Search
  • Follow NativePlanet
Share
» »ರಾಷ್ಟ್ರೀಯ ಹೆದ್ದಾರಿ 3 ರ ವಿಶೇಷತೆ ಏನು?

ರಾಷ್ಟ್ರೀಯ ಹೆದ್ದಾರಿ 3 ರ ವಿಶೇಷತೆ ಏನು?

By Vijay

ಗುಣ ಮಟ್ಟದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವಾಗ ಆಗುವ ಪ್ರಯಾಣದಾನಂದ ವರ್ಣಿಸಲು ಅಸಾಧ್ಯ. "ಅಗಲವಾದ ಹಾಗೂ ಸಮತಟ್ಟಾದ ರಸ್ತೆ, ಅಕ್ಕ ಪಕ್ಕದಲ್ಲಿ ಹೀಗೆ ಕಾಣಿಸಿ ಕ್ಷಣ ಮಾತ್ರದಲ್ಲಿ ಹಾಗೆ ಮರೆಯಾಗುವ ಗಿಡ ಮರಗಳು, ಅಲ್ಲಲ್ಲಿ ಕಂಡುಬರುವ ಹಳ್ಳ ಕೊಳ್ಳಗಳು, ಸ್ವಾಗತ ಕೋರಿ ಹಾಗೆಯೆ ಬಿಳ್ಕೊಡುವ ಹಳ್ಳಿಗಳು ಅದರಲ್ಲೂ ನಗುನಗುತ್ತ "ಟಾಟಾ" ಹೇಳುವ ಹಳ್ಳಿ ಮಕ್ಕಳು, ಸಮೃದ್ಧವಾಗಿ ಬೆಳೆದು ನಿಂತ ಹೊಲ ಗದ್ದೆಗಳು, ಪೈರುಗಳು, ನನ್ನನ್ನು ದಾಟು ಎಂದು ಸವಾಲೊಡ್ಡುವ ಬೆಟ್ಟ ಗುಡ್ಡಗಳು ಇವೆಲ್ಲದರ ನಡುವೆ ಬಿರುಸಾಗಿ ದೇಹಕ್ಕೆ ಅಪ್ಪಳಿಸುವ ಗಾಳಿ"

ಬುಕ್ಕಿಂಗ್‍ಖಜಾನಾದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ ಪಡೆಯಿರಿ

ಅಬ್ಬಾ, ಈ ಎಲ್ಲ ಅನುಭವಗಳು ಪ್ರಯಾಣಿಸುವಾಗ ಪ್ರಯಾಣಿಕ ಅಥವಾ ಪ್ರವಾಸಿಗನ ಮನದಲ್ಲಿ ಒಂದು ವಿಸಿಷ್ಟ ರೀತಿಯ ಸಂತಸ ಹಾಗೂ ಹುಮ್ಮಸ್ಸನ್ನು ಕರುಣಿಸದೆ ಇರಲಾರದು. ರಸ್ತೆ ಅಗಲ ಹಾಗೂ ಸುಗಮವಾಗಿದ್ದಷ್ಟು ಪ್ರಯಾಣದ ಸಂತಸವು ಹೆಚ್ಚುತ್ತದೆ.

ಅಂದರೆ ಸುಗಮವಾದ ಪ್ರಯಾಣವು ರಸ್ತೆಯ ಗುಣಮಟ್ಟದ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಾ ರಸ್ತೆಗಳಿರುವ ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನೂ ಸಹ ಕಾಣಬಹುದಾಗಿದೆ.

ವಿಶೇಷ ಲೇಖನ : ರಾ.ಹೆ 17 = 36

ಸಾಮಾನ್ಯವಾಗಿ ನಮ್ಮ ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಬಹುತೇಕ ಉತ್ತಮ ಗುಣಮಟ್ಟವುಳ್ಳ ರಸ್ತೆಗಳೇ ಆಗಿವೆ. ಇಂತಹ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಚಲಿಸುತ್ತ ಮಾಡುವ ಪ್ರವಾಸವು ಅಷ್ಟು ಬೇಗನೆ ಮರೆಯಲು ಸಾಧ್ಯವೆ ಇಲ್ಲ.

ಕೆಲ ರಾಷ್ಟ್ರೀಯ ಹೆದ್ದಾರಿಗಳು ವಿವಿಧ ರಾಜ್ಯಗಳ ಪ್ರಮುಖ ಹಾಗೂ ಪ್ರವಾಸಿ ವಿಶೇಷತೆಯುಳ್ಳ ಸ್ಥಳಗಳಿಗೆ ನೇರವಾಗಿ ಸಂಪರ್ಕ ಒದಗಿಸುತ್ತದೆ. ಅಂತಹ ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಒಂದಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 3 ರ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ.

ಹೆದ್ದಾರಿಯ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳನ್ನೂ ಸಹ ಇಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ಅವಕಾಶ ದೊರೆತರೆ ಈ ಹೆದ್ದಾರಿಯ ಮೇಲೆ ಪ್ರಯಾಣಿಸಿ ಹಾಗೂ ಅನನ್ಯವಾದ ಅನುಭವ ಪಡೆಯಿರಿ.

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 3 ಅನ್ನು ಸಾಮಾನ್ಯವಾಗಿ ಮುಂಬೈ - ಆಗ್ರಾ ಹೆದ್ದಾರಿ ಎಂದೆ ಕರೆಯಲಾಗುತ್ತದೆ. ಇದು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾದು ಹೋಗಿದೆ.

ಚಿತ್ರಕೃಪೆ: Rohanguy

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಈ ರಸ್ತೆಯು ಮೂಲತಃ ಉತ್ತರ ಪ್ರದೇಶ ರಾಜ್ಯದ ಆಗ್ರಾ ಪಟ್ಟಣದಿಂದ ಆರಂಭಗೊಂಡು ಆಗ್ರಾದ ನೈರುತ್ಯ ದಿಕ್ಕಿನಿಂದ ತನ್ನ ಪಥವನ್ನು ಮುಂದುವರೆಸುತ್ತ ಸಾಗುತ್ತದೆ. ಇದು ಮೊದಲಿಗೆ ರಾಜಸ್ಥಾನ ಪ್ರವೇಶಿಸಿದಾಗ ಮುಟ್ಟುವ ಮೊದಲ ಸ್ಥಳವೆ ಢೋಲಪುರ.

ಚಿತ್ರಕೃಪೆ: Hkore

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಢೋಲ್ಪುರದ ವಿಶೇಷತೆ ಎಂದರೆ ಇದು ಬುದ್ಧನು ಜೀವಿಸಿದ್ದ ಕಾಲದಲ್ಲಿ ಪ್ರಚಲಿತದಲ್ಲಿದ್ದ 16 ಮಹಾಜನಪದಗಳಲ್ಲಿ ಮತ್ಸ್ಯ ಜನಪದದ ಭಾಗವಾಗಿತ್ತು. ಈ ಭಾಗವನ್ನು ಢೋಲನ್ ದೇವ್ ತೋಮರ್ ಎಂಬಾತ ರಾಜನು ಆಳಿದ್ದು ಅವನ ಹೆಸರಿನಿಂದಲೆ ಇದಕ್ಕೆ ಢೋಲ್ಪುರ ಎಂದು ಹೆಸರು ಬಂದಿದೆ. ಇಂದಿಗೂ ಆತನ ಅರಮನೆಯನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Rambilassingh

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಢೋಲ್ಪುರದ ನಂತರ ಈ ರಸ್ತೆಯು ಮಧ್ಯ ಪ್ರದೇಶವನ್ನು ಪ್ರವೇಶಿಸುತ್ತದೆ. ಮಧ್ಯ ಪ್ರದೇಶದಲ್ಲಿ ಮೊದಲಿಗೆ ಸಿಗುವ ಸ್ಥಳ ಮೊರೇನಾ. ಇದು ಮೊರೇನಾ ಜಿಲ್ಲೆಯ ಆಡಳಿತ ಕೇಂದ್ರವಾಗಿದ್ದು ಚಂಬಲ್ ವಿಭಾಗದಲ್ಲಿ ಬರುತ್ತದೆ. ಚಂಬಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಚಂಬಲ್ ಸೇತುವೆ.

ಚಿತ್ರಕೃಪೆ: Yann

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಮೊರೇನಾದ ನಂತರ ಸಿಗುವ ಸ್ಥಳ ಗ್ವಾಲಿಯರ್. ಗ್ವಾಲಿಯರ್ ಹಿಂದೂ ರಾಜರಿಂದ ನಿರ್ಮಿಸಲ್ಪಟ್ಟ ಅತ್ಯದ್ಭುತವಾದ ಕೋಟೆಗೆ ಹೆಸರುವಾಸಿಯಾಗಿದೆ. ಗ್ವಾಲಿಯರ್, ಮಧ್ಯ ಪ್ರದೇಶದ ನಾಲ್ಕನೇಯ ಅತಿ ದೊಡ್ಡ ನಗರವಾಗಿದ್ದು, ರಾಜ್ಯದ ಪ್ರವಾಸಿ ರಾಜಧಾನಿ ಎಂದೇ ಜನಮನ್ನಣೆ ಗಳಿಸಿದೆ.

ಚಿತ್ರಕೃಪೆ: Noeljoe85

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಗ್ವಾಲಿಯರ್ ನ ಮತ್ತೊಂದು ಆಕರ್ಷಣೆ ಜಯ ವಿಲಾಸ ಅರಮನೆ. ಜಯ ವಿಲಾಸ ಅರಮನೆಯು ಸಿಂಧಿಯ ರಾಜವಂಶದವರ ವಾಸಸ್ಥಳವಾಗಿದೆ ಮತ್ತು ಇಂದಿಗೂ ಇದು ಅವರ ಪೂರ್ವಜರ ವಾಸಸ್ಥಾನವಾಗಿದೆ. ಈ ಅರಮನೆಯ ಒಂದು ಭಾಗವನ್ನು ವಸ್ತು ಸಂಗ್ರಹಾಲಯವನ್ನಾಗಿ ಉಪಯೋಗಿಸಲಾಗುತ್ತಿದೆ. ಇದನ್ನು 1809 ರಲ್ಲಿ ಜಿಯಾಜಿ ರಾವ ಸಿಂಧಿಯ ರವರು ನಿರ್ಮಿಸಿದರು.

ಚಿತ್ರಕೃಪೆ: Shobhit Gosain

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಗ್ವಾಲಿಯರ್ ಕೋಟೆಯ ಪೂರ್ವದ ಭಾಗದಲ್ಲಿ ವಿಶಿಷ್ಟವಾದ ಸಾಸ್ ಬಹು ದೇವಸ್ಥಾನವನ್ನು ಕಾಣಬಹುದು. ಈ ಹೆಸರೇ ಒಂದು ವಿನೋದಮಯವಾಗಿದೆಯಲ್ಲವೇ? ಸತ್ಯ ಏನೆಂದರೆ ಇಲ್ಲಿರುವ ಸಾಸ್ ಎಂದರೆ ಅತ್ತೆ ಎಂದು ಅರ್ಥವಲ್ಲ. ಜೊತೆಗೆ ಬಹು ಎಂದರೆ ಸೊಸೆ ಎಂದೂ ಅರ್ಥವಲ್ಲ. ಇದು ವಿಷ್ಣು ದೇವರ ದೇವಸ್ಥಾನವಾಗಿದೆ. "ಸಾಸ್ತ್ರಬಹು" ಇದು ಭಗವಾನ್ ವಿಷ್ಣುವಿನ ಇನ್ನೊಂದು ಹೆಸರಾಗಿದೆ. ಸಾಸ್ತ್ರಬಹು ದೇವಸ್ಥಾನವು ಕಾಲ ಕಳೆದಂತೆ ಸಾಸ್ ಬಹು ದೇವಸ್ಥಾನ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಈ ಸಾಸ್‍ಬಹು ದೇವಸ್ಥಾನವು ವಿಷ್ಣುವಿನ ಒಂದು ಅವತಾರದ ನೆನೆಪಿಗಾಗಿ ಸಮರ್ಪಿತವಾಗಿದೆ. ಈ ದೇವಸ್ಥಾನದ ದ್ವಾರದ ಮೇಲೆ ಬ್ರಹ್ಮ, ವಿಷ್ಣು, ಮತ್ತು ಸರಸ್ವತಿ ದೇವತೆಯರ ಕೆತ್ತನೆಗಳು ಇವೆ.

ಚಿತ್ರಕೃಪೆ: Georgegupta

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಗ್ವಾಲಿಯರ್ ನಂತರ ಈ ರಸ್ತೆಯಲ್ಲಿ ಸಿಗುವ ಪ್ರಮುಖ ಸ್ಥಳ ಮಧ್ಯ ಪ್ರದೇಶದ ಗುನಾ ಪಟ್ಟಣ. ಪರ್ಬಾತಿ ನದಿ ತಟದಲ್ಲಿ ನೆಲೆಸಿರುವ ಗುನಾದಲ್ಲಿ ಕೆಲವು ಸುಂದರ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಅವುಗಳಲ್ಲೊಂದಾಗಿದೆ ಐತಿಹಾಸಿಕ ಬಜ್ರನಗಡ್ ಕೋಟೆ. ಬಜ್ರನಗಡ್ ಎಂಬ ಹಳ್ಳಿಯಲ್ಲಿ ಇದು ಸ್ಥಿತವಿದೆ.

ಚಿತ್ರಕೃಪೆ: Dubey Rahul

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಬೀಸ್ ಭುಜ್ ದೇವಿ ದೇವಾಲಯ : ಗುನಾದಲ್ಲಿರುವ ದೇವಿಯ ಈ ದೇವಾಲಯ ವಿಶಿಷ್ಟವಾದುದಾಗಿದೆ ಹಾಗೂ ಸಾಕಷ್ಟು ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇದರ ವಿಶೇಷತೆ ಎಂದರೆ ಈ ದೇವಿಗೆ ಒಟ್ಟು 20 ಭುಜಗಳಿದ್ದು ಅವುಗಳನ್ನು ಯಾರಿಂದಲೂ ಸರಿಯಾಗಿ ಎಣಿಸಲು ಬರುವುದಿಲ್ಲವಂತೆ. ಪ್ರತಿ ಸಲ ಎಣಿಸಿದಾಗ ಬೇರೆ ಬೇರೆ ಸಂಖ್ಯೆಗಳು ಬರುತ್ತದಂತೆ. ಯಾರಾದರೂ ನಿಶ್ಚಿತವಾಗಿ 20 ಭುಜಗಳನ್ನು ಕರಾರುವಕ್ಕಾಗಿ ಎಣಿಸಿದರೆ ಅವರ ಮೇಲೆ ದೇವಿಯ ಆಶೀರ್ವಾದವಿದೆ ಎಂದು ಭಾವಿಸಲಾಗುತ್ತದೆ.

ಚಿತ್ರಕೃಪೆ: Dubey Rahul

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಗುನಾದ ನಂತರ ಈ ರಸ್ತೆಯಲ್ಲಿ ಮುಂದೆ ಸಾಗಿದಾಗ ಸಿಗುವ ಪ್ರಮುಖ ಪಟ್ಟಣವೆಂದರೆ ಮಧ್ಯ ಪ್ರದೇಶದ ಇಂದೋರ್ ನಗರ. ಇಂದೋರ್ ರಾಜ್ಯದ ವಾಣಿಜ್ಯ ರಾಜಧಾನಿ ಎಂತಲೆ ಗುರುತಿಸಿಕೊಳ್ಳುತ್ತದೆ ಹಾಗೂ ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಮುಂದಿನ ಸ್ಲೈಡುಗಳಲ್ಲಿ ಇಂದೋರ್ ನ ಕೆಲವು ವಿಶಿಷ್ಟ ಆಕರ್ಷಣೆಗಳು.

ಚಿತ್ರಕೃಪೆ: Bernard Gagnon

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಅನ್ನಪೂರ್ಣ ದೇವಾಲಯವು ಇಂದೋರಿನಲ್ಲಿರುವ ಒಂದು ಸುಂದರ ದೇವಾಲಯವಾಗಿದೆ. ಇದು ಇಂದೋರಿನ ಅತ್ಯಂತ ಹಳೆಯ ದೇವಾಲಯವಾಗಿದ್ದು, 9ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಮುಖ್ಯವಾಗಿ ಈ ದೇವಾಲಯವು ಇಂಡೋ-ಆರ್ಯನ್ ಮತ್ತು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಇದರ ಎತ್ತರವಾಗಿದ್ದು, ಮಾತೆ ಅನ್ನಪೂರ್ಣೇಶ್ವರಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯ ಇದಾಗಿದೆ. ವಿಶೇಷವೆಂದರೆ ವಿಶ್ವ ಪ್ರಸಿದ್ಧ ಮಧುರೈನ ಮೀನಾಕ್ಷಿ ದೇವಾಲಯ ವಾಸ್ತುಶಿಲ್ಪದಿಂದ ಸ್ಫೂರ್ತಿಯನ್ನು ಪಡೆದಿದೆ.

ಚಿತ್ರಕೃಪೆ: Krisbillore

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ರಾಜ್‍ವಾಡಾ ಅರಮನೆಯು ಇಂದೋರಿನ ಪ್ರಮುಖ ಆಕರ್ಷಣೆಯಾಗಿದೆ. ರಾಜ್‍ವಾಡಾವು ಹೋಲ್ಕರ್ ಸಾಮ್ರಾಜ್ಯದವರ ಒಂದು ಐತಿಹಾಸಿಕ ಅರಮನೆಯಾಗಿದೆ. ಈ ಅರಮನೆಯನ್ನು ಸುಮಾರು 200 ವರ್ಷಗಳ ಹಿಂದೆ ನಿರ್ಮಿಸಲಾಯಿತು. ಈ ಕಟ್ಟಡದಲ್ಲಿ ಫ್ರೆಂಚ್, ಮರಾಠ ಮತ್ತು ಮೊಘಲ್ ಶೈಲಿಯ ವಾಸ್ತುಶಿಲ್ಪಗಳ ಸಂಯೋಜನೆಯನ್ನು ಹೊಂದಿದೆ.

ಚಿತ್ರಕೃಪೆ: sheetal saini

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಬಡಾ ಗಣಪತಿ ದೇವಾಲಯವು ಇಂದೋರಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದು ಇಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತನ್ನಲ್ಲಿರುವ ಬೃಹತ್ ಗಣಪತಿ ವಿಗ್ರಹಕ್ಕಾಗಿ ಖ್ಯಾತಿ ಪಡೆದಿದೆ. ಇದು 25 ಅಡಿ ಎತ್ತರವಾಗಿದ್ದು, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಗಣಪತಿ ವಿಗ್ರಹವೆಂಬ ಕೀರ್ತಿಯನ್ನು ಪಡೆದಿದೆ.

ಚಿತ್ರಕೃಪೆ: Rakeshnandi1990

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಖಜ್ರಾನಾ ಗಣೇಶ ದೇವಾಲಯವು ಇಂದೋರಿನ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಗಣಪತಿ ದೇವರಿಗೆ ಮುಡಿಪಾದ ಈ ದೇವಾಲಯ ಹಿಂದೆ ಇಂದೋರಿನ ರಾಣಿಯಾಗಿದ್ದ ಅಹಿಲ್ಯಾಬಾಯಿ ಹೋಳ್ಕರ್ ರವರಿಂದ ನಿರ್ಮಿತವಾಗಿದೆ. ಗಣಪತಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು ಭಕ್ತಾಧಿಗಳ ವಲಯದಲ್ಲಿ ಮಹತ್ವದ ಸ್ಥಾನವನ್ನು ಸಂಪಾದಿಸಿದೆ. ನಂಬಿಕೆಗಳ ಪ್ರಕಾರ, ಇಲ್ಲಿ ನೀವು ಕೋರಿದ ಕೋರಿಕೆಯು ನೆರವೇರುತ್ತದೆಯೆಂಬ ನಂಬಿಕೆ ಮನೆಮಾಡಿದೆ. ಈ ಕಾರಣದಿಂದಾಗಿ ಇಲ್ಲಿ ಯಾವಾಗಲು ಭಕ್ತಾಧಿಗಳ ದಂಡೆ ನೆರೆದಿರುತ್ತದೆ.

ಚಿತ್ರಕೃಪೆ: Akhilesh S

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಇಂದೋರಿನಲ್ಲಿ ಮರಾಠಾ ರಾಜ ವಂಶಸ್ಥರ ಸಮಾಧಿಗಳನ್ನು ಸಾಕಷ್ಟು ನೋಡಬಹುದು. ಇವು ಉತ್ತಮ ಶಿಲ್ಪ ಕಲೆಯಿಂದಾಗಿ ಪ್ರವಾಸಿ ಆಕರ್ಷಣೆಯನ್ನು ಪಡೆದಿವೆ. ಇವುಗಳು ನೋಡಲು ಛತ್ರಿ (ಕೊಡೆ)ಯ ಹಾಗೆ ಕಾಣುವುದರಿಂದ ಆಂಗ್ಲದಲ್ಲಿ ಇವನ್ನು ಛತ್ರಿಗಳೆಂದೂ ಸಹ ಕರೆಯುತ್ತಾರೆ. ಇಲ್ಲಿರುವ ಕೃಷ್ಣಪುರ ಛತ್ರಿಯು ಖಾನ್ ನದಿಯ ದಂಡೆಯ ಮೇಲೆ ನೆಲೆಗೊಂಡಿದ್ದು ಸುಂದರ ಕೆತ್ತನೆ ಹಾಗೂ ದೇಗುಲಗಳ ಉಪಸ್ಥಿತಿಯಿಂದಾಗಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Abhishek727

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಇದು ಈ ರಸ್ತೆ ಮಾರ್ಗಕ್ಕೆ ಸಂಬಂಧಿಸಿಲ್ಲವಾದರೂ ಇಂದೋರ್ ನಲ್ಲಿದ್ದಾಗ ಭೇಟಿ ಮಾಡಲೇಬೇಕಾದ ತಾಣವಾಗಿದೆ. ಅದೆ ಪಾತಾಲ್ ಪಾನಿ ಜಲಪಾತ. ಪಾತಾಳ್ ಪಾನಿ ಎಂಬ ಅದ್ಭುತವಾದ ಜಲಪಾತವೊಂದು ಇಂದೋರ್ ನಿಂದ 35 ಕಿ.ಮೀ ದೂರದಲ್ಲಿದೆ. ನೀವೇನಾದರೂ ಮಳೆಗಾಲದ ಸಂದರ್ಭದಲ್ಲಿ ಇಂದೋರ್ ಗೆ ಭೇಟಿ ನೀಡಿದ್ದರೆ ಈ ಜಲಪಾತ ನೋಡುವುದನ್ನು ತಪ್ಪಿಸಿಕೊಳ್ಳಲೇಬೇಡಿ.

ಚಿತ್ರಕೃಪೆ: Lucky vivs

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಇಂದೋರ್ ನಂತರ ಈ ರಸ್ತೆಯು ನೇರವಾಗಿ ಮಹಾರಾಷ್ಟ್ರ ರಾಜ್ಯವನ್ನು ಪ್ರವೇಶಿಸುತ್ತದೆ. ಮಹಾರಾಷ್ಟ್ರದಲ್ಲಿ ಸಿಗುವ ಮುಖ್ಯ ಪಟ್ಟಣ ಧುಳೆ. ಧುಳೆ ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪಟ್ಟಣವಾಗಿದ್ದು ಭಾರತದಲ್ಲಿರುವ ಕೆಲವೆ ಕೆಲವು ಉತ್ತಮವಾಗಿ ಯೋಜಿಸಲ್ಪಟ್ಟ ನಗರಗಳ ಪೈಕಿ ಒಂದಾಗಿದೆ. ವಿಶೇಷವೆಂದರೆ ಈ ಪಟ್ಟಣವು ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯನವರಿಂದ ಯೋಜಿಸಲ್ಪಟ್ಟಿದೆ. ಮುಂದಿನ ಸ್ಲೈಡುಗಳಲ್ಲಿ ಧುಳೆಯ ಆಕರ್ಷಣೆಗಳು.

ಚಿತ್ರಕೃಪೆ: Jainpankaj009

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ರಾಜವಾಡೆ ಸಂಗ್ರಹಾಲಯ : ಸರ್ ವಿಶ್ವನಾಥ ಕಾಶಿನಾಥ ರಾಜವಾಡೆ ಎಂಬುವವರು ಮಹಾರಾಷ್ಟ್ರದ ಖ್ಯಾತ ಇತಿಹಾಸ ತಜ್ಞರು. 1926 ರಲ್ಲಿ ಅಗಲಿದ ಇವರು ತಮ್ಮ ಹಿಂದೆ ಮರಾಠಿ ಸಂಸ್ಕೃತಿಯ ಹಾಗೂ ಇತಿಹಾಸದ ಶ್ರೀಮಂತವಾದ ಭಂಡಾರವನ್ನೆ ಬಿಟ್ಟು ಹೋದರು. ಇವೆಲ್ಲ ಭಂಡಾರವನ್ನು ಸಂರಕ್ಷಿಸಿಟ್ಟು ಪ್ರದರ್ಶಿಸಲಾಗುತ್ತಿರುವ ಸಂಗ್ರಹಾಲಯವೆ ರಾಜವಾಡೆ ವಸ್ತು ಸಂಗ್ರಹಾಲಯ.

ಚಿತ್ರಕೃಪೆ: Akshay

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಏಕವೀರಾ ಮಾತಾ ದೇವಾಲಯ : ಪಂಜಾರಾ ನದಿ ತಟದ ಮೇಲೆ ನೆಲೆಸಿರುವ ಏಕವೀರಾ ದೇವಿಯ ದೇವಾಲಯವು ಧುಳೆ ನಗರದ ಪ್ರತಿಷ್ಠೆಯ ದೇವಾಲಯವಾಗಿದೆ. ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: rajkumar1220

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಧುಳೆಗೆ ಹತ್ತಿರದಲ್ಲಿ ಹರಿದಿರುವ ಪಂಜಾರಿ ನದಿಯ ಒಂದು ಸುಂದರ ನೋಟ.

ಚಿತ್ರಕೃಪೆ: Vijay Sonar

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಮತ್ತೊಂದು ವಿಶಯವೆಂದರೆ ಧುಳೆಯು ಬರೊಬ್ಬರಿ ಮೂರು ಮಹಾ ಹೆದ್ದಾರಿಗಳಾದ ರಾ.ಹೆ ಸಂಖ್ಯೆ 3, ರಾ.ಹೆ ಸಂಖ್ಯೆ 6 ಹಾಗೂ ರಾ.ಹೆ ಸಂಖ್ಯೆ 211 ಒಂದಕ್ಕೊಂದು ಸಂಧಿಸುವ ಸ್ಥಳದಲ್ಲಿರುವುದರಿಂದ ಅನೇಕ ಚಾಲಕರಿಗೆ ಅದರಲ್ಲೂ ವಿಶೇಷವಾಗಿ ಟ್ರಕ್ಕು ಚಾಲಕರಿಗೆ ಇದೊಂದು ವಿಶ್ರಾಮದ ತಾಣವಾಗಿಯೂ ಸಹ ಪ್ರಸಿದ್ಧವಾಗಿದೆ. ಹಿನ್ನಿಲೆಯಲ್ಲಿ ಇತಿಹಾಸಪೂರ್ವದ ಪ್ರಸಿದ್ಧವಾದ ಲಲಿಂಗ್ ಕೋಟೆ.

ಚಿತ್ರಕೃಪೆ: Dmandar21

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಧುಳೆಯ ನಂತರ ಈ ಹೆದ್ದಾರಿಯು ನೇರವಾಗಿ ಮಹಾರಾಷ್ಟ್ರದ ನಾಶಿಕ್ ಪಟ್ಟಣಕ್ಕೆ ಕರೆದೊಯ್ಯುತ್ತದೆ. ಗೋದಾವರಿ ತಟದಿ ನೆಲೆಸಿಹ ನಾಶಿಕ್ ಮಹಾರಾಷ್ಟ್ರದ ಮೂರನೆಯ ದೊಡ್ಡ ಹಾಗೂ ಸ್ಥಳ ವಿಸ್ತಾರದಲ್ಲಿ ಮುಂಬೈ ನಂತರ ಎರಡನೆಯ ದೊಡ್ಡ ಪಟ್ಟಣವಾಗಿದೆ. ಅಷ್ಟೆ ಅಲ್ಲ, ರಾಮನು ವನವಾಸದಲ್ಲಿದ್ದಾಗ ಇದೆ ಸ್ಥಳದಲ್ಲಿ ಕೆಲ ಕಾಲ ನೆಲೆಸಿದ್ದನೆಂದು ಹೇಳಲಾಗಿದೆ. ಮುಂದಿನ ಸ್ಲೈಡುಗಳಲ್ಲಿ ನಾಶಿಕ್ ಆಕರ್ಷಣೆಗಳು.

ಚಿತ್ರಕೃಪೆ: Hkore

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಪಾಂಡವವಲೇನಿ ಗುಹೆಗಳು : ನಾಶಿಕ್‌ನಲ್ಲಿರುವ ಪಾಂಡವಲೇನಿ ಗುಹೆಗಳು ವಾಸ್ತುಶಿಲ್ಪ ಪ್ರಿಯರಿಗೆ ಇಷ್ಟವಾಗುತ್ತದೆ. ತ್ರಿವಶ್ಮಿ ಗುಡ್ಡದ ಬುಡದಲ್ಲಿರುವ ಈ ಗುಹೆಯು 20 ಶತಮಾನಗಳ ಹಿಂದಿನದು. ಇಲ್ಲಿನ ಗುಹೆಗಳ ಸಂಖ್ಯೆ ಒಟ್ಟು 24. ಇದನ್ನು ಜೈನ ರಾಜರು ನಿರ್ಮಿಸಿದ್ದರು ಎಂದು ನಂಬಲಾಗಿದೆ. ಇದೊಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Ajith NCT

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ನಾಶಿಕ್‌ನಲ್ಲಿ ಕಾಲಾರಾಮ್‌ ದೇವಸ್ಥಾನವು ಪ್ರಮುಖ ಆಕರ್ಷಣೆಯಾಗಿದೆ. ಈ ದೇವಸ್ಥಾನವು ತನ್ನ ವಾಸ್ತುಶಿಲ್ಪ ಶೈಲಿಯಲ್ಲಿ, ಕೆಲವೇ ಮೈಲುಗಳ ದೂರದಲ್ಲಿರುವ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಹೋಲುತ್ತದೆ ಹಾಗೂ ಇದು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದ ನಿರ್ಮಿತವಾಗಿದೆ. ತಾಮ್ರದಿಂದ ಇದರ ಗೋಪುರವನ್ನು ಮಾಡಲಾಗಿದ್ದು, ಚಿನ್ನದ ಲೇಪನವನ್ನು ಹೊಂದಿದೆ. ರಾಮ, ಸೀತೆ ಮತ್ತು ಲಕ್ಷ್ಮಣನ ಮೂರ್ತಿಯನ್ನು ಇಲ್ಲಿ ಕೆತ್ತಲಾಗಿದೆ.

ಚಿತ್ರಕೃಪೆ: World8115

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ನಾಶಿಕ್‌ನಲ್ಲಿನ ಪ್ರಮುಖ ಆಕರ್ಷಣೆಯೆಂದರೆ ರಾಮಕುಂಡ ಕಲ್ಯಾಣಿ. ಸುಮಾರು 300 ವರ್ಷಗಳ ಹಿಂದೆ ಈ ಕಲ್ಯಾಣಿಯನ್ನು ನಿರ್ಮಿಸಲಾಗಿತ್ತು. ಈ ಕಲ್ಯಾಣಿ ಸುಮಾರು 1696 ನೇ ಇಸ್ವಿಯದ್ದು. ಈ ಕಲ್ಯಾಣಿಯಲ್ಲಿ ರಾಮ ಮತ್ತು ಸೀತೆಯರು ತಮ್ಮ ವನವಾಸದ ಸಮಯದಲ್ಲಿ ಸ್ನಾನ ಮಾಡಿದ್ದರು ಎಂದು ಹೇಳಲಾಗಿದೆ. ಹಿಂದುಗಳು ಇಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರದ ಸುಟ್ಟ ಬೂದಿಯ ಅವಶೇಷಗಳನ್ನು ಇಲ್ಲಿ ತಂದು ಬಿಡುತ್ತಾರೆ. ಹೀಗೆ ಮಾಡುವುದರಿಂದ ಮೃತನ ಆತ್ಮವು ಮೋಕ್ಷ ತಲುಪುತ್ತದೆ ಎಂಬ ನಂಬಿಕೆಯಿದೆ. ಪ್ರಸಿದ್ಧ ರಾಜಕೀಯ ವ್ಯಕ್ತಿಗಳಾದ ಇಂದಿರಾಗಾಂಧಿ ಮತ್ತು ಪಂಡಿತ್‌ ಜವಾಹರಲಾಲ ನೆಹರೂರವರ ಪವಿತ್ರ ಬೂದಿ(ಅಸ್ಥಿ)ಯನ್ನು ಇಲ್ಲಿ ವಿಸರ್ಜಿಸಲಾಗಿದೆ.

ಚಿತ್ರಕೃಪೆ: Marco Zanferrari

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಸುಲಾ ದ್ರಾಕ್ಷಿ ತೋಟವು ನಾಶಿಕ್‌ನಲ್ಲಿದೆ. ನಾಗ್ಪುರ ಕಿತ್ತಳೆ ಹಣ್ಣಿಗೆ ಪ್ರಖ್ಯಾತವಾದಂತೆಯೇ ನಾಶಿಕ್‌ ದ್ರಾಕ್ಷಿಗೆ ಜನಪ್ರಿಯ. ಭಾರತದಲ್ಲಿ ದ್ರಾಕ್ಷಿ ಬೆಳೆಯಲ್ಲಿ ನಾಶಿಕ್‌ ಪ್ರಮುಖ ಸ್ಥಾನದಲ್ಲಿದೆ. ಈ ನಗರದ ವಾತಾವರಣವು ದ್ರಾಕ್ಷಿ ಬೆಳೆಗೆ ಸೂಕ್ತವಾದದ್ದಾಗಿದೆ. ಇಲ್ಲಿನ ದ್ರಾಕ್ಷಿ ತೋಟಗಳಲ್ಲಿ ಸುಲಾ ದ್ರಾಕ್ಷಿ ತೋಟವು ಪ್ರಸಿದ್ಧವಾದದ್ದು. ಸುಲಾ ವೈನ್ ಸಹ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Marco Zanferrari

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ನಾಶಿಕ್ ನಂತರ ಈ ರಸ್ತೆಯು ನೇರವಾಗಿ ಠಾಣೆಗೆ ಕರೆದೊಯ್ಯುತ್ತದೆ. ಮಹಾರಾಷ್ಟ್ರದ ಒಂದು ಪ್ರಮುಖ ಜಿಲ್ಲೆ ಠಾಣೆ. ಇದು ಕೆರೆಗಳ ನಗರಿ ಅಂತಲೂ ಜನಪ್ರಿಯವಾಗಿದೆ. ಇದೂ ಸಹ ಒಂದು ಪ್ರವಾಸಿ ಸ್ಥಳವಾಗಿದ್ದು ಹಲವು ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ. ಠಾಣೆಯ ಆಕರ್ಷಣೆಗಳು. ಇದಾದ ನಂತರ ಕೊನೆಗೆ ಮುಂಬೈ ತಲುಪಿ ಈ ರಸ್ತೆ ಸಮಾಪ್ತವಾಗುತ್ತದೆ. ಇದರ ಒಟ್ಟಾರೆ ಉದ್ದ 1,161 ಕಿ.ಮೀ ಗಳು.

ಚಿತ್ರಕೃಪೆ: Mandar Dewalkar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X