅಲ್ಲದೆ, ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು. ಇದರ ಪರಿಣಾಮವಾಗಿ, ಸಮಕಾಲೀನ ಸಮಸ್ಯೆಗಳು ಮತ್ತು ಘಟನೆಗಳನ್ನು ಚರ್ಚಿಸಲು ಹತ್ತಿರದ ಸ್ಥಳಗಳಿಂದ ಸಾಂಸ್ಕೃತಿಕ ಉತ್ಸಾಹಿಗಳು ಒಟ್ಟಾಗಿ ಸೇರಲು ಪ್ರಾರಂಭಿಸಿದರು. ವರ್ಷಗಳು ಕಳೆದಂತೆ ನೀನಾಸಂನ ಕಾರ್ಯದಲ್ಲಿ ಹೆಚ್ಚು ಜನ ತೊಡಗಿಕೊಳ್ಳತೊಡಗಿದರು.

'ಸಂಸ್ಕೃತಿ ಶಿಬಿರ'ಗಳಲ್ಲಿ ಭಾಗವಹಿಸಬಹುದು

'ಸಂಸ್ಕೃತಿ ಶಿಬಿರ'ಗಳಲ್ಲಿ ಭಾಗವಹಿಸಬಹುದು

ಇಂದು ಸುಬ್ಬಣ್ಣನವರ ಮಗ ಕೆ.ವಿ.ಅಕ್ಷರ ಅವರು ನೀನಾಸಂ ಮುಖ್ಯಸ್ಥರು. ನೀನಾಸಂ ತನ್ನದೇ ಆದ ನಾಟಕ ತಂಡ ಮತ್ತು ಫಿಲ್ಮ್ ಸೊಸೈಟಿಯನ್ನು ಹೊಂದಿದೆ. ಸಂಸ್ಥೆಯು ಡಿಪ್ಲೊಮಾ (ಅವಧಿ: 10 ತಿಂಗಳು) ಮತ್ತು ಬೇಸಿಗೆ ಕಾರ್ಯಾಗಾರಗಳ ಮೂಲಕ ಕಲೆಯ ಬಗ್ಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತದೆ. ಪ್ರತಿ ಅಕ್ಟೋಬರ್‌ನಲ್ಲಿ 'ಸಂಸ್ಕೃತಿ ಶಿಬಿರ' ಎಂಬ 7 ದಿನಗಳ ಕೋರ್ಸ್ ಕೂಡ ಇರುತ್ತದೆ. ಇದರಲ್ಲಿ ಹೆಚ್ಚಾಗಿ ಪತ್ರಕರ್ತರು, ರಾಜಕಾರಣಿಗಳು, ಅಂಗಡಿ ಮಾಲೀಕರು, ಗೃಹಿಣಿಯರು, ರೈತರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇವರು ಸಾಮಾಜಿಕ-ರಾಜಕೀಯ ವಿಷಯಗಳ ಕುರಿತ ಕಾರ್ಯಾಗಾರಗಳಲ್ಲಿಯೂ ಭಾಗವಹಿಸುತ್ತಾರೆ. ಹೆಚ್ಚಿನ ಚರ್ಚೆಗಳು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ನಡೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X