Search
  • Follow NativePlanet
Share
» »ಈ ಕೋಟೆಯ ಹತ್ತುವಿರಾ? ಸುತ್ತುವಿರಾ?

ಈ ಕೋಟೆಯ ಹತ್ತುವಿರಾ? ಸುತ್ತುವಿರಾ?

ಹಾಸನ ಜಿಲ್ಲೆಯಲ್ಲಿರುವ ಈ ಕೋಟೆ ಒಂದು ದಿನದ ಸುಂದರ ಪಯಣಕ್ಕೆ ಹೇಳಿ ಮಾಡಿಸಿದಂತಿದೆ. ಗತಕಾಲದ ಇತಿಹಾಸದೊಂದಿದೆ ಮೌನವಾಗಿ ನಿಂತು ಯಾತ್ರಿಕರನ್ನು ಕೈ ಬೀಸಿ ಕರೆಯುತ್ತದೆ.

By Divya

ಈ ವಾರದ ರಜೆಯಲ್ಲಿ ಎಲ್ಲಿಗೆ ಹೋಗುವುದು ಎನ್ನುವ ಯೋಚನೆಯಲ್ಲಿದ್ದೆವು. ಆಗ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಹಾಡೊಂದು ಕಣ್ಣಿಗೆ ಬಿತ್ತು. ಆ ಹಾಡಿಗೆ ನಡೆಸಿದ ಚಿತ್ರೀಕರಣದ ಜಾಗ ಬಹಳ ಸುಂದರವಾಗಿ ಕಾಣಿಸುತ್ತಿತ್ತು. ತಡಮಾಡದೆ ಆ ಹಾಡಿನ ಚಿತ್ರೀಕರಣ ಎಲ್ಲಿ ನಡೆದಿದೆ ಎಂಬುದನ್ನು ಗೂಗಲ್‍ನಲ್ಲಿ ಹುಡುಕಿದೆ. ಆಗ ಸಿಕ್ಕ ಹೆಸರೇ ಮಂಜಾರಾಬಾದ್ ಕೋಟೆ.

ಬೆಂಗಳೂರಿಗೆ ಹತ್ತಿರ ಇರುವ ಈ ಕೋಟೆ ಬರೇ 226 ಕಿ.ಮೀ. ವ್ಯಾಪ್ತಿಯಲ್ಲಿದೆ. ಹಾಸನ ಜಿಲ್ಲೆಯಲ್ಲಿರುವ ಈ ಕೋಟೆ ಒಂದು ದಿನದ ಸುಂದರ ಪಯಣಕ್ಕೆ ಹೇಳಿ ಮಾಡಿಸಿದಂತಿದೆ. ಗತಕಾಲದ ಇತಿಹಾಸದೊಂದಿದೆ ಮೌನವಾಗಿ ನಿಂತು ಯಾತ್ರಿಕರನ್ನು ಕೈ ಬೀಸಿ ಕರೆಯುತ್ತದೆ.

Manjarabad fort

PC: wikipedia.org

ಕೋಟೆಯ ಸುತ್ತ
ಈ ಕೋಟೆಗೆ 250 ಮೆಟ್ಟಿಲುಗಳಿವೆ. ಇವುಗಳನ್ನು ಏರಿಯೇ ಬರಬೇಕು. ಸಮುದ್ರ ಮಟ್ಟದಿಂದ 3240 ಅಡಿ ಎತ್ತರದಲ್ಲಿರುವ ಈ ಕೋಟೆ 5 ಎಕರೆ ವಿಸ್ತೀರ್ಣದಲ್ಲಿದೆ. ಇದನ್ನು ಎಂಟು ನಕ್ಷತ್ರಾಕೃತಿಯ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಒಳಗಡೆ ಒಂದು ನೀರಿನ ಕೊಳವಿದೆ.

ಊಟದ ಗೃಹ, ಸ್ನಾನ ಗೃಹ, ಶಯನ ಗೃಹ, ಮದ್ದು ಗುಂಡು ಸಂಗ್ರಹಿಸಿಡುವ ಕೋಣೆ ಹಾಗೂ ಶೌಚಾಲಯಗಳಿರುವುದನ್ನು ಕಾಣಬಹುದು. ಇಷ್ಟೇ ಅಲ್ಲದೆ ಇದರ ಸುತ್ತಲೂ ಅನೇಕ ಸುರಂಗ ಮಾರ್ಗಗಳಿವೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತವೆ ಎನ್ನುತ್ತಾರೆ. ಆದರೆ ಈ ವರೆಗೆ ಯಾವುದೇ ಪುರಾವೆಗಳು ದೊರೆತಿಲ್ಲ.

Manjarabad fort

PC: wikipedia.org

ಹಿನ್ನೆಲೆ
1785 ರಿಂದ 1792 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ್ದ. ನಾಲ್ಕನೇ ಆಂಗ್ಲ ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಈ ಕೋಟೆಯನ್ನು ಬ್ರಿಟೀಷರು ತಮ್ಮ ವಶಕ್ಕೆ ಪಡೆದುಕೊಂಡರು. ಇದರ ಕೆಲವು ಭಾಗಗಳನ್ನು ಇವರೇ ನಾಶಪಡಿಸಿದರು ಎನ್ನಲಾಗುತ್ತದೆ.

ವಿಶಾಲವಾದ ಜಾಗ, ಸುತ್ತ ಹಸಿರು ಸಿರಿ ಹಾಗೂ ಶುದ್ಧವಾದ ಗಾಳಿ ಇರುವಂತಹ ಈ ಪ್ರದೇಶಕ್ಕೆ ಹತ್ತಿರವಾಗಿ ಜೇನುಕಲ್ಲುಗುಡ್ಡ, ಮಂಜೇಹಳ್ಳಿ ಜಲಪಾತ, ಬೆಟ್ಟ ಬೈರವೇಶ್ವರ, ಸಕಲೇಶ್ವರ ದೇಗುಲಗಳಿವೆ.

Manjarabad fort

PC: wikimedia.org

ಮಂಜರಾಬಾದ್ ಕೋಟೆ ತಲುಪುವುದು ಹೇಗೆ ?

Read more about: sakleshpur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X