• Follow NativePlanet
Share
» »ಊಟಿಯಲ್ಲಿ ಈ ಗಾಡರ್ನ್ ನೋಡಿದ್ದೀರಾ.....

ಊಟಿಯಲ್ಲಿ ಈ ಗಾಡರ್ನ್ ನೋಡಿದ್ದೀರಾ.....

Posted By:

ತಂಪಾದ ಗಾಳಿ, ಸೂರ್ಯೋದಯ, ಸೂರ್ಯಾಸ್ತ ಸಮಯದ ನೋಟ, ಮಂಜಿನಿಂದ ಕೂಡಿದ ಬೆಟ್ಟಗಳು, ಕಣ್ಣನ್ನು ಸೆಳೆಯುವ ಟೀ ಎಸ್ಟೇಟ್‍ಗಳು ಇಂತಹ ಪ್ರದೇಶಕ್ಕೆ ಪರ್ಯಾಟನೆಗೆ ತೆರಳಬೇಕು ಎಂದು ಅನ್ನಿಸಿದರೆ ಮೊದಲು ನೆನಪಿಗೆ ಬರುವುದೇ ಊಟಿ. ಅಷ್ಟೇ ಅಲ್ಲ, ಹೊಸದಾಗಿ ವಿವಾಹವಾದವರಿಗೆ ಇದು ಹನಿಮೂನ್ ಸ್ಪಾಟ್. ಬೇಸಿಗೆಯ ಕಾಲದಲ್ಲಿ ಮಕ್ಕಳ ಜೊತೆ ವಿಶ್ರಾಂತಿ ಪಡೆಯುವ ಸಲುವಾಗಿ ಈ ಸುಂದರವಾದ ಸ್ಥಳಕ್ಕೆ ಭೇಟಿ ನೀಡಬಹುದು.

ಊಟಿಗೆ ಮಧ್ಯ ತರಗತಿ ಕುಟುಂಬದಿಂದ ಆರ್ಥಿಕವಾಗಿ ಉನ್ನತ ಸ್ಥಿತಿಯಲ್ಲಿರುವವರು ಕೂಡ ಭೇಟಿ ನೀಡುತ್ತಾರೆ. ಭಾರತ ದೇಶದಲ್ಲಿ ಟೂರಿಸ್ಟ್ ಸ್ಪಾಟ್ ಎಂದರೆ ಊಟಿಗೆ ಮೊದಲ ಸ್ಥಾನ. ತಮಿಳುನಾಡಿನ ಸುಂದರವಾದ ಪ್ರದೇಶಗಳಲ್ಲಿ ಇದು ಕೂಡ ಒಂದು. ಊಟಿಯಲ್ಲಿನ ಘೆರ್ನ್ ಹಿಲ್ಸ್ ಪ್ರದೇಶದಲ್ಲಿ ಸುಮಾರು 38.1 ಎಕರೆಗಳಲ್ಲಿ ಕರ್ನಾಟಕ ಸರ್ಕಾರ ಸುಮಾರು 6 ವರ್ಷ ಕಷ್ಟಪಟ್ಟು ಕರ್ನಾಟಕ ಸಿರಿ ಹಾರ್ಟಿಕಲ್ಚರ್ ಗಾರ್ಡನ್ ಹೆಸರಿನಲ್ಲಿ ನೂತನ ಉದ್ಯಾನವನವನ್ನು ಏರ್ಪಾಟು ಮಾಡಿತು.

ಕಳೆದ ಜನವರಿ 9 ರಿಂದ ಪ್ರವಾಸಿಗರಿಗೆ ಈ ಉದ್ಯಾನವನ್ನು ನೋಡುವುದಕ್ಕೆ ಅನುಮತಿಯನ್ನು ನೀಡುತ್ತಾರೆ. ಇದು ಸಮುದ್ರಮಟ್ಟಕ್ಕೆ ಸುಮಾರು 7,600 ಅಡಿ ಎತ್ತರದಲ್ಲಿರುವ ಈ ಉದ್ಯಾನವನವು ಪ್ರವಾಸಿಗರನ್ನು ಸಾಕಷ್ಟು ಆಕರ್ಷಿಸುತ್ತದೆ. ಆ ಎಲ್ಲಾ ವಿವರಗಳ ಬಗ್ಗೆ ನೇಟಿವ್ ಪ್ಲಾನೆಟ್‍ನ ಮೂಲಕ ಸುಲಭವಾಗಿ ತಿಳಿದುಕೊಳ್ಳೊಣ.

1.ಗಂಡಭೇರುಂಡ ಪಕ್ಷಿಯಿಂದ ಕೂಡಿದ ದ್ವಾರ

1.ಗಂಡಭೇರುಂಡ ಪಕ್ಷಿಯಿಂದ ಕೂಡಿದ ದ್ವಾರ

pc: sajjednra

ಒಡೆಯಾರ್ ವಂಶಕ್ಕೆ ಸೇರಿದ ಲಾಂಛನವಾದ ಗಂಡಭೇರುಂಡ ಪಕ್ಷಿಯಿಂದ ಕೂಡಿದ ಈ ಗಾರ್ಡನ್ ಮುಖದ ದ್ವಾರವು ಆಕರ್ಷಿಸುತ್ತದೆ. ಈ ದ್ವಾರದ ಮೇಲೆ ಕರ್ನಾಟಕ, ತಮಿಳುನಾಡು ಸಂಸ್ಕøತಿ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಹಾಗೆ ಕೆಲವು ಶಿಲ್ಪಗಳನ್ನು ಕೆತ್ತನೆ ಮಾಡಿದ್ದಾರೆ. ಇನ್ನು ಪ್ರತ್ಯೇಕ ಸಂದರ್ಭದಲ್ಲಿ ಇವುಗಳ ಪ್ರದೇಶಗಳಿಗೆ ಸೇರಿದ ಜಾನಪದ ನೃತ್ಯಗಳಿಂದ ಕೂಡ ಪ್ರವಾಸಿಗರಿಗೆ ಸ್ವಾಗತಿಸುತ್ತಿದೆ. ಇದರ ಪಕ್ಕದಲ್ಲಿಯೇ 12 ಟನ್ನುಗಳ ಭಾರವನ್ನು ಹೊಂದಿರುವ ವಿವಿಧ ಪಕ್ಷಿ, ಪ್ರಾಣಿಗಳು, ವೃಕ್ಷಗಳಿಂದ ಕೂಡಿತ ಶಿಲ್ಪ ಆಕರ್ಷಿಸುತ್ತಿದೆ.

2.7000 ಅಡಿ ಎತ್ತರದಲ್ಲಿ ಬೆಳೆಯುವ ಹೂವು...

2.7000 ಅಡಿ ಎತ್ತರದಲ್ಲಿ ಬೆಳೆಯುವ ಹೂವು...

pc: sajjednra

ಈ ಉದ್ಯಾನವನದಲ್ಲಿ ಒಂದು ಚಿಕ್ಕ ಗ್ಲಾಸ್ ಹೌಸ್ ಪ್ರವಾಸಿಗರಿಗೆ ವಿಶೇಷವಾಗಿ ಆಕರ್ಷಿಸುತ್ತದೆ. ಅತಿ ಶೀತಲ ಪ್ರದೇಶದಲ್ಲಿ ಮಾತ್ರವೇ ಬೆಳೆಯುವ ಕೆಲವು ಬಗೆಯ ಆರ್ಚಿಡ್ ಗಿಡಗಳು ಇಲ್ಲಿ ಪ್ರತ್ಯೇಕವಾಗಿ ಬೆಳೆಸುತ್ತಾರೆ. ಮುಖ್ಯವಾಗಿ ಸಮುದ್ರ ಮಟ್ಟಕ್ಕೆ 7 ಸಾವಿರ ಅಡಿ ಎತ್ತರದಲ್ಲಿ ಮಾತ್ರವೇ ಬೆಳೆಯುವ ಸಿಂಬಿಡಿಯಂ ಆರ್ಚಿಡ್ ಗಿಡಗಳನ್ನು ಇಲ್ಲಿ ಕಾಣಬಹುದು. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಕೂಡ ಏರ್ಪಾಟು ಮಾಡಿದ್ದಾರೆ.

3.ಹಚ್ಚ-ಹಸಿರಿನ ತಿವಾಚಿ

3.ಹಚ್ಚ-ಹಸಿರಿನ ತಿವಾಚಿ

pc: sajjednra

ಕುಕುವಾ ಜಾತಿಯ 10 ಎಕರೆಗಳಲ್ಲಿ ಪ್ರತ್ಯೇಕವಾಗಿ ಬೆಳೆಸಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಸುಮಾರು 10.000 ಮಂದಿ ಕುಳಿತುಕೊಂಡು ನೋಡುವ ಸಲುವಾಗಿ ಓಪನ್ ಥಿಯೇಟರ್ ಅನ್ನು ಕೂಡ ಏರ್ಪಟು ಮಾಡಿದ್ದಾರೆ. ಪ್ರತಿ ವಿಕೆಂಡ್‍ನ ಜೊತೆಗೆ ಪ್ರತ್ಯೇಕ ಸಂದರ್ಭದಲ್ಲಿ ಇಲ್ಲಿ ಕರ್ನಾಟಕ, ತಮಿಳುನಾಡು ಸಂಸ್ಕøತಿ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಾರೆ. ಅಷ್ಟೇ ಅಲ್ಲ ಇಲ್ಲಿ ಕಣ್ಣಿಗೆ ತಂಪನ್ನು ನೀಡುವ ಬಣ್ಣ-ಬಣ್ಣದ ಅನೇಕ ಗಿಡಗಳು ಇಲ್ಲಿ ಕಾಣಬಹುದು.

4.ಇಟಾಲಿಯನ್ ಗಾರ್ಡನ್

4.ಇಟಾಲಿಯನ್ ಗಾರ್ಡನ್

pc: sajjednra

ಈ ಉದ್ಯಾನವನದಲ್ಲಿ ಸ್ವಲ್ಪ ಭಾಗವನ್ನು ಇಟಾಲಿಯನ್ ಗಾರ್ಡನ್ ಕೂಡ ಕಾಣಬಹುದು. ಈ ಪ್ರದೇಶದಲ್ಲಿನ ನಿರ್ದಶನ ಅಮೃತಶಿಲೆ ವಿಗ್ರಹಗಳು ವೀಕ್ಷಕರ ಗಮನವನ್ನು ಸೆಳೆಯುತ್ತದೆ. ಇಲ್ಲಿಗೆ ಹೋದವರಿಗೆ ತಾವು ಯಾವುದೋ ವಿದೇಶದಲ್ಲಿ ಇದ್ದೇವೆ ಎಂಬ ಭಾವವು ತಪ್ಪದೇ ಉಂಟಾಗುತ್ತದೆ. ಅದೇ ವಿಧವಾಗಿ ಮಕ್ಕಳ ಜೊತೆ ದೊಡ್ಡವರು ಕೂಡ ಕಣ್ಣಾಮುಚ್ಚಾಲೆ ಆಡಲು ವಿಶಾಲವಾದ ಸ್ಥಳ ಇಲ್ಲಿದೆ.

5.ನೀರಿನ ಕುಂಟೆಗಳು

5.ನೀರಿನ ಕುಂಟೆಗಳು

pc: sajjednra

ಈ ಉದ್ಯಾನವನದಲ್ಲಿ ಸ್ವಲ್ಪ ಭಾಗವು ನೀರಿನ ಕುಂಟೆಗಳನ್ನು ಏರ್ಪಾಟು ಮಾಡಿದ್ದಾರೆ. 100*40 ಅಡಿ ವಿಸ್ತೀರ್ಣ, 10 ಅಡಿ ಆಳದಲ್ಲಿರುವ ಈ ನೀರಿನ ಕುಂಟೆಗಳು ಬಣ್ಣ-ಬಣ್ಣದ ಮೀನುಗಳನ್ನು ಸಾಕುತ್ತಾರೆ. ಬಗೆ-ಬಗೆಯ ಜಾತಿಗೆ ಸೇರಿದ ಬಾತುಕೋಳಿಗಳು ಈ ನೀರಿನ ಕುಂಟೆಯಲ್ಲಿ ಕಾಣಬಹುದು. ಇದರಿಂದಾಗಿ ನಾವು ಯಾವುದೇ ಅರಣ್ಯ ಪ್ರದೇಶದಲ್ಲಿ ಇದ್ದೇವೆ ಎಂಬ ಅನುಭೂತಿ ಉಂಟು ಮಾಡುತ್ತದೆ. ತ್ವರಿತವಾಗಿ ಇಲ್ಲಿನ ಭೂಗರ್ಭ ಅಕ್ವೇರಿಯಂ ಕೂಡ ಏರ್ಪಾಟು ಮಾಡುತ್ತಾರೆ. ಅತಿ ತ್ವರಿತವಾಗಿ ಬೋಟಿಂಗ್‍ಗೆ ಕೂಡ ವ್ಯವಸ್ಥೆ ಕಲ್ಪಿಸಲಾಗುತ್ತದೆ.

6.ಎಲ್ಲಾ ಬಗೆಯ ಪುಷ್ಪಗಳು ಒಂದೇ ಸ್ಥಳದಲ್ಲಿ...

6.ಎಲ್ಲಾ ಬಗೆಯ ಪುಷ್ಪಗಳು ಒಂದೇ ಸ್ಥಳದಲ್ಲಿ...

pc: sajjednra

ಬಗೆ-ಬಗೆಯ ವಾತಾವರಣ ಪರಿಸ್ಥಿತಿಯಲ್ಲಿ ಹುಟ್ಟುವ ಪುಷ್ಪವೆಲ್ಲಾ ಒಂದೇ ಸ್ಥಳದಲ್ಲಿ ತೆಗೆದುಕೊಂಡು ಪ್ರತ್ಯೇಕ ವಿಧಾನದಲ್ಲಿ ಬೆಳೆಸುತ್ತಾರೆ. ಇದರಿಂದಾಗಿಯೇ ಲಕ್ಷಾಧಿ ರೂಪಾಯಿಗಳನ್ನು ವ್ಯಯ ಮಾಡಿ ಪಾಲಿ ಹೌಸ್ ಅನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಅಜಲಿನ, ಬೆಗೋನಿಯಾ, ಸೈಕ್ಲಿಮಿನ್, ಸ್ಟಾಟಿಸ್, ಕೆಮಿಲಿನಾ, ತುನಿಯಾ, ಹೆಡರಾ, ಫೂಜಿಯಾ, ಹೈಡ್ರೆಂಜಿಯಾ, ಗ್ರೇನಿಯಂ ತದಿತರ ಜಾತಿಗಳಿಗೆ ಸೇರಿದ ಸಸ್ಯಗಳನ್ನು ಈ ಪಾಲಿಹೌಸ್‍ನಲ್ಲಿ ಕಾಣಬಹುದು. ಅಷ್ಟೇ ಅಲ್ಲ ಸುಮಾರು 200 ವಿಧದ ಔಷಧ ಗಿಡಗಳನ್ನು ಇಲ್ಲಿ ಕಾಣಬಹುದು.

7.ಊಟಿಯಲ್ಲಿ ಇನ್ನು ಏನೇನು ಕಾಣಬಹುದು..

7.ಊಟಿಯಲ್ಲಿ ಇನ್ನು ಏನೇನು ಕಾಣಬಹುದು..

pc: sajjednra

ಊಟಿಯಲ್ಲಿ ಬೊಟಾನಿಕಲ್ ಗಾರ್ಡನ್, ಬೋಟ್ ಹೌಸ್, ಥಂಡರ್ ವರ್ಡ್, ಟೀ ಎಸ್ಟೇಟ್, ಡಾಲ್ಫಿನೊಸ್ ಮೌಂಟೈನ್, ಸಿಮ್ಸ್ ಪಾರ್ಕ್, ಕನ್ನೂರ್, ಊಟಿ ಮಧ್ಯದಲ್ಲಿ ತಿರುಗುವ ಟಾಯ್ ಟ್ರೆನ್ ತದಿತರ ಪ್ರದೇಶಗಳನ್ನು ಊಟಿಯಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಪ್ರವಾಸಿಗರಿಗೆ ಈ ಉದ್ಯಾನವನದ ಪಕ್ಕದಲ್ಲಿಯೇ ಇರುವ ಸರ್ಕಾರಿ ಗೆಸ್ಟ್ ಹೌಸ್ ವಸತಿಯನ್ನು ಕಲ್ಪಿಸುತ್ತದೆ. ಇದಕ್ಕಾಗಿ ಒಂದು ಕೊಠಡಿಗೆ ಒಂದು ದಿನಕ್ಕೆ ರೂ 885 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

8.ನಿಮ್ಮ ಪ್ಲಾನಿಂಗ್‍ಗಾಗಿ....

8.ನಿಮ್ಮ ಪ್ಲಾನಿಂಗ್‍ಗಾಗಿ....

pc: sajjednra

ಪ್ರವೇಶವು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಗಳವರೆಗೆ ಡಿಪಾರ್ಟ್‍ಮೆಂಟ್ ಆಫ್ ಆರ್ಟಿಕಲ್ಚರ್, ಕರ್ನಾಟಕ ಸರ್ಕಾರಫೆರ್ನ್ ಹಿಲ್ಸ್, ಊಟಿ, ತಮಿಳುನಾಡು

ಫೋನ್ ನಂ: 0423-2441942

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ