Search
  • Follow NativePlanet
Share
» »ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ ಇಲ್ಲಿ ನೆಲೆಸಿದ್ದಾಳೆ...

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ ಇಲ್ಲಿ ನೆಲೆಸಿದ್ದಾಳೆ...

ಲೇಖನದಲ್ಲಿ ತಿಳಿಸಬೇಕು ಎಂದು ಕೊಂಡಿರುವ ವಿಷಯವೆನೆಂದರೆ ಅದು ಮಹಿಮಾನ್ವಿತವಾದ ಒಂದು ಶಕ್ತಿ ದೇವಾಲಯವಾಗಿದೆ. ಈ ದೇವಾಲಯಕ್ಕೆ ಗುಂಟೂರಿನಿಂದಲೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ಭಕ್ತರು ಭೇಟಿ ನೀಡುತ್ತಾರೆ. ವಿಶೇಷವೆನೆಂದರೆ ಈ ದೇವಿಯು ವಿವಾಹಕ್ಕೆ

ಈ ಆಶ್ಚರ್ಯಕರವಾದ ದೇವಿಯ ದೇವಾಲಯವು ಬೇ ಆಫ್ ಬೆಂಗಾಲ್‍ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗುಂಟೂರು ನಗರದ ದಕ್ಷಿಣ ಭಾರತವಾದ ಆಂಧ್ರ ಪ್ರದೇಶದಲ್ಲಿ ದೇವಿಯ ದೇವಾಲಯವಿದೆ. ಹೈದ್ರಾಬಾದ್ ನಗರಕ್ಕೆ ಆಗ್ನೆಯ ದಿಕ್ಕಿಗೆ ಸುಮಾರು 266 ಕಿ.ಮೀ ದೂರದಲ್ಲಿ ಈ ನಗರವಿದೆ. 2012 ರಲ್ಲಿ ಗುಂಟೂರು ನಗರದ ಪರಿಸರದಲ್ಲಿರುವ 10 ಗ್ರಾಮಗಳನ್ನು ಗುಂಟೂರಿನಲ್ಲಿ ಸೇರಿಸಿ ಅತಿ ದೊಡ್ಡ ನಗರವಾಗಿ ವಿಸ್ತರಿಸಿದರು. ಈ ಸ್ಥಳದಲ್ಲಿಯೇ ಆ ತಾಯಿ ನೆಲೆಸಿದ್ದಾಳೆ. ಅಸಲಿಗೆ ಆ ದೇವಿಯ ದೇವಾಲಯವೆಂದರೆ ಅದೇ ನಿದಾನಂಪತಿ ದೇವಾಲಯ.

ಲೇಖನದಲ್ಲಿ ತಿಳಿಸಬೇಕು ಎಂದು ಕೊಂಡಿರುವ ವಿಷಯವೆನೆಂದರೆ ಅದು ಮಹಿಮಾನ್ವಿತವಾದ ಒಂದು ಶಕ್ತಿ ದೇವಾಲಯವಾಗಿದೆ. ಈ ದೇವಾಲಯಕ್ಕೆ ಗುಂಟೂರಿನಿಂದಲೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ಭಕ್ತರು ಭೇಟಿ ನೀಡುತ್ತಾರೆ. ವಿಶೇಷವೆನೆಂದರೆ ಈ ದೇವಿಯು ವಿವಾಹಕ್ಕೆ ಮುಂಚೆಯೇ ಗರ್ಭ ಧರಿಸಿರುವುದು. ಇಲ್ಲಿ ತಾಯಿಯ ಚರಿತ್ರೆಯನ್ನು ಕೇಳಿಸಿಕೊಂಡರೆ ರೋಮಾಂಚನವಾಗದೇ ಇರದು.

ಹಾಗಾದರೆ ಲೇಖನದ ಮೂಲಕ ಆ ತಾಯಿಯ ದೇವಾಲಯ ಎಲ್ಲಿದೆ? ಆ ದೇವಾಲಯದ ಮಹಿಮೆ ಏನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರವನ್ನು ಲೇಖನದ ಮೂಲಕ ತಿಳಿಯೋಣ.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ಅಲ್ಲಿನ ತಾಯಿಯ ಚರಿತ್ರೆಯನ್ನು ನೀವು ಕೇಳಿಸಿಕೊಂಡರೆ ನೀವು ಷಾಕ್ ಆಗುವುದಂತೂ ಖಂಡಿತ
1147 ರಿಂದ 1158ರ ಸಮಕಾಲಿನ ಪ್ರದೇಶಕ್ಕೆ ಸಂಬಂಧಿಸಿದ ಶಿಲ್ಪಕಲೆಗೆ ಗುಂಟೂರು ಕೂಡ ಪ್ರಸಿದ್ಧವಾದುದೇ. ಈ ಶಿಲ್ಪಗಳ ಮೂಖಾಂತರ ಗುಂಟೂರಿಗೆ ತನ್ನದೇ ಆದ ಮಾನ್ಯತೆಯನ್ನು ಗಳಿಸಿದೆ. ಈ ಪ್ರದೇಶವನ್ನು 1788 ರಲ್ಲಿ ಬ್ರಿಟೀಷ್‍ರು ತಮ್ಮ ಸಾಮ್ರಾಜ್ಯವನ್ನು ಇಲ್ಲಿಯೂ ಕೂಡ ವಿಸ್ತಾರ ಮಾಡಿದರು.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ಸರಿ ವಿಷಯಕ್ಕೆ ಬರೋಣ. ಪಾರ್ವತಿ ದೇವಿ ಶ್ರೀಲಕ್ಷ್ಮೀಯಾಗಿ ಏಕೆ ಜನಿಸಿದಳು ಎಂಬುದು ನಿಮಗೆ ಗೊತ್ತ? ಶ್ರೀ ಮಹಾಲಕ್ಷ್ಮೀಯನ್ನು ಸಂತಾನಕ್ಕೇ ಅಲ್ಲದೇ ಸಕಲ ಸಂಪತ್ತನ್ನು ನೀಡುವ ತಾಯಿಯಾಗಿ ಪೂಜಿಸುತ್ತಾರೆ. ಪಾರ್ವತಿ ದೇವಿಯು ಶಾಪಕ್ಕೆ ಗುರಿಯಾಗಿ ಶ್ರೀ ಮಹಾಲಕ್ಷ್ಮೀಯಾಗಿ ಏಕೆ ಜನಿಸಿದಳು? ಆ ಮಹಿಮಾನ್ವಿತವಾದ ದೇವಾಲಯ ಎಲ್ಲಿದೆ? ಎಂಬುದನ್ನು ತಿಳಿಯೋಣ.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ಗುಂಟೂರು ಜಿಲ್ಲೆಯ ಸಮೀಪದಲ್ಲಿ ಅಡಿಗೊಪ್ಪುಲ ಗ್ರಾಮದಲ್ಲಿ ನಿದಾನಂಪಾಟಿ ಶ್ರೀಲಕ್ಷ್ಮೀ ದೇವಾಲಯವಿದೆ. ಹೆಸರಿನಲ್ಲಿ ಶ್ರೀಲಕ್ಷ್ಮೀ ಎಂದು ಇದ್ದರೂ ಕೂಡ ಈಕೆಯನ್ನು ಪಾರ್ವತಿ ದೇವಿಯ ಅಂಶವಾಗಿ ಪೂಜಿಸುತ್ತಾರೆ. ಹಾಗೆಯೇ ದೇವಾಲಯದ ಪುರಾಣದ ವಿಷಯಕ್ಕೆ ಬಂದರೆ ಪೂರ್ವ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರು ಕುಳಿತುಕೊಂಡಿರುವಾಗ ಕೆಲವು ಪ್ರಮಾದ ಗಣಗಳು ನಾಟ್ಯವಾಡುತ್ತಿದ್ದರು.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ನಾಟ್ಯದಲ್ಲಿ ನಂದಿಯು ಅಸಂಪೂರ್ಣ ಎಂದು ಪಾರ್ವತಿ ದೇವಿಯು ಹೇಳಿದಳು. ಹಾಗೆ ಹೇಳಿದ ಕಾರಣವಾಗಿ ನಿನ್ನ ಗರ್ಭದಲ್ಲಿ ನಂದೀಶ್ವರ ಅಸಂಪೂರ್ಣವಾಗಿ ಇರುತ್ತಾನೆ ಎಂದೂ. ವಿವಾಹವಾಗದೇ ಗರ್ಭವತಿಯಾಗುವ ನಿನಗೆ ಅವರು ಅಗ್ನಿಗೆ ಅಹೂತಿ ಮಾಡುತ್ತಾರೆ ಎಂದೂ. ಆ ವಿಧವಾಗಿ ಮಾನವ ರೂಪವನ್ನು ಬಿಟ್ಟು ನಿಧಾನವಾಗಿ ದೇವಿಯಾಗಿ ನೆಲೆಸುತ್ತೀಯಾ. ಅವರು ಮಾಡುವ ಪೂಜೆಗಳನ್ನು ಸ್ವೀಕಾರ ಮಾಡಿ ಭಕ್ತರನ್ನು ಕಾಪಾಡುತ್ತಿಯಾ ಎಂದು ಹೇಳುತ್ತಾನೆ.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ಅದೇ ವಿಧವಾಗಿ ಶಾಪಕ್ಕೆ ಗುರಿಯಾದ ಪಾರ್ವತಿ ದೇವಿಯು ಸುಮಾರು 700 ವರ್ಷಗಳ ಹಿಂದೆ ಗುಂಟೂರು ಜಿಲ್ಲೆಯ ಪಲ್ನಾಟಿ ಪ್ರದೇಶದಲ್ಲಿ ಯಗಾಂಟಿರಾಮಯ್ಯನವರ ಮನೆಯಲ್ಲಿ ಜನಿಸುತ್ತಾಳೆ. ನಾಲ್ಕು ಜನ ಗಂಡು ಮಕ್ಕಳ ನಂತರ ಹುಟ್ಟಿದ ಹೆಣ್ಣುಮಗುವಿಗೆ ಶ್ರೀ ಲಕ್ಷ್ಮೀ ಎಂದು ಹೆಸರನ್ನು ನಾಮಕರಣ ಮಾಡುತ್ತಾರೆ. ರಾಮಯ್ಯನಿಗೆ ಪಶುಸಂಪತ್ತಿನಲ್ಲಿ ಕಾಮಧೇನು ಎಂಬ ಗೋವು ಇರುತ್ತದೆ. ಶ್ರೀಲಕ್ಷ್ಮೀಯು ಪ್ರತಿದಿನವು ಗೋಶಾಲೆಗೆ ತೆರಳಿ ಗೋವಿನ ಸುತ್ತ ಪ್ರದಕ್ಷಿಣೆ ಮಾಡಿ ಗಂಜಳವನ್ನು ಸೇವಿಸುತ್ತಿದ್ದಳು.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ಒಂದು ದಿನ ಆ ಕಾಮಧೇನುವು ಎತ್ತಿನ ಜೊತೆ ಸಂಭೋಗ ಮಾಡಿತ್ತು. ಇದನ್ನು ತಿಳಿಯದ ಶ್ರೀಲಕ್ಷ್ಮೀಯು ಅದೇ ರೀತಿ ಪ್ರತಿ ದಿನ ಬೆಳಗ್ಗೆ ಕಾಮಧೇನುವಿಗೆ ನಮಸ್ಕಾರ ಮಾಡಿ ಗಂಜಳವನ್ನು ಸೇವಿಸಿದಳು. ತದನಂತರ ಆಕೆಯು ಕೆಲವು ಕಾಲಗಳ ನಂತರ ಗರ್ಭವತಿಯಾದಳು. ಆ ವಿಷಯವನ್ನು ತಿಳಿದ ಗ್ರಾಮಸ್ಥರು ಆಕೆಯನ್ನು ಹಾಗು ಆಕೆಯ ಕುಟುಂಬವನ್ನು ಅವಮಾನಿಸುತ್ತಿದ್ದರು.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ಇದರಿಂದ ಕೋಪಗೊಂಡು ಆಕೆಯ ಸಹೋದರರು ಆಕೆಯನ್ನು ಬೆಂಕಿಗೆ ತಳ್ಳಿದರು. ಆಗ ಆ ಅಗ್ನಿಯಲ್ಲಿ ಗೋಶಾಲೆಯಲ್ಲಿರುವ ಆ ಕಾಮಧೇನುವು ಕೂಡ ಆ ಅಗ್ನಿಯಲ್ಲಿ ಹಾರಿ ಪ್ರಾಣ ತ್ಯಾಗ ಮಾಡಿತು. ಹಾಗೆ ಬೆಂಕಿಗೆ ಅಹುತಿಯಾದ ಶ್ರೀಲಕ್ಷ್ಮಿ ಶಿಲೆಯಾಗಿ ಮಾರ್ಪಾಟಾದಳು. ತದನಂತರ ಭಾನುವಾರದ ದಿನದಂದು ನನ್ನನ್ನು ಆಹುತಿ ಮಾಡಿದ್ದರಿಂದ ಪ್ರತಿ ಭಾನುವಾರವು ಹರಿಶಿಣ, ಕುಂಕುಮಗಳಿಂದ ತನ್ನನ್ನು ಪೂಜಿಸಬೇಕು ಎಂದು ಹೇಳುತ್ತಾಳೆ.

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ

ತನ್ನನ್ನು ದರ್ಶನ ಮಾಡಿಕೊಳ್ಳುವವರು ಎಲ್ಲರೂ ಬಿಸಿಲಿನಲ್ಲಿಯೇ ನಿಲ್ಲಬೇಕು. ಅಷ್ಟೇ ಅಲ್ಲದೇ ತನಗೆ ದೇವಾಲಯವನ್ನು ನಿರ್ಮಾಣ ಮಾಡುವುದು ಬೇಡ ಎಂದು ಹೇಳಿದಳಂತೆ. ಹಾಗಾಗಿಯೇ ಆ ತಾಯಿ ನೆಲೆಸಿದ ಸ್ಥಳದ ಸುತ್ತ 10 ಅಡಿ ಸ್ಥಳವನ್ನು ಬಿಟ್ಟು ಮಂದಿರವನ್ನು ನಿರ್ಮಾಣ ಮಾಡಿದರು. ಈ ವಿಧವಾಗಿ ಶಾಪಕ್ಕೆ ಗುರಿಯಾದ ಪಾರ್ವತಿದೇವಿಯು ಶ್ರೀಲಕ್ಷ್ಮೀ ದೇವಿಯಾಗಿ ನೆಲೆಸಿ ಭಕ್ತರನ್ನು ಕಾಪಾಡುತ್ತಾ ಬಂದಿದ್ದಾಳೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಗುಂಟೂರಿಗೆ ನೇರವಾಗಿ ವಿಮಾನ ನಿಲ್ದಾಣವಿಲ್ಲ. ಇಲ್ಲಿಗೆ ಸಮೀಪದಲ್ಲಿಯೇ ಇರುವ ಅಂತರ್‍ಜಾತಿಯ ವಿಮಾನ ನಿಲ್ದಾಣ ಹೈದ್ರಾಬಾದ್‍ನಲ್ಲಿರುವ ರಾಜೀವ್ ಗಾಂಧಿ ವಿಮಾನ ನಿಲ್ದಾಣ ಅತ್ಯಂತ ಸಮೀಪದ್ದಾಗಿದೆ. ಇದಕ್ಕೆ ಸ್ಥಳೀಯ ವಿಮಾನ ನಿಲ್ದಾಣವು ಸುಮಾರು 96 ಕಿ.ಮೀ ದೂರದಲ್ಲಿನ ವಿಜಯವಾಡದಲ್ಲಿದೆ. ರೈಲು ಮತ್ತು ರಸ್ತೆ ಮಾರ್ಗದ ಮೂಖಾಂತರ ಗುಂಟೂರು ನಗರಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲ್ವೆ ನಿಲ್ದಾಣ
ಈ ನಿದಾನಂಪತಿ ದೇವಿಯ ದೇವಾಲಯಕ್ಕೆ ಸಮೀಪದ ರೈಲ್ವೆ ನಿಲ್ದಾಣಗಳಿವೆ. ಗುಂಟೂರಿಗೆ ಹಲವಾರು ರಾಜ್ಯಗಳಿಂದ ರೈಲುಗಳು ಸಂಪರ್ಕ ಸಾಧಿಸುವುದರಿಂದ ಸುಲಭವಾಗಿ ಸೇರಿಕೊಳ್ಳಬಹುದು. ಬೆಂಗಳೂರಿನಿಂದ ಗುಂಟೂರಿಗೆ ನೇರವಾದ ರೈಲುಗಳ ಸಂಪರ್ಕವಿದೆ.

ಶ್ರೀ ಕೃಷ್ಣನು ನಿರ್ಮಿಸಿದ ದ್ವಾರಕೆಯ ಬಗ್ಗೆ ನಿಮಗೆ ತಿಳಿಯದ ಅದ್ಭುತಗಳುಶ್ರೀ ಕೃಷ್ಣನು ನಿರ್ಮಿಸಿದ ದ್ವಾರಕೆಯ ಬಗ್ಗೆ ನಿಮಗೆ ತಿಳಿಯದ ಅದ್ಭುತಗಳು

ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X